Saturday, October 5, 2024

Rudset Free training-ಸ್ವ-ಉದ್ಯೋಗ ಕೈಗೊಳ್ಳಲು ಹಪ್ಪಳ, ಉಪ್ಪಿನಕಾಯಿ,ಮಸಾಲ ಪೌಡರ್ ತಯಾರಿಕೆ ಉಚಿತ ತರಬೇತಿ! ಆಸಕ್ತರಿಂದ ಅರ್ಜಿ ಆಹ್ವಾನ.

ಧರ್ಮಸ್ಥಳ ರುಡ್ ಸೆಟ್ ದಕ್ಷಿಣ ಕನ್ನಡ(ಮಂಗಳೂರು) ಜಿಲ್ಲೆ ವತಿಯಿಂದ ಉಚಿತ ಊಟ-ವಸತಿ ಸಹಿತ ಹಪ್ಪಳ, ಉಪ್ಪಿನಕಾಯಿ,ಮಸಾಲ ಪೌಡರ್ ತಯಾರಿಕೆ ಮತ್ತು ವಿವಿಧ ಬಗೆಯ ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಂದ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಒಂದು ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ವಿವಿಧ ಬಗೆಯ ತರಬೇತಿ ನೀಡುವುದರ ಜೊತೆಗೆ ಸ್ವ-ಉದ್ಯೋಗವನ್ನು ಪ್ರಾರಂಭಿಸಲು ಬೇಕಾಗುವ ಬಂಡವಾಳಕ್ಕೆ ಆರ್ಥಿಕವಾಗಿ ನೆರವಾಗಲು ಬ್ಯಾಂಕ್ ಗಳಿಂದ ಸಾಲ ಪಡೆಯಲು ಸೂಕ್ತ ಮಾರ್ಗದರ್ಶನವನ್ನು ಸಹ ನೀಡಲಾಗುತ್ತದೆ.

ರುಡ್ ಸೆಟ್ ಸಂಸ್ಥೆ,ದಕ್ಷಿಣ ಕನ್ನಡ(ಮಂಗಳೂರು)(ಗ್ರಾಮೀಣಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆ) ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು, ನಮ್ಮ ಸಂಸ್ಥೆಯಲ್ಲಿ ದಿನಾಂಕ 15/ಅಕ್ಟೋಬರ್/2024 ರಿಂದ 24/ಅಕ್ಟೋಬರ್/2024 (10 ದಿನಗಳು) ರವರೆಗೆ ಹಪ್ಪಳ, ಉಪ್ಪಿನಕಾಯಿ,ಮಸಾಲ ಪೌಡರ್ ತಯಾರಿಕೆ ಈ ಉಚಿತ ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಆದ ಕಾರಣ ಈ ತರಭೇತಿಯಲ್ಲಿ ಭಾಗವಹಿಸಲು ಆಸಕ್ತರು ಅರ್ಜಿ ಸಲ್ಲಿಸಲು ಸಂಸ್ಥೆಯ ನಿರ್ದೇಶಕರು ಪ್ರಕಟಣೆ ಹೊರಡಿಸಲಾಗಿದೆ.

ಸ್ವ-ಉದ್ಯೋಗ ಕೈಗೊಳ್ಳಲು ಕೃಷಿ ಇಲಾಖೆಯಲ್ಲಿ ಪಿಎಮ್ಎಫ್ಎಮ್ಇ ಯೋಜನೆಯಡಿ ಕಡಿಮೆ ಬಡ್ಡಿದರದಲ್ಲಿ ಹಾಗೂ ಸಹಾಯಧನದಲ್ಲಿ ಸಬ್ಸಿಡಿ ನೀಡುವ ಯೋಜನೆ ಇದ್ದು ಅದರ ಪ್ರಯೋನವನ್ನು ಪಡೆಯಬಹುದು.

ಇದನ್ನೂ ಓದಿ:ಇನ್ನೂ ಬೆಳೆ ಸಮೀಕ್ಷೆ ಆಗಿಲ್ಲವೇ ಹಾಗಿದ್ದರೇ, ನಿಮಗೆ ಈ ಸೌಲಭ್ಯಗಳು ಸಿಗುವುದಿಲ್ಲ!

Free training details-ಈ ಕೆಳಗೆ ತಿಳಿಸಿದ ತರಭೇತಿಗಳು ಉಚಿತವಾಗಿ ನಡೆಯಲಿವೆ.

1.ಸಿಸಿ ಟಿವಿ ಕ್ಯಾಮೆರಾ ಇನ್ಸ್ಟಾಲೆಷನ್(13 ದಿನಗಳು)

2. ಬೇಕರಿ ಆಹಾರ ತಯಾರಿಕೆ (1 ತಿಂಗಳು)

3.ಅಣಬೆ ಬೇಸಾಯ (10 ದಿನಗಳು)

4.ಮೋಟಾರ್ ರಿವೈಂಡಿಗ್ ವರ್ಕ್ಸ್ (1 ತಿಂಗಳು)

5.ಬ್ಯೂಟಿಸಿಯನ್ ತರಬೇತಿ (1 ತಿಂಗಳು)

6. ಫಾಸ್ಟ ಫುಡ್ ತಯಾರಿಕೆ (10 ದಿನಗಳು)

ಇದಲ್ಲದೇ ಇನ್ನೂ ಹಲವಾರು ಸ್ವ-ಉದ್ಯೋಗವನ್ನು ಕೈಗೊಳ್ಳುವಂತಹ ತರಬೇತಿಗಳನ್ನು ನೀಡಲಾಗುತ್ತದೆ.

How to join training- ತರಬೇತಿಯನ್ನು ಯಾರೆಲ್ಲ ಸೇರಬಹುದು?

1.ಅಭ್ಯರ್ಥಿಯು ಗ್ರಾಮೀಣ ಪ್ರದೇಶದವರಾಗಿರಬೇಕು.

2.ವಯೋಮಿತಿ 19 ರಿಂದ 45 ವಯಸ್ಸಿನ ಒಳಗಿರಬೇಕು.

3.ಅಭ್ಯರ್ಥಿಯು ಗ್ರಾಮೀಣ ಭಾಗದ ಬಿಪಿಲ್ ಅಥವಾ ಅಂತ್ಯೋದಯ ಅಥವಾ ನರೇಗಾ ಜಾಬ್ ಕಾರ್ಡ್ ಹೊಂದಿರಬೇಕು.

ವಿಶೇಷ ಸೂಚನೆ: ತರಬೇತಿಯು ಸಂಪೂರ್ಣ ಊಟ ವಸತಿಯೊಂದಿಗೆ ವಸತಿ ಸಹಿತ ಉಚಿತವಾಗಿರುತ್ತದೆ. ಮತ್ತು ತರಬೇತಿಯ ಕೊನೆಯ ದಿನ ಪ್ರಮಾಣ ಪತ್ರ ನೀಡಲಾಗುತ್ತದೆ.

ಇದನ್ನೂ ಓದಿ:ಈ ಯೋಜನೆಗಳಿಂದ ಜನರಿಗೆ ವಿವಿಧ ರೀತಿಯಲ್ಲಿ ಹಣ ಬರುವ ಯೋಜನೆಗಳಿವೆ! ಅವುಗಳ ಮಾಹಿತಿ ಇಲ್ಲಿದೆ.

ಅರ್ಜಿ ಸಲ್ಲಿಸಲು ಸಂಪರ್ಕಿಸಬೇಕಾದ ವಿಳಾಸ:

ರುಡ್ ಸೆಟ್ ಸಂಸ್ಥೆ

ಉಜಿರೆ,ದಕ್ಷಿಣ ಕನ್ನಡ (ಮಂಗಳೂರು)

Near ಧರ್ಮಸ್ಥಳ-574240

08256236404/9591044014/9591044014/9980885900

9902594791.Whatspp ಮೂಲಕ ಅರ್ಜಿ ಸಲ್ಲಿಸಲು:6364561982

Online ಮೂಲಕ ಅರ್ಜಿ ಸಲ್ಲಿಸಲು:rudsetitraining.org

ಇತ್ತೀಚಿನ ಸುದ್ದಿಗಳು

Related Articles