Friday, September 20, 2024

Gruha jyothi- ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ಡಿ-ಲಿಂಕ್(ಬದಲಿಸುವ) ಮಾಡಬೇಕು!

ಗೃಹಜ್ಯೋತಿ(Gruha jyothi) ಯೋಜನೆಯಡಿ ಸೌಲಭ್ಯ ಪಡೆಯಲು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಮನೆ ಬದಲಾವಣೆ ಮಾಡಿಕೊಂಡ ಬಳಿಕವು ಹೊಸ ಮನೆಯ ಆರ್ ಆರ್ ಸಂಖ್ಯೆಯನ್ನು ಸೇರ್ಪಡೆ ಮಾಡಿಕೊಳ್ಳಲು ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಲಾಗಿದೆ.

ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ಹಳೆಯ ಆಧಾರ್ ನಂಬರ್  ಗೆ ಆರ್.ಆರ್ ಸಂಖ್ಯೆಗೆ ಲಿಂಕ್ ಅಗಿರುವುದನ್ನು ಡಿ-ಲಿಂಕ್(ಬದಲಿಸುವ) ಮಾಡಬೇಕು ಇದನ್ನು ಹೇಗೆ ಮಾಡುವುದು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು/ಡಿ-ಲಿಂಕ್ ಮಾಡಲು ವೆಬ್ಸೈಟ್ ಲಿಂಕ್ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದು ಒಂದು ವರ್ಷವಾಗಿದ್ದು. ಇಂಧನ ಇಲಾಖೆಯು ಗೃಹಜ್ಯೋತಿ ಗ್ರಾಹಕರಿಗಾಗಿ ಮನೆ ಬದಲಾಯಿಸಿದ ನಂತರವೂ ಉಚಿತ ವಿದ್ಯುತ್‌ ಸೌಲಭ್ಯ ಪಡೆಯಲು ಅನ್ಲೈನ್ ಮೂಲಕ ಅರ್ಜಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. 

ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ನಾಗರಿಕರಿಗು ಈ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಅವಕಾಶವಿದ್ದು, ಗ್ರಾಹಕರು ಮನೆ ಬದಲಾವಣೆ ಮಾಡಿಕೊಂಡ ನಂತರ ಉಚಿತ ವಿದ್ಯುತ್ ವ್ಯವಸ್ಥೆ ಸ್ಥಗಿತವಾಗುವುದನ್ನು ತಪ್ಪಿಸಲು/ತಡೆಯಲು ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಅನ್ನು ಭೇಟಿ ಮಾಡಿ ಹಳೆ ಮನೆಯ ಆರ್‌ಆರ್‌ ಸಂಖ್ಯೆಯನ್ನು ಬದಲಿಸಲು/ಡಿ-ಲಿಂಕ್‌ ಮಾಡಿ ಹೊಸ ಮನೆಯ ಆರ್‌ಆರ್‌ ಸಂಖ್ಯೆಯನ್ನು ಲಿಂಕ್‌ ಮಾಡಿದರೆ ಹೊಸ ಮನೆಯ ವಿದ್ಯುತ್ ಉಚಿತವಾಗುತ್ತದೆ.

D-link -Gruha jyothi – ಸೇವಾ ಸಿಂಧು ಪೋರ್ಟಲ್‌ ಭೇಟಿ ಮಾಡಿ ಆರ್‌ಆರ್‌ ಸಂಖ್ಯೆಯನ್ನು ಡಿ-ಲಿಂಕ್‌ ಮಾಡುವ ವಿಧಾನ:

ಗ್ರಾಹಕರು ಸೇವಾ ಸಿಂಧು ಪೋರ್ಟಲ್ ನ್ನು ಪ್ರವೇಶಿಸಿ ಯಾವ ಕ್ರಮದಿಂದ ಆರ್‌ಆರ್‌ ಸಂಖ್ಯೆಯನ್ನು ಡಿ-ಲಿಂಕ್‌ ಅನ್ನು ನಿಮ್ಮ ಮೊಬೈಲ್ ನಲ್ಲಿ ಮಾಡುವ ವಿಧಾನವನ್ನು ಈ ಕೆಳಗೆ ತಿಳಿಸಲಾಗಿದೆ.

ವಿಧಾನ-1: ಮೊದಲಿಗೆ ಈ Gruha jyothi ಡಿ- ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಸೇವಾ ಸಿಂಧು ವೆಬ್ಸೈಟ್ ನ್ನು ಪ್ರವೇಶ ಮಾಡಬೇಕು.

ವಿಧಾನ-2: ತದನಂತರ ಗೃಹಜ್ಯೋತಿ ಯೋಜನೆಯ ಡಿ-ಲಿಂಕ್ ಪರದೆ ತೆರೆದುಕೊಳ್ಳುತ್ತದೆ ಇಲ್ಲಿ “ಆಧಾರ್ ಸಂಖ್ಯೆಯನ್ನು ನಮೂದಿಸಿ (ಗೃಹ ಜ್ಯೋತಿಯೊಂದಿಗೆ ನೋಂದಾಯಿಸಿದ ಆಧಾರ್) / Enter Aadhaar Number (Registered Aadhaar with Gruha Jyothi)” ಈ ರೀತಿ ತೋರಿಸುವ ಕಾಲಮ್ ನಲ್ಲಿ ಅರ್ಜಿದಾರನ ಆಧಾರ್ ಸಂಖ್ಯೆಯನ್ನು ಹಾಕಿ “Get details” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ವಿಧಾನ-3: ಮೇಲಿನ ಹಂತವನ್ನು ಪೂರ್ಣಗೊಳಿಸಿದ ಬಳಿಕ “ಇ-ಕೆವೈಸಿ ಸೇವೆ / e-KYC Service” ಪೇಜ್ ತೆರೆದುಕೊಳ್ಳುತ್ತದೆ ಇಲ್ಲಿದೆ “ಆಧಾರ್‌ ಸಂಖ್ಯೆ /Aadhaar Number” ಕಾಲಮ್ ನಲ್ಲಿ ಅರ್ಜಿದಾರರ ಆಧಾರ್ ಸಂಖ್ಯೆಯನ್ನು ಹಾಕಿ ಕೆಳಗೆ ಕಾಣುವ “OTP” ಮೇಲೆ ಕ್ಲಿಕ್ ಮಾಡಿ “ಒಟಿಪಿ ಪಡೆಯಿರಿ/Generate OTP” ಬಟನ್ ಮೇಲೆ ಕ್ಲಿಕ್ ಮಾಡಿ ಒಟಿಪಿ ಸಲ್ಲಿಸಬೇಕು.

ವಿಧಾನ-4: ಕೊನೆಯಲ್ಲಿ ನಿಮ್ಮ ಹಳೆಯ ಆರ್ ಆರ್ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ ಹೊಸ ಆರ್ ಆರ್ ಸಂಖ್ಯೆಯನ್ನು ಹಾಕಿ ಲಿಂಕ್ ಮಾಡಬೇಕು.

ವಿಶೇಷ ಸೂಚನೆ: ಒಂದು ಒಮ್ಮೆ ಈ ವೆಬ್ಸೈಟ್ ತೆರೆಯದಿದ್ದರೆ ಮೊಬೈಲ್ ಕ್ರೊಮ್ ಅಪ್ಲಿಕೇಶನ್ ನ್ನು ತೆರೆದು Cache Memory Clear ಮಾಡಿ ನಂತರ ಪೋರ್ಟಲ್‌ ಲಿಂಕ್‌ ಮಾಡಿ ಸೇವೆ ಪಡೆಯಬಹುದು.

ಗೃಹಜ್ಯೋತಿ ಡಿ-ಲಿಂಕ್: click here

ಇತ್ತೀಚಿನ ಸುದ್ದಿಗಳು

Related Articles