PM micro food processing scheme-(PMFME): ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಪ್ತು ನಿಗಮ ನಿಯಮಿತ, ಕೆಪೆಕ್, ಪಿಎಮ್‌ಎಫ್‌ಇ ಯೋಜನೆ, ಕಿರು ಆಹಾರ ಸಂಸ್ಕರಣಾ ಉದ್ದಿಮೆ, ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ. ಈ ಯೋಜನೆಗಳಡಿ ರೈತರ ಮತ್ತು ರೈತರ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು, ಕಿರು ಆಹಾರ ಸಂಸ್ಕರಣಾ ಘಟಕಗಳ ರಚನೆಗೆ 15 ಲಕ್ಷ ರೂಪಾಯಿವರೆಗೆ ಸಹಾಯಧನ ಸಿಗಲಿದೆ. ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ.
PMFME: ಕೇಂದ್ರ ಸರಕಾರದ ಯೋಜನೆಯಡಿ ಕಿರು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಶೇ.50 ರಷ್ಟು ಸಬ್ಸಿಡಿ ಸೌಲಭ್ಯ ಸಿಗುತ್ತದೆ. ರೈತರಿಗೆ, ರೈತ ಮಹಿಳೆಯರಿಗೆ ಈ ಯೋಜನೆಯಿಂದ ಸ್ವಂತ ಉದ್ಯಮವನ್ನು ಕಟ್ಟಲು ಸಹಕಾರಿಯಾಗಿದೆ. ಈಗಾಗಲೇ ರಾಜ್ಯದಲ್ಲಿ ಸಾವಿರಾರು ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡು ಸ್ವಾಲಂಬಿ ಜೀವನ ನಡೆಸುತ್ತಿದ್ದಾರೆ. ಈ ಯೋಜನೆಯು ವರದಾನವಾಗಿದ್ದು ದಿನದಿಂದ ದಿನಕ್ಕೆ ಇದರ ಬೇಡಿಕೆ ಹೆಚ್ಚಾಗುತ್ತಿದೆ.
ಇದನ್ನೂ ಓದಿ:ಕೃಷಿ ಇಲಾಖೆಯ ಸೌಲಭ್ಯಗಳು ಮತ್ತು ದಾಖಲೆಗಳು!
ಏನಿದು PMFME ಯೋಜನೆ?
ಆಹಾರ ಸಂಸ್ಕರಣಾ ಕೈಗಾರಿಕೆಗಳ ಮಂತ್ರಾಲಯವು(MOFPI) ರಾಜ್ಯ ಸರಕಾರದ ಪಾಲುದಾರಿಕೆಯೊಂದಿಗೆ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳಿಗೆ ಹಣಕಾಸಿನ ನೆರವು, ತಾಂತ್ರಿಕ ಹಾಗೂ ವ್ಯಾಪಾರ ಬೆಂಬಲವನ್ನು ಒದಗಿಸುವ ಸಲುವಾಗಿ ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಗೆ (PM micro food processing scheme- PMFME) ಚಾಲನೆ ನೀಡಿದೆ.
ಕರ್ನಾಟಕ ರಾಜ್ಯದಲ್ಲಿ ಕೃಷಿ ಇಲಾಖೆಯ ಮೂಲಕ ಈ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗಿದ್ದು, ರೈತ ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಲು ಅದರಿಂದ ಇನ್ನೂ ಹೆಚ್ಚಿನ ಆದಾಯ ಹಾಗೂ ಕಿರು ಉದ್ಯಮಗಳನ್ನು ರಚಿಸಲು ಈ ಯೋಜನೆಯನ್ನು ರೂಪಿಸಲಾಗಿದೆ. ಸ್ವ-ಉದ್ಯೋಗದ ಮೂಲಕ ರೈತರು ಹೆಚ್ಚಿನ ಆದಾಯಗಳಕೆ ಮಾಡಲು ಇದು ಅನುಕೂಲಕರವಾಗಿದೆ. ಇನ್ನೂ ಸಂಪ್ರದಾಯಿಕ ಉದ್ಯಮ ನಡೆಸುವವರು ಈಗ ಯಂತ್ರಗಳನ್ನು ಖರೀದಿಸಿ ಉದ್ಧಿಮೆಯನ್ನು ಅತ್ಯಾಧುನಿಕವಾಗಿ ಮುನ್ನಡೆಸಬಹುದಾಗಿದೆ.
Who are apply-ಯಾರಿಗೆ ಸಿಗಲಿದೆ ಈ ಯೋಜನೆಯ ಸೌಲಭ್ಯಗಳು?
1)ಹೊಸದಾಗಿ ಕಿರು ಉದ್ಯಮ ಸ್ಥಾಪಿಸುವರಿಗೆ
2)ಚಾಲ್ತಿಯಲ್ಲಿರುವ ಉದ್ಯಮವನ್ನು ವಿಸ್ತರಣೆ ಮಾಡಲು
3)ವೈಯಕ್ತಿಕ ಉದ್ಧಿಮೆಗಳಿಗೆ
4)ಪಾಲುದಾರಿಕೆ ಸಂಸ್ಥೆಗಳಿಗೆ
5)FPO-ರೈತ ಉತ್ಪಾದಕರ ಸಂಸ್ಥೆಗಳಿಗೆ
6)ಸ್ವ-ಸಹಾಯ ಸಂಘಗಳಿಗೆ
7)ಸ್ತ್ರೀ ಶಕ್ತಿ ಸಂಘಗಳಿಗೆ
Subsidy amount-ಸಹಾಯಧನ ಎಷ್ಟು ಸಿಗಲಿದೆ?
ಕಿರು ಉದ್ಯಮಗಳಿಗೆ ಸ್ಥಾಪನೆಗೆ ಇಚ್ಛಿಸುವ ಉದ್ಯಮದ ಅಂದಾಜು ವೆಚ್ಚಕ್ಕೆ ಅನುಗುಣವಾಗಿ ಸಾಲ ಪಡೆಯಬಹುದು. 30 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಶೇ.50ರಷ್ಟು ಅಂದರೆ 7.5 ಲಕ್ಷ ರೂಪಾಯಿವರೆಗೂ ಸಹಾಯಧನ(ಸಬ್ಸಿಡಿ) ಸಿಗಲಿದೆ. 30 ಲಕ್ಷ ಮೇಲ್ಪಟ್ಟು ಎಷ್ಟೇ ಸಾಲ ಪಡೆದರೆ ಒಟ್ಟು 15 ಲಕ್ಷ ರೂಪಾಯಿವರೆಗೆ, ಸಹಾಯಧನ (ಸಬ್ಸಿಡಿ) ಸಿಗಲಿದೆ. ಶೇ.35ರಷ್ಟು ಕೇಂದ್ರ ಸರಕಾರ ಹಾಗೂ ಶೇ.15ರಷ್ಟು ರಾಜ್ಯ ಸರಕಾರ ನೀಡುತ್ತವೆ.
ಯಾವೆಲ್ಲ ಉದ್ಯಮಕ್ಕೆ ಸಿಗಲಿದೆ ಸೌಲಭ್ಯ?
1)ರೊಟ್ಟಿ/ಚಪಾತಿ ತಯಾರಿಕೆಗೆ
2)ಶಾವಿಗೆ ತಯಾರಿಕೆಗೆ
3)ಹಪ್ಪಳ ತಯಾರಿಕೆಗೆ
4)ಬೇಕರಿ ಪದಾರ್ಥಗಳ ತಯಾರಿಕೆಗೆ
5)ಚಕ್ಕುಲಿ ತಯಾರಿಕೆಗೆ
6)ಉಪ್ಪಿನ ಕಾಯಿ ತಯಾರಿಕೆಗೆ
7)ಹಣ್ಣು/ ತರಕಾರಿ ಸಂಸ್ಕರಣೆಗೆ
8)ಹಾಲಿನ ಉತ್ಪನ್ನಗಳ ಸಂಸ್ಕರಣೆಗೆ
9)ತಿನ್ನುವ ಆಹಾರಕ್ಕೆ ಸಂಬಂದಿಸಿದ ಎಲ್ಲಾ ಉದ್ಯಮಕ್ಕೆ ಸಿಗುತ್ತೆ ಈ ಯೋಜನೆ ಅನ್ವಯ.
ಇದನ್ನೂ ಓದಿ:ರುಡ್ ಸೆಟ್ ಉಜಿರೆಯಲ್ಲಿ ಮೊಬೈಲ್ ಪೋನ್ ರಿಪೇರಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ!
Apply documents-ಬೇಕಾಗುವ ದಾಖಲೆಗಳು:
1)ಆಧಾರ್ ಕಾರ್ಡ್ 2)ಪಾನ್ ಕಾರ್ಡ್ 3) ಬ್ಯಾಂಕ್ ಪಾಸ್ ಬುಕ್ 4)ಕರೆಂಟ್ ಬಿಲ್ 5)ಉದ್ಯಮ ಸ್ಥಳದ RTC 6)ಉದ್ಯಮ ಲೈಸೆನ್ಸ 7)ಸೈಟಿನ ಬಳಿ ನಿಂತಿರುವ ಅರ್ಜಿದಾರರ ಭಾವಚಿತ್ರ
ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆಯಲ್ಲಿ ಜಿಲ್ಲೆಗೆ ಒಬ್ಬರು ಮಾಹಿತಿ ಅಧಿಕಾರಿಗಳು ಹಾಗೂ ಮಾರ್ಗದರ್ಶಕರು ಎಂದು ನೇಮಕ ಮಾಡಲಾಗಿದೆ. ಅವರ ಮಾಹಿತಿಗೆ ನೀವು ಕೃಷಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ತಿಳಿದುಕೊಳ್ಳಿ.