Sunday, November 10, 2024

RTC LOANS-ನಿಮ್ಮ rtc/ಪಹಣಿ ಮೇಲೆ ಯಾವ ಬ್ಯಾಂಕ್/ಸೊಸೈಟಿಯಲ್ಲಿ ಎಷ್ಟು ಕೃಷಿ ಸಾಲ/ಬೆಳೆ ಸಾಲ ಇದೆ ಎಂದು ನೋಡುವುದು ಹೇಗೆ?ಇಲ್ಲಿದೆ ಮಾಹಿತಿ.

ನಮಸ್ಕಾರ ರೈತರೇ, ನಿಮಗೆ ಗೊತ್ತಿಲ್ಲದೇ ಕೆಲವು ಸಲ ನಿಮ್ಮ ಜಮೀನಿನ ಪಹಣಿ/rtc ಮೇಲೆ ಬೆಳೆ ಸಾಲ/ಕೃಷಿ ಸಾಲ ಮಾಡಲಾಗಿರುತ್ತದೆ. ಅಥವಾ ತಾವೇ ಬೆಳೆ ಸಾಲ ಮಾಡಿದ್ದರೂ ಯಾವ ಬ್ಯಾಂಕ್ ಮತ್ತು ಎಷ್ಟು ಸಾಲವಿದೆ ಎಂದು ತಿಳಿದಿರುವುದಿಲ್ಲ. ಅದನ್ನೂ ನೋಡುವುದು ಹೇಗೆ ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಕೃಷಿಗೆ ಯೋಗ್ಯವಾದ ಪ್ರದೇಶ ಬಳಕೆ ಜಾಗ ತುಂಬಾ ಇರುವುದರಿಂದ, ಕೃಷಿ ಮಾಡಲು ಸಹಕಾರಿ ಸಂಘಗಳು, ಪ್ರಾಥಮಿಕ ಪತ್ತಿನ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಕೃಷಿ ಸಾಲವನ್ನು ಪಡೆದುಕೊಳ್ಳುತ್ತಾರೆ. ಈ ಕೃಷಿ ಸಾಲವನ್ನು ಪಡೆದುಕೊಂಡ ರೈತರು ಕೃಷಿ ಬೀಜ, ರಸಗೊಬ್ಬರ ಮತ್ತು ಇನ್ನಿತರ ಕೃಷಿ ಬಳಕೆಗೆ ಈ ಸಾಲದ ಹಣವನ್ನು ಉಪಯೋಗಿಸುತ್ತಾರೆ.

ಕೃಷಿ ಸಾಲವನ್ನು ಪಡೆದ ಪ್ರತಿಯೊಬ್ಬ ರೈತರ ಜಮೀನಿನ ಪಹಣಿ/RTC ಗಳಲ್ಲಿ ತಾವು ಪಡೆದುಕೊಂಡಿರುವ ಸಾಲದ ಮೊತ್ತ ಹಾಗೂ ಯಾವ ಬ್ಯಾಂಕ್ ನಿಂದ ಆ ಸಾಲವನ್ನು ಪಡೆದುಕೊಂಡಿದ್ದಾರೆ ಎಂಬ ಎಲ್ಲಾ ಮಾಹಿತಿಯನ್ನು ರೈತರು ನೀಡುವ ಪಹಣಿ/RTC ಗಳಲ್ಲಿ ನಮೂದು ಮಾಡಲಾಗುತ್ತದೆ. ಏಕೆಂದರೆ ಈ ಪಹಣಿ/RTC ಗಳನ್ನು ಬಳಸಿ ಬೇರೆ ಬ್ಯಾಂಕ್ ಹಾಗೂ ಸೊಸೈಟಿಗಳಲ್ಲಿ ಸಾಲವನ್ನು ಪಡೆದುಕೊಳ್ಳಬಾರದೆಂಬ ಕಾರಣ ಹಾಗೂ ಯಾವುದೇ ಬ್ಯಾಂಕ್ ಗಳು ಸಾಲ ನೀಡದಿರಲು ಸಹಕಾರಿಯಾಗುತ್ತದೆ.

ಇದನ್ನೂ ಓದಿ:ಕೃಷಿ ಭಾಗ್ಯ ಯೋಜನೆಯಡಿ ನೀರು ಸಂಗ್ರಹ ಕೃಷಿ ಹೊಂಡ(ಕೆರೆ) ನಿರ್ಮಾಣ ಮಾಡಿಕೊಳ್ಳಲು ಅರ್ಜಿ ಆಹ್ವಾನ!

ಇನ್ನೂ ಹಲವು ಜನ ರೈತರಿಗೆ ತಾವು ಪಡೆದುಕೊಂಡ ಸಾಲವು ಸೊಸೈಟಿ ಅಥವಾ ಬ್ಯಾಂಕಗಳಲ್ಲಿ ಸಂಪೂರ್ಣವಾಗಿ ಕಟ್ಟಿದ್ದರು ಸಹ ಅವರ ಪಹಣಿ/RTC ಗಳಲ್ಲಿ ಹಳೆ ಸಾಲದ ಬಾಬ್ತು ಹಾಗೆ ಉಳಿದಿರುತ್ತವೆ. ಹಾಗಾಗಿ ರೈತರ ಜಮೀನಿನ ಪಹಣಿ/RTC ಯಲ್ಲಿ ಸಾಲದ ವಿವರವನ್ನುಹೇಗೆ ಚೆಕ್ ಮಾಡಿಕೊಳ್ಳಬೇಕು ಎಂದು ಈ ಕೆಳಗಿನ ಲೇಖನದಲ್ಲಿ ತಿಳಿಸಲಾಗಿದೆ.

ನಿಮ್ಮ rtc/ಪಹಣಿ ಮೇಲೆ ಯಾವ ಬ್ಯಾಂಕ್/ಸೊಸೈಟಿಯಲ್ಲಿ ಎಷ್ಟು ಕೃಷಿ ಸಾಲ ಇದೆ ಚೆಕ್ ಮಾಡುವ ವಿಧಾನ.

ವಿಧಾನ-1:ನಿಮಗೆ ಇಲ್ಲಿ ಕಾಣಿಸುತ್ತಿರುವ Bhoomi Online Land Records ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ವಿಧಾನ-2:ನಂತರ ರೈತರು ತಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು, ನಂತರ ತಾಲೂಕು ಆಯ್ಕೆ, ಇದಾದ ನಂತರ ಹೋಬಳಿ ಆಯ್ಕೆ ಮಾಡಬೇಕು, ನಂತರ ನಿಮ್ಮ ಗ್ರಾಮ/ಹಳ್ಳಿಯ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ನಿಮ್ಮ ಸರ್ವೇ ನಂಬರ ಹಾಕಿ ನಂತರ GO ಮೇಲೆ ಕ್ಲಿಕ್ ಮಾಡಬೇಕು. ನಂತರ Surnoc ನಲ್ಲಿ Star ಆಯ್ಕೆಮಾಡಬೇಕು. ಹಿಸ್ಸಾ ನಂಬರ್ ಆಯ್ಕೆ ಮಾಡಬೇಕು. ನಂತರ Fetch Details ಮೇಲೆಕ್ಲಿಕ್ ಮಾಡಬೇಕು.

ಇದನ್ನೂ ಓದಿ:ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ರೂ,8000/- ರೂಪಾಯಿ ಮೌಲ್ಯದ ವಿವಿಧ ಉಚಿತ ಕಿಟ್ ನೀಡಲು ಅರ್ಜಿ ಆಹ್ವಾನ!

ವಿಧಾನ-3:ನಂತರ ನಿಮಗೆ ಅಲ್ಲಿ ಜಮೀನಿನ ಮಾಲೀಕರ ಹೆಸರು ಕಾಣಿಸುತ್ತದೆ. ಅಲ್ಲಿ ಯಾವ ಮಾಲೀಕರಿಗೆ ಎಷ್ಟು ಎಕರೆ ಜಮೀನಿದೆ ಹಾಗೂ ಆ ಜಮೀನಿನ ಖಾತಾ ನಂಬರ್ ಸಹ ನಿಮಗೆ ಕಾಣಿಸುತ್ತದೆ. ಅಲ್ಲಿ View ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ ಪಹಣಿ/RTC ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಮೂದಿಸಿದ ಸರ್ವೇ ನಂಬರ್ ಆ ಸರ್ವೇ ನಂಬರ್ ಅಡಿಯಲ್ಲಿ ಹಿಸ್ಸಾ ನಂಬರ್ ಹಾಗೂ ಒಟ್ಟು ಎಷ್ಟು ಎಕರೆ ಜಮೀನಿದೆ ತೋರಿಸುತ್ತದೆ.

ಹಕ್ಕುಗಳು ಕಾಲಂನಲ್ಲಿ ನೋಡಿದರೆ ರೈತರು ಯಾವ ಬ್ಯಾಂಕಿನಲ್ಲಿ ಕೃಷಿ ಸಾಲ ಪಡೆದಿದ್ದಾರೆ, ಎಷ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿಯೂ ಕಾಣಿಸುತ್ತದೆ. ಇದರೊಂದಿಗೆ ಯಾವಾಗ ಸಾಲ ಪಡೆಯಲಾಗಿದೆ ಎಂಬ ಮಾಹಿತಿ ಕೂಡ ಇರುತ್ತದೆ. ಈ ಸಾಲವನ್ನು ನೀವೇ ಪಡೆದಿದ್ದೀರೋ ಅಥವಾ ನಿಮ್ಮ ಜಮೀನಿನ ಮೇಲೆ ನಿಮ್ಮ ಹೆಸರಲ್ಲಿ ಬೇರೆಯವರೂ ಪಡೆದಿದ್ದಾರೋ ಎಂಬುದು ನಿಮಗೆ ತಿಳಿಯುತ್ತದೆ.

ಇತ್ತೀಚಿನ ಸುದ್ದಿಗಳು

Related Articles