Thursday, November 14, 2024

SSP SCHOLARSHIP-1 ರಿಂದ 10 ನೇ ತರಗತಿಯ ವಿಧ್ಯಾರ್ಥಿಗಳಿಗೆ 2024-25-ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ!

2024-25ನೇ ಸಾಲಿನಲ್ಲಿ ರಾಜ್ಯ ಸರಕಾರದಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ನೆರವು ನೀಡಲು ವಿದ್ಯಾರ್ಥಿ ವೇತನ ಪಡೆಯಲು (SSP Scholarship-2024) 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಎಲ್ಲಾ ವಿದ್ಯಾರ್ಥಿಗಳು 2024-25ನೇ ಸಾಲಿನಲ್ಲಿ 1 ರಿಂದ 10 ನೇ ತರಗತಿ  ಓದುತ್ತಿರುವವರು ಮತ್ತು ಅರ್ಹ ಆಸಕ್ತ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಗಿಯುದರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಈ ವಿದ್ಯಾರ್ಥಿ ವೇತನಕ್ಕೆ ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರು ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಹಾಗೂ ಇನ್ನಿತರ ವಿಷಯಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಕೆಳಗೆ ತಿಳಿಸಲಾಗುವುದು.

ಇದನ್ನೂ ಓದಿ:ಕಂಪ್ಯೂಟರ್ ಟ್ಯಾಲಿ ಉಚಿತ ತರಬೇತಿಗೆ ರುಡ್ ಸೆಟ್ ಸಂಸ್ಥೆವತಿಯಿಂದ ಅರ್ಜಿ ಆಹ್ವಾನ!

Apply documents-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

2024-25-ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಅಗತ್ಯ ಅದರ ವಿವರ ಹೀಗಿದೆ.

1) AADHAR CARD XEROX/ಆಧಾರ್ ಕಾರ್ಡ್ ಪ್ರತಿ.

2)ಶಾಲಾ ದಾಖಲಾತಿ ರಶೀದಿ ಅಥವಾ ಮುಖ್ಯ ಗುರುಗಳ ದಾಖಲಾತಿ ಪತ್ರ.

3) MOBILE WITH OTP/ಮೊಬೈಲ್ ನಂಬರ್.

4)CASTE AND INCOME CERTIFICATE/ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

5)ವಿಕಲಚೇತನರಾಗಿದ್ದಲ್ಲಿ ಯು.ಡಿ.ಐ.ಡಿ. ಗುರುತಿನ ಸಂಖ್ಯೆ.

6)ಅರ್ಜಿದಾರರ ಇಮೇಲ್ ಐಡಿ.

How can apply SSP Scholarship-ಹೇಗೆ ಸಲ್ಲಿಸಬೇಕು?

ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಡೆ ವಿಧಾನಗಳನ್ನು ಅನುಸರಿಸಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.

ವಿಧಾನ-1:ಮೊದಲಿಗೆ ಈ ಲಿಂಕ್ SSP Scholarship ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕಾಗುತ್ತದೆ. ಇದಾದ ನಂತರ ಇಲ್ಲಿ ಎರಡು ಆಯ್ಕೆಗಳು ತೋರಿಸುತ್ತದೆ. ಮೊದಲ ಬಾರಿಗೆ ಈ ವೆಬ್ಸೈಟ್ ಪ್ರವೇಶ ಮಾಡುತ್ತಿರುವವರು ಹೊಸ ಖಾತೆಯನ್ನು ಸೃಜಿಸಲು ಇಲ್ಲಿ ಕ್ಲಿಕ್ ಮಾಡಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು. ಒಂದು ವೇಳೆ ಈಗಾಗಲೇ ಖಾತೆಯನ್ನು ಸೃಜನೆ ಮಾಡಿಕೊಂಡಿದ್ದರೆ ವಿದ್ಯಾರ್ಥಿಗಳು 2024-25ನೇ ಸಾಲಿನ  ಮೇಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯನ್ನು ಕ್ಲಿಕ್ ಮಾಡಿ ಮುಂದುವರೆಯಬೇಕು.

ವಿಧಾನ-2:ನಂತರ ಪೇಜ್ ನಲ್ಲಿ ವಿದ್ಯಾರ್ಥಿಗಳ ಲಾಗಿನ್ ಐಡಿ/USER ID, ಪಾಸ್ವರ್ಡ್/Password, ಕ್ಯಾಪ್ಚ್/Captcha, ಕೋಡನ್ನು ನಮೂದಿಸಿ “student login” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ:ರೈತರ ನೋಂದಣಿ ಎಲ್ಲಿ ಮಾಡಿಸಬೇಕು ಮತ್ತು ಅದರ ಪ್ರಯೋಜನಗಳು!

ವಿಧಾನ-3: student login” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ವಿದ್ಯಾರ್ಥಿಗಳ ವೈಯಕ್ತಿಕ ವಿವರ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “ಸಲ್ಲಿಸಿ/Submit” ಮೇಲೆ ಕ್ಲಿಕ್ ಮಾಡಬೇಕು.

ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಗ್ರಾಮ ಒನ್ ಮತ್ತು ನಾಗರಿಕ ಸೇವಾ ಕೇಂದ್ರ ಹಾಗೂ ಸೇವಾ ಸಿಂಧು ಸೈಬರ್ ಗಳನ್ನು ಭೇಟಿ ಮಾಡಿ.

ಅರ್ಜಿ ಸಲ್ಲಿಸಲು ಇಲ್ಲಿದೆ ಲಿಂಕ್: Click here…

ಇತ್ತೀಚಿನ ಸುದ್ದಿಗಳು

Related Articles