Friday, September 20, 2024

Farmers suicides- ಕೃಷಿ ಸಾಲ ಭಾದೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡರೆ 5 ಲಕ್ಷದವರೆಗೆ ಸಹಾಯಧನ ಪಡೆದುಕೊಳ್ಳಬಹುದು!

ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿದ್ದರು, ಕೃಷಿ ಮಾಡುವ ರೈತರ ಕಷ್ಟಗಳೇನು ಕಡಿಮೆ ಇಲ್ಲ. ಕೃಷಿಕರಿಗೆ ಸರಿಯಾದ ಸಮಯಕ್ಕೆ ಮಳೆ ಬರಲ್ಲ, ಮಳೆ ಬಂದರು ಸರಿಯಾಗಿ ರೈತರಿಗೆ ಬಿತ್ತನೆ ಬೀಜಗಳು ಸಿಗುವುದಿಲ್ಲ, ಸರಿಯಾದ ರಸಗೊಬ್ಬರಗಳು ಸಿಗುವುದಿಲ್ಲ ಇನ್ನೂ ಹಲವಾರು ಸಮಸ್ಯೆಗಳಿಂದ ಭಾರತದಲ್ಲಿ ಕೃಷಿಗೆ ಜನರ ವಲವು ಕಡಿಮೆಯಾಗುತ್ತಾ ಹೋಗುತ್ತಿದೆ.

ಇನ್ನೂ ಇತ್ತೀಚಿನ ದಿನಗಳಲ್ಲಿ ಹವಮಾನ ಬದಲಾವಣೆಗಳಿಂದ ಸರಿಯಾದ ಸಮಯಕ್ಕೆ ಮಳೆ ಬರದೆ, ರೈತರಿಗೆ ಸರಿಯಾದ ಕಾಲಕ್ಕೆ ಬಿತ್ತನೆ ಮಾಡಲು ತುಂಬಾ ಸಮಸ್ಯೆ ಆಗುತ್ತಿದೆ. ಇದರಿಂದ ರೈತರು ಸಾಲ ಮಾಡಿ ಬೀಜ, ಗೊಬ್ಬರ ಖರೀದಿ ಮಾಡಿದ್ದರು ಅದರ ಲಾಭ ಬರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ರೈತರಿಗೆ ಅನುಕೂಲವಾಗಲು ಸಹಾಯಧನಗಳನ್ನು ಕೊಡಲಾಗುತ್ತದೆ.

ರೈತರು ಕೃಷಿ ಸಾಲ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡರೆ ಕೃಷಿ ಇಲಾಖೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ತೋಟಗಾರಿಕೆ ಇಲಾಖೆ ಈ ಮೂರರಲ್ಲಿ ಒಂದು ಇಲಾಖೆಗೆ ಅರ್ಜಿಸಲ್ಲಿಸಿ ರೈತರ ಆತ್ಮಹತ್ಯೆ ಸಹಾಯಧನವನ್ನು ಪಡೆದುಕೊಳ್ಳಬಹುದು. ಅದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ರೈತರು ಕೃಷಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಮರಣ ಹೊಂದಿದರೆ ವಿವಿಧ ಇಲಾಖೆಗಳಿಂದ 2ಲಕ್ಷದ ಪರಿಹಾರ ಧನ ಸಿಗುತ್ತದೆ.

ರೈತರು ಬ್ಯಾಂಕ್ ಗಳಲ್ಲಿ ಮತ್ತು ಕೃಷಿ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಕೃಷಿ ಸಾಲ ಮಾಡಿ ಬ್ಯಾಂಕ್‌ ನಿಂದ ಸಾಲ ಮರುಪಾವತಿಗೆ ಒತ್ತಡ ಹೇರಿ ಕೃಷಿಕ ಆತ್ಮಹತ್ಯೆ ಮಾಡಿಕೊಂಡರೆ ಅಂತಹ ರೈತರಿಗೆ 5 ಲಕ್ಷದವರೆಗೆ ಸಹಾಯಧನವನ್ನು ಪಡೆಯಲು ಮರಣ ಹೊಂದಿದ ಕುಟುಂಬದ ಪತ್ನಿ, ಮಗ, ಹಾಗೂ ಸಂಭಂದಿಕರಲ್ಲಿ ಯಾರಾದರು ಒಬ್ಬರು ಅರ್ಜಿಸಲ್ಲಿಸಬಹುದು.

ಈ ಮೇಲೆ ತಿಳಿಸಲಾದ ವಿಧಗಳಲ್ಲಿ ಯಾವುದಾದರು ಒಂದು ಇಲಾಖೆ ಕೃಷಿ ಇಲಾಖೆ(Agriculture dept), ತೋಟಗಾರಿಕೆ ಇಲಾಖೆ (Horticulture dept), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇಲಾಖೆ(APMC) ಈ ಇಲಾಖೆಗಳಲ್ಲಿ ಯಾವುದಾದರು ಒಂದು ಇಲಾಖೆಗೆ (Farmers suicides) ಕೃಷಿ ಸಾಲ ಭಾದೆಯಿಂದ ರೈತರು ಆತ್ಮಹತ್ಯೆ ಅರ್ಜಿ ಸಲ್ಲಿಸಿ 5 ಲಕ್ಷವರೆಗೆ ಪರಿಹಾರ ಧನವನ್ನು ರೈತ ಕುಟುಂಬದವರು ಪಡೆಯಬಹುದು.

ಇದನ್ನೂ ಓದಿ: ಮಣ್ಣು ಪರೀಕ್ಷೆ ಏಕೆ ಮಾಡಿಸಬೇಕು? ಹಾಗೂ ಎಲ್ಲಿ ಮಾಡಿಸಬೇಕು ಮತ್ತು ಅದರಿಂದ ಸಿಗುವ ಲಾಭಗಳು ನಿಮಗೆ ಗೊತ್ತೆ?

ಆತ್ಮಹತ್ಯೆ ಪ್ರಕರಣಕ್ಕೆ ಪರಿಹಾರ ಕೋರಿ ಸಲ್ಲಿಸಬೇಕಾದ ದಾಖಲೆಗಳು:

1)ಪೋಲಿಸ್ ಅಂತಿಮ ವರದಿ(police report).

2)ವೈದ್ಯಾಧಿಕಾರಿಗಳ Post mortem report.

3)FIR ವರದಿ.

4) ಬ್ಯಾಂಕ್ ಮತ್ತು ಕೃಷಿ ಪ್ರಾಥಮಿಕ ಸಹಕಾರಿ ಸಂಘಗಳಿಂದ ಸಾಲ ಮರುಪಾವತಿಗೆ ಜಾರಿ ಮಾಡಿದ ನೋಟಿಸ್ ಕಡ್ಡಾಯ ಇರಲೇ ಬೇಕು

4)ಮರಣ ಪ್ರಮಾಣ ಪತ್ರ(Death certificate)  

5)ಆಧಾರ್ ಪ್ರತಿ-ಮೃತರು ಹಾಗೂ ಅರ್ಜಿದಾರರು

6)ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್

7)ಪಡಿತರ ಚೀಟಿ ಪ್ರತಿ

8) APMC ರವರಿಂದ NOC

9)ಕಂದಾಯ ಇಲಾಖೆಯ ಮಹಜರು ವರದಿ

10)ವಂಶವೃಕ್ಷದ ದೃಢೀಕರಣ ಪ್ರತಿ

11)RTC ಅಥವಾ ಮೃತರು ಕೃಷಿ ಕಾರ್ಮಿಕರೆಂಬ  ಬಗ್ಗೆ ಕಂದಾಯ ಇಲಾಖೆ ದೃಢೀಕರಣ

12)ಅರ್ಜಿದಾರರ ಪೋಟೋ-1

13)ಮೃತರ ವಾರಿಸುದಾರರು, ವಯಸ್ಕರಾಗಿದ್ದಲ್ಲಿ ಅರ್ಜಿದಾರರಿಗೆ ಪರಿಹಾರ ನೀಡಲು ಅಭ್ಯಂತರವಿಲ್ಲವೆಂಬ ಬಗ್ಗೆ ನೋಟರಿ ಒಪ್ಪಿಗೆ ಪತ್ರ

14)ಕೃಷಿ ಇಲಾಖೆ ಮಹಜರು ವರದಿ

ಇತ್ತೀಚಿನ ಸುದ್ದಿಗಳು

Related Articles