Thursday, November 14, 2024

Vaccination abhiyan-ಹಸು ಸಾಕಾಣಿಕೆ ರೈತರಿಗೆ ಸಿಹಿ ಶುದ್ಧಿ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ನಮಸ್ಕಾರ ರೈತರೇ, ಕರ್ನಾಟಕ ಸರಕಾರವು 2024-25ನೇ ಸಾಲಿನ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ(national animal disease control programme) ಯೋಜನೆಯಡಿ ಕಾಲು ಬಾಯಿ ರೋಗ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಹೌದು ರೈತರೇ ಇದೇ ತಿಂಗಳು ಅಕ್ಟೋಬರ್ 21 ರಿಂದ ನವೆಂಬರ್ 20 ರವರೆಗೆ ಇಡಿ ಕರ್ನಾಟಕ ರಾಜ್ಯಾದ್ಯಂತ ಕಾಲು ಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಪಶುಸಂಗೋಪನೆಯ ಸಚಿವರಾದ ಶ್ರೀ ಕೆ. ವೆಂಕಟೇಶ್ ಅವರು ತಿಳಿಸಿರುತ್ತಾರೆ.

ಎಲ್ಲಾ ರೈತರು ತಪ್ಪದೇ ನಿಮ್ಮ ಜಾನುವಾರುಗಳಿಗೆ ಉಚಿತ ಕಾಲು ಬಾಯಿ ರೋಗ ಲಸಿಕೆಯನ್ನು ಹಾಕಿಸಿ ನಿಮ್ಮ ನಿಮ್ಮ ಜಾನುವಾರುಗಳ ರಕ್ಷಣೆ ಮಾಡಿಕೊಳ್ಳಿ. ಈ ಕಾಲು ಬಾಯಿ ರೋಗದ ಲಸಿಕೆಗೆ ನಿಮ್ಮ ಹತ್ತಿರದ ಪಶು ವೈದ್ಯಾಧಿಕಾರಿಗಳು ಬಂದು ಲಸಿಕೆ ಹಾಕಲಾಗುತ್ತದೆ. ಒಂದು ವೇಳೆ ಬರದೆ ಹೋದರೆ ಅವರ ಗಮನಕ್ಕೆ ತಂದು ತಪ್ಪದೇ ಲಸಿಕೆ ಹಾಕಿಸಿ.

ಇದನ್ನೂ ಓದಿ:ಹಸಿರೆಲೆ ಗೊಬ್ಬರದ ಮಹತ್ವ ಮತ್ತು ವಿಶೇಷತೆ ಹಾಗೂ ಅದರ ವಿಧಗಳು!

ರೈತರೇ ನಿಮ್ಮ ಜಾನುವಾರುಗಳಿಗೆ ತಗಲುವ ಕಾಲುಬಾಯಿ ರೋಗದ ಬಗ್ಗೆ ಇರಲಿ ಎಚ್ಚರ:

1)ಕಾಲುಬಾಯಿ ರೋಗವನ್ನು ನಿಯಂತ್ರಿಸಿ, ನಿರ್ಮೂಲನೆ ಮಾಡಲು ಪ್ರತಿ 6 ತಿಂಗಳಿಗೊಮ್ಮೆ ರೋಗದ ವಿರುದ್ದ ಲಿಸಿಕೆ ಹಾಕಿಸುವುದೊಂದೇ ಮಾರ್ಗ.

2)ಕಾಲು ಬಾಯಿ ರೋಗದ ವಿರುದ್ಧ ಎಲ್ಲಾ ದನ, ಎಮ್ಮೆ, ಮತ್ತು ಕರುಗಳಿಗೆ ಉಚಿತವಾಗಿ ಲಸಿಕೆ ಹಾಕಿಸಿ.

3)ಲಸಿಕಾದಾರರು ನಿಮ್ಮ ಗ್ರಾಮಕ್ಕೆ, ನಿಮ್ಮಮನೆ ಬಾಗಿಲಿಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ.

4)ತಪ್ಪದೇ ನಿಮ್ಮ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆಯನ್ನು ಹಾಕಿಸಿ, ರೋಗ ಬರದಂತೆ ಜಾನುವಾರುಗಳನ್ನು ರಕ್ಷಿಸಿ, ಆರ್ಥಿಕ ನಷ್ಟ ತಡೆಯಿರಿ.

5)ರಾಜ್ಯವನ್ನು ಕಾಲುಬಾಯಿ ರೋಗ ಮುಕ್ತವಲಯವನ್ನಾಗಿಸಲು ಸಂಕಲ್ಪ ಮಾಡೋಣ.

ಇದನ್ನೂ ಓದಿ:ರುಡ್ ಸೆಟ್ ಸಂಸ್ಥೆವತಿಯಿಂದ ಉಚಿತ ಕಂಪ್ಯೂಟರ್ ಟ್ಯಾಲಿ ತರಬೇತಿಗೆ ಅರ್ಜಿ ಆಹ್ವಾನ!

ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಪಶು ಆಸ್ಪತ್ರೆ ಅಥವಾ ಪಶು ವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ವಿಚಾರಿಸಬಹುದು. ಹಾಗೂ ಉಚಿತ ಸಹಾಯವಾಣಿ 1962 ಗೆ ಕರೆ ಮಾಡಿ.

ಇತ್ತೀಚಿನ ಸುದ್ದಿಗಳು

Related Articles