Friday, November 22, 2024

Pm kisan amount-ಇಂದಿನಿಂದ 18 ನೇ ಕಂತಿನ ಪಿಎಂ ಕಿಸಾನ್ ಹಣ ಖಾತೆಗೆ ಜಮೆಯಾಗಲಿದೆ! ನಿಮಗೆ ಬಂತೆ? ಇಲ್ಲಿದೆ ತಿಳಿದುಕೊಳ್ಳುವ ವಿಧಾನ.

ನಮಸ್ಕಾರ ರೈತರೇ, ಕೇಂದ್ರ ಸರಕಾರದ ಪಿಎಮ್ ಕಿಸಾನ ನಿಧಿ ಯೋಜನೆಯ 18ನೇ ಕಂತಿನ ಹಣವನ್ನು ಪ್ರಧಾನ ಮಂತ್ರಿಗಳು ಈ ದಿನ 12.00 ಗಂಟೆ ನಂತರ ಬಿಡುಗಡೆ ಮಾಡಲಿದ್ದಾರೆ. ಹಾಗಾಗಿ 18 ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆ ಆಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಈ ಕೆಳಗೆ ತಿಳಿಸಲಾಗುತ್ತದೆ.

ಕೇಂದ್ರ ಸರಕಾರವು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೃಷಿ ಚಟುವಟಿಕೆ ಮಾಡಲು ಪ್ರೋತ್ಸಾಹ ಮತ್ತು ಕೃಷಿ ಉತ್ತೇಜನಕ್ಕಾಗಿ ಪ್ರತಿಯೊಬ್ಬ ರೈತರಿಗೂ ವಾರ್ಷಿಕ ರೂ.6000 ರೂಪಾಯಿಗಳನ್ನು ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ನೇರ ರೈತರ ಖಾತೆಗೆ ರೂ.2000 ಜಮೆ ಮಾಡಲಾಗುತ್ತಿದೆ.

ಈ ಹಿಂದೆ 17ನೇ ಕಂತನ್ನು ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಆದ್ದರಿಂದ ಇಂದು 18 ನೇ ಕಂತನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರಲ್ಲಿ ಇಕೆವೈಸಿ ಮಾಡಿದ ರೈತರಿಗೆ ಮಾತ್ರ ಜಮೆಯಾಗಲಿದೆ. ಹಾಗೂ ಹೊಸ ಅರ್ಜಿ ಸಲ್ಲಿಸಿ ಇಕೆವೈಸಿ ಮಾಡಿಕೊಂಡಿದ್ದರೆ ಅವರಿಗೂ ಜಮೆಯಾಗಲಿದೆ.

ಇದನ್ನೂ ಓದಿ: ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳು ಹಾಗೂ ಪಡೆದುಕೊಳ್ಳುವ ವಿಧಾನ!

PM Kisan samman-ಪಿಎಂ ಕಿಸಾನ್ ಹಣ ಜಮೆ ಬಗ್ಗೆ ತಿಳಿದುಕೊಳ್ಳುವ ವಿಧಾನ.

ಮೊದಲಿಗೆ ಇಲ್ಲಿ ಪಿಎಮ್ ಕಿಸಾನ್(PM Kisan samman) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಕೇಂದ್ರ ಸರಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಳ್ಳುತ್ತದೆ.

step-1: ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಂಡ ಮೇಲೆ Farmers Corner ನಲ್ಲಿ ಹಲವಾರು ಅಂಕಣಗಳಿವೆ E-kyc ಅಂಕನ,New farmer registration ಅಂಕಣ, Know your status ಅಂಕಣ, Beneficiary list ಅಂಕಣ,Nmae correction as per Aadhar ಅಂಕಣ ಹೀಗೆ ಹಲವಾರು ಅಂಕಣಗಳಿವೆ.

step-2: ಈ ಎಲ್ಲಾ ಅಂಕಣಗಳಲ್ಲಿ ನೀವು Know your status ಮೇಲೆ ಕ್ಲಿಕ್ ಮಾಡಿ.

step-3: ನಂತರ Know your Registration no. ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ಅದಕ್ಕೆ OTP ಬರುತ್ತದೆ, OTP ಹಾಕಿ ನಿಮ್ಮ Registration number ತೆದುಕೊಳ್ಳಬೇಕು.

step-4:ನಂತರ Know your status ಮೇಲೆ ಕ್ಲಿಕ್ ಮಾಡಿ ಅದರಲ್ಲಿ ನೀವು ಪಡೆದುಕೊಂಡ Registration number ಹಾಕಿ ಮತ್ತೆ ನಿಮ್ಮ ಮೊಬೈಲ್ ಗೆ OTP ಬರುತ್ತದೆ ಅದನ್ನು ಹಾಕಿದರೆ ನಿಮ್ಮ profile page ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಹೆಸರು, ವಿಳಾಸ, ಹಾಗೂ ಇಲ್ಲಿಯವರೆಗೂ ಬಂದಿರುವ ಕಂತಿನ ಹಣದ ವಿವರ ಇರುತ್ತದೆ.

ಇದನ್ನೂ ಓದಿ: ರಾಜ್ಯದ ಕಂದಾಯ ಸಚಿವರಿಂದ ರೈತರಿಗೆ ಸಿಹಿ ಸುದ್ಧಿ “ಬಗರ್ ಹುಕುಂ” ಮರು ಚಾಲನೆ!

PM-Kisan pending reasons-ಕಿಸಾನ್ ಸಮ್ಮಾನ್ ನಿಧಿ ಹಣ ಬರದೆ ಇರಲು ಕಾರಣಗಳು:

1)E-kyc ಮಾಡಿಸದೆ ಬಾಕಿ ಇರುವ ರೈತರು.

2)ಒಂದೇ ಕುಟುಂಬ ಪರಿಶೀಲನೆಗೆ ಬಾಕಿ ಇರುವವರು.

3)ಕೃಷಿ ಜಮೀನು ವರ್ಗಾವಣೆ ಮತ್ತು ಮಾರಾಟ ಮಾಡಿರುವುದು.

4)RTC ಮತ್ತು ಆಧಾರ್ ಕಾರ್ಡ್ ನಲ್ಲಿ ಹೆಸರುಗಳ ಬದಲಾವಣೆ ಇರುವವರು.

5)ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್(aadhar seeding) ಮಾಡದೆ ಇರುವವರು.

6)village VNO login physical verification ಬಾಕಿ ಇರುವವರು.

7)income tax file ಮಾಡಿರುವವರು.

ಇಲ್ಲಿಯವರೆಗೂ ಎಷ್ಟು ಕಂತು ಹಣ ಬಂದಿದೆ ಎಂದು ನೋಡಲು ಇಲ್ಲಿದೆ ಲಿಂಕ್ CLICK HERE… 

ಇತ್ತೀಚಿನ ಸುದ್ದಿಗಳು

Related Articles