ಟ್ರಾಕ್ಟರ್ ಚಾಲಿತ ಔಷಧಿ ಸಿಂಪರಣೆ ಉಪಕರಣಗಳು ಶೇ.50 ರ ಸಹಾಯಧನ
ಟ್ರಾಕ್ಟರ್ ಟ್ರೋಲಿ ಖರೀದಿಸಲು ರೂ.1,60,000/-ಸಹಾಯಧನ
ಆತ್ಮೀಯ ರೈತ ಬಾಂದವರೇ, ಭಾರತ ದೇಶದಲ್ಲಿ ಪ್ರತಿಶತ 75% ರಷ್ಟು ಕೃಷಿ ಅವಲಂಬಿತ ದೇಶ ಈ ಕಾರಣಕ್ಕೆ, ದೇಶದ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಕೂಲವಾಗು ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಪ್ರತಿವರ್ಷ ಜಾರಿಗೆ ತರುತ್ತವೆ. ಈ ವರ್ಷ ತೋಟಗಾರಿಕೆ ಇಲಾಖೆಯಿಂದ ಯಾವ ಯೋಜನೆಗಳು ಸಹಾಯಧನ ಇರುತ್ತವೆ, ಅವುಗಳ ಸಹಾಯಧನ ಎಷ್ಟು? ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.
Horticulture Department Scheme: ತೋಟಗಾರಿಕೆ ಇಲಾಖೆ ಯೋಜನೆಗಳು:
ತೋಟಗಾರಿಕೆ ಇಲಾಖೆಯಿಂದ ರಾಜ್ಯದಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ರೈತ ಫಲಾನುಭವಿಗಳಿಗೆ 2025-26 ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಡಿ ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಯೋಜನೆಗಳ ಲಾಭ ಪಡೆಯಬೇಕಾಗಿ ವಿನಂತಿಸಲಾಗಿದೆ.
ಇದನ್ನೂ ಓದಿ: Weather Report : ಇಂದಿನ ಹವಾಮಾನ ಮುನ್ಸೂಚನೆ.
ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ತಾಳೆ ಬೆಳೆ ಯೋಜನೆ:
2025-26ನೇ ಸಾಲಿನಲ್ಲಿ ತಾಳೆಬೆಳೆ ಬೆಳೆಯಲು ಆಸಕ್ತಿ ಇರುವ ರೈತರು ಕೇಂದ್ರ ಪುರಸ್ಕೃತ ಖಾದ್ಯ ತೈಲ ಅಭಿಯಾನ – ತಾಳೆ ಬೆಳೆ ಯೋಜನೆಯಡಿ
ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ಪ್ರತೀ ಹೆಕ್ಟೇರ್ ಗೆ ಶೇ.50 ರಂತೆ ರೂ.29,000,
ಮೊದಲನೇ ವರ್ಷದಿಂದ ನಾಲ್ಕು ವರ್ಷಗಳ ಬೇಸಾಯ ನಿರ್ವಹಣೆ ಕಾರ್ಯಕ್ರಮಕ್ಕೆ ಪ್ರತಿ ವರ್ಷ ನಿರ್ವಹಣೆಗೆ ರೂ.5250,
ಪ್ರತಿ ಹೆಕ್ಟೇರ್ಗೆ ಸಹಾಯಧನ ನೀಡಲಾಗುವುದು. ಅಂತರ ಬೆಳೆಗೆ ರೂ.5250,
ಎತ್ತರವಾದ ತಾಳೆ ಮರಗಳಿಂದ ಹಣ್ಣು ಕಟಾವು ಮಾಡಲು ರೂ.1000,
ಪ್ರತಿ ಟನ್ ಗೆ (ಗರಿಷ್ಠ 60 ಟನ್ ಮಾತ್ರ) ಸಹಾಯಧನ,
ಡೀಸೆಲ್ ಪಂಪ್ ಸೆಟ್ ಕೊಳ್ಳಲು ರೂ.8000, ಸಹಾಯಧನ.
ಕೊಳವೆ ಬಾವಿಗೆ ರೂ.50000, ಸಹಾಯಧನ,
ತಾಳೆ ಹಣ್ಣು ಕಟಾವು ಮಾಡುವ ಉಪಕರಣ, ಮೊಟೊರೈಸ್ಟ್ ಸೆಲ್ ರೂ.15000, ಸಹಾಯಧನ.
ತಾಳೆ ಹಣ್ಣು ಕಟಾವು ಏಣಿ ರೂ.5000, ಸಹಾಯಧನ.
ಚಾಫ್ ಕಟ್ಟರ್ ರೂ.50000, ಸಹಾಯಧನ.
ಟ್ರಾಕ್ಟರ್ ಟ್ರೋಲಿ ಖರೀದಿಸಲು ರೂ.1,60,000 (ಶೇ.50 ರಂತೆ) ಸಹಾಯಧನ ನೀಡಲಾಗುವುದು.
ಇದನ್ನೂ ಓದಿ: ಕಾಳು ಮೆಣಸು ಬಿಡಿಸುವ ಯಂತ್ರ, ಮಳೆ ನೀರು ಕೊಯ್ಲು ,ಪಂಪ್ ಸೆಟ್ ಗೆ ಸಹಾಯಧನ ಅರ್ಜಿ
National MGNRGA Scheme: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ:
2025-2026 ನೇ ಸಾಲಿನಲ್ಲಿ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ (ಬಾಳೆ, ಅಂಜೂರ, ದಾಳಿಂಬೆ, ನುಗ್ಗೆ, ಪೇರಲ, ಪಪ್ಪಾಯ, ತೆಂಗು, ಡ್ರಾಗನ್ ಫೂಟ್, ನೇರಳೆ, ಸಪೋಟ, ಮಾವು, ಸೀತಾಫಲ್, ಹುಣಸೆ, ಕರಿಬೇವು, ಗುಲಾಬಿ ಹಾಗೂ ಇತರೆ) ಬೆಳೆಗಳಿಗೆ ಮತ್ತು ಕೃಷಿ ಹೊಂಡ, ಬದುಗಳ ನಿರ್ಮಾಣ, ಕೊಳವೆ ಬಾವಿ ಮರುಪೂರಣ ಘಟಕ ಇತ್ಯಾದಿ ಅನುಷ್ಠಾನಗೊಳಿಸಲಾಗುವುದು ಇಲಾಖೆ ಅಧಿಕಾರಿಗಳು ತಿಳಿಸಿರುತ್ತಾರೆ.
National Horticulture Mission Scheme: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ:
2025-2026 ನೇ ಸಾಲಿನಲ್ಲಿ ಹೊಸ ಪ್ರದೇಶ ವಿಸ್ತರಣೆ,
ಕೃಷಿಹೊಂಡ (21213ಮೀ),
ಈರುಳ್ಳಿ ಶೇಖರಣ ಘಟಕ,
ನೆರಳು ಪರದೆ,
ಪ್ಲಾಸ್ಟಿಕ್ ಹೊದಿಕೆ,
20 ಹೆಚ್.ಪಿ ಕಡಿಮೆಯುಳ್ಳ ಟ್ರಾಕ್ಟರ್,
ಟ್ರಾಕ್ಟರ್ ಚಾಲಿತ ಔಷಧಿ ಸಿಂಪರಣೆ ಉಪಕರಣಗಳು
ವಿವಿಧ ಘಟಕಗಳಿಗೆ ಎಲ್ಲಾ ವರ್ಗದ ರೈತರಿಗೆ ಶೇ.50 ರಷ್ಟು ಲಭ್ಯತೆಯ ಮೇರೆಗೆ ಸಹಾಯಧನ ವಿತರಿಸಲಾಗುವುದು.
ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ಕಳೆ ಚಾಪೆಗೆ 1.ಲಕ್ಷ ರೂ. ಸಹಾಯಧನ
RKVY : ಪ್ರಧಾನ ಮಂತ್ರಿ- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ- ಪ್ರತಿ ಹನಿಗೆ ಅಧಿಕ ಬೆಳೆ:
2025-2026 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ-ಪ್ರತಿ ಹನಿಗೆ ಅಧಿಕ ಬೆಳೆ ಕಾರ್ಯಕ್ರಮದಡಿ ಸಹಾಯಧನ ನೀಡಲಾಗುತ್ತದೆ. ಹೊಸದಾಗಿ ಅಳವಡಿಸುವ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಫಲಾನುಭವಿಗಳಿಗೆ ಶೇ.90 ರಂತೆ ಸಹಾಯಧನ ವಿತರಿಸಲಾಗುವುದು.
ಯಾವ ವರ್ಗದವರಿಗೆ ಎಷ್ಟು ಶೇ % ಸಹಾಯಧನ?
ಈ ಎಲ್ಲಾ ಯೋಜನೆಗಳಡಿ ಅಲ್ಪಸಂಖ್ಯಾತರಿಗೆ ಶೇ.15, ವಿಶೇಷ ಚೇತನರಿಗೆ ಶೇ.5 ಮತ್ತು ರೈತ ಮಹಿಳೆಯರಿಗೆ ಶೇ.33 ರಷ್ಟು ಅನುದಾನ ಮೀಸಲಿರಿಸಲಾಗಿದ್ದು, ಆಸಕ್ತ ರೈತ ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕು.
ಇದನ್ನೂ ಓದಿ: E-Pauti Movement: ಇ- ಪೌತಿ ಮಾಡದೆ ಇದ್ದರೆ ಸರ್ಕಾರ ಈ ಎಲ್ಲಾ ಯೋಜನೆ ಲಾಭ ಬಂದ್!!
ವಿಶೇಷ ಮಾಹಿತಿ: ನಿಮ್ಮ ತಾಲೂಕಿನ ತೋಟಗಾರಿಕೆ ಇಲಾಖೆ ಅನುದಾನ ಅನುಗುಣವಾಗಿ ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ್ ಸಪ್ಪಂಡಿ ಅವರು ತಿಳಿಸಿದ್ದಾರೆ.