ನಮಸ್ಕಾರ ರೈತರೇ, ಈಗಾಗಲೇ 2024ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆರಂಭವಾಗಿ ಒಂದು ತಿಂಗಳು ಕಳೆದಿದೆ ಇನ್ನೂ ತುಂಬಾ ಜನ ರೈತರ ಬೆಳೆ ಸಮೀಕ್ಷೆ ಮಾಡಲು ಬಾಕಿಯಿದ್ದು, ನಿಮ್ಮ ಗ್ರಾಮಕ್ಕೆ ನೇಮಕವಾದ ಬೆಳೆ ಸಮೀಕ್ಷೆಗಾರರು ಯಾರು ಎಂದು ತಿಳಿದುಕೊಳ್ಳಬೇಕೆ? ಅವರಿಂದ ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಮಾಡಿಸಬೇಕೆ? ಹಾಗಾದರೆ ಇಲ್ಲಿದೆ ಮಾಹಿತಿ ನಿಮಗಾಗಿ.
ಹೌದು ರೈತರೇ 2024 ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಆರಂಭವಾಗಿ ಈಗಾಗಲೇ ತಿಂಗಳು ಸಮಯ ಕಳೆದು ಹೋಗಿದೆ ಇನ್ನೂ ಉಳಿದ 15 ದಿನಗಳ ಒಳಗೆ ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಮಾಡಿಕೊಳ್ಳದಿದ್ದರೆ ಹಾಗೂ ಬೆಳೆ ಸಮೀಕ್ಷೆಗಾರರು ಮಾಡದಿದ್ದರೆ ನಿಮಗೆ ಯಾವುದೇ ಬೆಳೆ ವಿಮೆ ಪರಿಹಾರ ದೊರೆಯುದಿಲ್ಲ.
ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆಗಳ ಮೂಲಕ ಈಗಾಗಲೇ ನಿಮ್ಮ ನಿಮ್ಮ ಗ್ರಾಮ ಮತ್ತು ಸರ್ವೇ ನಂಬರ್ ಗಳಿಗೆ ಬೆಳೆ ಸಮೀಕ್ಷೆಗಾರರನ್ನು ನೇಮಕ ಮಾಡಲಾಗಿದೆ. ಅವರು ಯಾರು ಮತ್ತು ಅವರ ಸಂಪರ್ಕ ಮೊಬೈಲ್ ಸಂಖ್ಯೆ ಸಮೇತವಾಗಿ ಮಾಹಿಯನ್ನು ನಿಮಗೆ ಇಲ್ಲಿ ತಿಳಿಸಿಕೊಡಲಾಗುತ್ತದೆ.
ಇದನ್ನೂ ಓದಿ:ಕೃಷಿ ಇಲಾಖೆಯಿಂದ ಪ್ರಕಟಣೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಬರುವವರು ಈ ಕೆಲಸ ಮಾಡುವುದು ಕಡ್ಡಾಯ!
Bele darshaka app-ನಿಮ್ಮ ಗ್ರಾಮಕ್ಕೆ ನೇಮಕವಾದ ಬೆಳೆ ಸಮೀಕ್ಷೆಗಾರರು ಯಾರು ಎಂದು ತಿಳಿದುಕೊಳ್ಳುವ ವಿಧಾನ:
1)ಮೊದಲಿಗೆ GOOGLE PLYSTORE ಹೋಗಿ ಅಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ bele darshank app ನ್ನು ಡೌನ್ಲೋಡ್ ಮಾಡಿಕೊಳ್ಳಿ.
2)ನಂತರ ನಿಮಗೆ ಅದರಲ್ಲಿ ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ,ಗ್ರಾಮ ಕೇಳುತ್ತದೆ ಅದನ್ನೂ ಹಾಕಿ ಮುಂದೆವರೆಯಿರಿ.
3)ಇದಾದ ಮೇಲೆ ಅಲ್ಲಿ ಕೆಳಗೆ ಕಾಣಿಸುವ ಗ್ರಾಮದ ಬೆಳೆ ಸಮೀಕ್ಷೆಗಾರರ ವಿವರ ಮೇಲೆ ಕ್ಲಿಕ್ ಮಾಡಿ.
4) ನಂತರ ನಿಮಗೆ ಬೆಳೆ ಸಮೀಕ್ಷೆದಾರರ ಹೆಸರು ಬರುತ್ತದೆ.
5)ಬೆಳೆ ಸಮಿಕ್ಷೆದಾರರ ಹೆಸರು ನಂತರ ಅವರ ಮೊಬೈಲ್ ನಂಬರ್ ಸಹ ಅದರಲ್ಲಿ ನಿಮಗೆ ಸಿಗುತ್ತದೆ.
6)ನಂತರ ಆ ಬೆಳೆ ಸಮೀಕ್ಷೆದಾರರಿಗೆ ಹಂಚಿಕೆ ಮಾಡಲಾದ ಸರ್ವೇ ನಂಬರ್ ಗಳ ವಿವರ ಬರುತ್ತದೆ.
7)ನಿಮ್ಮ ಸರ್ವೇ ನಂಬರ್ ಗೆ ಯಾರು ಬೆಳೆ ಸಮೀಕ್ಷೆದಾರರು ಎಂದು ನೋಡಿ ಅವರನ್ನು ಸಂಪರ್ಕಿಸಿ ನಿಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ಮಾಡಿಸಬಹುದು. ಇಲ್ಲವಾದಲ್ಲಿ ಅವರಿಂದ ಬೆಳೆ ಸಮೀಕ್ಷೆಯ ಮಾಹಿತಿ ಪಡೆದುಕೊಂಡು ಸ್ವತಃ ತಾವೇ ಸಮೀಕ್ಷೆ ಮಾಡಿಕೊಳ್ಳಬಹುದು.
ಬೆಳೆ ಸಮೀಕ್ಷೆದಾರರ ವಿವರ ತಿಳಿಯಲು ಇಲ್ಲಿದೆ ಲಿಂಕ್ Click here….