Thursday, September 19, 2024

AHVS KARNATAKA SCHEMES-ಪಶು ಪಾಲನಾ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳು! ಮತ್ತು ಪಶು ವೈದ್ಯಾಧಿಕಾರಿಗಳ ಸಂಪರ್ಕ ನಂಬರ್!

ನಮಸ್ಕಾರ ರೈತ ಭಾಂಧವರೇ, ಇತ್ತೀಚಿನ ದಿನಗಳಲ್ಲಿ ಹಸುಗಳನ್ನು ಸಾಕುತ್ತಿರುವ ರೈತರಿಗೆ ಹಸುಗಳ ಸಾಕಾಣಿಕೆ, ಕೋಳಿ ಸಾಕಾಣಿಕೆ ಅಥವಾ ಯಾವುದೇ ಪ್ರಾಣಿಗಳ ಸಾಕಾಣಿಕೆಗೆ ಪಶು ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಇರುವುದಿಲ್ಲ ಅದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ.

ರಾಷ್ಟ್ರೀಯ ಪಶು ಮಿಷನ್‌ ಕಾರ್ಯಕ್ರಮದಡಿ ಗ್ರಾಮೀಣ ಕೋಳಿ ಉದ್ಯಮಶೀಲತೆ, ಕುರಿ, ಮೇಕೆ(ಆಡು), ಹಂದಿ, ಹಸು ಸಾಕಾಣಿಕೆ ಮತ್ತು ರಸ ಮೇವು ಉತ್ಪಾದನ ಘಟಕಗಳನ್ನು ಸ್ಥಾಪಿಸಲು ಆರ್ಥಿಕ ನೆರವು ನೀಡುವ ಯೋಜನೆ ಜಾರಿಯಲ್ಲಿದೆ.

ಪಶು ಪಾಲನಾ ಇಲಾಖೆಯಲ್ಲಿ ಯಾವೆಲ್ಲ ಸೌಲಭ್ಯಗಳು ಸಿಗುತ್ತವೆ ಮತ್ತು ಅವುಗಳನ್ನು ಪಡೆದುಕೊಳ್ಳುವ ರೀತಿ ಹೇಗೆ ಎಂಬ ಮಾಹಿತಿಯು ಹೆಚ್ಚಿನ ರೈತರಿಗೆ ಮತ್ತು ಜನರಿಗೆ ತಿಳಿದಿರುವುದಿಲ್ಲ ಇದರಿಂದ ಯಾವುದೇ ಸೌಲಭ್ಯಗಳನ್ನು ಪಡೆಯದೇ ತಮ್ಮ ಸ್ವಂತ ಹಣದಲ್ಲಿ ಹಸು, ಕುರಿ, ಹಂದಿ ಸಾಕಾಣಿಕೆ ಮಾಡಿದ ರೈತರು ಹೆಚ್ಚು ಜನರು ಸಿಗುತ್ತಾರೆ.

AHVS KARNATAKA SCHEMES-ಪಶು ಪಾಲನಾ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳು!

1)ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ವಿತರಣಾ ಅಭಿಯಾನ

ಕೇಂದ್ರ ಸರಕಾರದ ಕಿಸಾನ್‌ ಕ್ರೆಡಿಟ್‌ ಕಾರ್ಡ ಯೋಜನೆಯನ್ವಯ ಪಶು ಸಂಗೋಪನೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾ ವೆಚ್ಚ ಭರಿಸಲು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಂಸ್ಥೆಗಳ ಮೂಲಕ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ.

2)ಹಾಲು ಉತ್ಪಾದಕರಿಗೆ ಪ್ರೋತ್ಸಾಹ

ಹಾಲು ಉತ್ಪಾದಕ ಸದಸ್ಯರ ಸರಬರಾಜು ಮಾಡುವ ಪ್ರತಿ ಲೀಟರ್‌ ಹಾಲಿಗೆ ಪ್ರೋತ್ಸಾಹವಾಗಿ ರೂ.5 ವಿತರಿಸಲಾಗುತ್ತದೆ. ಇದರ ಮಾಹಿತಿಯನ್ನು ನಿಮ್ಮ ಹತ್ತಿರದ ಹಾಲಿನ ಸೊಸೈಟಿಯಲ್ಲಿ ಕೇಳಿ ತಿಳಿದುಕೊಳ್ಳಬೇಕು.

3)ಲಸಿಕಾ ಕಾರ್ಯಕ್ರಮಗಳು

ಹಸು, ಕೋಳಿ, ಹಂದಿ, ಕುರಿ,ಆಡು, ನಾಯಿ ಇನ್ನಿತರ ಸಾಕು ಪ್ರಾಣಿಗಳಿಗೆ ಪ್ರತಿ ವರ್ಷ ಉಚಿತ ಲಸಿಕಾ ಕಾರ್ಯಕ್ರಮಗಳು ಮತ್ತು ಉಚಿತ ಚುಚ್ಚುಮದ್ದು ಕಾರ್ಯಕ್ರಮಗಳು ಇರುತ್ತದೆ.

4)ನಾಟಿ ಕೋಳಿ ಮರಿಗಳ ವಿತರಣೆ

ಮಹಿಳಾ ಸ್ವಸಹಾಯ ಸಂಘಗಳ ಆಯ್ದ ಗ್ರಾಮೀಣ ಮಹಿಳಾ ಸದಸ್ಯರಿಗೆ ತಲಾ 20 ಮರಿಗಳಂತೆ ನಾಟಿ ಕೋಳಿ ಮರಿಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.

5)ರಾಸುಗಳ ಆಕಸ್ಮಿಕ ಸಾವಿಗೆ ಪರಿಹಾರ

ಆರು ತಿಂಗಳು ಮೇಲ್ಪಟ್ಟ ಹಸು, ಎಮ್ಮೆ, ಹೋರಿ ಆಕಸ್ಮಿಕವಾಗಿ ಮರಣ ಹೊಂದಿದಾಗ ಪರಿಹಾರಧನ ನೀಡುವ ಕಾರ್ಯಕ್ರಮ ಇರುತ್ತದೆ.

6)ಮೇವಿನ ಬೀಜ ಕಿರು ಪೊಟ್ಟಣ ವಿತರಣೆ

ಬರಗಾಲದ ಸಮಯದಲ್ಲಿ ಅತೀ ಕಡಿಮೆ ನೀರಿನಲ್ಲಿ ಬೇಗ ಹುಲ್ಲು ಬೆಳೆವು ಮೇವಿನ ಬೀಜಗಳನ್ನು ವಿತರಣೆ ಮಾಡುವ ಕಾರ್ಯಕ್ರಮ

ಪಶುಪಾಲನಾ ಇಲಾಖೆಯ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉಪ ನಿರ್ದೇಶಕರು, ತಾಲೂಕು ಮಟ್ಟದ ಸಹಾಯಕ ನಿರ್ದೇಶಕರು ಮತ್ತು ನಿಮ್ಮ ಗ್ರಾಮಗಳಲ್ಲಿರುವ ಪಶು ವೈದ್ಯಾಧಿಕಾರಿಗಳಲ್ಲಿ ಮಾಹಿತಿ ಪಡೆಯಬಹುದು.

ಪಶು ವೈದ್ಯಾಧಿಕಾರಿಗಳ ಸಂಪರ್ಕ ನಂಬರ್ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.Click here…

ಇತ್ತೀಚಿನ ಸುದ್ದಿಗಳು

Related Articles