Saturday, October 5, 2024

Crop loan list-ಬೆಳೆ ಸಾಲ ಮನ್ನಾ ಆಗಿರುವ ರೈತರ ಪಟ್ಟಿಯನ್ನು ನೋಡಿಕೊಳ್ಳುವ ವಿಧಾನ! ನಿಮ್ಮದು ಕೃಷಿ ಸಾಲ ಮನ್ನಾ ಆಗಿದೆಯೇ ಚೆಕ್ ಮಾಡಿ.

ನಮಸ್ಕಾರ ರೈತರೇ, ಕೃಷಿ ಮಾಡಲು ವಿವಿಧ ರಾಷ್ಟ್ರೀಕೃತ ಬ್ಯಾಂಕ್ ಮತ್ತು ವಿವಿಧ ಸಹಕಾರಿ ಸಂಘಗಳ ಮೂಲಕ ಬೆಳೆ ಸಾಲ ಪಡೆದ ರೈತರ ಕೃಷಿ ಸಾಲ ಮನ್ನ ಮಾಡಿದ್ದು ಅದರ ಪಟ್ಟಿಯನ್ನು ನೋಡಿಕೊಳ್ಳಲು ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಲಾಗಿದೆ.

ಈ ಹಿಂದೆ ಅಂದರೆ 2017 ರಿಂದ 2018 ರಲ್ಲಿ ರೈತರ ಬೆಳೆ ಸಾಲ ಮನ್ನಾವನ್ನು ರಾಜ್ಯ ಸರಕಾರದಿಂದ ಮಾಡಲಾಗಿತ್ತು. ಹಂತಹಂತವಾಗಿ 50 ಸಾವಿರ ಒಮ್ಮೆ ಮತ್ತೊಮ್ಮೆ 1 ಲಕ್ಷದ ವರೆಗೆ ವಿವಿಧ ಬ್ಯಾಂಕ್ ಗಳ ಕೃಷಿ ಸಾಲವನ್ನು ಮನ್ನಾ ಮಾಡಲಾಗಿದ್ದು ಇದಕ್ಕೆ ಒಟ್ಟು 7,662 ಕೋಟಿ ವೆಚ್ಚ ಮಾಡಲಾಗಿದೆ.

ಈ ಸಾಲ ಮನ್ನಾವು ಯಾವೆಲ್ಲ ರೈತರಿಗೆ ಸಿಕ್ಕಿದೇ ಎಂದು ನೋಡಲು ಹಾಗೂ ರೈತರು ಈ ಸಾಲ ಮನ್ನಾದ ಪ್ರಯೋಜನವನ್ನು ಖಚಿತ ಪಡಿಸಿಕೊಳ್ಳಲು ಸಾಲ ಮನ್ನಾ ಪಟ್ಟಿಯಲ್ಲಿ ತಮ್ಮ ಹೆಸರಿದಿಯೇ ಎಂದು ಚೆಕ್ ಮಾಡಲು ಮತ್ತು ಎಷ್ಟು ಮೊತ್ತದ ಸಾಲ ಮನ್ನಾ ಮಾಡಲಾಗಿದೇ? ಎಂದು ತಿಳಿದುಕೊಳ್ಳಬಹುದು.

ಇದನ್ನೂ ಓದಿ:ಬೆಳೆ ಸಮೀಕ್ಷೆ ಮಾಡಿಕೊಳ್ಲಲು ಇನ್ನೂ ಅವಕಾಶವಿದೆ! ತಪ್ಪದೇ ಮಾಡಿಕೊಳ್ಳಿ ಇಲ್ಲಿದೆ ಅದರ ಮಾಹಿತಿ.

Dcc bank crop loan list-ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳ ಸಾಲ ಮನ್ನಾ ವರದಿ ನೋಡುವ ವಿಧಾನ!

ಸರಕಾರದ ಇ-ಆಡಳಿತ ವಿಭಾಗದಿಂದ ಅಭಿವೃದ್ಧಿ ಪಡಿಸಿರುವ ಮಾಹಿತಿ ಕಣಜ ಜಾಲತಾಣವನ್ನು ಪ್ರವೇಶಮಾಡಿ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ರೈತರು ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳ ಸಾಲ ಮನ್ನಾ ವರದಿಯನ್ನು ನಿಮ್ಮ ಮೊಬೈಲ್ ನಲ್ಲಿ ನೋಡಬಹುದು.

ವಿಧಾನ-1:ಮೊದಲಿಗೆ ಈ crop loan list ಮೇಲೆ ಕ್ಲಿಕ್ ಮಾಡಿ ಈ ಪೇಜ್ ನಲ್ಲಿ ಕಾಣುವ ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳ ಸಾಲ ಮನ್ನಾ ವರದಿ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ವಿಧಾನ-2:ಇದಾದ ಬಳಿಕ ಮಾದರಿ/type  ಆಯ್ಕೆಯಲ್ಲಿ ರೈತ/farmer ಎಂದು ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲೂಕು, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿ ಸಲ್ಲಿಸಿ ಬಟನ್ ಕ್ಲಿಕ್ ಮಾಡಿ.

ವಿಧಾನ-3:ಸಲ್ಲಿಸಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ರೈತವಾರು ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳ ಸಾಲ ಮನ್ನಾ ವರದಿ ನೋಡಬಹುದು.

National bank crop loan-ರಾಷ್ಟ್ರೀಕೃತ ಬ್ಯಾಂಕಿನ ಬೆಳೆ ಸಾಲ ನೋಡುವ ವಿಧಾನ!

ಮೇಲೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳ ಸಾಲ ಬೆಳೆ ಸಾಲ ಮನ್ನಾ ವರದಿಯನ್ನು ನೋಡಿದ ರೀತಿಯಲ್ಲೆ ಈ ಕೆಳಗಿನ ವಿಧಾನವನ್ನು ಅನುಸರಿಸಿ ರಾಷ್ಟ್ರೀಕೃತ ಬ್ಯಾಂಕಿನ ಬೆಳೆ ಸಾಲ ಮನ್ನಾ ವರದಿಯನ್ನು ನೋಡಬಹುದು.

ಇದನ್ನೂ ಓದಿ:ಈ ಇಲಾಖೆಗಳಿಂದ ಜನರಿಗೆ ವಿವಿಧ ಯೋಜನೆಯಡಿ ಹಣ ಬರುವ ಯೋಜನೆಗಳಿವೆ! ಅದರ ಮಾಹಿತಿ ತಿಳಿಯಿರಿ.

ವಿಧಾನ-1:ಮೊದಲಿಗೆ ಈ crop loan list ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

ವಿಧಾನ-2:ಮಾಹಿತಿ ಕಣಜ ವೆಬ್ ಪೇಜ್ ನ್ನು ಪ್ರವೇಶ ಮಾಡಿದ ಬಳಿಕ ಇಲ್ಲಿ ಕಂದಾಯ ಇಲಾಖೆ ಮೇಲೆ ಕ್ಲಿಕ್ ಮಾಡಬೇಕು.

ವಿಧಾನ-3:ತದನಂತರ ಕಂದಾಯ ಇಲಾಖೆಯ ಸೇವೆಗಳು ಆಯ್ಕೆಯನ್ನು ಕ್ಲಿಕ್ ಮಾಡಿ ವಾಣಿಜ್ಯ ಬ್ಯಾಂಕ್ಗಳ ಸಾಲ ಮನ್ನಾ ವರದಿ ಎನ್ನುವ ಆಯ್ಕೆ ತೋರಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.

ವಿಧಾನ-4:ಈ ಪೇಜ್ ನಲ್ಲಿ ಮಾದರಿ/type  ಆಯ್ಕೆಯಲ್ಲಿ ರೈತ/farmer ಎಂದು ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲೂಕು, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿ ಸಲ್ಲಿಸಿ ಬಟನ್ ಕ್ಲಿಕ್ ಮಾಡಿದರೆ ವಾಣಿಜ್ಯ ಬ್ಯಾಂಕ್ ನ ಸಾಲ ಮನ್ನಾ ವರದಿ ತೋರಿಸುತ್ತದೆ.

ಇತ್ತೀಚಿನ ಸುದ್ದಿಗಳು

Related Articles