Friday, October 18, 2024

Poultry farming-ಉಚಿತ ಊಟ ಮತ್ತು ವಸತಿಯೊಂದಿಗೆ 10 ದಿನಗಳ ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ!

ನಮಸ್ಕಾರ ರೈತರೇ, ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ ಕೆನರಾ ಬ್ಯಾಂಕ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟನ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್ ಸೆಟ್ ಸಂಸ್ಥೆ ವತಿಯಿಂದ ಕೋಳಿ ಸಾಕಾಣಿಕೆ ಕುರಿತು 10 ದಿನಗಳ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಗ್ರಾಮೀಣ ಭಾಗದ ಆಸಕ್ತ ಯುವಕ-ಯುವತಿಯರು 18 ರಿಂದ 45 ವರ್ಷ ಒಳಗಿನ ವಯೋಮಾನದವರಾಗಿರಬೇಕು ಮತ್ತು ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಬರುವಂತವರಾಗಿರಬೇಕು. ಸ್ವ-ಉದ್ಯೋಗವನ್ನು ಮಾಡಲು ಆಸಕ್ತರಾಗಿರಬೇಕು.

ತರಬೇತಿಯು ಕಡ್ಡಾಯವಾಗಿ ವಸತಿಯುವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುತ್ತದೆ.

ಆಸಕ್ತರು ಅರ್ಜಿ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ರುಡ್ ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ನಂ:9740982585, 9380162042 ಸಂಪರ್ಕಿಸಬಹುದು.

How to join training- ತರಬೇತಿಯನ್ನು ಯಾರೆಲ್ಲ ಸೇರಬಹುದು?

1.ಅಭ್ಯರ್ಥಿಯು ಗ್ರಾಮೀಣ ಪ್ರದೇಶದವರಾಗಿರಬೇಕು.

2.ವಯೋಮಿತಿ 19 ರಿಂದ 45 ವಯಸ್ಸಿನ ಒಳಗಿರಬೇಕು.

3.ಅಭ್ಯರ್ಥಿಯು ಗ್ರಾಮೀಣ ಭಾಗದ ಬಿಪಿಲ್ ಅಥವಾ ಅಂತ್ಯೋದಯ  ಹೊಂದಿರಬೇಕು.

ವಿಶೇಷ ಸೂಚನೆ: ತರಬೇತಿಯು ಸಂಪೂರ್ಣ ಊಟ ವಸತಿಯೊಂದಿಗೆ ವಸತಿ ಸಹಿತ ಉಚಿತವಾಗಿರುತ್ತದೆ. ಮತ್ತು ತರಬೇತಿಯ ಕೊನೆಯ ದಿನ ಪ್ರಮಾಣ ಪತ್ರ ನೀಡಲಾಗುತ್ತದೆ. ಇದನ್ನೂ

ಇದನ್ನೂ ಓದಿ:ಕರ್ನಾಟಕ ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ 2975 ಹುದ್ದೆಗಳ ನೇಮಕಾತಿ ಪ್ರಕಟಣೆ!

ಇದನ್ನೂ ಓದಿ:ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಆಗಿಲ್ಲವೇ ಆದಷ್ಟು ಬೇಗನೆ ಸಮೀಕ್ಷೆಗಾರರನ್ನು ಭೇಟಿ ಮಾಡಿ ಸಮೀಕ್ಷೆ ಮಾಡಿಸಿ. ಸಮೀಕ್ಷೆಗಾರರ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರದಲ್ಲಿ ಎರಡು ದಿನಗಳ ಕೃಷಿ ಮೇಳ ಆಯೋಜನೆ!

ಇದನ್ನೂ ಓದಿ:ಬೆಳೆ ಸಮೀಕ್ಷೆಯಲ್ಲಿ ನಿಮ್ಮ ಬೆಳೆ ನಮೂದು ತಪ್ಪಾಗಿದ್ದರೆ ಹೀಗೆ ಆಕ್ಷೇಪಣೆ ಸಲ್ಲಿಸಬಹುದು.

ಇತ್ತೀಚಿನ ಸುದ್ದಿಗಳು

Related Articles