Thursday, November 21, 2024

Borewell subsidy scheme -ಬೋರ್ವೆಲ್(ಕೊಳವೆಬಾವಿ) ಕೊರೆಸಲು ಡಿ.ದೇವರಾಜ ಅರಸು ನಿಗಮದಿಂದ 4.75 ಲಕ್ಷದ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ರಾಜ್ಯದ ಜನರಿಗೆ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಬೋರ್ವೆಲ್(ಕೊಳವೆಬಾವಿ) ಕೊರೆಸಲು (Borewell subsidy scheme-2024) ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವಿವಿಧ ಹಿಂದುಳಿದ ವರ್ಗಗಳ ರೈತರಿಗೆ ಅನುಕೂಲವಾಗಲು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ನೀರಾವರಿ ಸೌಲಭ್ಯವನ್ನು ಮಾಡಿಕೊಂಡು ಅಧಿಕ ಲಾಭ ಮತ್ತು ಆರ್ಥಿಕ ಸಬಲರಾಗಲು Borewell subsidy scheme ಅಡಿಯಲ್ಲಿ ಕೊಳವೆ ಬಾವಿ ಕೊರೆಸಲು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತರಲಾಗಿದೆ.

ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿ ಕೊರೆಸಲು ಯಾರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು ಎಂಬ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ:ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ರೂ,8000/- ರೂಪಾಯಿ ಮೌಲ್ಯದ ವಿವಿಧ ಉಚಿತ ಕಿಟ್ ನೀಡಲು ಅರ್ಜಿ ಆಹ್ವಾನ!

Borewell subsidy-ಗಂಗಾ ಕಲ್ಯಾಣ ಯೋಜನೆಯಡಿ ಎಷ್ಟು ಸಬ್ಸಿಡಿ ಸಿಗುತ್ತದೆ.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಬೋರ್ವೆಲ್ ಕೊರೆಸಲು ಆರ್ಥಿಕ ನೆರವು ನೀಡಲಾಗುತ್ತದೆ ಅದರ ಮಾಹಿತಿ ಈ ಕೆಳಗಿನಂತಿದೆ.

1)ಸ್ವಂತ ಅಥವಾ ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಒಟ್ಟು ಘಟಕ ವೆಚ್ಚ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಚಿಕ್ಕ ಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಿಗೆ ರೂ.4.75 ಲಕ್ಷ ಇದರಲ್ಲಿ ವಿದ್ಯುತೀಕರಣಕ್ಕೆ ಪ್ರತಿ ಕೊಳವೆ ಬಾವಿಗೆ ರೂ.75000/-ಗಳನ್ನು ಎಸ್ಕಾಂಗಳಿಗೆ ಪಾವತಿಸಲಾಗುವುದು.

2)ಇನ್ನೂ ಉಳಿಕೆ ಜಿಲ್ಲೆಗಳಿಗೆ ರೂ.3.75 ಲಕ್ಷಗಳು ಇದರಲ್ಲಿ ವಿದ್ಯುತೀಕರಣಕ್ಕೆ ಪ್ರತಿ ಕೊಳವೆ ಬಾವಿಗೆ ರೂ.75000/-ಗಳನ್ನು ಎಸ್ಕಾಂಗಳಿಗೆ ಪಾವತಿಸಲಾಗುವುದು. ಘಟಕ ಪೂರ್ಣಗೊಳಿಸಲು ಆಗದಿದ್ದಲ್ಲಿ ರೂ.50000/- ಗಳ ಸಾಲವನ್ನು ಶೇ.4 ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು.

Ganga kalyana-ಗಂಗಾ ಕಲ್ಯಾಣ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು.

1)ಸಣ್ಣ ಮತ್ತು ಅತೀ ಸಣ್ಣ ರೈತರು.

2)ಯಾವುದೇ ಸರಕಾರಿ ಮತ್ತು ಸಂಸ್ಥೆಗಳಲ್ಲಿ ಉದ್ಯೋಗ ಇರಬಾರದು.

3)ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

4)ಅರ್ಜಿದಾರನ ವಯಸ್ಸು 18-55 ವರ್ಷದ ಒಳಗೆ ಇರಬೇಕು.

5)ಉಡುಪಿ,ಮಂಗಳೂರು,ಕಾರವಾರ,ಕೊಡಗು,ಚಿಕ್ಕಮಗಳೂರು,ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಇರುವವರು ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಉಳಿದ ಜಿಲ್ಲೆಯ ರೈತರು ಒಂದೇ ಸ್ಥಳದಲ್ಲಿ ಇರುವಂತೆ ಕನಿಷ್ಠ 2 ಎಕರೆ ಮೇಲ್ಪಟ್ಟು ಜಮೀನು ಹೊಂದಿರಬೇಕು.  

ಇದನ್ನೂ ಓದಿ:ಕೃಷಿ ಭಾಗ್ಯ ಯೋಜನೆಯಡಿ ನೀರು ಸಂಗ್ರಹ ಕೃಷಿ ಹೊಂಡ(ಕೆರೆ) ನಿರ್ಮಾಣ ಮಾಡಿಕೊಳ್ಳಲು ಅರ್ಜಿ ಆಹ್ವಾನ!

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

1)ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

2)ಅರ್ಜಿದಾರರ ಆಧಾರ್‌ ಕಾರ್ಡ್‌ ಪ್ರತಿ.

3)ಬ್ಯಾಂಕ್‌ ಖಾತೆಯ ಪ್ರತಿ.

4)ಜಮೀನಿನ ಪಹಣಿ.

5)ಪೋಟೋ.

6)ಸಣ್ಣ/ಅತೀ ಸಣ್ಣ ಪ್ರಮಾಣ ಪತ್ರ.

7)ಕುಟುಂಬ ಪಡಿತರ ಚೀಟಿ.

Ganga kalyana application-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ಆಸಕ್ತ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಸೇವಾ ಸಿಂಧು ಸೈಬರ್‌ ಗಳಲ್ಲಿ ಆನ್ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಇತ್ತೀಚಿನ ಸುದ್ದಿಗಳು

Related Articles