Thursday, November 14, 2024

Bee keeping training-ಉಚಿತ 10 ದಿನಗಳ ಜೇನು ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ!

ನಮಸ್ಕಾರ ರೈತರೇ, ಜೇನು ತುಪ್ಪದ ಬಳಕೆಯನ್ನು ಬಹಳ ಹಳೆ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಈ ಜೇನು ಸಾಕಾಣಿಕೆ ಮಾಡಿ ಜೇನು ತುಪ್ಪ ತೆಗೆದು ಮಾರಾಟ ಮಾಡುವುದು ಈಗಿನ ಒಂದು ಉದ್ಯಮವಾಗಿದೆ. ಅದರ ಬಗ್ಗೆ ತಿಳಿದುಕೊಳ್ಳಲು ಉಚಿತ ತರಬೇತಿ ನೀಡಲಾಗುತ್ತದೆ.

ಧರ್ಮಸ್ಥಳ(ಉಜಿರೆ) ರುಡ್ ಸೆಟ್ ಸಂಸ್ಥೆ ದಕ್ಷಿಣ ಕನ್ನಡ(ಮಂಗಳೂರು) ಜಿಲ್ಲೆ ವತಿಯಿಂದ ಉಚಿತ ಊಟ-ವಸತಿ ಸಹಿತ ಜೇನು ಸಾಕಾಣಿಕೆ ತರಬೇತಿ ದಿನಾಂಕ 11/ನವೆಂಬರ್/2024 ರಿಂದ 20/ನವೆಂಬರ್/2024 (10 ದಿನಗಳು) ವರೆಗೆ ಕುರಿತು ಉಚಿತ ತರಬೇತಿಯನ್ನು ಆಯೋಜಿಸಲಾಗುತ್ತಿದೆ.

ಜೇನು ಸಾಕಾಣಿಕೆ ಮಾಡುವ ರೈತರು ಜೇನು ಹುಳಗಳು ಪರಾಗಸ್ಪರ್ಶ ಹೆಚ್ಚಾಗಿ ತಮ್ಮ ಬೆಳೆಗಳ ಇಳುವರಿ ಹೆಚ್ಚಾಗುತ್ತದೆ. ತಾವೇ ಮನೆಯಲ್ಲಿ ಶುದ್ಧ ಜೇನು ತುಪ್ಪ ತಯಾರಿಸಿ ಮಾರಾಟ ಸಹ ಮಾಡಬಹುದು. ಮಾರುಕಟ್ಟೆಯಲ್ಲಿ ಜೇನು ತುಪ್ಪಕ್ಕೆ ತುಂಬಾ ಬೇಡಿಕೆ ಇದೆ.

ಇದನ್ನೂ ಓದಿ:ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆಯ ವರದಿ ತಿಳಿದುಕೊಳ್ಳಬಹುದು! ಇಲ್ಲಿದೆ ಮಾಹಿತಿ.

Free training details-ಈ ಕೆಳಗೆ ತಿಳಿಸಿದ ತರಭೇತಿಗಳು ಉಚಿತವಾಗಿ ನಡೆಯಲಿವೆ.

1.ಸಿಸಿ ಟಿವಿ ಕ್ಯಾಮೆರಾ ಇನ್ಸ್ಟಾಲೆಷನ್(13 ದಿನಗಳು)

2. ಬೇಕರಿ ಆಹಾರ ತಯಾರಿಕೆ (1 ತಿಂಗಳು)

3.ಅಣಬೆ ಬೇಸಾಯ (10 ದಿನಗಳು)

4.ಮೋಟಾರ್ ರಿವೈಂಡಿಗ್ ವರ್ಕ್ಸ್ (1 ತಿಂಗಳು)

5.ಬ್ಯೂಟಿಸಿಯನ್ ತರಬೇತಿ (1 ತಿಂಗಳು)

6. ಫಾಸ್ಟ ಫುಡ್ ತಯಾರಿಕೆ (10 ದಿನಗಳು)

ಇದಲ್ಲದೇ ಇನ್ನೂ ಹಲವಾರು ಸ್ವ-ಉದ್ಯೋಗವನ್ನು ಕೈಗೊಳ್ಳುವಂತಹ ತರಬೇತಿಗಳನ್ನು ನೀಡಲಾಗುತ್ತದೆ.

How to join training- ತರಬೇತಿಯನ್ನು ಯಾರೆಲ್ಲ ಪಡೆಯಬಹುದು?

1.ಅಭ್ಯರ್ಥಿಯು ಗ್ರಾಮೀಣ ಪ್ರದೇಶದವರಾಗಿರಬೇಕು.

2.ವಯೋಮಿತಿ 19 ರಿಂದ 45 ವಯಸ್ಸಿನ ಒಳಗಿರಬೇಕು.

3.ಅಭ್ಯರ್ಥಿಯು ಗ್ರಾಮೀಣ ಭಾಗದ ಬಿಪಿಲ್ ಅಥವಾ ಅಂತ್ಯೋದಯ ಅಥವಾ ನರೇಗಾ ಜಾಬ್ ಕಾರ್ಡ್ ಹೊಂದಿರಬೇಕು.

ವಿಶೇಷ ಸೂಚನೆ: ತರಬೇತಿಯು ಸಂಪೂರ್ಣ ಊಟ ವಸತಿಯೊಂದಿಗೆ ವಸತಿ ಸಹಿತ ಉಚಿತವಾಗಿರುತ್ತದೆ. ಮತ್ತು ತರಬೇತಿಯ ಕೊನೆಯ ದಿನ ಪ್ರಮಾಣ ಪತ್ರ ನೀಡಲಾಗುತ್ತದೆ.

ಇದನ್ನೂ ಓದಿ:ಹಸು ಸಾಕಾಣಿಕೆ ರೈತರಿಗೆ ಸಿಹಿ ಸುದ್ಧಿ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ವಿವರ ಮತ್ತು ಅರ್ಜಿ ಸಲ್ಲಿಸಲು ಸಂಪರ್ಕಿಸಬೇಕಾದ ವಿಳಾಸ:

ರುಡ್ ಸೆಟ್ ಸಂಸ್ಥೆ

ಉಜಿರೆ,ದಕ್ಷಿಣ ಕನ್ನಡ (ಮಂಗಳೂರು)

Near ಧರ್ಮಸ್ಥಳ-574240

08256236404/9591044014/9448348569/9980885900

9902594791.Whatspp ಮೂಲಕ ಅರ್ಜಿ ಸಲ್ಲಿಸಲು:6364561982

Online ಮೂಲಕ ಅರ್ಜಿ ಸಲ್ಲಿಸಲು:rudsetitraining.org

ಇತ್ತೀಚಿನ ಸುದ್ದಿಗಳು

Related Articles