Thursday, September 19, 2024

BORDO MIXTURE-ಶೇ 1% ರ ಶುದ್ಧ ಬೋರ್ಡೋ ದ್ರಾವಣ ತಯಾರಿಸುವ ವಿಧಾನ. ಕೆಡದ ಹಾಗೆ ಸಂರಕ್ಷಣೆ ಮಾಡುವ ವಿಧಾನ.

ಆತ್ಮೀಯ ರೈತ ಭಾಂದವರೇ ನಮ್ಮ ಭಾರತ ದೇಶದಲ್ಲಿ ಕೃಷಿ ಬೆಳೆಗಳಲ್ಲಿ ವಾಣಿಜ್ಯ ಬೆಳೆಯಾಗಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಈ ಅಡಿಕೆ ಬೆಳೆಗೆ ಬರುವ ರೋಗವಾದ ಕೊಳೆರೋಗವನ್ನು ತಡೆಗಟ್ಟಲು ರೈತರು ಪ್ರತಿ ವರ್ಷ ಎರಡ ರಿಂದ ಮೂರು ಬಾರಿ ಬೋರ್ಡೋ ದ್ರಾವಣವನ್ನು ಸಿಂಪರಣೆ ಮಾಡುತ್ತಾರೆ.

ಆದರೆ ಇತೀಚಿನ ದಿನಗಳಲ್ಲಿ ಅಡಿಕೆ ಬೆಳೆಗೆ ವಿವಧ ಬಗೆಯ ರೋಗ ರುಜಿನಗಳಿಂದಾಗಿ ಇಳುವರಿ ಕಡಿಮೆಯಾಗುತ್ತಿದೆ. ಅದರಲ್ಲಿಈ ಕೊಳೆರೋಗವು ಅಡಿಕೆ ಬೆಳೆಗೆ ತುಂಬಾ ಹಾನಿಯನ್ನುಂಟು ಮಾಡುತ್ತದೆ. ಅಡಿಕೆ ಬೆಳೆಗೆ ಬೋರ್ಡೋ ದ್ರಾವಣವನ್ನು ಯಾವ ಸಮಯದಲ್ಲಿ ಹೊಡೆಯಬೇಕು? ಎಂಬ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರಿಸಿದೆ.

ಅಡಿಕೆ ಬೆಳೆಗೆ ಬೋರ್ಡೋ ದ್ರಾವಣವನ್ನು ಯಾವ ಸಮಯದಲ್ಲಿ ಹೊಡೆಯಬೇಕು? ಹೇಗೆ ತಯಾರಿಸಿದರೇ ಶುದ್ಧ ವಾಗಿರುತ್ತದೆ.

ಅಡಿಕೆ ಕೊಳೆ ರೋಗವನ್ನು ತಡೆಗಟ್ಟಲು ಬೋರ್ಡೋ ದ್ರಾವಣ ಸಿಂಪರಣೆ ಮಾಡುವುದು ತುಂಬಾ ಮುಖ್ಯವಾಗಿದೆ. ಈ ಬೋರ್ಡೋದ್ರಾವಣವನ್ನು ಮುಂಗಾರು ಮಳೆಯ ಪ್ರಾರಂಭದ ಹಂತದಲ್ಲಿ ಅಂದರೆ ಮೇ ತಿಂಗಳ ಕೊನೆಯಲ್ಲಿ ಹಾಗೂ ಜೂನ್ ತಿಂಗಳ ಮೊದಲ ವಾರಗಳಲ್ಲಿ ಸಿಂಪರಣೆ ಮಾಡಬೇಕು. 25-35ದಿನಗಳಲ್ಲಿ 2ನೇ ಬಾರಿ ಬೋರ್ಡೋ ದ್ರಾವಣ ಸಿಂಪರಣೆ ಮಾಡಬೇಕು. ಮಳೆ ಬರುವ ಸಮಯದಲ್ಲಿ ಸಿಂಪರಣೆ ಮಾಡಬಾರದು. ಸಿಂಪರಣೆ ಮಾಡಿದ ಮೇಲೆ ಬಿಟ್ಟ್ ಮದ್ದು ಒಣಗುವ ವರೆಗೂ ಅಂದರೆ 6 ಗಂಟೆಗಳ ಕಾಲ ಮಳೆ ಬರಬಾರದು.

ದನ್ನೂ ಓದಿ:ಬೋರ್ವೆಲ್ ರೀಚಾರ್ಜ್ ಮಾಡುವ ವಿಧಾನ! ಹಾಗೂ ಸಹಾಯಧನ ಪಡೆಯುವ ಮಾಹಿತಿ.

ಬೋರ್ಡೋದ್ರಾವಣ ತಯಾರಿ ವಿಧಾನ:

ಮೊದಲಿಗೆ 1ಕೆ.ಜಿ ಮೈಲುತುತ್ತ ಮತ್ತು 1ಕೆ.ಜಿ ಸುಣ್ಣವನ್ನು ತೆಗೆದುಕೊಳ್ಳಬೇಕು, ನಂತರ ಎರಡು ಬಕೇಟ್ ಗಳನ್ನು ತೆಗೆದುಕೊಂಡು 10ಲೀಟರ್ ನೀರನ್ನು ಎರಡು ಬಕೇಟನಲ್ಲಿ ತುಂಬಬೇಕು. ನಂತರ ಒಂದು ಬಕೇಟಗೆ ಮೈಲುತುತ್ತ ಮತ್ತು ಇನ್ನೊಂದು ಬಕೇಟಗೆ ಸುಣ್ಣ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಮಿಶ್ರಣ ಮಾಡಿದ ಮೇಲೆ ಒಂದು ದೊಡ್ಡ ಬ್ಯಾರಲ್ ನಲ್ಲಿ 80ಲೀಟರ್ ನೀರು ತೆಗೆದುಕೊಳ್ಳಬೇಕು. ಅದಕ್ಕೆ ಈಗಾಗಲೇ ತಯಾರಿಸಿದ ಸುಣ್ಣ ಮತ್ತು ಮೈಲತುತ್ತದ ಮಿಶ್ರಣವನ್ನು ಏಕಕಾಲದಲ್ಲಿ ಸುರಿಯಬೇಕು ಹಾಗೂ ಅದರ ಜೊತೆಯಲ್ಲೇ  ಮಿಶ್ರಣ ಮಾಡಬೇಕು.

1% ಬೋರ್ಡೋ ದ್ರಾವಣ ಪರೀಕ್ಷಿಸುವುದು ಹೇಗೆ?

ಬೋರ್ಡೋ ದ್ರಾವಣ ಪರೀಕ್ಷಿಸಲು ಹೋದಾಗ ಹೊಸದಾದ ಬ್ಲೇಡ್ ಅಥವಾ ಹರಿತವಾದ ಚಾಕು/ ಕತ್ತಿಯನ್ನು ದ್ರಾವಣದಲ್ಲಿ ಅದ್ದಬೇಕು. ತದ ನಂತರ ಇದನ್ನು 5 ನಿಮಿಷ ಸೂರ್ಯನ ಬಿಸಿಲಿಗೆ ಒಡ್ಡಬೇಕು. ತಾಮ್ರದ ಕಲೆಗಳು ಕಂಡು ಬಂದರೆ ಸುಣ್ಣದ ತಿಳಿ ನೀರನ್ನು ಸ್ವಲ್ಪ ಸ್ವಲ್ಪವಾಗಿ ಬೆರೆಸುತ್ತಾ ಕಂದು ಬಣ್ಣದ ಕಲೆಗಳು ಕಂಡು ಬರದ ಹಾಗೆ ಹೊಂದಿಸಬೇಕು.

ಇದನ್ನೂ ಓದಿ:ಈ ನಿಯಮಗಳನ್ನು ಮೀರಿ ಬಿಪಿಎಲ್ ಕಾರ್ಡ ಹೊಂದಿದ್ದರೆ ನಿಮ್ಮ ಕಾರ್ಡನ್ನು ರದ್ದು ಮಾಡಲಾಗುತ್ತದೆ!

ಇನ್ನೊಂದು ರೂಪದಲ್ಲಿ ಅರಿಶಿಣಹುಡಿ ಹಾಕಿ ನೋಡಬಹುದು ಅರಿಶಿಣಹುಡಿಯ ಬಣ್ಣ ಬದಲಾಗಬಾರದು. ಬಣ್ಣ ಬದಲಾದರೆ ಸುಣ್ಣದ ತಿಳಿ ನೀರನ್ನು ಸ್ವಲ್ಪ ಸ್ವಲ್ಪವಾಗಿ ಬೆರೆಸುತ್ತಾ ಅರಿಶಿಣದ  ಬಣ್ಣ ಬದಲಾಗದ ಹಾಗೆ ಹೊಂದಿಸಬೇಕು.

ಒಂದು ವೇಳೆ ಮಳೆ ಜೋರಾಗಿದ್ದು ದ್ರಾವಣ ಸಿಂಪರಣೆ ಮಾಡಲಾಗದ ಸಮಯದಲ್ಲಿ ಏನು ಮಾಡಬೇಕು?

ಬೋರ್ಡೋ ದ್ರಾವಣ ಸಿಂಪಡಿಸುವುದು ತಡವಾದಲ್ಲಿ 100ಗ್ರಾಂ. ಸಕ್ಕರೆ ಅಥವಾ ಬೆಲ್ಲ ಪ್ರತಿ 100ಲೀಟರ್ ದ್ರಾವಣಕ್ಕೆ ಬೆರೆಸುವುದರಿಂದ ದ್ರಾವಣ ಕೆಡದಂತೆ 1 ದಿನದಷ್ಟು ಬಳಕೆ ಸಮಯ ಮುಂದೂಡಬಹುದು. ಇದರ ಜೊತೆಗೆ ಯಾವುದೇ ದ್ರಾವಣಗಳನ್ನು ಮಿಶ್ರಣ ಮಾಡಬಾರದು.

ಇತ್ತೀಚಿನ ಸುದ್ದಿಗಳು

Related Articles