Thursday, November 21, 2024

Mgnreg Subsidy-ಕುರಿ, ಕೋಳಿ,ಹಸುಗಳ ಸಾಕಾಣಿಕೆ ಶೇಡ್‌ ನಿರ್ಮಾಣ ಮಾಡಲು ರೂ.57,000/- ಸಬ್ಸಿಡಿ ಪಡೆಯಬಹುದು! ಇಲ್ಲಿದೆ ಅದರ ಮಾಹಿತಿ.

ಕೇಂದ್ರ ಸರಕಾರದ ಯೋಜನೆಗಳಲ್ಲಿ ಒಂದಾದ ಮಹ್ಮಾತ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ರೈತರಿಗೆ ನೆರವು ನೀಡಲು 100 ದಿನಗಳ ಕೂಲಿ ಕಲ್ಪಿಸುವ ಯೋಜನೆಯನ್ನು ರೂಪಿಸಲಾಗಿದೆ. ಅದಲ್ಲದೆ ರೈತರಿಗೆ ಕೃಷಿಯ ಉಪಕಸುಬುಗಳನ್ನು ಮಾಡಲು ಆರ್ಥಿಕ ನೆರವು ನೀಡಲು ಇದರಲ್ಲಿ ಅವಕಾಶ ನೀಡಲಾಗಿದೆ.

ರೈತರಿಗೆ ಆರ್ಥಿಕವಾಗಿ ನೆರವು ನೀಡಲು ಕೃಷಿ ಜೊತೆಗೆ ಉಪಕಸುಬುಗಳನ್ನು ಪ್ರಾರಂಭಿಸಲು ಕುರಿ, ಆಡು, ಹಸು, ಕೋಳಿ, ಹಂದಿ ಸಾಕಾಣಿಕೆ ಶೆಡ್‌ ನಿರ್ಮಾಣ ಮಾಡಿಕೊಳ್ಳಲು ರೂ.57,000/-ವರೆಗೂ ಸಬ್ಸಿಡಿ ಪಡೆಯಲು ಏನು ಮಾಡಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗುತ್ತದೆ.

ರೈತರು ಇತ್ತೀಚಿನ ದಿನಗಳಲ್ಲಿ ಒಂದೇ ಬೆಳೆಯನ್ನು ನಂಬಿಕೊಂಡು ಕೃಷಿ ಮಾಡಿದಲ್ಲಿ ಕೃಷಿಯಲ್ಲಿ ಆದಾಯ ವೃದ್ಧಿಯಾಗದು ಆದ್ದರಿಂದ ಕೃಷಿ ಜೊತೆಗೆ ಅದರ ಉಪಕಸುಬುಗಳನ್ನು ಮಾಡಿಕೊಂಡಲ್ಲಿ ರೈತರು ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಬಹುದು.

ಇದನ್ನೂ ಓದಿ:ಕೃಷಿ ಹೊಂಡ(ಕೆರೆ) ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಮರಳಿ ಅವಕಾಶವಿದೆ.

ಮಹ್ಮಾತ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ರೈತರಿಗೆ ನೆರವು ನೀಡಲು 100 ದಿನಗಳ ಕೂಲಿ ಕಲ್ಪಿಸುವ ಯೋಜನೆಯ ಜೊತೆಗೆ ಸ್ವಾವಲಂಬಿ ಜೀವನಕ್ಕೆ ಕುರಿ, ಕೋಳಿ,ಹಸುಗಳ ಸಾಕಾಣಿಕೆ ಶೇಡ್‌ ನಿರ್ಮಾಣ ಮಾಡಿಕೊಳ್ಳಲು ಸಬ್ಸಿಡಿ ಸಹ ನೀಡಲಾಗುತ್ತದೆ.

Mgnreg Subsidy-ಉದ್ಯೋಗ ಖಾತ್ರಿ ಯೋಜನೆಯಡಿ ಎಷ್ಟು ಸಹಾಯಧನ ನೀಡಲಾಗುತ್ತದೆ.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಟ್ಟುವ ಜಾನುವಾರು ಶೆಡ್‌ ಅಳತೆ 10 ಅಡಿ ಅಗಲ, 18ಅಡಿ ಉದ್ದ ಗೋಡೆ 5ಅಡಿ ಎತ್ತರದ ಗೋಡೆ ಹಾಗೂ ಗೋದಲಿ/ಮೇವು ತೊಟ್ಟಿ ನಿರ್ಮಾಣಕ್ಕೆ ರೂ.57,000, ಸಾವಿರ ಸಬ್ಸಿಡಿ ನೀಡಲಾಗುತ್ತದೆ. ಇದರಲ್ಲಿ 10,556ರೂ ಕೂಲಿ ವೆಚ್ಚವಾಗಿದ್ದು, 46,444ರೂ ಸಾಮಗ್ರಿ ವೆಚ್ಚಕ್ಕೆ ಪಾವತಿಸಲಾಗುತ್ತದೆ.

Mgnreg Subsidy-ಉದ್ಯೋಗ ಖಾತ್ರಿ ಯೋಜನೆಯಡಿ ಶೆಡ್‌ ನಿರ್ಮಾಣ ಮಾಡಲು ಎಲ್ಲಿ ಅರ್ಜಿ ಸಲ್ಲಿಸಬೇಕು.

ಈ ಯೋಜನೆಯಡಿ ಕುರಿ, ಕೋಳಿ,ಹಸುಗಳ ಸಾಕಾಣಿಕೆ ಶೇಡ್‌ ನಿರ್ಮಾಣ ಮಾಡಿಕೊಳ್ಳಲು ಆಸಕ್ತಿಯಿರುವ ರೈತರು ತಮ್ಮ ಹಳ್ಳಿ/ಗ್ರಾಮ ವ್ಯಾಪ್ತಿಯ ಗ್ರಾಮ ಪಂಚಾಯತಿಯನ್ನು ನೇರವಾಗಿ ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ನಂತರ ಅರ್ಜಿಗಳನ್ನು ಗ್ರಾಮ ಪಂಚಾಯತನ ಸಾಮಾನ್ಯ ಸಭೆಯಲ್ಲಿ ತಿರ್ಮಾನಿಸಿ ಕ್ರಿಯಾಯೋಜನೆಗೆ ಸೇರಿಸಿ ಅನುಮೋದನೆಗೆ ಸಲ್ಲಿಸುತ್ತಾರೆ. ನಂತರ ನಿಮಗೆ ಕೆಲಸಕ್ಕೆ ಒಪ್ಪಿಗೆ ನೀಡಲಾಗುತ್ತದೆ.

Mgnreg Subsidy-ಉದ್ಯೋಗ ಖಾತ್ರಿ ಯೋಜನೆಯಡಿ ಶೆಡ್‌ ನಿರ್ಮಾಣ ಮಾಡಲು ಯಾರು ಎಲ್ಲಾ ಅರ್ಜಿ ಸಲ್ಲಿಸಬಹುದು.

1)ಗ್ರಾಮೀಣ ಭಾಗದಲ್ಲಿ ವಾಸಿಸುವ ರೈತರು ಅರ್ಜಿ ಸಲ್ಲಿಸಬಹುದು.

2)BPL ರೇಷನ್‌ ಕಾರ್ಡ್‌ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

3)ಸಣ್ಣ ಮತ್ತು ಅತೀ ಸಣ್ಣ ರೈತರು ಅರ್ಜಿ ಸಲ್ಲಿಸಬಹುದು.

4)SC/ST ರೈತರು ಅರ್ಜಿ ಸಲ್ಲಿಸಬಹುದು.

5)ಉದ್ಯೋಗ ಖಾತ್ರಿ ಚೀಟಿ ಹೊಂದಿರಬೇಕು.

ಇದನ್ನೂ ಓದಿ:ಬೆಳೆ ಸಮೀಕ್ಷೆ ಮಾಡಿಕೊಳ್ಳಲು ಇನ್ನೂ ಅವಕಾಶವಿದೆ ಇಲ್ಲಿದೆ ಅದರ ಲಿಂಕ್‌ ಮತ್ತು ಮಾಹಿತಿ ನಿಮಗಾಗಿ.

Apply documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು.

1)ಆಧಾರ್‌ ಕಾರ್ಡ್‌ ಪ್ರತಿ.

2)ರೇಷನ್‌ ಕಾರ್ಡ್‌ ಪ್ರತಿ.

3)ಉದ್ಯೋಗ ಖಾತ್ರಿ ಚೀಟಿ.

4)ಜಾನುವಾರು ಸಾಕಾಣಿಕೆ ದೃಡೀಕರಣ ಪತ್ರ ಪಶು ವೈದ್ಯಾಧಿಕಾರಿಗಳಿಂದ.

5) SC/ST ರೈತರು ಜಾತಿ ಪ್ರಮಾಣ ಪತ್ರ.

6)ಬ್ಯಾಂಕ್‌ ಪಾಸ ಬುಕ್‌ ಪ್ರತಿ.

ಸೂಚನೆ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಇನ್ನೂ ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಗ್ರಾಮ ಪಂಚಾಯತಗಳಿಗೆ ಭೇಟಿ ಮಾಡಿ ವಿಚಾರಿಸಿ.

ಇತ್ತೀಚಿನ ಸುದ್ದಿಗಳು

Related Articles