Sunday, July 20, 2025

Free Computer Training-2025: ಉಚಿತ ಕಂಪ್ಯೂಟರ್‍ ಟ್ಯಾಲಿ ತರಬೇತಿ:

ಆತ್ಮೀಯ ಸ್ನೇಹಿತರೇ ಈಗಿನ ದಿನಮಾನಗಳಲ್ಲಿ ಯಾವುದೇ ಉದ್ಯೋಗಕ್ಕೆ ನೀವು ಸೇರಿಕೊಂಡರು ಸ್ವಲ್ಪನಾದರೂ ಕಂಪ್ಯೂಟರ್‍ ಜ್ಞಾನ ಬೇಕಾಗಿರುತ್ತದೆ. ಅದರಲ್ಲೂ ಕಂಪ್ಯೂಟರ್‍ ಟ್ಯಾಲಿ ಬಗ್ಗೆ ಮಾಹಿತಿ ಇರಲ್ಲೇ ಬೇಕು ಕಂಪ್ಯೂಟರ್‍ ಉಪಯೋಗಿಸದೇ ಇರುವ ಯಾವುದೇ ಕ್ಷೇತ್ರಗಳಿಲ್ಲ, ಎಲ್ಲಾ ಕ್ಷೇತ್ರಗಳಲ್ಲಿ ಕಂಪ್ಯೂಟರ್‍ ಉಪಯೋಗಿಸುತ್ತಾರೆ. ಆಗಾಗಿ ಈಗಿನ ಯುವಕ-ಯುವತಿಯರು ಕಂಪ್ಯೂಟರ್‍ ತರಬೇತಿಗಾಗಿ ಹಣ ಕೊಟ್ಟು ಹೋಗುವುದು ಉಂಟು ಆದರೆ ಇಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ,ಕುಮಟಾವತಿಯಿಂದ ಆಸಕ್ತ ಅಭ್ಯರ್ಥಿಗಳಿಂದ 38 ದಿನಗಳ ವರೆಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ ಕುಮಟಾವತಿಯಿಂದ ಆಸಕ್ತ ಅಭ್ಯರ್ಥಿಗಳಿಂದ 38 ದಿನಗಳ ಆಸಕ್ತ ಮಹಿಳೆಯರು ಮತ್ತು ಪುರುಷರಿಗೆ ಉಚಿತ ಕಂಪ್ಯೂಟರ್‍ ಟ್ಯಾಲಿ ತರಬೇತಿ Free Computer Tally Training ತರಬೇತಿಯನ್ನು ಪ್ರಾರಂಭಿಸಲಾಗಿದೆ..

ಇದನ್ನೂ ಓದಿ: Free Fast Food Stall Training-2025: ಸ್ವಂತ ಉದ್ಯೋಗ ಮಾಡುವ ಆಸಕ್ತರಿಗೆ ಸುವರ್ಣವಕಾಶ : ಉಚಿತ ಫಾಸ್ಟ ಫುಡ್ ಸ್ಟಾಲ್ ಉದ್ಯಮಿ ತರಬೇತಿ

ಗ್ರಾಮ ಓನ್ ಅಥವಾ ಕರ್ನಾಟಕ ಓನ್ ಕೇಂದ್ರ ತೆರೆಬಹುದು:
ಆತ್ಮೀಯ ಸ್ನೇಹಿತರೇ ನೀವು ಏನಾದರೂ ಸ್ವ-ಉದ್ಯೋಗ ಪ್ರಾರಂಭಿಸಬೇಕು ಕಂಪ್ಯೂಟರ್‍ ಶ್ಯಾಪ್ ಮತ್ತು ಗ್ರಾಮ ಓನ್ ಅಥವಾ ಕರ್ನಾಟಕ ಓನ್ ಕೇಂದ್ರ ತೆರೆಯುಲು ಆಸಕ್ತಿ ಇದ್ದರೆ ಅಂತ ಆಸಕ್ತಿಯಿದ್ದು, ಮತ್ತು ಸೂಕ್ತ ಪ್ರಯೋಗಿಕವಾದ ತರಬೇತಿ ಬೇಕಾದರೆ ಇಲ್ಲಿ ನಿಮಗೆ ಒಂದು ಸುವರ್ಣ ಅವಕಾಶವಿರುತ್ತದೆ. ಹೌದು ಗ್ರಾಮೀಣ ಭಾಗದ ನಿರೂದ್ಯೋಗಿ ಯುವಕ-ಯುವತಿಯರಿಗೆ ಸ್ವ- ಉದ್ಯೋಗ ಆರಂಭಿಸಲು ಸೂಕ್ತ ಮಾರ್ಗದರ್ಶನ ಮತ್ತು ಪ್ರಾರಂಭಿಕ ಹಂತದಲ್ಲಿ ಅರ್ಥಿಕ ಸಹಾಯಧನಕ್ಕೆ ಬ್ಯಾಂಕ್‌ ಗಳಿಂದ ಸಾಲ ಸೌಲಭ್ಯ ಪಡೆಯಲು ಇತ್ಯಾದಿ ವಿಷಯಗಳ ಕುರಿತು ಅಧಿಕೃತ ಸಂಪನ್ಮೂಲ ವ್ಯಕ್ತಿಗಳಿಂದ ಈ ತರಬೇತಿಯಲ್ಲಿ ಅಗತ್ಯ ಮಾಹಿತಿಯನ್ನು ಈ ಸಂಸ್ಥೆಯಿಂದ ನೀಡಲಾಗುತ್ತದೆ.

Training Period: ತರಬೇತಿ ಅವಧಿ:
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಇಲ್ಲಿ ಶಿಕ್ಷಣ ವಂಚಿತರಿಗೆ/ನಿರುದ್ಯೋಗಿಗಳಿಗೆ ಉದ್ಯೋಗ ಹೊಂದಲು ಪ್ರಾಯೋಗಿಕವಾಗಿ 28/07/2025 ರಿಂದ 03/09/2025 ವರೆಗೆ 38 ದಿನಗಳ ಕಾಲ ನೂರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಗುತ್ತದೆ.

Facilities in Training: ತರಬೇತಿಯಲ್ಲಿ ಏನೆಲ್ಲಾ ಸೌಲಭ್ಯಗಳಿವೆ:
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ,ಕುಮಟಾವತಿಯಿಂದ ಆಸಕ್ತ ಅಭ್ಯರ್ಥಿಗಳಿಂದ 38 ದಿನಗಳ ಕಾಲ ತರಬೇತಿ ಜೊತೆಗೆ ತರಬೇತಿದಾರರಿಗೆ ಊಟ ಮತ್ತು ವಸತಿ ಉಚಿತವಾಗಿರುತ್ತದೆ. ಜೊತೆಗೆ ತರಬೇತಿ ಪಡೆದ ಮೇಲೆ ಸ್ವ-ಉದ್ಯೋಗ ಮಾಡುವವರಿಗೆ ಬ್ಯಾಂಕ್ ನಿಂದ ಸಾಲ ಸೌಲಬ್ಯವನ್ನು ಒದಗಿಸಿಕೊಡುವ ಅವಕಾಶವಿರುತ್ತದೆ. ಅಷ್ಟೇ ಅಲ್ಲದೇ ಬೇರೇ ಯಾವುದೇ ವಿಷಯಗಳ ಬಗ್ಗೆ ಸೂಕ್ತ ತರಬೇತಿ ಬೇಕಾದರೆ ನೀಡಲಾಗುವುದು.

ಇದನ್ನೂ ಓದಿ: Good News: ಹೊಲ,ಗದ್ದೆಗೆ ಹೋಗುವ ಕಾಲುದಾರಿ ,ಬಂಡಿದಾರಿ, ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ:

What information is included in the training: ತರಬೇತಿಯಲ್ಲಿ ಏನೆಲ್ಲಾ ಮಾಹಿತಿ ನೀಡಲಾಗುವುದು:
Free Computer (Tally)Training-2025 ತರಬೇತಿಯಲ್ಲಿ ಕಂಪ್ಯೂಟರ್‍ ಟ್ಯಾಲಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೂರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಗುತ್ತದೆ.

Required Documents: ತರಬೇತಿ ಸೇರಲು ಬೇಕಾದ ದಾಖಲೆಗಳು:
ಅಭ್ಯರ್ಥಿಗಳ ನಾಲ್ಕು ಪಾಸ್ ಪೋರ್ಟ ಸೈಜ್ ಪೋಟೋ
ಬ್ಯಾಂಕ ಪಾಸ್
ರೇಷನ್ ಕಾರ್ಡ
ಆಧಾರ ಕಾರ್ಡ
ಇಲ್ಲಿ ತಿಳಿಸಿದ ಎಲ್ಲಾ ದಾಖಲೆಗಳ ಝೆರಾಕ್ಸ ಪ್ರತಿ ನೀಡಬೇಕಾಗಿರುತ್ತದೆ.
ಗ್ರಾಮೀಣ ಭಾಗದ BPL ಅಭ್ಯರ್ಥಿಗಳಿಗೆ ಈ ತರಬೇತಿಯಲ್ಲಿ ಮೊದಲ ಅವಕಾಶ ನೀಡಲಾಗಿರುತ್ತದೆ.

Online application : Click

Age limit: ತರಬೇತಿಯಲ್ಲಿ ಭಾಗವಹಿಸುವವರು ವಯಸ್ಸಿನ ಮಿತಿ:
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ತರಬೇತಿ ಸೇರಬಯಸುವವರು ವಯಸ್ಸು 18- 45 ವಯಸ್ಸಿನವರಾಗಿರಬೇಕು.

Training Address and Contact: ತರಬೇತಿ ನಡೆಯುವ ಸ್ಥಳ ಮತ್ತು ಸಂಪರ್ಕ :
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ,ಇಂಡಸ್ಟ್ರಿಯಲ್ ಏರಿಯಾ,ಹೆಗಡೆ ರಸ್ತೆ,ಕುಮಟಾ, ಉತ್ತರ ಕನ್ನಡ ಜಿಲ್ಲೆ -581343
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9449860007, 9538281989, 9916783825, 8880444612, 9620962004. ಇಲ್ಲಿ ನೀಡಿರುವ ಮೊಬೈಲ್ ಕರೆ ಮಾಡಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯಿರಿ.

ಇದನ್ನೂ ಓದಿ: Good News : KSRTC ಬಸ್ಸಿನಲ್ಲಿ ಈ ಎಲ್ಲಾ ವಸ್ತುಗಳನ್ನು ಸಾಗಿಸಬಹುದು!!
ತರಬೇತಿ ಕರಪತ್ರ:

ಇತ್ತೀಚಿನ ಸುದ್ದಿಗಳು

Related Articles