Wednesday, March 12, 2025

Pmkisan new list-ರೈತರಿಗೆ ಸಿಹಿ ಸುದ್ಧಿ ಪಿಎಂ ಕಿಸಾನ್19ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿ! ಈ ಪಟ್ಟಿಯಲ್ಲಿರುವ ರೈತರಿಗೆ ಸಿಗಲಿದೆ.

ನಮಸ್ಕಾರ ರೈತ ಭಾಂದವರೇ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಹಂಚಿಕೊಂಡಿರುವ ಮಾಹಿತಿ ಪ್ರಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪೆಬ್ರುವರಿ 24 ರಂದು ಬಿಹಾರ ರಾಜ್ಯಕ್ಕೆ ಭೇಟಿ ನೀಡಲಿದ್ದು, ಈ ಸಮಯದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 19ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ.

ಕೇಂದ್ರ ಸರಕಾರವು ರೈತರಿಗೆ ಅನುಕೂಲವಾಗಲು 2019 ರಿಂದ ರೈತರಿಗೆ ಪಿಎಂ ಕಿಸಾನ ಸಮ್ಮಾನ್ ನಿಧಿ(PM Kisan samman) ಯೋಜನೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ ರೂ.6000 ಸಾವಿರ ಹಣವನ್ನು ಮೂರು ಕಂತುಗಳಲ್ಲಿ 4 ತಿಂಗಳಿಗೊಮ್ಮೆ ರೂ.2000 ರೂಪಾಯಿಗಳನ್ನು ರೈತರ ಖಾತೆಗೆ ನೇರ ಜಮೆ ಮಾಡಲಾಗುತ್ತದೆ. ಪಿಎಂ ಕಿಸಾನ್ ಹಣವು ಈ ಲಿಸ್ಟ್ ನಲ್ಲಿಇರುವ ರೈತರಿಗೆ ಮಾತ್ರ ಸಿಗಲಿದೆ! ನಿಮ್ಮ ಹೆಸರು ಉಂಟೆ? ಚೆಕ್ ಮಾಡಿಕೊಳ್ಳಿ.

ಕೇಂದ್ರ ಸರಕಾರವು ರೈತರಿಗೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಪಡೆಯಲು ರೈತರಿಗೆ ಈ ಹಣವು ಸಹಾಯವಾಗಲಿದೆ. ಹಾಗಾಗಿ ರೈತರು ಪಿಎಂ ಕಿಸಾನ್ (PM Kisan samman ) ಯೋಜನೆಯ ಹಣವನ್ನು ಸದುಪಯೋಗ ಪಡೆದುಕೊಳ್ಳಬಹುದು. ಇದರಿಂದ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಹಣವು ತುಂಬಾ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ:ಹೈನುಗಾರಿಕೆ ಎಲ್ಲಿ ಹಾಲಿನ ಪ್ರಮಾಣ ಹೆಚ್ಚಿಸಬೇಕೆ? ಇಲ್ಲಿದೆ ಮಾಹಿತಿ.

ಪಿಎಂ ಕಿಸಾನ್ ಲಿಸ್ಟನಲ್ಲಿ ಹೆಸರು ಚೆಕ್ ಮಾಡುವುದು ಹೇಗೆ?

ರೈತರಿಗೆ ಪಿ ಎಂ ಕಿಸಾನ ಯೋಜನೆಯ ಹಣವು ಈ ಲಿಸ್ಟ್ ನಲ್ಲಿರುವ ರೈತರಿಗೆ ಮಾತ್ರ ಸಿಗಲಿದೆ! ನಿಮ್ಮ ಹೆಸರು ಉಂಟೆ? ಚೆಕ್ ಮಾಡಿಕೊಳ್ಳಿ. ತಿಳಿಯಲು ಇಲ್ಲಿದೆ ಮಾಹಿತಿ.

ಮೊದಲಿಗೆ ಇಲ್ಲಿ ಪಿಎಮ್ ಕಿಸಾನ್(PM Kisan samman) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಕೇಂದ್ರ ಸರಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಳ್ಳುತ್ತದೆ.

STEP-1: ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಂಡ ಮೇಲೆ Farmers Corner ನಲ್ಲಿ ಹಲವಾರು ಅಂಕಣಗಳಿವೆ E-kyc ಅಂಕಣ,New farmer registration ಅಂಕಣ, Know your status ಅಂಕಣ, Beneficiary list ಅಂಕಣ,Name correction as per Aadhar ಅಂಕಣ ಹೀಗೆ ಹಲವಾರು ಅಂಕಣಗಳಿವೆ.

STEP-2: ಈ ಎಲ್ಲಾ ಅಂಕಣಗಳಲ್ಲಿ ನೀವು Beneficiary list  ಮೇಲೆ ಕ್ಲಿಕ್ ಮಾಡಿ.

STEP-3: ನಂತರ ನಿಮ್ಮ ರಾಜ್ಯ ಆಯ್ಕೆ ಮಾಡಿ, ಜಿಲ್ಲೆ ಆಯ್ಕೆ ಮಾಡಿ, ಉಪ ಜಿಲ್ಲೆ ಆಯ್ಕೆ ಮಾಡಿ, ತಾಲೂಕು ಆಯ್ಕೆ ಮಾಡಿ, ಕೊನೆಯಲ್ಲಿ ನಿಮ್ಮ ಗ್ರಾಮ/ಹಳ್ಳಿ ಆಯ್ಕೆ ಮಾಡಿ.

ಇದನ್ನೂ ಓದಿ:ಕೃಷಿ ಇಲಾಖೆಯ ಸೌಲಭ್ಯಗಳು ಮತ್ತು ಮಾನದಂಡಗಳು!

STEP-4:ನಂತರ Get report ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ನಿಮ್ಮ ಗ್ರಾಮದಲ್ಲಿ ಇರುವ ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ಬರುತ್ತದೆ. ಅದರಲ್ಲಿ ನಿಮ್ಮ ಹೆಸರು ಹುಡುಕಿಕೊಳ್ಳಿ. 

ನಿಮ್ಮ ಹೆಸರು ಆ ಲಿಸ್ಟ್ ನಲ್ಲಿ ಕಾಣದಿದ್ದರೇ ನೀವು ನಿಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಭೇಟಿ ಮಾಡಿ ಪಿಎಂ ಕಿಸಾನ್ ಅರ್ಜಿ ಏನಾಗಿದೆ ಎಂದು ತಿಳಿದುಕೊಳ್ಳಿ. ಕೆಲವು ಸಾರಿ Ekyc ಮತ್ತು Aadhar name ತಿದ್ದುಪಡಿ, RTC/ಪಹಣಿ ತಿದ್ದುಪಡಿ, ಹೀಗೆ ಹಲವಾರು ಕಾರಣಗಳಿಂದ ಬಂದಿರುವುದಿಲ್ಲ.

ಇತ್ತೀಚಿನ ಸುದ್ದಿಗಳು

Related Articles