Friday, September 20, 2024

Siri Gramodyoga samsthe-ನಿರುದ್ಯೋಗ ಮಹಿಳೆಯರಿಗೆ ಮತ್ತು ಪುರುಷರಿಗೆ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗದಲ್ಲಿ ಉದ್ಯೋಗಾವಕಾಶಗಳು!

ಶ್ರೀ ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಪರಮ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ.ಹೇಮಾವತಿ ವೀ ಹೆಗ್ಗಡೆಯವರ ಆಶ್ರಯದಲ್ಲಿ ಮಹಿಳಾ ಸಬಲೀಕರಣದ ಧ್ಯೇಯೋದ್ದೇಶದಿಂದ ನಡೆಯುತ್ತಿರುವ ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ವಿವಿಧ ಕೆಲಸಗಳಿಗೆ ನಿರುದ್ಯೋಗ ಮಹಿಳೆಯರಿಗೆ ಉದ್ಯೋಗ ಅವಕಾಶಕ್ಕೆ ಕರೆಯಲಾಗಿದೆ.

ಭಾರತ ದೇಶದಲ್ಲಿ ಉದ್ಯೋಗದಲ್ಲಿ ದಿನದಿಂದ ದಿನಕ್ಕೆ ನಿರುದ್ಯೋಗ ಹೆಚ್ಚಾಗುತ್ತಾ ಹೋಗುತ್ತಿದೆ, ಹಾಗೆ ಜನ ಸಂಖ್ಯೆಯು ಕೂಡ ಏರುತ್ತಿರುವುದರಿಂದ ವಿದ್ಯಾವಂತರಿಗೆ ಸರಿಯಾಗಿ ಉದ್ಯೋಗಗಳು ದೊರೆಯದೆ ನಿರುದ್ಯೋಗಿಗಳಾಗಿದ್ದಾರೆ. ಇನ್ನು ಕೆಲವರು ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕೈಗಾರಿಕೆಗಳಲ್ಲಿ ಕೆಲಸವನ್ನು ಮಾಡಿಕೊಂಡಿದ್ದಾರೆ. ಅದರಲ್ಲಿ ಹೆಚ್ಚಿನ ಮಹಿಳೆಯರಿಗೆ ಕೆಲಸಗಳು ಸಿಗುವುದು ಕಡಿಮೆಯಾಗಿದೆ. ಕಾರಣ ದೂರದ ಊರುಗಳಿಗೆ ತೆರಳಿ ಕೆಲಸ ಮಾಡುವ ಭಯದಿಂದ.

ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಶ್ರೀ ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಪರಮ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ.ಹೇಮಾವತಿ ವೀ ಹೆಗ್ಗಡೆಯವರ ಆಶ್ರಯದಲ್ಲಿ ಮಹಿಳಾ ಸಬಲೀಕರಣದ ಧ್ಯೇಯೋದ್ದೇಶದಿಂದ ನಡೆಯುತ್ತಿರುವ ಸಿರಿ ಗ್ರಾಮೋದ್ಯೋಗ ಸಂಸ್ಥೆಯನ್ನು ರಚನೆ ಮಾಡಿ ಗ್ರಾಮೀಣ ಮಹಿಳೆಯರಿಗೆ ಉದ್ಯೋಗವನ್ನು ಕಲ್ಪಿಸುತ್ತಿದ್ದಾರೆ.

ಇದನ್ನೂ ಓದಿ:17ನೇ ಕಂತು ಬಿಡುಗಡೆಗೆ ತಯಾರಿ, ಕಡ್ಡಾಯ ಪಿ ಎಂ ಕಿಸಾನ್ ಫಲಾನುಭವಿಗಳು Ekyc ಮಾಡಿಸಿ. ಲಿಂಕ್ ಇಲ್ಲಿದೆ.

ಕೆಲಸದ ಘಟಕಗಳು ಮತ್ತು ಬೇಕಾಗುವ ಸಿಬ್ಬಂದಿಗಳ ಸಂಖ್ಯೆ

1)ಸಿದ್ಧ ಉಡುಪು ಉತ್ಪಾದನಾ ಘಟಕ-250 ಸಿಬ್ಬಂದಿಗಳು

2)ಅಗರಬತ್ತಿ ಉತ್ಪನ್ನಗಳ ಉತ್ಪಾದನಾ ಘಟಕ-40 ಸಿಬ್ಬಂದಿಗಳು

3)ರಾಸಾಯನಿಕ ಉತ್ಪನ್ನಗಳ ಉತ್ಪಾದನಾ ಘಟಕ-20 ಸಿಬ್ಬಂದಿಗಳು

4)ರೆಕ್ಸಿನ ಬ್ಯಾಗ್‌ ಉತ್ಪನ್ನಗಳ ಉತ್ಪಾದನಾ ಘಟಕ-50 ಸಿಬ್ಬಂದಿಗಳು

5)ಆಹಾರ ಉತ್ಪನ್ನಗಳ ಉತ್ಪಾದನಾ ಘಟಕ-50 ಸಿಬ್ಬಂದಿಗಳು

6)ಸಿರಿ ವಾಹನಗಳಿಗೆ ಚಾಲಕರು-50 ಸಿಬ್ಬಂದಿಗಳು

ಸಿಗುವ ಸೌಲಭ್ಯಗಳು:

1)ಆಕರ್ಷಕ ವೇತನ

2)ಬೋನಸ್‌

3)ಪಿ.ಎಫ್‌, ಇ.ಎಸ್.ಐ

4)ಇತರ ಭತ್ಯೆಗಳು

5)ರಜಾ ಸೌಲಭ್ಯ

6)ಕ್ಯಾಂಟೀನ್‌ ಸೌಲಭ್ಯ

ಅರ್ಹತೆಗಳು/ವಿದ್ಯಾರ್ಹತೆ

1)18 ರಿಂದ 40 ವರ್ಷ ವಯಸ್ಸಿನ ಯುವಕ/ಯುವತಿಯರಿಗೆ ಆದ್ಯತೆ

2)ಸ್ಥಳಿಯರಿಗೆ ಮೊದಲ ಆದ್ಯತೆ

3)ಆಯಾ ವಿಭಾಗಕ್ಕೆ ಸಂಬಂಧಪಟ್ಟ ಕೆಲಸಕಾರ್ಯಗಳ ಕುರಿತು ಸಿಬ್ಬಂದಿಗಳಿಗೆ ವೇತನ ಸಹಿತವಾಗಿ ತರಬೇತಿಯನ್ನು ನೀಡಲಾಗುವುದು.

4)ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಸಿರತಕ್ಕದ್ದು.

5)ವಾಹನ ಚಾಲಕರು ಬಾರಿ ವಾಹನ/ಲಘು ವಾಹನದ ಲೈಸನ್ಸ್‌ ಹೊಂದಿರಬೇಕು.

ಇದನ್ನೂ ಓದಿ: ಅಡಿಕೆ ಬೆಳೆಯಲ್ಲಿ ಎಲೆಚುಕ್ಕೆ ರೋಗದ ನಿರ್ವಹಣೆ ಹಾಗೂ ರಸಗೊಬ್ಬರ ಬಳಕೆ ಮಾಹಿತಿ.

ಸಿರಿ ಸಂಸ್ಥೆಯಲ್ಲಿ ಕೆಲಸಕ್ಕೆ ಆಸಕ್ತರು ತಮ್ಮ ವಿವರಗಳನ್ನು ಬಿಳಿ ಹಾಳೆಯಲ್ಲಿ ಬರೆದ ಅರ್ಜಿ ನಮೂನೆಯೊಂದಿಗೆ ಸಿರಿ ಕೇಂದ್ರ ಕಛೇರಿಯನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕ ಮೊಬೈಲ್‌ ಸಂಖ್ಯೆಗಳು:

ಶ್ರೀ ರವಿ ದೇವಾಡಿಗ(ಮೇಲ್ವಿಚಾರಕರು,ಅಗರಬತ್ತಿ ಮತ್ತು ಆಹಾರೋತ್ಪನ್ನ ಘಟಕ)-9243061063

ಶ್ರೀ ಗಣೇಶ ಆಚಾರ್ಯ(ಮೇಲ್ವಿಚಾರಕರು,ರಾಸಾಯನಿಕ ಮತ್ತು ರೆಕ್ಸಿನ್‌ ಉತ್ಪನ್ನ ಘಟಕ)9480237075

ಶ್ರೀ ಜೀವನ್‌ ಕುಮಾರ್‌(ಗೋದಾಮು ಪ್ರಬಂಧಕರು)9448437771

ಶ್ರೀ ಅರುಣ್‌ ಕೋಟ್ಯಾನ್‌(ಜನರಲ್‌ ಮ್ಯಾನೇಜರ್, ಸಿದ್ಧ ಉಡುಪು ವಿಭಾಗ)9035755295

ಇತ್ತೀಚಿನ ಸುದ್ದಿಗಳು

Related Articles