Friday, September 20, 2024

Soil samples-ಮಣ್ಣು ಪರೀಕ್ಷೆ ಏಕೆ ಮಾಡಿಸಬೇಕು? ಹಾಗೂ ಎಲ್ಲಿ ಮಾಡಿಸಬೇಕು ಮತ್ತು ಅದರಿಂದ ಸಿಗುವ ಲಾಭಗಳು ನಿಮಗೆ ಗೊತ್ತೆ?

ಇತ್ತೀಚಿನ ದಿನಗಳಲ್ಲಿ ಮಣ್ಣಿನ ಆರೋಗ್ಯವು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಏಕೆಂದರೆ ನಮ್ಮ ಆರೋಗ್ಯ ಮಣ್ಣಿನ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ನಾವು ಸೇವಿಸುವ ಆಹಾರವು ಮಣ್ಣಿನಲ್ಲಿ ಬೆಳೆಯುದರಿಂದ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ.

ಮಣ್ಣು ಪರೀಕ್ಷಾ ಕೇಂದ್ರಗಳಲ್ಲಿ ಮಣ್ಣಿನ ರಸಸಾರ, ಲವಣಾಂಶ, ಸಾವಯವ ಇಂಗಾಲದ ಪ್ರಮಾಣ, ಲಭ್ಯವಿರುವ ಸಾರಜನಕ, ರಂಜಕ, ಪೋಟ್ಯಾಷ, ಸುಣ್ಣ, ಗಂಧಕ, ಮ್ಯಾಗ್ನೇಶಿಯಂ, ಮತ್ತು ಲಘು ಪೋಷಕಾಂಶಗಳಾದ ಕಬ್ಬಿಣ, ಸತು, ತಾಮ್ರ, ಮ್ಯಾಂಗನೀಸ್ ಮತ್ತು ಬೋರಾನ್ ಗಳನ್ನು ವಿಶ್ಲೇಷಿಸಲಾಗುತ್ತದೆ.

ಹೆಚ್ಚಿನ ಇಳುವರಿ ಪಡೆಯುವ ಉದ್ದೇಶದಿಂದ ಇಂದು ನಾವು ಮನಸೋಇಚ್ಚೆ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದೇವೆ. ಈ ರೀತಿ ಅನಿಯಂತ್ರಿತ ಮತ್ತು ಬೇಜವಾಬ್ದಾರಿಯಿಂದ ರಾಸಾಯನಿಕ ಗೊಬ್ಬರವನ್ನು ಬಳಸಿದ್ದರಿಂದ ನಾವು ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.

ಇದನ್ನೂ ಓದಿ:ಕ್ರಿಮಿನಾಶಕಗಳನ್ನು ಬಳಸುವಾಗ ರೈತರು ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳು

ರಾಸಾಯನಿಕ ಹೆಚ್ಚು ಬಳಕೆಯಿಂದ ಎದುರಿಸುತ್ತಿರುವ ಸಮಸ್ಯೆಗಳು:

1)ಮಣ್ಣಿನ ಅವನತಿ

2)ಅಂತರ್ಜಲ ಕಲುಷಿತಗೊಳ್ಳುವಿಕೆ

3)ಮಣ್ಣಿನ ಫಲವತ್ತತೆಯಲ್ಲಿ ಕುಂಠಿತ

4)ಮಣ್ಣಿನ ಪರಿಸರ ವ್ಯವಸ್ಥೆ ಮೇಲೆ ಪರಿಣಾಮ

5)ಪೋಷಕಾಂಶಗಳ ಲಭ್ಯತೆಯಲ್ಲಿ ಅಸಮತೋಲನ

6)ರೈತರಿಗೆ ಆರ್ಥಿಕ ಹೊರೆ

ಈ ಮೇಲಿನ ಎಲ್ಲಾ ಸಮಸ್ಯೆಗಳನ್ನು ಜಯಿಸಲು ಇರುವ ಪ್ರಮುಖ ಮಾರ್ಗ ಎಂದರೆ ಮಣ್ಣಿನ ಪರೀಕ್ಷೆಯ ವರದಿ ಆಧರಿಸಿ ರಾಸಾಯನಿಕ ಗೊಬ್ಬರ ಬಳಸುವುದು. ಮಣ್ಣಿನ ಪರೀಕ್ಷೆಯಿಂದ ನಮ್ಮಮುಂದಿನ ಬೆಳೆಗೆ ಯಾವ ಗೊಬ್ಬರವನ್ನು ಎಷ್ಟು ಪ್ರಮಾಣದಲ್ಲಿ ಒದಗಿಸಬೇಕೆಂದು ನಿರ್ಧರಿಸಬಹುದು. ಇದಲ್ಲದೆ ಸಮಸ್ಯಾತ್ಮಕ ಮಣ್ಣುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮಣ್ಣು ಪರೀಕ್ಷೆಯು ಅತ್ಯಂತಮಹತ್ವದ್ದಾಗಿದೆ.

ಮಣ್ಣು ಪರೀಕ್ಷೆಯ ಪ್ರಯೋಜನಗಳು:

1)ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ಪ್ರಮಾಣ ತಿಳಿಯಲು

2)ಯಾವುದಾದರು ಪೋಷಕಾಂಶಗಳ ಕೊರತೆ ಇದ್ದರೆ ಅದನ್ನು ಸರಿಪಡಿಸಲು

3)ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ಆಧಾರದ ಮೇಲೆ ರಸಗೊಬ್ಬರ ಕೊಡುವುದರಿಂದ ಅನವಶ್ಯಕ ಖರ್ಚುಗಳನ್ನು ಕಡಿಮೆ ಮಾಡಬಹುದು

4)ಸಮಸ್ಯಾತ್ಮಕ ಮಣ್ಣುಗಳನ್ನು ಗುರುತಿಸಬಹುದು

5)ಮಣ್ಣಿನ ಫಲವತ್ತತೆಯಲ್ಲಿ ವೃದ್ಧಿಯಾಗುವುದು

6)ಸಮತೋಲಿನ ಪೋಷಕಾಂಶಗಳ ಬಳಕೆ

7)ಕೃಷಿ ಇಲಾಖೆ ಮತ್ತು ತೋಟಗಾರಿಕೆಗಳ ಸವಲತ್ತು ಪಡೆಯಲು

ಇದನ್ನೂ ಓದಿ:ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ ಪರವಾನಿಗೆ ಪಡೆಯಬೇಕಾದರೆ ಈ ಕೋರ್ಸ ಮಾಡಿದರೆ ಸಾಕು!

ಮಣ್ಣು ಪರೀಕ್ಷೆಯನ್ನು ಎಲ್ಲಿ ಎಲ್ಲಾ ಮಾಡಿಸಬಹುದು:

1)ಕೃಷಿ ಇಲಾಖೆಗಳ ಮಣ್ಣು ಆರೋಗ್ಯ(ಪರೀಕ್ಷಾ) ಕೇಂದ್ರಗಳು

2)ಜಿಲ್ಲೆಗಳಲ್ಲಿ ಇರುವ ಕೃಷಿ ವಿಜ್ಞಾನ ಕೇಂದ್ರಗಳು

3)ಜಿಲ್ಲೆಗಳಲ್ಲಿ ಲಭ್ಯವಿರುವ ಖಾಸಗಿ ಮಣ್ಣು ಪರೀಕ್ಷಾ ಕೇಂದ್ರಗಳು

4)ಕೃಷಿ ಸಂಶೋಧನಾ ಕೇಂದ್ರಗಳ ಮಣ್ಣು ಪರೀಕ್ಷೆ ಲ್ಯಾಬ್

5)ಕೇಂದ್ರದ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರಗಳು

6)ರಾಜ್ಯಗಳಲ್ಲಿಇರುವ ಕೃಷಿ ಮತ್ತು ತೋಟಗಾರಿಕೆ ಕಾಲೇಜುಗಳು

ಇತ್ತೀಚಿನ ಸುದ್ದಿಗಳು

Related Articles