Thursday, November 14, 2024

pm kisan checking-ಪಿ ಎಮ್ ಕಿಸಾನ್ ಯೋಜನೆಯ ಹಣ ಬಂದಿಲ್ಲವೇ? ನಿಮ್ಮ ಹಣದ ಸ್ಥಿತಿ ಹೀಗೆ ತಿಳಿಯಿರಿ.

ನಮಸ್ಕಾರ ರೈತರೇ, ಕೇಂದ್ರ ಸರಕಾರದ ಪಿಎಮ್ ಕಿಸಾನ ಯೋಜನೆಯ ಹಣವು ನಿಮಗೆ ಜಮೆ ಆಗಿದೆಯೇ ಇಲ್ಲವೇ ಎಂದು ಹೇಗೆ ತಿಳಿದುಕೊಳ್ಳಬೇಕು ಎಂದು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಹಾಗೂ ಪಿ ಎಮ್ ಕಿಸಾನ್ ಯೋಜನೆಯ ಸ್ಥಿತಿ ಪರಿಶೀಲನೆ ನೋಡುವ ಬಗ್ಗೆ ತಿಳಿಸುತ್ತೇವೆ.

ನಮಸ್ಕಾರ ರೈತ ಭಾಂದವರೇ, ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನಿಧಿ(pm kisan samman) ಯೋಜನೆಯ 18ನೇ ಕಂತನ್ನು ಅಕ್ಟೋಬರ್ 5 ರಂದು ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಎಲ್ಲಾ ರೈತರು ತಪ್ಪದೇ ಇಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಈ ಕಿಸಾನ್ ಸಮ್ಮಾನ್ ಯೋಜನೆಯು 2019 ರಿಂದ ಚಾಲನೆಯಲ್ಲಿದ್ದು, ಇಲ್ಲಿವರೆಗೂ ರೂ.2000 ರಂತೆ ಒಟ್ಟು 17 ಕಂತುಗಳು ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 5 ರಂದು 18 ನೇ ಕಂತು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರಕಾರವು ತಿಳಿಸಲಾಗಿದೆ. ಹಾಗಾಗಿ ತಪ್ಪದೇ ಎಲ್ಲರೂ ಇಕೆವೈಸಿ ಮಾಡಿಕೊಳ್ಳಿ ಇಲ್ಲವಾದಲ್ಲಿ 18ನೇ ಕಂತು ಜಮೆಯಾಗಿರುವುದಿಲ್ಲ.

ಈ ಪಿಎಮ್ ಕಿಸಾನ್ ಸಮ್ಮಾನ(pm kisan samman) ಹಣವು ಪಡೆದುಕೊಳ್ಳುವ ಪ್ರತಿಯೊಬ್ಬರು ಇಕೆವೈಸಿ ಮಾಡಿಸುವುದು ಕಡ್ಡಾಯವೆಂದು ಸರಕಾರ ಆದೇಶ ಮಾಡಿದೆ. ಆದ್ದರಿಂದ ಎಲ್ಲರೂ ತಪ್ಪದೆ ಇಕೆವೈಸಿ ಮಾಡಿಸಿ ನಿಮ್ಮ ಕಿಸಾನ್ ಸಮ್ಮಾನ್ ಹಣ ಪಡೆದುಕೊಳ್ಳಿ. 

pm kisan checking-ಪಿ ಎಮ್ ಕಿಸಾನ್ ಯೋಜನೆಯ ಸ್ಥಿತಿ ನೋಡುವ ವಿಧಾನ!

ಮೊದಲಿಗೆ ಇಲ್ಲಿ ಪಿಎಮ್ ಕಿಸಾನ್(PM Kisan samman) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಕೇಂದ್ರ ಸರಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಳ್ಳುತ್ತದೆ.

ವಿಧಾನ-1: ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಂಡ ಮೇಲೆ Farmers Corner ನಲ್ಲಿ ಹಲವಾರು ಅಂಕಣಗಳಿವೆ E-kyc ಅಂಕನ,New farmer registration ಅಂಕಣ, Know your status ಅಂಕಣ, Beneficiary list ಅಂಕಣ,Name correction as per Aadhar ಅಂಕಣ ಹೀಗೆ ಹಲವಾರು ಅಂಕಣಗಳಿವೆ.

ವಿಧಾನ-2: ಈ ಎಲ್ಲಾ ಅಂಕಣಗಳಲ್ಲಿ ನೀವು Know your status ಮೇಲೆ ಕ್ಲಿಕ್ ಮಾಡಿ.

ವಿಧಾನ-3: ನಂತರ Know your Registration no. ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ಅದಕ್ಕೆ OTP ಬರುತ್ತದೆ, OTP ಹಾಕಿ ನಿಮ್ಮ Registration number ತೆಗೆದುಕೊಳ್ಳಬೇಕು.

ವಿಧಾನ-4:ನಂತರ Know your status ಮೇಲೆ ಕ್ಲಿಕ್ ಮಾಡಿ ಅದರಲ್ಲಿ ನೀವು ಪಡೆದುಕೊಂಡ Registration number ಹಾಕಿ ಮತ್ತೆ ನಿಮ್ಮ ಮೊಬೈಲ್ ಗೆ OTP ಬರುತ್ತದೆ ಅದನ್ನು ಹಾಕಿದರೆ ನಿಮ್ಮ profile page ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಹೆಸರು, ವಿಳಾಸ, ಹಾಗೂ ಇಲ್ಲಿಯವರೆಗೂ ಬಂದಿರುವ ಕಂತಿನ ಹಣದ ವಿವರ ಇರುತ್ತದೆ.

ಇಲ್ಲಿಯವರೆಗೂ ಎಷ್ಟು ಕಂತು ಹಣ ಬಂದಿದೆ ಎಂದು ನೋಡಲು ಇಲ್ಲಿದೆ ಲಿಂಕ್ CLICK HERE…

ಇತ್ತೀಚಿನ ಸುದ್ದಿಗಳು

Related Articles