Friday, September 20, 2024

Diploma Agriculture Application-2024:ರೈತರ ಮಕ್ಕಳಿಗೆ ಹಾಗೂ ಕೃಷಿಯಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಕೃಷಿಯ ಬಗ್ಗೆ ಅಧ್ಯಾಯನ ಮಾಡಲು ಈ ಕೋರ್ಸ್ ಮಾಡಿಸಿ. ಅದಕ್ಕೆ ಅರ್ಜಿ ಆಹ್ವಾನ.

ಹೌದು, ಜನರೇ ಕೆಲವು ಮಕ್ಕಳು ಕೃಷಿಯ ಬಗ್ಗೆ ತಿಳಿದುಕೊಳ್ಳಲು ಹೆಚ್ಚಿನ ಆಸಕ್ತಿ ಇರುತ್ತದೆ. ಅಂತಹ ಮಕ್ಕಳ ಕೃಷಿಯ ಬಗ್ಗೆ ಕಲಿಕೆಗೆ ಅನುಕೂಲವಾಗಲು ಡಿಪ್ಲೋಮಾ ಅಗ್ರಿ ಕೋರ್ಸ್ ನ್ನು ಸೇರಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಈ ಡಿಪ್ಲೋಮಾ ಅಗ್ರಿ ಕೋರ್ಸ್ 2011 ರಿಂದ ಜಾರಿಯಲ್ಲಿದ್ದು ಮಧ್ಯದಲ್ಲಿ ಅಂದರೆ ಹಿಂದಿನ ವರ್ಷ ಆರ್ಥಿಕ ಪರಿಸ್ಥಿತಿಯಿಂದ ಕೊರ್ಸ್ ಬಂದಮಾಡಲಾಗಿತ್ತು. ಈ ವರ್ಷ ಮರಳಿ ಆರಂಭಿಸಲಾಗಿದ್ದು ಈ ಕೋರ್ಸ ಸೇರಲು ಆಫ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಡಿಪ್ಲೋಮಾ ಅಗ್ರಿ ಕೋರ್ಸ್ ಒಟ್ಟು 2 ವರ್ಷದ ಕೋರ್ಸ್ ಆಗಿರುತ್ತದೆ, ಇದರಲ್ಲಿ ಸೆಮಿಸ್ಟರ್ ಪದ್ಧತಿಯಲ್ಲಿ ಒಟ್ಟು 4 ಸೆಮಿಸ್ಟರ್ ಇರುತ್ತವೆ. ಈ ಕೋರ್ಸನ್ನು ರಾಜ್ಯದ ನಾಲ್ಕು ಕೃಷಿ ವಿಶ್ವ ವಿದ್ಯಾನಿಲಯಗಳ(ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ,ಧಾರವಾಡ ಕೃಷಿ ವಿಶ್ವ ವಿದ್ಯಾನಿಲಯ, ರಾಯಚೂರು ಕೃಷಿ ವಿಶ್ವ ವಿದ್ಯಾನಿಲಯ, ಶಿವಮೊಗ್ಗ ಕೃಷಿ ವಿಶ್ವ ವಿದ್ಯಾನಿಲಯ) ಅಡಿಯಲ್ಲಿ ಬರುವ ಕೃಷಿ ಕಾಲೇಜುಗಳಲ್ಲಿ ನಡೆಸಲಾಗುತ್ತದೆ.

2024-25ನೇ ಸಾಲಿನ ಡಿಪ್ಲೋಮಾ(ಅಗ್ರಿ) ಕೋರ್ಸಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅರ್ಜಿದಾರರು ಈ ಲೇಖನದಲ್ಲಿ ವಿವರಿಸಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬಹುದು.

ನಾನು ಈಗಾಗಲೇ ಮೇಲೆ ತಿಳಿಸಿರುವ ವಿಶ್ವ ವಿದ್ಯಾನಿಲಯಗಳಲ್ಲಿ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಅಧೀನದಲ್ಲಿರುವ ವಿ,ಸಿ ಫಾರಂ, ಮಂಡ್ಯದಲ್ಲಿ 2024-25ನೇ ಶೈಕ್ಷಣಿಕ ವರ್ಷಕ್ಕೆ ಎರಡು ವರ್ಷಗಳ ಡಿಪ್ಲೋಮಾ (ಅಗ್ರಿ) ಕೋರ್ಸಗೆ ಅರ್ಜಿ ಆಹ್ವಾನಿಸಲಾಗಿದೆ. ಭೋದನಾ ಮಾಧ್ಯಮವು ಕನ್ನಡದಲ್ಲಿರುತ್ತದೆ.

Eligibility for diploma agri course-ಪ್ರವೇಶ ಅರ್ಹತೆಗಳು:

ಕೃಷಿ ಡಿಪ್ಲೋಮ ಕೋರ್ಸಗೆ ಸೇರ ಬಯಸುವ ವಿದ್ಯಾರ್ಥಿಯು 10 ನೇ ತರಗತಿಯಲ್ಲಿ ಅಭ್ಯಸಿಸಿ ಕನಿಷ್ಠ ಶೇ.45 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು(ಪ.ಜಾ/ಪ.ಪಂ/ಪ್ರವರ್ಗ-1 ಬರುವ ವಿಧ್ಯಾರ್ಥಿ ಕನಿಷ್ಠ ಶೇ.40 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು).

ದಿನಾಂಕ:30-06-2024 ಕ್ಕೆ ವಿದ್ಯಾರ್ಥಿಯ ವಯಸ್ಸು 19 ವರ್ಷಗಳನ್ನು ದಾಟಿರಬಾರದು. ರೈತರು ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ.50 ರಷ್ಟು ಸೀಟುಗಳನ್ನು ಡಿಪ್ಲೋಮಾ (ಅಗ್ರಿ) ಕೋರ್ಸ ಪ್ರವೇಶಾತಿಗೆ ಮೀಸಲಿಡಲಾಗಿದೆ.

diploma agri how to apply-ಹೇಗೆ ಅರ್ಜಿ ಸಲ್ಲಿಸಬೇಕು:

ಕೃಷಿ ವಿಶ್ವ ವಿದ್ಯಾನಿಲಯ ಜಿ.ಕೆವಿ.ಕೆ ಬೆಂಗಳೂರು-560065, ವೆಬ್ ಸೈಟ್ www.uasbangalore.edu.in ನಲ್ಲಿ  ದಿನಾಂಕ:15/07/2024 ರಿಂದ 10/08/2024 ರವರೆಗೆ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಬಹುದು. ನಂತರ ಭರ್ತಿ ಮಾಡಿದ ಅರ್ಜಿಗಳನ್ನು, ಅರ್ಜಿಯ ನಿಗದಿತ ಶುಲ್ಕವನ್ನು ಡಿ.ಡಿ. ರೂಪದಲ್ಲಿ ಲಗತ್ತಿಸಿ, ದಿನಾಂಕ 10/08/2024 ರೊಳಗೆ ಕಳುಹಿಸಿ ಕೊಡಬೇಕು. ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

notification copy

ಅರ್ಜಿ ಶುಲ್ಕ ಹಾಗು ಅರ್ಜಿ ಸಲ್ಲಿ ವಿಳಾಸ:

ಸಾಮಾನ್ಯ ವರ್ಗದವರಿಗೆ ರೂ.500/- ಪ.ಜಾ/ಪ.ಪಂ/ಪ್ರವರ್ಗ-1 ರವರಿಗೆ 250/- ಆಗಿದ್ದು, ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಡಿ.ಡಿ ಯನ್ನು Comptroller,UAS,GKVK,Bangalore-560065 ಇವರ ಹೆಸರಿನಲ್ಲಿ ಪಡೆದು ಎಲ್ಲಾ ಅಡಕಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಕುಲಸಚಿವರು, ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ,ಬೆಂಗಳೂರು-560065 ಇಲ್ಲಿಗೆ 10/08/2024 ರ(ಸಂಜೆ 4.00 ಗಂಟೆ) ಒಳಗೆ ತಲುಪುವಂತೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬಹುದು.

ಪ್ರವೇಶ ಮತ್ತು ಆಯ್ಕೆಯ ವಿಧಾನ:

ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ಧತಿಯನ್ನು ಅಳವಡಿಸಿ, ಪ್ರವೇಶಕ್ಕೆ ಆಯ್ಕೆ ಮಾಡಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪತ್ರ ಹಾಗೂ ವೆಬ್ ಸೈಟ್ ಮುಖಾಂತರ ತಿಳಿಸಲಾಗುವುದು.

ಇತ್ತೀಚಿನ ಸುದ್ದಿಗಳು

Related Articles