Sunday, July 13, 2025

Krishi Prashasti 2025 : ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ ಪ್ರಥಮ ಬಹುಮಾನ ಮೊತ್ತ 50,000/-ರೂ

ಆತ್ಮೀಯ ರೈತ ಬಾಂದವರೇ, ಕರ್ನಾಟಕ ರಾಜ್ಯದ ಕೃಷಿ ಇಲಾಖೆ ಕೃಷಿಯಲ್ಲಿ ಯುವಕರನ್ನು ಮತ್ತು ಅನ್ನದಾತನಿಗೆ ಕೃಷಿ ಮಾಡಲು ಪ್ರೋತ್ಸಹಿಸುವ ದಿಸೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡಾ 2025-26ನೇ ಸಾಲಿನ ಕೃಷಿ ಪ್ರಶಸ್ತಿ -ಭತ್ತದ ಬೆಳೆ ಸ್ಪರ್ಧೆಗೆ ರ್‍ಯೆತರು ಹಾಗೂ ರ್‍ಯೆತ ಮಹಿಳೆಯರಿಂದ ಆನ್ ಲೈನ್ (Online)ಮುಖಾಂತರ ಅರ್ಜಿ ಆಹ್ವಾನಿಸಲಾಗಿರುತ್ತದೆ. ಆಸಕ್ತ ರೈತರು ಕೃಷಿ ವಲಯದ ಉತ್ಪಾದಕತೆ ಯೋಜನೆಯಡಿ ಅರ್ಜಿ ಸಲ್ಲಿಸಲು ಮಾರ್ಗಸೂಚಿಗಳೇನು? ಏಲ್ಲಿ ಅರ್ಜಿ ಸಲ್ಲಿಸಬೇಕು? ಬಹುಮಾನದ ಮೊತ್ತವೇನು?ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಈ ಮಾಹಿತಿಯನ್ನು ಓದಿ ನಿಮ್ಮ ಗ್ರಾಮ ಇತರೆ ರೈತರಿಗೂ ಈ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಿ..

ಇದನ್ನೂ ಓದಿ: Weed Mat Subsidy: ತೋಟಗಾರಿಕೆ ಇಲಾಖೆಯಿಂದ ಕಳೆ ಚಾಪೆಗೆ 1.ಲಕ್ಷ ರೂ. ಸಹಾಯಧನ

ಕೃಷಿ ವಲಯದ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ರಾಜ್ಯದಲ್ಲಿ ಕೃಷಿ ಇಲಾಖಾ ವತಿಯಿಂದ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕೃಷಿ ಪ್ರಶಸ್ತಿ ಯೋಜನೆಯಡಿ ಪ್ರತಿ ಹಂತದಲ್ಲಿ 3 ಬಹುಮಾನಗಳನ್ನು ನೀಡಲಾಗುತ್ತಿದೆ.

ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಬೆಳೆ ಸ್ಪರ್ಧೆಗೆ ಅನ್ವಯಿಸುವಂತೆ ಒಂದೇ ಅರ್ಜಿಯನ್ನು ಸ್ಪರ್ಧಿಗಳಿಂದ ಪಡೆಯಲಾಗುತ್ತಿದ್ದು,
ಮುಂಗಾರು ಹಂಗಾಮಿನ ಮಳೆಯಾಶ್ರಿತ ಭತ್ತದ ಬೆಳೆಯಲ್ಲಿ ಬೆಳೆ ಸ್ಪರ್ಧೆಗೆ ರೈತರು ಹಾಗೂ ರೈತ ಮಹಿಳೆಯರು ಇಲಾಖೆ ವಿವಿಧ ಹಂತದ ಬೆಳೆ ಸ್ಪರ್ಧೆ ವಿಜೇತರಿಗೆ ಈ ಕೆಳಕಂಡಂತೆ ಬಹುಮಾನದ ಮೊತ್ತವನ್ನು ನಿಗಧಿಪಡಿಸಲಾಗಿರುತ್ತದೆ..

ಕ್ರ.ಸಂಹಂತಪ್ರಥಮದ್ವೀತಿಯತೃತೀಯ
1ತಾಲೂಕ ಮಟ್ಟ15000100005000
2ಜಿಲ್ಲಾ ಮಟ್ಟ300002500020000
3ರಾಜ್ಯ ಮಟ್ಟ500004000035000

ಅರ್ಜಿ ಇರುವ ಷರತ್ತುಗಳು?
1.ಕಳೆದ 5 (ಐದು) ವರ್ಷದ ಅವಧಿಯಲ್ಲಿ ಕೃಷಿ ಪ್ರಶಸ್ತಿ ಬಹುಮಾನ ಪಡೆದ ರೈತರು ಹಾಗೂ ರೈತ ಮಹಿಳೆಯರು ಆ ಹಂತದ ಬೆಳೆ ಸ್ಪರ್ಧೆಯಲ್ಲಿ ಪುನಃ ಭಾಗವಹಿಸುವಂತಿಲ್ಲ.
2.ಆದರೆ ಸದ್ರಿ ಬೆಳೆಯ ಮೇಲಿನ ಹಂತದ ಸ್ಪರ್ಧೆಗೆ ಭಾಗವಹಿಸಲು ಅವಕಾಶವಿರುತ್ತದೆ.
3.ಹಿಂದಿನ 5 ವರ್ಷಗಳಲ್ಲಿ ರಾಜ್ಯ ಮಟ್ಟದ ಬೆಳೆ ಸ್ಪರ್ಧೆಯಲ್ಲಿ ಯಾವುದೇ ಬಹುಮಾನ ಪಡೆದಿದ್ದ ಸದ್ರಿಯವರ ಅರ್ಜಿಯನ್ನು ತಿರಸ್ಕರಿಸಲಾಗುವುದು.
4.ಬೆಳೆ ಸ್ಪರ್ಧೆಗೆ ಸ್ಪರ್ಧಿಸಲು ಕನಿಷ್ಠ 1 ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದಿರಬೇಕು. ಹಾಗೂ ರೆವಿನ್ಯೂ ದಾಖಲೆಯ ಪ್ರಕಾರ ಖಾತೆ ಹೊಂದಿರುವ ಸ್ವತಃ ಬೇಸಾಯದಲ್ಲಿ ತೊಡಗಿರುವ ಕ್ರಿಯಾಶೀಲ ರೈತರಾಗಿರಬೇಕು.
5.ಕುಟುಂಬದ ಒಬ್ಬರು ಮಾತ್ರ ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
6.ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.
7.ಆನ್‌ಲೈನ್ ಮುಖಾಂತರ ನೋಂದಾಯಿಸುವ ರೈತರು ಹಾಗೂ ರೈತ ಮಹಿಳೆಯರು ಇಲಾಖೆಯಿಂದ ಮಾರ್ಗಸೂಚಿಯನ್ವಯ ನಿಗದಿಪಡಿಸುವ ಸ್ಪರ್ಧಾತ್ಮಕ ಇಳುವರಿ ಮಟ್ಟಕ್ಕಿಂತ ಹೆಚ್ಚಿನ ಇಳುವರಿ ಪಡೆದಲ್ಲಿ ಮಾತ್ರ ಬೆಳೆ ಸ್ಪರ್ಧೆಯಡಿ ಬಹುಮಾನಕ್ಕೆ ಪರಿಗಣಿಸಲಾಗುವುದು.

ಇದನ್ನೂ ಓದಿ: PM kisan E kyc pending list: ಇಲಾಖೆಯಿಂದ ಕೆವೈಸಿ ಬಾಕಿರುವ ರೈತರ ಪಟ್ಟಿ ಬಿಡುಗಡೆ:

ಅರ್ಜಿ ಸಲ್ಲಿಸುವ ವಿಧಾನ:
ಕೆ-ಕಿಸಾನ್ ಪೋರ್ಟಲ್‌ನಡಿ RSK Login ಅಥವಾ Citizen Login ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ, ನಾಗರೀಕ ಸೇವಾ ಕೇಂದ್ರ/ಸ್ವತಃ ಆಸಕ್ತ ರೈತ/ರೈತಮಹಿಳೆಯರು ಪ್ರತ್ಯೇಕವಾಗಿ ಆಗತ್ಯ ದಾಖಲಾತಿಗಳೊಂದಿಗೆ ರೈತರ FID ಯನ್ನು ಬಳಸಿಕೊಂಡು Online ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಕೊನೆಯ ದಿನಾಂಕ:
2025-26ನೇ ಸಾಲಿನ ಕೃಷಿ ಪ್ರಶಸ್ತಿ -ಭತ್ತದ ಬೆಳೆ ಸ್ಪರ್ಧೆಗೆ ರ್‍ಯೆತರು ಹಾಗೂ ರ್‍ಯೆತ ಮಹಿಳೆಯರಿಂದ ಆನ್ ಲೈನ್ (Online)ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-08-2025 .

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.
ವಿಶೇಷ ಸೂಚನೆ: ಆಯಾ ಜಿಲ್ಲೆಯ ಬೆಳೆಗೆ ತಕ್ಕಂತೆ ಬೆಳೆಯ ಮೇಲೆ ಕೃಷಿ ಪ್ರಶಸ್ತಿಯನ್ನು ಆಹ್ವಾನಿಸಲಾಗಿರುತ್ತೆ. ಎಲ್ಲಾ ಜಿಲ್ಲೆಗೂ ಒಂದೆ ಬೆಳೆ ಇರುವುದಿಲ್ಲ.

ಇತ್ತೀಚಿನ ಸುದ್ದಿಗಳು

Related Articles