Thursday, March 13, 2025

Farm pond subsidy-ನಿಮ್ಮ ಜಮೀನಿನಲ್ಲಿ ನೀರಿನ ಸಮಸ್ಯೆಯೇ ಹಾಗಿದ್ದರೇ ಇಲ್ಲಿದೆ ಅದಕ್ಕೆ ಪರ್ಯಾಯ ಮಾರ್ಗ! ಕೃಷಿ ಭಾಗ್ಯಯೋಜನೆ.

ನಮಸ್ಕಾರ ರೈತರೇ, ಕೃಷಿ ಇಲಾಖೆಯ ಸೌಲಭ್ಯಗಳಲ್ಲಿ ಒಂದಾದ ಕೃಷಿ ಭಾಗ್ಯ ಯೋಜನೆ ನೀರು ಸಂಗ್ರಹ ಕೃಷಿ ಹೊಂಡ(ಕೆರೆ) ನಿರ್ಮಾಣ ಮಾಡಿಕೊಳ್ಳಲು ಅರ್ಜಿ ಆಹ್ವಾನ!  ಅರ್ಜಿ ಸಲ್ಲಿಸಲು ಏನು ಮಾಡಬೇಕು ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು ಅದರ ಮಾಹಿತಿ ನಿಮಗಾಗಿ ಇಲ್ಲಿದೆ.

ಕರ್ನಾಟಕ ರಾಜ್ಯವು ಮಳೆಯಾಶ್ರಿತ ಕೃಷಿಯ ಮೇಲೆ ಹೆಚ್ಚು ಅವಲಂಬಿತ ಆಗಿರುವುದರಿಂದ ಹವಾಮಾನ ಬದಲಾವಣೆಯಿಂದ ಬರದ ಪ್ರಭಾವಕ್ಕೊಳಗಾಗುವ ರಾಜ್ಯಗಳಲ್ಲಿ ಒಂದಾಗಿದೆ. ನಮ್ಮ ರಾಜ್ಯದಲ್ಲಿ ಸುಮಾರು ಶೇ.64 ರಷ್ಟು ಸಾಗುವಳಿ ಪ್ರದೇಶವು ಮಳೆ ಆಶ್ರಿತ ಸಾಗುವಳಿ ಆಗಿದೆ. ಇದರಿಂದ ಸರಿಯಾದ ಸಮಯಕ್ಕೆ ಮಳೆ ಬರದೆ ರೈತರಿಗೆ ಹಾನಿ ಜಾಸ್ತಿಯಾಗಿದ್ದು ಬೆಳೆಯಲ್ಲಿ ಸರಿಯಾಗಿ ಆದಾಯ ಬರದೆ ನಷ್ಟ ಉಂಟಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆ ತುಂಬಾ ಆಗುತ್ತಿದ್ದು, ಕೃಷಿಕರಿಗೆ ಕೃಷಿ ಮಾಡಲು ನೀರಿನ ಕೊರತೆ ಆಗಿ ಕೃಷಿಯಿಂದ ದೂರ ಹೋಗುತ್ತಿದ್ದಾರೆ. ಬೆಳೆಗೆ ಸರಿಯಾದ ಸಮಯಕ್ಕೆ ನೀರು ಸಿಗದೆ ರೈತರಿಗೆ ಕೃಷಿಯಲ್ಲಿ ನಷ್ಟ ಉಂಟಾಗುತ್ತಿದೆ. ಹಾಗಾಗಿ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳಿಂದ ರೈತರ ಅನುಕೂಲಕ್ಕೆ ಕೃಷಿ ಹೊಂಡ ಹಾಗೂ ಕೆರೆಗಳ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತಿದೆ.

ಮಳೆಗಾಲದಲ್ಲಿ ಹರಿದು ಹೋಗುವ ಹೆಚ್ಚುವರಿ ನೀರನ ಸಂಗ್ರಹಕ್ಕಾಗಿ ಮಳೆ ಕೊಯ್ಲು ಜನಪ್ರಿಯವಾಗುತ್ತಿರುವ ನಡುವೆಯೇ, ಪ್ಲಾಸ್ಟಿಕ್‌ ಶೀಟ್‌ ಗಳ ಕೆರೆಯನ್ನು ನಿರ್ಮಿಸಿ ಮಳೆ ನೀರನ್ನು ಶೇಖರಿಸುವ ಹೊಸ ಟ್ರೆಂಡ್‌ ರಾಜ್ಯದ ತುಂಬಾ ಆರಂಭವಾಗಿದೆ.

ರಾಜ್ಯದ ಕೆಲವು ಜಿಲ್ಲೆಯ ಹಲವು ಭಾಗಗಳಲ್ಲಿ ಕೋಟಿ ಗಟ್ಟಲೆ ಲೀಟರ್‌ ನೀರು ತುಂಬುವ ದೊಡ್ಡ ಕೆರೆಗಳನ್ನು ನಿರ್ಮಿಸಲಾಗುತ್ತಿದ್ದು, ಮಳೆಗಾಲದಲ್ಲಿ ಸಂಗ್ರಹವಾಗುವ ನೀರನ್ನು ಬೇಸಗೆಯಲ್ಲಿ ಗದ್ದೆ ಮತ್ತು ತೋಟಗಳ ಬೆಳೆಗೆ ಕೊಡಲಾಗುತ್ತದೆ. ಸಾಮಾನ್ಯವಾಗಿ ಈ ಕೆರೆಗಳನ್ನು ಬೆಟ್ಟಗಳ ತುದಿಯಲ್ಲಿ ಮತ್ತು ನೀರಿನ ಇಳಿಜಾರು ಪ್ರದೇಶದಲ್ಲಿ ನಿರ್ಮಿಸುವುದರಿಂದ ಗದ್ದೆ ಮತ್ತು ತೋಟಗಳಿಗೆ ಸುಲಭವಾಗಿ ನೀರು ಕೊಡಬಹುದು.

ನೀರು ಸಂಗ್ರಹ ಕೃಷಿ ಹೊಂಡ(ಕೆರೆ) ಅಳತೆಗಳು ಮತ್ತು ಸಹಾಯಧನ:

ಕೃಷಿ ಭಾಗ್ಯ ಯೋಜನೆಯಲ್ಲಿ ಸಾಮಾನ್ಯ ರೈತರಿಗೆ ಶೇ.80 ರಷ್ಟು ಸಹಾಯಧನ ಮತ್ತು ಪ.ಜಾ ಹಾಗೂ ಪ.ಪಂ ವರ್ಗದ ರೈತರಿಗೆ ಶೇ.90 ರಷ್ಟು ಸಹಾಯಧನ ಈ ಯೋಜನೆಯಲ್ಲಿ ನೀಡಲಾಗುತ್ತದೆ.ಕೆಳಗಡೆ ನೀಡಲಾಗಿದ್ದು ಒಟ್ಟು ಮೊತ್ತದ ದರ.

1)10*10*3-(ಕೆಂಪು ಮಣ್ಣು)22494/-

2)12*12*3-(ಕೆಂಪು ಮಣ್ಣು)28165/-ಕಪ್ಪು ಮಣ್ಣು-24468/-

3)15*15*3-(ಕೆಂಪು ಮಣ್ಣು)42079/-ಕಪ್ಪು ಮಣ್ಣು-36796/-

4)18*18*3-(ಕೆಂಪು ಮಣ್ಣು)56311/-ಕಪ್ಪು ಮಣ್ಣು-49424/-

5)21*21*3-(ಕೆಂಪು ಮಣ್ಣು)79034/-ಕಪ್ಪು ಮಣ್ಣು-70551/-

FARM POND(ಕೃಷಿ ಕೆರೆ) ಹೊಂಡಕ್ಕೆ ಸಲ್ಲಿಸಲು ಅಗತ್ಯ ದಾಖಲೆಗಳು:

1)ಅರ್ಜಿ ನಮೂನೆ(ಇಲಾಖೆಯಲ್ಲಿ ಸಿಗುತ್ತೆ)

2)ಅರ್ಜಿದಾರರ ಆಧಾರ್‌ ಕಾರ್ಡ ಜೆರಾಕ್ಸ್‌

3) ಅರ್ಜಿದಾರರ ಬ್ಯಾಂಕ್‌ ಪಾಸ್‌ ಬುಕ್‌ ಜೆರಾಕ್ಸ್‌

4)ಪಹಣಿ/RTC ಪ್ರತಿ

5)ಜಾತಿ ಪ್ರಮಾಣ ಪತ್ರ(SC/ST) ಅವರು ಮಾತ್ರ

6) ಅರ್ಜಿದಾರರ ಫೋಟೋ

7)ರೇಷನ್‌ ಕಾರ್ಡ ಜೆರಾಕ್ಸ್

ನೀರು ಸಂಗ್ರಹ ಕೃಷಿ ಹೊಂಡ(ಕೆರೆ) ನಿರ್ಮಾಣಕ್ಕೆ ಎಲ್ಲಿ ಅರ್ಜಿಸಲ್ಲಿಸಬೇಕು:

ಆಸಕ್ತ ರೈತರು ನಿಮ್ಮ ತಾಲೂಕು ಕೇಂದ್ರಗಳಲ್ಲಿ ಇರುವ  ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಅಥವಾ ಹೋಬಳಿಗಳಲ್ಲಿರುವ ರೈತ ಸಂಪರ್ಕ ಕೇಂದ್ರ (ಕೃಷಿ ಇಲಾಖೆ)ಯಲ್ಲಿ ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

ಇತ್ತೀಚಿನ ಸುದ್ದಿಗಳು

Related Articles