Sunday, October 6, 2024

Ration card cancel-ರಾಜ್ಯದಲ್ಲಿ 22 ಲಕ್ಷ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಅನರ್ಹ ಮಾಡಲಾಗಿದೆ! ಯಾರದೆಲ್ಲ ಅನರ್ಹವಾಗಿದೆ ನೋಡಲು ಹೀಗೆ ಮಾಡಿ.

ಕರ್ನಾಟಕ ರಾಜ್ಯದಲ್ಲಿ ಇಲ್ಲಿಯವರೆಗೂ ಕುಟುಂಬ ತಂತ್ರಾಂಶದ ನೆರವಿನಿಂದ 22,62,413 ಬಿಪಿಎಲ್ ಮತ್ತು ಅಂತ್ಯೋದಯ ಅನರ್ಹ ಕಾರ್ಡ್ ಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪತ್ತೆ ಮಾಡಿ ಅನರ್ಹ ಮಾಡಲಾಗಿದೆ. ಯಾರದೆಲ್ಲ ಅನರ್ಹವಾಗಿದೆ ಎಂದು ತಿಳಿಯಲು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಅನರ್ಹ ಪಡಿತರ ಚೀಟಿ ಬೆಂಗಳೂರು ಜಿಲ್ಲೆ, ಕಲಬುರ್ಗಿ ಜಿಲ್ಲೆ, ಮೈಸೂರು ಜಿಲ್ಲೆ ಈ ಮೂರು ಜಿಲ್ಲೆಗಳಲ್ಲೆ ಹೆಚ್ಚು ಜನರು ಹೊಂದಿದ್ದಾರೆ. ದಕ್ಷಿಣ ಕನ್ನಡ 1,11,346 ಉಡುಪಿ 80,783 ಮಂದಿ ಅನರ್ಹದಾರರಿದ್ದಾರೆ. ಈ ಎಲ್ಲಾ ಅನರ್ಹದಾರರ ಪಡಿತರ ಚೀಟಿಯು ಎಪಿಎಲ್ ಕಾರ್ಡದಾರರಾಗಿ ಬದಲಾವಣೆ ಮಾಡುವ ಸಾದ್ಯತೆಗಳಿವೆ.

ಕಡಿಮೆ ಆದಾಯ ಮತ್ತು ಯಾವುದೇ ಜಮೀನು ಇಲ್ಲದೆ ಜೀವನ ಮಾಡುವ ಸಾರ್ವಜನಿಕರಿಗೆ ಅನುಕೂಲವಾಗಲು ಉಚಿತವಾಗಿ ಪಡಿತರ ಚೀಟಿ ಮೂಲಕ ಆಹಾರ ವಿತರಣೆ ಮಾಡಲಾಗುತ್ತಿದೆ. ಅಂತವರಲ್ಲದೆಯೂ ಬೇರೆಯವರು ಪಡಿತರ ಚೀಟಿಗಳನ್ನು ಪಡೆದುಕೊಂಡಿದ್ದು ಅಂತವರನ್ನು ಹುಡುಕಿ ಅವರ ರೇಷನ್ ಕಾರ್ಡನ್ನು ರದ್ದು ಮಾಡಲಾಗುತ್ತಿದೆ.

ಇದನ್ನೂ ಓದಿ:ಪಿಎಂ ಕಿಸಾನ್ 18ನೇ ಕಂತು ನಿಮಗೆ ಜಮೆ ಆಗಿದಯೇ ಇಲ್ಲವೇ ಎಂದು ತಿಳಿದುಕೊಳ್ಳಿ.

Ration card finding-ಅನರ್ಹ ರೇಷನ್ ಕಾರ್ಡ್ ಪತ್ತೆ ಮಾಡುವುದು ಹೇಗೆ?

1)ಬ್ಯಾಂಕ್ ಸಾಲ ಪಡೆಯಲು ಆದಾಯ ತೆರಿಗೆ ಪಾವತಿಸಿದ ದಾಖಲೆ ನೀಡಿದಾಗ.

2)ಕುಟುಂಬದ ಸದಸ್ಯರ ಪೈಕಿ ಒಬ್ಬ ಸದಸ್ಯ 1.20 ಲಕ್ಷ ರೂ. ಗಿಂತ ಹೆಚ್ಚಿನ ವರಮಾನ ಪಡೆದರೆ.

3)ಆದಾಯ ದೃಡೀಕರಣ ಪತ್ರ ಮಾಡಿಸುವ ವೇಳೆ ಮಕ್ಕಳ ವರಮಾನ ನಮೂದಿಸಿದಾಗ.

4)ಕಾರ್ಡನಲ್ಲಿ ಹೊಸ ಹೆಸರು ಸೇರ್ಪಡೆ ಮಾಡಿದ್ದಾಗ ವರಮಾನ ತೋರಿಸಿದಾಗ.

5)ಕುಟುಂಬ ಗುರುತಿನ ಚೀಟಿ ಮಾಡಿಸುವ ವೇಳೆ ಸದಸ್ಯರ ಪ್ಯಾನ್, ಆಧಾರ್ ನೀಡಿದಾಗ.

Cancelled Ration Cards List-ಅನರ್ಹ ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಉಂಟೆ? ಎಂದು ಹೀಗೆ ಚೆಕ್ ಮಾಡಿಕೊಳ್ಳಿ.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪ್ರತಿ ತಿಂಗಳು ಮಾರ್ಗ ಸೂಚಿ ಪ್ರಕಾರ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದರಲ್ಲಿ ಅರ್ಹರಿಲ್ಲದ ಜನರ ಪಡಿತರ ಚೀಟಿಯನ್ನು ರದ್ದುಪಡಿಸಿ ಇಲಾಖೆಯು ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವೆಬ್ಸೈಟ್ ನ್ನು ಪ್ರವೇಶ ಮಾಡಿ ನಿಮ್ಮ ಗ್ರಾಮ/ಹಳ್ಳಿಯ ಅನರ್ಹ ಪಟ್ಟಿಯನ್ನು ಹೇಗೆ ನೋಡುವುದು ಎಂದು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ:ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳು ಹಾಗೂ ಪಡೆದುಕೊಳ್ಳುವ ವಿಧಾನ!

ವಿಧಾನ-1:ಮೊದಲಿಗೆ cancelled ration card list ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

ವಿಧಾನ-2: ನಂತರ ಅದರಲ್ಲಿ “ಇ ರೇಷನ್ ಕಾರ್ಡ್”(E-ration card) ಮೇಲೆ ಕ್ಲಿಕ್ ಮಾಡಬೇಕು.

ವಿಧಾನ-3: E-ration card ಕ್ಲಿಕ್ ಮಾಡಿದ ಮೇಲೆ ಅದರಲ್ಲಿ Show Cancelled/Suspended list ಮೇಲೆ ಕ್ಲಿಕ್ ಮಾಡಬೇಕು.

ವಿಧಾನ-4: ತದನಂತರ ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ತಿಂಗಳು, ವರ್ಷ ಆಯ್ಕೆ ಮಾಡಿ “Go” ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ತಾಲೂಕಿನಲ್ಲಿ ಪ್ರತಿ ತಿಂಗಳಲ್ಲಿ ರದ್ದುಗೊಳಿಸಿರುವ ರೇಷನ್ ಕಾರ್ಡ್ ದಾರರ ಪಟ್ಟಿ ತೋರಿಸುತ್ತದೆ.

ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ/ಇಲ್ಲವಾ ಎಂದು ನೋಡಿಕೊಳ್ಳಬಹುದು.

ಇತ್ತೀಚಿನ ಸುದ್ದಿಗಳು

Related Articles