ಕೃಷಿ ಇಲಾಖೆಯ ಸೌಲಭ್ಯಗಳಲ್ಲಿ ಒಂದಾದ ಕೃಷಿ ಭಾಗ್ಯ ಯೋಜನೆ ನೀರು ಸಂಗ್ರಹ ಕೃಷಿ ಹೊಂಡ(ಕೆರೆ) ನಿರ್ಮಾಣ ಮಾಡಿಕೊಳ್ಳಲು ಅರ್ಜಿ ಆಹ್ವಾನ! ಮಾಡಲಾಗಿದೆ. ಹಾಗೂ 80% ಸಹಾಯಧನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಏನು ಮಾಡಬೇಕು ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು ಅದರ ಮಾಹಿತಿ ಈ ಲೇಖನದಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆ ತುಂಬಾ ಆಗುತ್ತಿದ್ದು, ಕೃಷಿಕರಿಗೆ ಕೃಷಿ ಮಾಡಲು ನೀರಿನ ಕೊರತೆ ಆಗಿ ಕೃಷಿಯಿಂದ ದೂರ ಹೋಗುತ್ತಿದ್ದಾರೆ. ಬೆಳೆಗೆ ಸರಿಯಾದ ಸಮಯಕ್ಕೆ ನೀರು ಸಿಗದೆ ರೈತರಿಗೆ ಕೃಷಿಯಲ್ಲಿ ನಷ್ಟ ಉಂಟಾಗುತ್ತಿದೆ. ಹಾಗಾಗಿ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳಿಂದ ರೈತರ ಅನುಕೂಲಕ್ಕೆ ಕೃಷಿ ಹೊಂಡ ಹಾಗೂ ಕೆರೆಗಳ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತಿದೆ.
ಮಳೆಗಾಲದಲ್ಲಿ ಹರಿದು ಹೋಗುವ ಹೆಚ್ಚುವರಿ ನೀರನ ಸಂಗ್ರಹಕ್ಕಾಗಿ ಮಳೆ ಕೊಯ್ಲು ಜನಪ್ರಿಯವಾಗುತ್ತಿರುವ ನಡುವೆಯೇ, ಪ್ಲಾಸ್ಟಿಕ್ ಶೀಟ್ ಗಳ ಕೆರೆಯನ್ನು ನಿರ್ಮಿಸಿ ಮಳೆ ನೀರನ್ನು ಶೇಖರಿಸುವ ಹೊಸ ಟ್ರೆಂಡ್ ರಾಜ್ಯದ ತುಂಬಾ ಆರಂಭವಾಗಿದೆ.
ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿ ಹೊಂಡದ ಜೊತೆಗೆ ರೈತರಿಗೆ ಶೆ.50% ಸಾಯಧನದಲ್ಲಿ ಹೊಂಡದ ಟಾರ್ಪಲ್, ತುಂತುಂರು ನೀರಾವರಿ ಘಟಕ(ಸ್ಪೀಕ್ಲರ್), ಡಿಸೇಲ್ ಇಂಜಿನ್ ಪಂಪ್ ಸೆಟ್, ತಂತಿ ಬೇಲಿ, ಈ ಎಲ್ಲಾ ಘಟಕಗಳಿಗೆ ಬೇರೆ ಬೇರೆ ಸಹಾಯಧನ ನೀಡಲಾಗುತ್ತದೆ.
ನೀರು ಸಂಗ್ರಹ ಕೃಷಿ ಹೊಂಡ(ಕೆರೆ) ಅಳತೆಗಳು ಮತ್ತು ಸಹಾಯಧನ:
ಕೃಷಿ ಭಾಗ್ಯ ಯೋಜನೆಯಲ್ಲಿ ಸಾಮಾನ್ಯ ರೈತರಿಗೆ ಶೇ.80 ರಷ್ಟು ಸಹಾಯಧನ ಮತ್ತು ಪ.ಜಾ ಹಾಗೂ ಪ.ಪಂ ವರ್ಗದ ರೈತರಿಗೆ ಶೇ.90 ರಷ್ಟು ಸಹಾಯಧನ ಈ ಯೋಜನೆಯಲ್ಲಿ ನೀಡಲಾಗುತ್ತದೆ.ಕೆಳಗಡೆ ನೀಡಲಾಗಿದ್ದು ಒಟ್ಟು ಮೊತ್ತದ ದರ.
1)10*10*3-(ಕೆಂಪು ಮಣ್ಣು)22494/-
2)12*12*3-(ಕೆಂಪು ಮಣ್ಣು)28165/-ಕಪ್ಪು ಮಣ್ಣು-24468/-
3)15*15*3-(ಕೆಂಪು ಮಣ್ಣು)42079/-ಕಪ್ಪು ಮಣ್ಣು-36796/-
4)18*18*3-(ಕೆಂಪು ಮಣ್ಣು)56311/-ಕಪ್ಪು ಮಣ್ಣು-49424/-
5)21*21*3-(ಕೆಂಪು ಮಣ್ಣು)79034/-ಕಪ್ಪು ಮಣ್ಣು-70551/-
FARM POND(ಕೆರೆ) ಹೊಂಡಕ್ಕೆ ಸಲ್ಲಿಸಬೇಕಾದ ದಾಖಲೆಗಳು:
1)ಅರ್ಜಿ ನಮೂನೆ(ಇಲಾಖೆಯಲ್ಲಿ ಸಿಗುತ್ತೆ)
2)ಅರ್ಜಿದಾರರ ಆಧಾರ್ ಕಾರ್ಡ ಜೆರಾಕ್ಸ್
3) ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
4)ಪಹಣಿ/RTC ಪ್ರತಿ
5)ಜಾತಿ ಪ್ರಮಾಣ ಪತ್ರ(SC/ST) ಮಾತ್ರ
6) ಅರ್ಜಿದಾರರ ಫೋಟೋ
7)ರೇಷನ್ ಕಾರ್ಡ ಜೆರಾಕ್ಸ್
ಕೃಷಿ ಹೊಂಡ(ಕೆರೆ) ನಿರ್ಮಾಣಕ್ಕೆ ಎಲ್ಲಿ ಅರ್ಜಿಸಲ್ಲಿಸಬೇಕು:
ಆಸಕ್ತ ರೈತರು ನಿಮ್ಮ ತಾಲೂಕು ಕೇಂದ್ರಗಳಲ್ಲಿ ಇರುವ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ಹೋಬಳಿ ರೈತ ಸಂಪರ್ಕ ಕೇಂದ್ರ (ಕೃಷಿ ಇಲಾಖೆ)ಗಳಲ್ಲಿ ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.