PM Kisan Scheme: ಯೋಜನೆಯಡಿ E kyc ಯಾಕೆ ಮಾಡಬೇಕು? ಮಾಡುವುದರಿಂದ ಉಪಯೊಗವೇನು? ಮಾಡುವ ವಿಧಾನ ಹೇಗೆ?
ಆತ್ಮೀಯ ಪಿಎಂ ಕಿಸಾನ ಯೋಜನೆ ಫಲಾನುಭವಿಗಳೇ ನೀವೂ ಏನಾದರೂ ಈ ಯೋಜನೆ ಫಲಾನುಭವಿಗಳು ಆಗಿರುವಿರಾ? ಹಾಗದರೇ ಖಂಡಿತ ಈ ಕೆಲಸ ತಪ್ಪದೇ ಮಾಡಿಕೊಳ್ಳಿ ,
PM Kisan E kyc ಅರ್ಥವೇನು?
ಇ- ಕೆವೈಸಿ ಅಂದರೇ ಅರ್ಥ ಈ ರೀತಿ ಇರುತ್ತದೆ, Electronic Know your Client ಇದನ್ನು ಹಣಕಾಸು ಸಂಸ್ಥೆಗಳು ಅಂದರೆ ಬ್ಯಾಂಕ್ ಗಳು ಬಳಸುವ ನಿವಾಸಿ ದೃಢೀಕರಣದ ಒಂದು ರೀತಿ ಪದ್ದತಿಯಾಗಿರುತ್ತದೆ.
ಈ E kyc ಆಗದೇ ಇದ್ದರೆ ಫಲಾನುಭವಿಗಳಿಗೆ PM Kisan Scheme ಯೋಜನೆಯಡಿ ಮುಂದಿನ ಕಂತಿನ ಹಣ ಬರುವುದು ನಿಲ್ಲುವುದು. ಹಾಗಾಗಿ ಎಲ್ಲಾ ಫಲಾನುಭವಿಗಳು ಈ ಕಾರ್ಯ ಮಾಡಿಕೊಳ್ಳಲೇಬೇಕು.
E-kyc ಮಾಡುವ ವಿಧಾನ ಹೇಗೆ?
ಆತ್ಮೀಯ ಪಿಎಂ ಕಿಸಾನ ಯೋಜನೆ ಫಲಾನುಭವಿಗಳೇ, ಈ ಕೆಳಗೆ ನೀಡಿರುವ ಮಾಹಿತಿಯನ್ನು ಓದಿ E-kyc ಮಾಡುವ ವಿಧಾನವನ್ನು ತಿಳಿಯಿರಿ.
ಹಂತ-1 : ಮೊದಲು ನಾವು ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ PM kisan page ಓಪನ್ ಆಗುವುದು. ನಂತರ ಅಲ್ಲಿ ನಿಮ್ಮ ಆಧಾರ್ ನಂಬರ್ ನಮೂದಿಸಿಕೊಳ್ಳಿ. Search ಬಟನ್ ಮೇಲೆ ಓತ್ತಿ.
ಹಂತ-2 : ಈ ಎರಡನೇ ಹಂತದಲ್ಲಿ Search ಬಟನ್ ಮೇಲೆ ಓತ್ತಿದ ನಂತರ ನಿಮಗೆ ಕೆಳಗಿನ ಬಾಕ್ಸ ನಲ್ಲಿ ಆಧಾರಗೆ ಲಿಂಕ್ ಇರುವ ಮೊಬೈಲ್ ನಂಬರ್ ಕಾಣುತ್ತದೆ. ನಂತರ ಪಕ್ಕದಲ್ಲಿ ಕಾಣುವ Get Mobile OTP ಅಂತ ಇರುವದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್ ಗೆ ನಾಲ್ಕು ಸಂಖ್ಯೆಯ OTP ಬರುತ್ತದೆ. ಆ ಸಂಖ್ಯೆಯನ್ನು ಇಲ್ಲಿ ನಮೂದಿಸಿಕೊಳ್ಳಿ.
ಹಂತ -3 : ಈ ಮೂರನೇ ಹಂತದಲ್ಲಿ ಆಧಾರ OTP ಅಂತ ತೋರಿಸುವುದು ಅದರ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಮೊಬೈಲ್ ಗೆ ಆರು ಸಂಖ್ಯೆಯ OTP ಬರುತ್ತದೆ. ಅದನ್ನು ಕೆಳಗೆ ಕಾಣುವ ಬಾಕ್ಸನಲ್ಲಿ ನಮೂದಿಸಿಕೊಳ್ಳಿ. ಈ ಎಲ್ಲಾ ಹಂತದ ಕಾರ್ಯ ಮುಗಿದ ನಂತರ ನಿಮಗೆ ಮೇಲೆ ಹಸಿರು ಬಾಕ್ಸನಲ್ಲಿ E kyc done successfully ಅಂತ ಕಾಣಿಸುತ್ತದೆ. ಈ ರೀತಿ ಬಂದರೆ ನಿಮ್ಮ PM Kisan Scheme ಯೋಜನೆಯಡಿ E kyc ಸಂಪೂರ್ಣವಾಗಿದೆ ಅಂತ ಅರ್ಥ.
E KYC link ಬೇಕಾದಲ್ಲಿ ಇಲ್ಲಿ ಕ್ಲಿಕ್ ಮಾಡಿ
ಆತ್ಮೀಯ ರೈತ ಬಾಂದವರೇ ಯಾರು PM Kisan Scheme ಯೋಜನೆಯಡಿ ಅರ್ಜಿಯನ್ನು ಸಲ್ಲಿಸಿದ್ದಿರಾ ಅವರು ಕಡ್ಡಾಯವಾಗಿ ಈ ಕಾರ್ಯವನ್ನು ಅದಷ್ಟೂ ಬೇಗ ಮಾಡಿಕೊಳ್ಳುವುದು ಉತ್ತಮ ಇಲ್ಲವಾದಲ್ಲಿ ಈ ಯೋಜನೆ ಲಾಭ ದೊರೆಯದೆ ಇರಬಹುದು.
ಹೆಚ್ಚಿನ ಮಾಹಿತಿಗಾಗಿ ರೈತ ಬಾಂದವರು ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ವಿಚಾರಿಸಿಕೊಳ್ಳಿ,