Thursday, September 19, 2024

BELE DARSHAKA APP-2024ರ ಬೆಳೆ ಸಮೀಕ್ಷೆ ರೈತರೇ ಮಾಡಿದ ಸಮೀಕ್ಷೆ ವರದಿ ನೋಡುವುದು ಹೇಗೆ ಎಂದು ತಿಳಿಯಲು ಇಲ್ಲಿದೆ ಮಾಹಿತಿ!

ರೈತ ಭಾಂದವರೇ 2024 ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ app ಬಿಡುಗಡೆ ಮಾಡಲಾಗಿದೆ. ತಾವು ಈಗಾಗಲೇ ಸಮೀಕ್ಷೆ ಮಾಡಿದ್ದರೇ ನಿಮ್ಮ ಸಮೀಕ್ಷೆ ಸರಿಯಾಗಿದೆಯೇ? ಇಲ್ಲವಾ ಎಂದು ಹೇಗೆ ತಿಳಿದುಕೊಳ್ಳಬೇಕು ಎಂದು ನಿಮಗೆ ಈ ಲೇಖನದಲ್ಲಿ ಹೇಳಿಕೊಡಲಾಗುವುದು.

ಇನ್ನೂ ಬೆಳೆ ಸಮೀಕ್ಷೆ ಮಾಹಿತಿಯನ್ನು ಬೆಳೆ ವಿಮೆ ಮಾಹಿತಿಗೆ ಸೇರಿಸುವುದರಿಂದ ರೈತರೂ ಕಡ್ಡಾಯವಾಗಿ ಬೆಳೆ ಸಮೀಕ್ಷೆ ಮಾಡಿಕೊಳ್ಳಬೇಕು. ತಮಗೆ ಈಗಾಗಲೇ ತಿಳಿದಿರುವ ಹಾಗೆ ಈ ವರ್ಷದ ಬೆಳೆ ವಿಮೆಯನ್ನು ರೈತರಿಗೆ ಹಿಂದಿನ ವರ್ಷದ ಬೆಳೆ ಸಮೀಕ್ಷೆ ವರದಿ ಮೇಲೆ ಬೆಳೆ ವಿಮೆ ಮಾಡಿಕೊಳ್ಳಲು ಮಾತ್ರ ಅವಕಾಶ ನೀಡಲಾಗಿದೆ.

ಬೆಳೆ ಸಮೀಕ್ಷೆ ಮಾಡಿಕೊಳ್ಲುವುದರಿಂದ ರೈತರಿಗೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಬೆಳೆ ಪರಿಹಾರ, ಬೆಳೆ ನಷ್ಟ ಪರಿಹಾರ, ಕೃಷಿ ಸಾಲ, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಸೌಲಭ್ಯಗಳನ್ನು ಪಡೆಯಲು ಅತೀ ಅವಶ್ಯಕವಾಗಿದೆ. ಕಡ್ಡಾಯ ಬೆಳೆ ಸಮೀಕ್ಷೆ ಮಾಡಿಕೊಳ್ಳಿ.

ತಾವು ಈಗಾಗಲೇ ರೈತರ ಬೆಳೆ ಸಮೀಕ್ಷೆ ಮಾಡಿಕೊಂಡಿದ್ದರೇ ತಮ್ಮ ಮೊಬೈಲ್‌ ನಲ್ಲಿ ಬೆಳೆ ವಿವರಗಳನ್ನು ಹೇಗೆ ನೋಡುವುದು? ಅದರ ಸಂಪೂರ್ಣ ಮಾಹಿತಿ ಹೇಗೆ ತಿಳಿದುಕೊಳ್ಳಬೇಕು ಎಂದು ಈ ಲೇಖನದಲ್ಲಿ ತಿಳಿಸಿಕೊಡಲಾಗುವುದು.

ಇದನ್ನೂ ಓದಿ: ಕೃಷಿ ಇಲಾಖೆಯ ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ ಕೃಷಿಕರಿಗೆ ಲಕ್ಷದವರೆಗೂ ಸಹಾಯಧನ.

2024 ರ ರೈತರ ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಬೆಳೆ ವಿವರ ನೋಡುವ ವಿಧಾನ:

1)ಮೊದಲಿಗೆ GOOGLE PLYSTORE ಹೋಗಿ ಅಲ್ಲಿ bele darshank app ಅಂತಾ ನಮೂದಿಸಿ app ನ್ನು ಡೌನ್ಲೋಡ್‌ ಮಾಡಿಕೊಳ್ಳಿ.

2)ನಂತರ ನಿಮಗೆ ಅದರಲ್ಲಿ ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ,ಗ್ರಾಮ ಕೇಳುತ್ತದೆ ಅದನ್ನೂ ಹಾಕಿ ಮುಂದೆವರೆಯಿರಿ.(ರೈತರ ಗಮನಕ್ಕೆ ವಾರ್ಷಿಕ ಬೆಳೆಗಳಿಗೆ ಮುಂಗಾರು ಮಾತ್ರ ಋತುವಿನಲ್ಲಿ ಇರುವ ಆಯ್ಕೆ ಮಾಡಬೇಕು, ಬೇರೆ ಬೆಳೆಗಳಿಗೆ ಬೆಳೆದ ಹಂಗಾಮು ಆಯ್ಕೆ ಮಾಡಿ)

3)ಇದಾದ ಮೇಲೆ ನಿಮ್ಮ ಸರ್ವೆ ನಂಬರ್‌ ಹಾಕಿ ವಿವರ ಪಡೆಯಿರಿ ಮೇಲೆ ಕ್ಲಿಕ್‌ ಮಾಡಿ.

4) ನಂತರ ನಿಮಗೆ ನಿಮ್ಮ ಸರ್ವೇ ನಂಬರಿನ್‌ ಹಿಸ್ಸಾ ನಂಬರ್ ಬರುತ್ತವೆ ಅದನ್ನು ಆಯ್ಕೆ ಮಾಡಿಕೊಳ್ಳಿ.

5)ಇದಾದ ಮೇಲೆ ಮಾಲೀಕರ ವಿವರ ಆಯ್ಕೆ ಮಾಡಿ ಮುಂದರೆವರೆಯಿರಿ.

6)ನಂತರ ಸಮೀಕ್ಷೆ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್‌ ಮಾಡಿ ಮುಂದೆವರೆಯಿರಿ.

7)ಕ್ಲಿಕ್‌ ಮಾಡಿದ ಮೇಲೆ ನಿಮಗೆ ಅಲ್ಲಿ ಸಮೀಕ್ಷೆಗಾರರ ಹೆಸರು, ಮೊಬೈಲ್‌ ಸಂಖ್ಯೆ, ಸಮೀಕ್ಷೆಯ ದಿನಾಂಕ ಕಾಣುತ್ತದೆ ಅದರ ಕೆಳಗಡೆ ಇರುವ ಮೊಬೈಲ್‌ ನಂಬರ್‌ ಮೇಲೆ ಕ್ಲಿಕ್‌ ಮಾಡಿ ಆಗ ನಿಮಗೆ ತಿಳಿ ಹಸಿರು ಬಣ್ಣದ ಬದಲಾವಣೆ ಕಾಣುತ್ತದೆ.

ಇದನ್ನೂ ಓದಿ:ರೈತರ ಬೆಳೆ ಸಮೀಕ್ಷೆ 2024 ರ ಮುಂಗಾರು ಹಂಗಾಮು APP ಬಿಡುಗಡೆ! ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ನೀವೇ ಮಾಡಿಕೊಳ್ಳಿ.

8)ನಂತರ ನಿಮಗೆ ಅದರ ಕೆಳಗಡೆ ಕಾಣುವ ಬೆಳೆ ವಿವರ ವೀಕ್ಷಿಸಿ ಮೇಲೆ ಕ್ಲಿಕ್‌ ಮಾಡಿ.

9)ಆಗ ನಿಮಗೆ ರೈತನ ಹೆಸರು, ಸರ್ವೇ ನಂಬರ್‌, ಮೊಬೈಲ್‌ ನಂ, ಅದರ ಕೆಳಗಡೆ ಬೆಳೆ ಹೆಸರು , ವಿಸ್ತೀರ್ಣ, ವರ್ಗ, ನೀರಾವರಿ ವಿಧ, ಛಾಯಾಚಿತ್ರ ವೀಕ್ಷಿಸಿ, ಋತು ಎಂಬ ಆಯ್ಕೆಗಳು ಕಾಣಿಸುತ್ತವೆ.

10)ತಮಗೆ ಕಾಣುವ ಬೆಳೆಯ ಹೆಸರು ಏನು ನಮೂದಾಗಿದೆ ಎಂದು ತಿಳಿಯುತ್ತದೆ. ಹಾಗೂ ನಿಮ್ಮ ಬೆಳೆಯ ಪೋಟೋ ಸಹ ತಾವು ಅಲ್ಲಿ ನೋಡಬಹುದು.

ಇತ್ತೀಚಿನ ಸುದ್ದಿಗಳು

Related Articles