Friday, September 20, 2024

Chemicals using protacation-ಕ್ರಿಮಿನಾಶಕಗಳನ್ನು ಬಳಸುವಾಗ ರೈತರು ತೆಗೆದುಕೊಳ್ಳಬೇಕಾದ ಮುನ್ನಚ್ಚೆರಿಕೆ ಕ್ರಮಗಳ ಬಗ್ಗೆ ನಿಮಗೆ ಗೊತ್ತೆ?

ಮನುಷ್ಯ ಹಾಗೂ ಸಸ್ಯಗಳಿಗೆ ಹಾನಿಕಾರಗಳಾಗಿರುವ ಶಿಲೀಂಧ್ರಗಳು, ಬ್ಯಾಕ್ಟೀರಿಯಾ, ಕ್ರಿಮಿಗಳನ್ನು, ಕೀಟಗಳು ಹಾಗೂ ಕಳೆಗಳನ್ನು ನಾಶಪಡಿಸಲು  ಬಳಸುವ ಶಿಲೀಂಧ್ರನಾಶಕಗಳು, ಕೀಟನಾಶಕಗಳು ಮತ್ತು ಕಳೆನಾಶಕಗಳು ಕ್ರಿಮಿನಾಶಕಗಳಾಗಿವೆ. ಅವುಗಳನ್ನು ಬಳಸುವಾಗ ರೈತರು ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಕ್ರಿಮಿನಾಶಕಗಳು ಸಸ್ಯ ಸಂರಕ್ಷಣೆಯ ದೃಷ್ಠಿಯಿಂದ ಅತ್ಯಂತ ಉಪಯುಕ್ತವೆನಿಸಿದರೂ ಸಹ, ವಿಷಪೂರಿತವಾಗಿರುವುದರಿಂದ ಅವುಗಳ ಅವೈಜ್ಞಾನಿಕ ಬಳಕೆಯಿಂದ ಮನುಷ್ಯ ಹಾಗೂ ಸಾಕು ಪ್ರಾಣಿಗಳ ಆರೋಗ್ಯದ ಮೇಲೆ ಗಂಭೀರ ಪ್ರಮಾಣದ ದುಷ್ಪರಿಣಾಮ ಬೀರುವ ಸಂಭವವಿರುತ್ತದೆ. ಆದುದರಿಂದ ಬಳಸುವಾಗ ಅನುಸರಿಸ ಬೇಕಾದ ಕ್ರಮಗಳನ್ನು ತಿಳಿಸಲಾಗಿದೆ.

ನಮ್ಮ ದೇಶದಲ್ಲಿ ಕ್ರಿಮಿನಾಶಕಗಳನ್ನು ಬಳಸುವಾಗ ಸರಿಯಾದ ಕ್ರಮಗಳನ್ನು ಅನುಸರಿಸದೆ ಎಷ್ಟೊ ಜನ ರೈತರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಅದಲ್ಲದೇ ಎಷ್ಟೊ ಜನ ರೈತರು ಸಾಲ ಭಾದೆಗೆ ಕ್ರಿಮಿನಾಶಕಳನ್ನು ಸೇವಿಸಿ ಮರಣ ಹೊಂದಿದ್ದಾರೆ. ಕ್ರಿಮಿನಾಶಕಗಳು ತುಂಬಾ ಅಪಾಯಕಾರಿ ಯಾಗಿರುತ್ತವೆ.

ಇದನ್ನೂ ಓದಿ: Bara Parihara-ಯಾರಿಗೆಲ್ಲ ಸಿಗಲಿದೆ 2ನೇ ಕಂತಿನ ಬರ ಪರಿಹಾರದ ಹಣ!

ಕ್ರಿಮಿನಾಶಕಳನ್ನು ಬಳಸುವಾಗ ರೈತರು ತೆಗೆದುಕೊಳ್ಳಬೇಕಾದ ಕ್ರಮಗಳು:

1)ಕ್ರಿಮಿನಾಶಕಗಳು ಚಿಕ್ಕ ಮಕ್ಕಳು ಮತ್ತು ಪ್ರಾಣಿಗಳಿಗೆ ಸಿಗದ ಹಾಗೆ ಮೇಲೆ ಎತ್ತಿ ಇಡಬೇಕು.

2)ಕ್ರಿಮಿನಾಶಕಗಳ ರುಚಿ, ವಾಸನೆ ನೋಡಲು ಪ್ರಯತ್ನಿಸಬಾರದು.

3)ಕ್ರಿಮಿನಾಶಕಗಳ ಬಳಕೆ ಅವಧಿಗಳನ್ನು ಗಮನಿಸಿ ಬಳಕೆ ಮಾಡಬೇಕು.

4)ಕ್ರಿಮಿನಾಶಕಗಳ ಚೀಲಗಳನ್ನು ಬಾಯಿಯಿಂದ ಹರಿದು ತೆಗೆಯದೆ ಚಾಕು ಅಥವಾ ಕತ್ತರಿ ಉಪಯೋಗಿಸಬೇಕು.

5)ಆರೋಗ್ಯವಂತ ಜನರು ಮಾತ್ರ ಕ್ರಿಮಿನಾಶಕಗಳನ್ನು ಸಿಂಪರಣೆ ಮಾಡಬೇಕು.

6)ಕ್ರಿಮಿನಾಶಕಗಳನ್ನು ಸಿಂಪರಣೆ ಮಾಡುವಾಗ ತಲೆಗೆ ಟೋಪಿ, ಉದ್ದ ತೋಳಿನ ಅಂಗಿ, ಪ್ಯಾಂಟ್‌, ಕೈ ಚೀಲ, ಚಸ್ಮಾ, ಬೂಟ್‌ ಹಾಗೂ ಮುಖವಾಡ ಧರಿಸಬೇಕು.

7)ಸಿಂಪರಣೆ ವೇಳೆ ಮಧ್ಯದಲ್ಲಿ ಯಾವುದೇ ಆಹಾರ ಸೇವನೆ ಮಾಡಬಾರದು.

8)ಸಿಂಪರಣೆ ವೇಳೆ ಗುಟಕಾ/ಎಲೆ ಅಡಿಕೆ ತಿನ್ನುವುದು, ಬೀಡಿ/ ಸಿಗರೇಟ್‌ ಎಳೆಯುದು, ಸಾರಾಯಿ ಕುಡಿಯುದು ಮಾಡಬಾರದು.

9)ಶಿಫಾರಸ್ಸು ಮಾಡಿದ ಪ್ರಮಾಣ ಮತ್ತು ಸಮಯವನ್ನು ತಪ್ಪದೇ ಪಾಲಿಸಬೇಕು.

10)ಗಾಳಿಯ ವಿರುದ್ಧವಾಗಿ ಸಿಂಪರಣೆ ಮಾಡಬಾರದು.

11)ಕ್ರಿಮಿನಾಶಕಗಳನ್ನು ಬಳಸುವಾಗ ಆಯಾ ಬೆಳೆಗೆ ಸೂಚಿಸಿದ ಕ್ರಿಮಿನಾಶಕಗಳನ್ನೆ ಬಳಸಬೇಕು.

12)ಸ್ಪ್ರೇ ಪಂಪುಗಳ ತುದಿಯಲ್ಲಿ ಕಸ ಸೇರಿಕೊಂಡಿದ್ದರೆ ಬಾಯಿಯಿಂದ ಊದುವುದು ಮಾಡಬಾರದು.

13)ಒಬ್ಬ ವ್ಯಕ್ತಿಯು ಎಂಟು ಗಂಟೆಗಳ ಹೆಚ್ಚು ಕಾಲ ನಿರಂತರವಾಗಿ ಸಿಂಪರಣೆ ಮಾಡಬಾರದು.

ಇದನ್ನೂ ಓದಿ:Govt schemes benifits-ಸರ್ಕಾರದ ಯಾವುದೇ ಯೋಜನೆಯ ಸವಲತ್ತು ಪಡೆಯಲು ಈ ಕೆಲಸ ಕಡ್ಡಾಯ!

ಕ್ರಿಮಿನಾಶಕಗಳನ್ನು ಬಳಸಿದ ನಂತರ ವಹಿಸುವ ಕ್ರಮಗಳು:

1)ಉಪಯೋಗಿಸಿದ ನಂತರ ಉಳಿದ ಕ್ರಿಮಿನಾಶಕಗಲನ್ನು ಹೊಲ ತೋಟಗಳಲ್ಲಿ ಬಿಡದೆ ತೆಗೆದುಕೊಂಡು ಮನೆಗಳಿಗೆ ತೆಗೆದುಕೊಂಡು ಹೋಗಬೇಕು.

2)ಸಿಂಪರಣೆಯ ನಂತರ ಎಲ್ಲಾ ಸಾಮಗ್ರಿಗಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು.

3)ಕ್ರಿಮಿನಾಶಕಗಳನ್ನು ಬಳಕೆ ಮಾಡಿ ಮುಗಿದ ಮೇಲೆ ಸಾಬೂನಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.

4)ಉಪಕರಣಗಳನ್ನು ಆಗಾಗ ತೊಳೆದು ಇಡಬೇಕು.

5)ಖಾಲಿಯಾದ ಕ್ರಿಮಿನಾಶಕಗಳ ಡಬ್ಬುಗಳು, ಬಾಟಲಿಗಳನ್ನು ಇತರೆ ಉಪಯೋಗಕ್ಕೆ ಬಳಸದೆ ಭೂಮಿಯಲ್ಲಿ ಆಳವಾಗಿ ಮುಚ್ಚಬೇಕು.

6)ಸಿಂಪರಣೆ ಉಪಕರಣಗಳನ್ನು ಕೆರೆ, ಬಾವಿ, ನದಿ, ಅಥವಾ ಕುಡಿಯುವ ನೀರಿನ ಹತ್ತಿರ ತೊಳೆಯಬಾರದು.

ಇತ್ತೀಚಿನ ಸುದ್ದಿಗಳು

Related Articles