Saturday, October 5, 2024

Krishi sanjeevini-ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ(ಕೃಷಿ ಸಂಜೀವಿನಿ) ಈ ವಾಹನದ ಬಗ್ಗೆ ನಿಮಗೆ ಮಾಹಿತಿ ಗೊತ್ತೆ?

ಕರ್ನಾಟಕ ರಾಜ್ಯ ಸರ್ಕಾರ ಮನುಷ್ಯನ ಆರೋಗ್ಯ ಕಾಳಜಿಗೆ 108 ಆಂಬುಲೆನ್ಸ ನ್ನು ಹೇಗೆ ಬಿಡುಗಡೆ ಮಾಡಿದ್ದಾರೋ ಹಾಗೇ ರೈತರ ಬೆಳೆಗಳ ಸಂರಕ್ಷಣೆ ಮಾಡಿಕೊಳ್ಳಲು ಅದರ ಮಾಹಿತಿ ತಿಳಿಯಲು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ(ಕೃಷಿ ಸಂಜೀವಿನಿ).

ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಇಲಾಖೆ ಯೋಜನೆಗಳಡಿ ರೈತರಿಗೆ ಅವರ ಜಮೀನಿನಲ್ಲಿ ಇದ್ದುಕೊಂಡು ಕೃಷಿ ಮಾಹಿತಿ ಪಡೆದುಕೊಳ್ಳಲು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ(ಕೃಷಿ ಸಂಜೀವಿನಿ) ಎಂಬ ವಾಹನವನ್ನು ಬಿಡುಗಡೆ ಮಾಡಿದ್ದಾರೆ. ಈ ವಾಹನದ ಪ್ರಯೋಜನೆಗಳು ಏನು ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ.

ಸುಧಾರಿತ ಕೃಷಿ ಉತ್ಪಾದನಾ ತಾಂತ್ರಿಕತೆ, ಗುಣಮಟ್ಟದ ಕೃಷಿ ಪರಿಕರಗಳ ಪೂರೈಕೆ ಮತ್ತು ಶಿಫಾರಸ್ಸು ಮಾಡಲಾದ ರಸಗೊಬ್ಬರಗಳ ಸಮರ್ಪಕ ಬಳಕೆ, ರೋಗ-ಕೀಟಗಳ ಹತೋಟಿ ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿ, ಸೂಕ್ತ ಬೆಳೆ ಬೆಳೆಯಲು ಪೋತ್ಸಾಹಿಸುವುದು ಇಲಾಖೆಯ ಆದ್ಯ ಕರ್ತವ್ಯವಾಗಿರುತ್ತದೆ.

ಇದನ್ನೂ ಓದಿ:Govt schemes benifits-ಸರ್ಕಾರದ ಯಾವುದೇ ಯೋಜನೆಯ ಸವಲತ್ತು ಪಡೆಯಲು ಈ ಕೆಲಸ ಕಡ್ಡಾಯ!

ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ(ಕೃಷಿ ಸಂಜೀವಿನಿ) ವಾಹನದ ಜೊತೆಗೆ ಕೃಷಿ ತಾಂತ್ರಿಕ ಸಿಬ್ಬಂದಿ ನೇರವಾಗಿ ರೈತರ ಜಮೀನಿಗೆ ಭೇಟಿಮಾಡಿ ಕೀಟ/ರೋಗ/ಕಳೆ ಪೋಷಕಾಂಶಗಳ ಕೊರತೆ ಮತ್ತು ಮಣ್ಣು ಆರೋಗ್ಯದ ಕುರಿತು ರೈತರ ಜಮೀನಿನಲ್ಲೇ ಹತೋಟಿ ಕ್ರಮಗಳ ಕುರಿತು ಮಾರ್ಗೋಪಾಯಗಳನ್ನು ಒದಗಿಸಲು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ(ಕೃಷಿ ಸಂಜೀವಿನಿ) ಯೋಜನೆಯ ವಾಹನವನ್ನು ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.

ರೈತರು ಸಾಮಾನ್ಯವಾಗಿ ಒಂದೆಡೆ ಸೇರುವ ಜಾಗಗಳಲ್ಲಿ ರೈತರಿಗೆ ಉಪಯುಕ್ತವಾಗುವ ವಿಷಯಗಳ ಬಗ್ಗೆ ಮಾಹಿತಿಯನ್ನು , ಛಾಯಾಚಿತ್ರ ಹಾಗೂ ವೀಡಿಯೋಗಳ ಮೂಲಕ ತೋರಿಸುವ ವ್ಯವಸ್ಥೆಯನ್ನು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ(ಕೃಷಿ ಸಂಜೀವಿನಿ) ವಾಹನದಲ್ಲಿ ಕಲ್ಪಿಸಲಾಗಿದೆ.

ರೈತರ ಜಮೀನಿನಲ್ಲಿ ಮಣ್ಣಿನ ರಸಸಾರ, ಲವಣಾವಂಶ, ತೇವಾಂಶ ಹಾಗೂ ಉಷ್ಣಾಂಶ, ಮಣ್ಣು ಪರೀಕ್ಷೆ ಮಾಡುವ ಸಾಧನಗಳನ್ನು ಈ ಕೃಷಿ ಸಂಜೀವಿನಿ ವಾಹನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ರೈತರ ಜಮೀನಿಗೆ ಭೇಟಿ ಮಾಡಿದ ಸಂದರ್ಭ ರೈತರು ಈ ಒಂದು ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Bara Parihara-ಯಾರಿಗೆಲ್ಲ ಸಿಗಲಿದೆ 2ನೇ ಕಂತಿನ ಬರ ಪರಿಹಾರದ ಹಣ!

ರೈತರ ತಾಕು/ಜಮೀನಿಗೆ ನಿಯಮಿತವಾಗಿ ಭೇಟಿ ನೀಡಿ ಸರ್ವೇಕ್ಷಣೆ ಕೈಗೊಂಡು ಕೀಟ/ರೋಗಗಳ ಭಾದೆ ಕಂಡುಬಂದಲ್ಲಿ ಸಮರ್ಪಕ ನಿರ್ವಹಣೆ ಹಾಗೂ ರೈತರಿಗೆ ಸೂಕ್ತ ಸಲಹೆ ನೀಡಲು ಇ-ತಂತ್ರಾಂಶ(ಇ ಸ್ಯಾಪ್)‌ ಬಳಸಿ ರೈತರಿಗೆ ಸ್ಥಳದಲ್ಲಿ ಮಾಹಿತಿ ನೀಡುವ ವ್ಯವಸ್ಥೆ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ(ಕೃಷಿ ಸಂಜೀವಿನಿ) ಹೊಂದಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ -18004253553, 155313 ಕರೆ ಮಾಡಿ.

ಇತ್ತೀಚಿನ ಸುದ್ದಿಗಳು

Related Articles