Friday, October 18, 2024

KPTCL jobs-ಕರ್ನಾಟಕ ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ 2975 ಹುದ್ದೆಗಳ ನೇಮಕಾತಿ ಪ್ರಕಟಣೆ!

ಎಲ್ಲರಿಗೂ ನಮಸ್ಕಾರಗಳು, ಪ್ರತಿಯೊಬ್ಬರಿಗೂ ಸರಕಾರಿ ನೌಕರಿ ಮಾಡಬೇಕು ಎಂಬ ಆಸೆ ಇರುತ್ತದೆ. ಹಾಗೆ ತಮ್ಮ ಮಕ್ಕಳು ಸರಕಾರಿ ನೌಕರಿ ಹೊಂದಬೇಕು ಎಂಬ ಬಯಕೆ ಎಲ್ಲ ಪಾಲಕರಲ್ಲಿ ಇದ್ದೆ ಇರುತ್ತದೆ. ಅದರಂತೆ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ 2975 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ 2975 ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರಕಾರದಿಂದ ಆದೇಶ ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಕೆ ವಿವರ ಮತ್ತು ಬೇಕಾಗುವ ದಾಖಲೆಗಳ ವಿವರ ಈ ಲೇಖನದಲ್ಲಿ ತಿಳಿಸಲಾಗುತ್ತದೆ.

ರಾಜ್ಯದಲ್ಲಿ ಒಟ್ಟು 6 ನಿಗಮಗಳು ಕಾರ್ಯ ನಿರ್ವಹಿಸುತ್ತಿವೆ. 1)ಕರ್ನಾಟಕ ರಾಜ್ಯ ಪ್ರಸರಣ ನಿಗಮ ನಿಯಮಿತ 2)ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ 3)ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ 4)ಮೈಸೂರು(ಚಾಮುಂಡೇಶ್ವರಿ) ವಿದ್ಯುತ್ ಸರಬರಾಜು ಕಂಪನಿ ನಿಯಮಿತ 5)ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ 6) ಗುಲ್ಬರ್ಗಾ (ಕಲಬುರಗಿ) ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.

KPTCL jobs-ಎಸ್ಕಾಂಗಳ ಹುದ್ದೆಗಳ ವಿವರ ಈ ಕೆಳಗಿನಂತಿದೆ:

1)KPTCL-492

2)BESCOM-906

3)MESCOM-449

4)CHESCOM-309

5)HESCOM-560

6)GESCOM-44

EDUCATION QULIFICATION-ವಿದ್ಯಾರ್ಹತೆಗಳು:

ಎಸ್.ಎಸ್.ಎಲ್.ಸಿ ಅಥವಾ 10ನೇ ತರಗತಿಯ ಪರೀಕ್ಷೆಯನ್ನು ಕರ್ನಾಟಕ ರಾಜ್ಯದ ವಿದ್ಯಾಸಂಸ್ಥೆಗಳಿಂದ ತೇರ್ಗಡೆ ಹೊಂದಿರುವಂತಹ ಅಭ್ಯರ್ಥಿಗಳು ಮಾತ್ರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹಾಗೂ ಕನ್ನಡದಲ್ಲಿ ಓದುವ ಬರೆಯುವ ಜ್ಞಾನ ಹೊಂದಿರತಕ್ಕದ್ದು.

ಅರ್ಜಿ ಸಲ್ಲಿಕೆ ದಿನಾಂಕ 21-10-2024 ರಿಂದ 20-11-2024 ರವರೆಗೆ ನೀಡಲಾಗಿದೆ.

ಸಹನ ಶಕ್ತಿ ಪರೀಕ್ಷೆಯ ಸ್ಪರ್ಧೆಗಳು ಈ ಕೆಳಗಿನಂತಿವೆ:

1)ವಿದ್ಯುತ್ ಕಂಬ ಹತ್ತುವುದು-8 ಮೀಟರ್ ಎತ್ತರ (ಕಡ್ಡಾಯ)

2)100 ಮೀಟರ್ ಓಟ – 14 ಸೆಕೆಂಡಗಳು ಮಾತ್ರ

3)ಸ್ಕಿಪ್ಪಿಂಗ್-  1 ನಿಮಿಷಕ್ಕೆ 50 ಬಾರಿ

4)ಶಾಟ್ ಪುಟ್ ಗುಂಡು ಎಸೆತ- 8 ಮೀಟರ್(3 ಅವಕಾಶಗಳು)

5)800 ಮೀಟರ್ ಓಟ- 3 ನಿಮಿಷ ಮಾತ್ರ

ಹೆಚ್ಚಿನ ವಿವರಗಳಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Click here…..

ಇತ್ತೀಚಿನ ಸುದ್ದಿಗಳು

Related Articles