Thursday, September 19, 2024

BPL card cancelled-ಈ ನಿಯಮಗಳನ್ನು ಮೀರಿ ಬಿ ಪಿ ಎಲ್ ಕಾರ್ಡ್ ಹೊಂದಿದ್ದರೆ ನಿಮ್ಮ ಕಾರ್ಡನ್ನು ರದ್ದು ಮಾಡಲಾಗುತ್ತದೆ!

ಕರ್ನಾಟಕ ರಾಜ್ಯದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ನಕಲಿ-ಅಕ್ರಮ ದಾಖಲೆಗಳಿಂದ ಬಿಪಿಎಲ್ ಕಾರ್ಡ್ (BPL card cancelled) ಹೊಂದಿರುವವರನ್ನು ಗುರುತಿಸಿ ಇಂತಹ ಕಾರ್ಡಗಳನ್ನು ರದ್ದು ಪಡಿಸುವ ಕಾರ್ಯ ಚುರುಕುಗೊಳಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ನಕಲಿ-ಅಕ್ರಮ ಬಿಪಿಎಲ್ ಕಾರ್ಡ್ (BPL card cancelled) ಹೊಂದಿರುವರು ಹೆಚ್ಚಾಗಿದ್ದಾರೆ. ಇನ್ನೂ ಯಾವೆಲ್ಲ ನಿಯಮಗಳನ್ನು ಮೀರಿದರೆ ಬಿಪಿಎಲ್ ಕಾರ್ಡ ರದ್ದಾಗುತ್ತದೆ? ಆಹಾರ ಇಲಾಖೆಯಿಂದ ತಿಳಿಸಲಾದ ನಿಯಮಗಳು ಏನು ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಒಟ್ಟು 10,97,621 ಅನರ್ಹ ಬಿಪಿಎಲ್ ಕಾರ್ಡದಾರರನ್ನು ಗುರುತಿಸುವ ಕಾರ್ಯ ಭರದಿಂದ ಸಾಗಿದ್ದು ಸರಕಾರಿ ನೌಕರಿಯಲ್ಲಿರುವವರು, ವಾರ್ಷಿಕ ಆದಾಯ ತೆರಿಗೆ ಪಾವತಿಸುವವರು ಸಹ ಬಿಪಿಎಲ್ ಪಡೆದಿರುವುದು ಬೆಳಕಿಗೆ ಬಂದಿರುತ್ತದೆ.

ಇದನ್ನೂ ಓದಿ:ರೈತರು ಕೃಷಿ ಕೆಲಸ ಮಾಡುವಾಗ ಹಾವು, ವಿಷಜಂತುಗಳಿಂದ ಕಡಿದು ಆಕಸ್ಮಿಕ ಮರಣ ಹೊಂದಿದರೆ ರೂ,2 ಲಕ್ಷದವರೆಗೆ ಪರಿಹಾರ ಪಡೆಯಬಹುದು!

BPL card suspension reasons- ಈ ನಿಯಮ ಮೀರಿದ ಬಿಪಿಎಲ್ ಕಾರ್ಡ್ ಹೊಂದಿದ್ದರೆ ರದ್ದಾಗಲಿದೆ.

ಆಹಾರ ಇಲಾಖೆಯಿಂದ ನಕಲಿ ಬಿಪಿಎಲ್ ಕಾರ್ಡದಾರರ ಪತ್ತೆ ಕಾರ್ಯ ಚುರುಕುಗೊಂಡಿದ್ದು, ಈ ಕೆಳಗೆ ತಿಳಿಸಲಾದ ನಿಯಮಗಳನ್ನು ಮೀರಿ ಬಿಪಿಎಲ್ ಕಾರ್ಡ ಪಡೆದ ಗ್ರಾಹಕರ ಕಾರ್ಡ ರದ್ದು ಮಾಡಲಾಗುತ್ತದೆ.

1)ಹಿಂದಿನ ವರ್ಷ ಆದಾಯ ತೆರಿಗೆ ಪಾವತಿ ಮಾಡಿದ್ದರೆ ಅಂತಹ ಕಾರ್ಡುಗಳನ್ನು ಅಮಾನತು ಮಾಡಲಾಗುತ್ತದೆ.

2)ಕಾರ್ಡ ಹೊಂದಿರುವ ಸದಸ್ಯರು ಸರಕಾರಿ ಉದ್ಯೋಗದಲ್ಲಿದ್ದರೆ ಅಂತಹ ಕಾರ್ಡುಗಳನ್ನು ಅಮಾನತು ಮಾಡಲಾಗುತ್ತದೆ.

3)ಕಳೆದ ಆರು ತಿಂಗಳಿಂದ ನ್ಯಾಯ ಬೆಲೆ ಅಂಗಡಿಯನ್ನು ಭೇಟಿ ಮಾಡದೆ ಪ್ರತಿ ತಿಂಗಳು ಈ ಕಾರ್ಡುದಾರರಿಗೆ ನೀಡುವ ಆಹಾರ ಧಾನ್ಯಗಳನ್ನು ಪಡೆಯದೇ ಇದ್ದಲ್ಲಿ ಅಂತಹ ಬಿಪಿಎಲ್ ಕಾರ್ಡಗಳನ್ನು ಸಹ ಅಮಾನತಿನಲ್ಲಿಡುವ ಕ್ರಮವನ್ನು ಇಲಾಖೆಯಿಂದ ಕೈಗೊಳ್ಳಲಿದ್ದು ಅರ್ಹ ಗ್ರಾಹಕರು ಅಗತ್ಯ ದಾಖಲೆಗಳನ್ನು ಪುನಃ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿ ಅಮಾನತನ್ನು ರದ್ದುಪಡಿಸಿಕೊಳ್ಳುವ ವ್ಯವಸ್ಥೆ ಇಲಾಖೆಯಲ್ಲಿ ಮಾಡಲಾಗಿದೆ.

4)ಆದಾಯ ತೆರಿಗೆ ಪಾವತಿ ಮಾಡಿದ್ದಾರೆ ಎನ್ನುವ ಮಾಹಿತಿಯ ಪ್ರಕಾರ ಪರೀಶಿಲನಾ ಪಟ್ಟಿಯಲ್ಲಿ ಸೇರಿರುವ ಬಿಪಿಎಲ್ ಕಾರ್ಡದಾರರು ನಿಮ್ಮ ತಾಲೂಕಿನ ಆಹಾರ ಇಲಾಖೆಯನ್ನು ಭೇಟಿ ಮಾಡಿ ಪುನಃ ಆದಾಯ ದೃಡೀಕರಣ ಪ್ರಮಾಣ ಪತ್ರವನ್ನು ನೀಡಿ ಪಟ್ಟಿಯಿಂದ ಹೆಸರನ್ನು ತೆಗೆಸಿಕೊಳ್ಳಬಹುದು.

ಇದನ್ನೂ ಓದಿ:ಬೋರವೆಲ್ ರೀಚಾರ್ಜ್ ಮಾಡುವ ವಿಧಾನ! ಬೋರ್ವೆಲ್ ರೀಚಾರ್ಜಗೆ ಸಹಾಯಧನ ಸಿಗುತ್ತೆ ಗೊತ್ತೆ?

BPL card suspension-ಬಿಪಿಎಲ್ ಕಾರ್ಡ ಪಡೆದ ಅನರ್ಹರು ಯಾರು?

1)ಆದಾಯ ತೆರಿಗೆ ಪಾವತಿಸುವವರು.

2)ಸರಕಾರಿ ಮತ್ತು ಅರೆ ಸರಕಾರಿ ಕಛೇರಿಯಲ್ಲಿ ನೌಕರಿಯನ್ನು ಮಾಡುತ್ತಿರುವವರು ಕಾರ್ಡ ಪಡೆಯಲು ಅನರ್ಹರು.

3)ಸ್ವಂತ ಮನೆಯನ್ನು ಕಟ್ಟಿಸಿ ಆ ಮನೆಗಳನ್ನು ಬಾಡಿಗೆಗೆ ನೀಡಿರುವವರು.

4)7.5 ಹೆಕ್ಟೇರ್ ಗಿಂತ ಅಧಿಕ ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡ ಪಡೆಯಲು ಅರ್ಹರಲ್ಲ ಎಂದು ಇಲಾಖೆಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇತ್ತೀಚಿನ ಸುದ್ದಿಗಳು

Related Articles