Thursday, November 14, 2024

UAS BANGALORE KRISHI MELA-ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಮೇಳ ದಿನಾಂಕ ಬಿಡುಗಡೆ ! ಈ ಬಾರಿಯ ಕೃಷಿ ಮೇಳದ ವಿಶೇಷತೆಗಳು ಹೀಗಿದೆ.

ನಮಸ್ಕಾರ ರೈತರೇ, 2024ರ ಕೃಷಿ ವಿಶ್ವ ವಿದ್ಯಾನಿಲಯ ಬೆಂಗಳೂರು ಇದರ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯುವ ಕೃಷಿ ಮೇಳವನ್ನು ನವೆಂಬರ್ 14 ರಿಂದ 17 ರ ವರೆಗೆ ನಾಲ್ಕು ದಿನಗಳ ಕಾಲ ಈ ಕೃಷಿ ಮೇಳವನ್ನು ಆಯೋಜಿಸಲಾಗಿದ್ದು, 1 ಎಕರೆಯಲ್ಲಿ ಡಿಜಿಟಲ್ ಕೃಷಿ ಅನಾವರಣಗೊಳ್ಳಲಿದೆ ಎಂದು ಕುಲಪತಿಗಳಾದ ಡಾ.ಎಸ್.ವಿ.ಸುರೇಶ ತಿಳಿಸಿರುತ್ತಾರೆ.

ಈ ಬಾರಿಯ ಕೃಷಿ ಮೇಳದ ಘೋಷ ವಾಕ್ಯವು “ಹವಾಮಾನ ಚತುರ ಡಿಜಿಟಲ್ ಕೃಷಿ” ಎಂದು ನೀಡಲಾಗಿದೆ. ಈ ಬಾರಿಯ ಕೃಷಿ ಮೇಳದಲ್ಲಿ ಕೃಷಿಗೆ ಹೆಚ್ಚಿನ ತಂತ್ರಜ್ಷಾನಗಳ ಬಳಕೆ ಕುರಿತು ಮಾಹಿತಿ ಇರಲಿದೆ.

ಕೃಷಿ ಮೇಳದಲ್ಲಿ ಒಟ್ಟು 700 ವಿವಿಧ ಕೃಷಿ ವಸ್ತು ಪ್ರದರ್ಶನದ ಮಳಿಗೆಗಳು ಇರಲಿವೆ. ಹಾಗೂ ಕೃಷಿಗೆ ಸಂಬಂಧ ಪಟ್ಟ ತಂತ್ರಜ್ಞಾನ ಮಳಿಗೆಗಳು ಕೂಡ ಇರಲಿವೆ. ಕೃಷಿ ಮೇಳದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಸಹ ಮಾಡಲಿದ್ದಾರೆ.

ಇದನ್ನೂ ಓದಿ:ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆಯ ವರದಿ ತಿಳಿದುಕೊಳ್ಳಬಹುದು! ಇಲ್ಲಿದೆ ಮಾಹಿತಿ.

KRISHI MELA-ಈ ಬಾರಿ ಕೃಷಿ ಮೇಳದ ವಿಶೇಷತೆಗಳು ಹೀಗಿದೆ.

1)1 ಎಕರೆಯಲ್ಲಿ ಡಿಜಿಟಲ್ ಕೃಷಿ ಅನಾವರಣ.

2)ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ.

3)ಮಣ್ಣು ರಹಿತ ಕೃಷಿ.

4)ವಿವಿಧ ಬೆಳೆಗಳ ತಳಿಗಳ ಪ್ರಾತ್ಯಕ್ಷಿಕೆ.

5)ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು.

6)ಸಾವಯವ ಕೃಷಿ ಪದ್ಧತಿಗಳು.

7)ಸಮಗ್ರ ಕೀಟ, ರೋಗ ಹಾಗೂ ಪೋಷಕಾಂಶಗಳ ನಿರ್ವಹಣೆ.

8)ಜಲಾನಯನ ನಿರ್ವಹಣೆ .

9)ತೋಟಗಾರಿಕೆ ಬೆಳೆಗಳು ಮತ್ತು ನಿಖರ ಕೃಷಿ ಪ್ರಾತ್ಯಕ್ಷಿಕೆ.

10)ರೇಷ್ಮೆ ಕೃಷಿ.

11)ಕೃಷಿ ಮಾರುಕಟ್ಟೆ ನೈಪುಣ್ಯತೆ.

12)ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು.

13)ಮಳೆ ಹಾಗೂ ಮೇಲ್ಚಾವಣಿ ನೀರಿನ ಕೊಯ್ಲು.

14)ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ.

15)ಕೃಷಿ ಸ್ವಯಂಚಾಲಿತ ತಂತ್ರಜ್ಞಾನಗಳು.

ಇದನ್ನೂ ಓದಿ:ಹಸು ಸಾಕಾಣಿಕೆ ರೈತರಿಗೆ ಸಿಹಿ ಸುದ್ಧಿ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಮಳಿಗೆಗಳನ್ನು ಪಡೆಯಲು ಸಂಪರ್ಕಿಸಲು.

ಡಾ. ನಾರಾಯಣ ರೆಡ್ಡಿ (ಪ್ರಾಧ್ಯಾಪಕರು)

ದೂ.080-23638883/23330153

ಮೊ.9901488773

ಇತ್ತೀಚಿನ ಸುದ್ದಿಗಳು

Related Articles