Saturday, October 5, 2024

Gruhalakshmi Amount May-2024:ಗೃಹಲಕ್ಷ್ಮಿ ಯೋಜನೆಯ ಹಣ ನಿಮಗೆ ಬಂತೆ ನೋಡುವುದು ಹೇಗೆ!

ಕರ್ನಾಟಕ ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಡಿ ಒಂದಾದ ಗೃಹಲಕ್ಷ್ಮಿ ಯೋಜನೆ ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಗೃಹಲಕ್ಷ್ಮಿ ಯೋಜನೆ ಹಣ ನಿಮಗೆ ಬಂತಾ ಎಂದು ನಿಮ್ಮ ಮೊಬೈಲ್‌ ನಲ್ಲೇ ನೋಡುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳುವ.

ಪಡಿತರ ಚೀಟಿ ಹೊಂದಿದ ಅರ್ಹ ಫಲಾನುಭವಿಗಳ ಖಾತೆಗೆ(Gruhalakshmi amount) ಗೃಹಲಕ್ಷ್ಮಿ ಯೋಜನೆಯ ಮೇ ತಿಂಗಳ ರೂ:2000 ಹಣವನ್ನು ಬಿಡುಗಡೆ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣವು ನಿಮಗೆ ಜಮೆ ಆಗಿದೆಯೋ ಇಲ್ಲವೋ ಎಂದು ತಿಳಿಯಲು ಯಾವುದೇ ಬ್ಯಾಂಕಿಗೆ ಭೇಟಿ ಮಾಡದೆ ನಿಮ್ಮ ಮನೆಯಲ್ಲೇ ಕುಳಿತು ಮೊಬೈಲ್‌ ನಲ್ಲಿ ಮಾಹಿತಿ ತಿಳಿದುಕೊಳ್ಳಬಹುದು.

ಅಥವಾ ನಿಮ್ಮ ಹತ್ತಿರದ ಬ್ಯಾಂಕ್‌ ಶಾಖೆಗಳಿಗೆ ನಿಮ್ಮ ಬ್ಯಾಂಕ್‌ ಪಾಸ್‌ ಬುಕ್‌ ತೆಗೆದುಕೊಂಡು ದಿನಾಂಕ 25ರ ಒಳಗಾಗಿ ಎಂಟ್ರಿ ಮಾಡಿಸಿದರೆ ಅರ್ಹ ಫಲಾನುಭವಿಗಳ ಖಾತೆಗೆ (Gruhalakshmi amount) ಗೃಹಲಕ್ಷ್ಮಿ ಯೋಜನೆಯ ಮೇ ತಿಂಗಳ ಹಣ ರೂ:2000 ನಿಮ್ಮ ಖಾತೆಗೆ ಜಮೆ ಆಗಿರುವುದನ್ನು ಖಚಿತ ಪಡಿಸಿಕೊಳ್ಳಬಹುದು.

ಇದನ್ನೂ ಓದಿ:Govt schemes benifits-ಸರ್ಕಾರದ ಯಾವುದೇ ಯೋಜನೆಯ ಸವಲತ್ತು ಪಡೆಯಲು ಈ ಕೆಲಸ ಕಡ್ಡಾಯ!

Gruhalakshmi May amount status-ಗೃಹಲಕ್ಷ್ಮಿ ಯೋಜನೆಯ ಮೇ ತಿಂಗಳ ಹಣ ಬಿಡುಗಡೆ ನಿಮಗೆ ಬಂತಾ ಚೆಕ್‌ ಮಾಡಿ:

Step-1:ಈ ಲಿಂಕ್‌ ಮೇಲೆ Gruhalakshmi amount status Check ಕಿಕ್ಲ್‌ ಮಾಡಿ ಗೂಗಲ್‌ ಪ್ಲೇ ಸ್ಟೋರ್‌ ಪ್ರವೇಶ ಮಾಡಿ ಅಧಿಕೃತ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ವಿವರ ತಿಳಿಯಲು ಡಿ ಬಿ ಟಿ ಕರ್ನಾಟಕ(DBT Karnataka mobile app)ಮೊಬೈಲ್‌ ಅಪ್ಲೀಕೇಶನ್‌ ಅನ್ನು ಡೌನ್ಲೋಡ್‌ ಮಾಡಬೇಕು.

Step-2:ಗೂಗಲ್‌ ಪ್ಲೇ ಸ್ಟೋರ್‌ ನಲ್ಲಿ ಡಿ ಬಿ ಟಿ ಕರ್ನಾಟಕ(DBT Karnataka mobile app)ಮೊಬೈಲ್‌ ಅಪ್ಲೀಕೇಶನ್‌ ಅನ್ನು ಡೌನ್ಲೋಡ್‌ ಮಾಡಿಕೊಂಡ ನಂತರ ನಿಮ್ಮ ಮೊಬೈಲ್‌ ನಲ್ಲಿ ಈ ಅಪ್ಲಿಕೇಶನ್‌ ತೆರೆದು ಮೊದಲಿಗೆ ಅರ್ಜಿದಾರರ ಆಧಾರ್‌ ಕಾರ್ಡ ಸಂಖ್ಯೆಯನ್ನು ಹಾಕಿ ಬಳಕೆದಾರರ ನೊಂದಣಿಯನ್ನು ಮಾಡಿಕೊಳ್ಳಬೇಕು.
ಇದಕ್ಕಾಗಿ  ಆಧಾರ್‌ ಕಾರ್ಡ ನಂಬರ್‌ ಹಾಕಿ ನಂತರ ಆಧಾರ್‌ ನಲ್ಲಿರುವ ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿ(OTP) ನ್ನು ನಮೂದಿಸಿ ತದನಂತರ ಈ ಅಪ್ಲಿಕೇಶನ್‌ ಗೆ ನಾಲ್ಕು ಅಂಕಿಯ ಪಾಸ್ವರ್ಡ(Password) ಅನ್ನು ರಚನೆ ಮಾಡಿಕೊಳ್ಳಬೇಕು.

ಇದನ್ನೂ ಓದಿ: Bara Parihara-ಯಾರಿಗೆಲ್ಲ ಸಿಗಲಿದೆ 2ನೇ ಕಂತಿನ ಬರ ಪರಿಹಾರದ ಹಣ!

Step-3: ಈ ಅಪ್ಲಿಕೇಶನ್ ಅನ್ನು ತೆರೆಯಲು ರಚನೆ ಮಾಡಿಕೊಂಡಿರುವ ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ಹಾಕಿ ಲಾಗಿನ್(Login) ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿದಾಗ ಈ ಅಪ್ಲಿಕೇಶನ್ ನ ಮುಖಪುಟದಲ್ಲಿ ನಾಲ್ಕು ಆಯ್ಕೆಗಳು ತೋರಿಸುತ್ತವೆ ಇದರಲ್ಲಿ ಮೊದಲಿಗೆ ಕಾಣುವ ಪಾವತಿ ಸ್ಥಿತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ(Gruhalakshmi) “ಗೃಹಲಕ್ಷ್ಮಿ” ಎಂದು ತೋರಿಸುತ್ತದೆ ಈ ಬಟನ್ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ಈ ಯೋಜನೆಯಡಿ ಪ್ರತಿ ತಿಂಗಳು ಯಾವ ಯಾವ ದಿನಾಂಕದಂದು ನಿಮ್ಮ ಖಾತೆಗೆ ನೇರ ನಗದು ವರ್ಗಾವಣೆಯ ಮೂಲಕ ಹಣ ಜಮಾ ಅಗಿದೆ ಎನ್ನುವ ಮಾಹಿತಿ ಜೊತೆಗೆ ಹಣ ಜಮಾ ಅದ ಬ್ಯಾಂಕ್ ಹೆಸರು, ಯು.ಟಿ.ಆರ್(UTR) ನಂಬರ್ ಮತ್ತು ಫಲಾನುಭವಿ ಖಾತೆಯ ಹೆಸರು ತೋರಿಸುತ್ತದೆ.

ಇತ್ತೀಚಿನ ಸುದ್ದಿಗಳು

Related Articles