ಗ್ರಾಮ ಪಂಚಾಯತಿ ಮಟ್ಟದಲ್ಲಿ ಜನರಿಗೆ ಸಿಗುತ್ತಿರುವ ಹಲವು ಇಲಾಖೆಗಳ ಸರ್ಕಾರಿ ಸೇವೆಗಳನ್ನು ಇನ್ನೂ ಮುಂದೆ ಮೊಬೈಲ್ ವಾಟ್ಸಪ್ ನಲ್ಲಿ ಮಾಹಿತಿ ಲಭ್ಯವಾಗುವಂತೆ ವಿನೂತನ ವ್ಯವಸ್ತೆಯನ್ನು ರಾಜ್ಯ ಸರಕಾರ ಜಾರಿಗೊಳಿಸಿದೆ.
ಗ್ರಾಮೀಣ ಸೇವೆಗೆ ಪಂಚಮಿತ್ರ:
ರಾಜ್ಯದಲ್ಲಿ 5991 ಗ್ರಾಮಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಯತ್ ರಾಜ್ ಇಲಾಖೆಯು ಈ ಹೊಸ ನಿರ್ಧಾರವನ್ನು ಕೈಗೊಂಡಿದೆ. ಇನ್ನು ಮುಂದೆ ಸಾರ್ವಜನಿಕರು ಪಂಚಾಯಿತಿಗೆ ಸಂಬಂಧಸಿದಂತೆ ಬೇರೆ ಬೇರೆ ಇಲಾಖೆಯ ಸೇವೆಗಳನ್ನು ವಾಟ್ಸಪ್ ಚಾಟ್ ಮುಖಾಂತರವೇ ಪಡೆಯಬಹುದಾಗಿದೆ.
ಗ್ರಾಮ ಮಟ್ಟದಲ್ಲಿ ವಿವಿಧ ಗ್ರಾಮ ಪಂಚಾಯಿತಿ ಯೋಜನೆಗಳನ್ನು ಪಡೆದುಕೊಳ್ಳಲು ಸಾರ್ವಜನಿಕರು ಅನಗತ್ಯವಾಗಿ ಅಲೆದಾಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರವು ಪಂಚಮಿತ್ರ ವ್ಯಾಟ್ಸಪ್ ಚಾಟ್ ಸೇವೆಯನ್ನು ಸಾರ್ವಜನಿಕರಿಗೆ ಅನುಕೂಲವಾಗಲೀ ಎಂದು ಬಿಡುಗಡೆ ಮಾಡಿದ್ದಾರೆ.
ಯಾವೆಲ್ಲ ಸೇವೆಗಳು ಸಿಗಲಿವೆ ಗೊತ್ತೇ?
ಇದರಲ್ಲಿ ಗ್ರಾಮ ಪಂಚಾಯಿತಿಗೆ ಸಂಬಂಧಸಿದಂತೆ 17 ಸೇವೆಗಳು ಮತ್ತು ಸರಕಾರದ ಇತರೆ ಇಲಾಖೆಯ ವಿವಿಧ ಸೌಲಭ್ಯಗಳ ಸೇವೆಗಳು ಪಂಚಮಿತ್ರ ಪೋರ್ಟಲ್ ಸಾರ್ವಜನಿಕರಿಗೆ ಲಭ್ಯವಿದೆ.
1)ಕಟ್ಟಡ ನಿರ್ಮಾಣ ಪರವಾನಿಗೆ
2)ಹೊಸ ನೀರು ಪೂರೈಕೆ ಸಂಪರ್ಕ
3)ಕುಡಿಯುವ ನೀರಿನ ಸಂಪರ್ಕ ಕಡಿತ
4)ಬೀದಿ ದೀಪದ ನಿರ್ವಹಣೆ
5)ಗ್ರಾಮ ನೈರ್ಮಲ್ಯ ನಿರ್ವಹಣೆ
6)ಉದ್ದಿಮೆ ಪರವಾನಿಗೆ
7)ನೀರಿನ ಸಂಪರ್ಕಕ್ಕೆ ರಸ್ತೆ ಅಗೆತದ ಪರವಾನಿಗೆ
8)ನಿರಾಕ್ಷೇಪಣಾ ಪತ್ರ
9)ಗ್ರಾಮ ಮಟ್ಟದ ಕೈಗಾರಿಕೆ ಸ್ಥಾಪನೆಗೆ ಪರವಾನಿಗೆ
10)ನರೇಗಾ ಯೋಜನೆಯಡಿ ಜಾಬ್ ಕಾರ್ಡ ಮಾಡಿಸಲು
11)ನಮೂನೆ 9/11ಎ, ಮತ್ತು 11ಬಿ ಪಡೆಯಲು
12)ಗ್ರಾಮ ಸಭೆಗಳ ಮಾಹಿತಿ ಪಡೆದುಕೊಳ್ಳಬಹುದು
ಇದನ್ನೂ ಓದಿ: ಎರೆಹುಳು ಗೊಬ್ಬರ ಘಟಕ ರಚನೆಗೆ ಗ್ರಾಮ ಪಂಚಾಯತನಿಂದ ರೂ.20000 ಸಾವಿರ ಸಹಾಯಧನ!
ವಾಟ್ಸಪ್ ಚಾಟ್ ನಲ್ಲಿ ಸೇವೆ ಪಡೆಯುದು ಹೇಗೆ?
Step-1:ರಾಜ್ಯ ಸರಕಾರದ ʼಪಂಚಮಿತ್ರ ವಾಟ್ಸಪ್ ಚಾಟ್ ವ್ಯವಸ್ಥೆಯನ್ನು ಬಳಸಿಕೊಂಡು ಎಲ್ಲಾ ಸೇವೆಗಳನ್ನು ಪಡೆಯಲು 8277506000 ಈ ನಂಬರಗೆ ಮೊದಲು ʼಹಾಯ್ʼ (Hi) ಎಂಬ ಸಂದೇಶ ಕಳುಹಿಸಿ.
Step-2:ನಂತರದಲ್ಲಿ ನಿಮಗೆ ಭಾಷೆಗಳ ಪಟ್ಟಿಯನ್ನು ತೊರಿಸಲಾಗುತ್ತದೆ. ಅದರಲ್ಲಿ ನಿಮ್ಮ ಇಷ್ಟವಾದ ಭಾಷೆಯನ್ನು ಆಯ್ಕೆ ಮಾಡಿಕೊಂಡು ಮುಂದೆ ಕೇಳಲಾಗುವ ನಿಮ್ಮ ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಳ್ಳಬೇಕು.
Step-3:ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿದ ಮೇಲೆ, ನಿಮಗೆ ಬೇಕಾಗಿರುವ ಸೇವೆ ಮಾಹಿತಿ ಅಥವಾ ಕುಂದು ಕೊರತೆಯನ್ನು ಆಯ್ಕೆ ಮಾಡಿಕೊಂಡು ಇದರ ಲಾಭ ಪಡೆಯಬಹುದು.
ವಾಟ್ಸಪ್ ಚಾಟ್ ನಂಬರ್-8277506000