Saturday, October 5, 2024

Pm kisan Ekyc-ಪಿಎಂ ಕಿಸಾನ್ ಇಕೆವೈಸಿ(Ekyc)ಆಗದೆ ಇರುವ ರೈತರ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಉಂಟೇ, ಚೆಕ್ ಮಾಡಿಕೊಳ್ಳಿ.

ಕೇಂದ್ರ ಸರಕಾರದ ಹಲವು ಯೋಜನೆಗಳಲ್ಲಿ ರೈತರ ಮಹಾತ್ವಾಕಾಂಕ್ಷಿ ಯೋಜನೆಯಾದ ಕಿಸಾನ್ ಸಮ್ಮಾನ ನಿಧಿ ಯೋಜನೆಯು ರೈತರಿಗೆ ವರದಾನವಾಗಿದೆ. ಕೇಂದ್ರದ ಚುನಾವಣೆಯಿಂದ ತಡವಾಗಿದ್ದು, ಇದೀಗ ಮತ್ತೆ ಮುಂದೆವರಸಿದ್ದು, ರೈತರ ಪಿಎಂ ಕಿಸಾನ್ ನಿಧಿಯ 17ನೇ ಕಂತಿನ ಬಿಡುಗಡೆ ಮಾಡಲಾಗಿದ್ದುಅದರಲ್ಲಿ ಸುಮಾರುಜನ ರೈತರ ಇಕೆವೈಸಿ ಮಾಡದೆ ಹಣ ಜಮೆ ಬಾಕಿ ಆಗಿದೆ.

ಕೇಂದ್ರ ಸರಕಾರವು ರೈತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲಿ ರೈತರಿಗೆ ತುಂಬಾ ಅನುಕೂಲಕರವಾದ ಯೋಜನೆಯಾದ ಕಿಸಾನ್ ಸಮ್ಮಾನ ನಿಧಿ ಯೋಜನೆ ಈ ಯೋಜನೆಯಡಿ ರೈತರಿಗೆ ವರ್ಷಕ್ಕೆ 6 ಸಾವಿರ ಹಣ ಬರುತ್ತದೆ. ಈ ಹಣವು ನಾಲ್ಕು ತಿಂಗಳಿಗೊಮ್ಮೆ ನೇರ ರೈತರ/ಫಲಾನುಭವಿಗಳ ಖಾತೆಗೆ ಜಮೆಯಾಗುತ್ತದೆ.

ಇದನ್ನೂ ಓದಿ: ಅಡಿಕೆ,ಕಾಳುಮೆಣಸು ಬೆಳೆಗೂ ಬಂತು ಬೆಳೆ ವಿಮೆ, ವಿಮೆ ಮಾಡಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಸಲ್ಲಿಸಬೇಕಾದ ದಾಖಲೆಗಳೇನು?ಇಲ್ಲಿದೆ ಮಾಹಿತಿ.

Pm kisan Ekyc-ಪಿಎಂ ಕಿಸಾನ್ ಇಕೆವೈಸಿ(Ekyc)ಆಗದೆ ಇರುವ ರೈತರ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಉಂಟೇ, ಚೆಕ್ ಮಾಡಿಕೊಳ್ಳಿ.

ರೈತರು ತಮ್ಮ ಹೆಸರಿಗೆ ಇಕೆವೈಸಿ ಆಗಿದೆಯೋ ಇಲ್ಲವೊ ಎಂಬುದನ್ನು ಚೆಕ್ ಮಾಡಬಹುದು. ಯಾರ ಯಾರ ಹೆಸರಿಗೆ ಇಕೆವೈಸಿ ಆಗಿಲ್ಲವೋ ಅಂತಹವರ ಹೆಸರು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನೂ ಚೆಕ್ ಮಾಡಲು ಈ ಲಿಂಕ್ Click here…. ಕ್ಲಿಕ್ ಮಾಡಬೇಕು.

ನಂತರ ನಿಮಗೆ ಇಕೆವೈಸಿ ಪೆಂಡಿಂಗ್ ಲಿಸ್ಟ್ ಕಾಣಿಸುತ್ತದೆ. ಜಿಲ್ಲೆ ಹಾಗೂ ಜಿಲ್ಲೆಯಲ್ಲಿ ಎಷ್ಟು ರೈತರ ಇಕೆವೈಸಿ ಬಾಕಿ ಇದೆ ಎಂದು ತೋರಿಸುತ್ತದೆ. ನಿಮ್ಮಹೆಸರು ಇದೆಯೇ ಎಂದು ಚೆಕ್ ಮಾಡಲು ನಿಮ್ಮ ಜಿಲ್ಲೆಯ ಮುಂದಿರುವ ನಂಬರ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಎಕ್ಸೆಲ್ ಶೀಟ್ ಡೌನ್ಲೋಡ್ ಆಗುತ್ತದೆ. ಆ ಶೀಟ್ ಓಪನ್ ಮಾಡಿ, ನಿಮ್ಮ ಹೆಸರಿದೆಯೇ ಎಂದು ನೋಡಿಕೊಳ್ಳಿ, ಇದ್ದರೆ ಕೂಡಲೇ ಇಕೆವೈಸಿ ಮಾಡಿಕೊಳ್ಳಿ.

ಇದನ್ನೂ ಓದಿ: ರೈತರೇ ಸ್ವತಃ ಬೆಳೆದ ಬೆಳೆಗಳನ್ನು RTC/ಪಹಣಿ ಗೆ ದಾಖಲಿಸಲು ಆ್ಯಪ್ ಬಿಡುಗಡೆ! ಇಲ್ಲಿದೆ ಲಿಂಕ್ ಹಾಗೂ ಅದರ ಮಾಹಿತಿ.

ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ, ಇಲ್ಲವಾ ತಿಳಿಯಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ Pm kisan.gov.in ಈ ವೆಬ್ಸೈಟ್ ಭೇಟಿ ಮಾಡಿ, ಅದರಲ್ಲಿ ಬೆನಿಫಿಶಿರಿ ಲಿಸ್ಟ ಮೇಲೆ ಕ್ಲಿಕ್ ಮಾಡಿ. ನಂತರ ಇದರಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿ/ಹೆಸರು ಕಾಣುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯಾ ನೋಡಿ ಪರಿಶೀಲಿಸಿಕೊಳ್ಳಿ.

ಹಣ ಬರದೆ ಇರಲು ಮತ್ತು ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿರಲೂ ಕಾರಣಗಳಿವೆ!

ಒಂದು ವೇಳೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಲಿಸ್ಟನಲ್ಲಿ ನಿಮ್ಮ ಹೆಸರು ಇಲ್ಲದೇ ಇದ್ದರೆ ಅದಕ್ಕೆ ಹಲವಾರು ಕಾರಣಗಳಿವೆ. ನೀವೂ Ekyc ಮಾಡದೇ ಇರುವುದು ಅಥವಾ ಸರಿಯಾಗಿ Ekyc ಮಾಡಿಸದೆ ಇರುವುದು. ನೀವೂ ಈ ಯೋಜನೆಯ ಫಲಾನುಭವಿಗಳ ಅರ್ಹತೆ ಅಂಶಗಳಿಂದ ಹೊರಗೆ ಇರಬಹುದು.

ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದರೆ ಕಡ್ಡಾಯ Ekyc ಮಾಡಿಸಬೇಕು, ಇಲ್ಲವಾದಲ್ಲಿ ನಿಮಗೆ ಈ ಯೋಜನೆಯ ಹಣ ಬರುವುದಿಲ್ಲ. Ekyc ಮಾಡಿಸಲು ಹತ್ತಿರದ ಕೃಷಿ ಇಲಾಖೆ, ಗ್ರಾಮ ಒನ್ ಮತ್ತು ಸೇವಾ ಸಿಂಧು ಸೈಬರ್ ಗಳಿಗೆ ಭೇಟಿ ಮಾಡಿ Ekyc ಮಾಡಿಸಿಕೊಳ್ಳಿ.

ಇತ್ತೀಚಿನ ಸುದ್ದಿಗಳು

Related Articles