Friday, September 20, 2024

Govt schemes benifits-ಸರ್ಕಾರದ ಯಾವುದೇ ಯೋಜನೆಯ ಸವಲತ್ತು ಪಡೆಯಲು ಈ ಕೆಲಸ ಕಡ್ಡಾಯ!

ಸರ್ಕಾರದ ಯಾವುದೇ ಯೋಜನೆಯ ಸವಲತ್ತು ಪಡೆಯಲು RTC/ಪಹಣಿ/ಉತಾರ್ ಗೆ ರೈತರು ಆಧಾರ್ ಕಾರ್ಡ್ ನ್ನು ಜೋಡಣೆ ಮಾಡಬೇಕು? ಮತ್ತು ಎಲ್ಲಿ ಜೋಡಣೆ ಮಾಡಿಸಬೇಕು ಹಾಗೂ ಈಗಾಗಲೇ RTC/ಪಹಣಿ/ಉತಾರ್ ಗೆ ಆಧಾರ್ ಜೋಡಣೆ ಆಗಿದೆಯಾ ಇಲ್ಲವೋ ಎಂದು ತಿಳಿದುಕೊಳ್ಳುವುದು ಹೇಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

RTC ಗೆ ಆಧಾರ್ ಜೋಡಣೆ ಕೆಲಸ ಸುಮಾರು 2-3 ವರ್ಷಗಳಿಂದ ನಡಿತಾ ಬರ್ತಾ ಇದೆ. ಇದನ್ನು ಈ ಭಾರಿ ಕಂದಾಯ ಇಲಾಖೆಯ ಸಹಯೋಗದಲ್ಲಿ ಕಡ್ಡಾಯವಾಗಿ ರೈತರ ಜಮೀನಿನ ಎಲ್ಲಾ ಸರ್ವೇ ನಂಬರ್ ಗಳಿಗೆ ಆಧಾರ್ ಜೋಡಣೆ ಮಾಡಲು ತಿಳಿಸಿದೆ.

ರೈತರು ತಮ್ಮ ಎಲ್ಲಾ ಸರ್ವೇ ನಂಬರ್ ಗಳ RTC/ಪಹಣಿ/ಉತಾರ್ ವನ್ನು ತೆಗೆದುಕೊಂಡು ಹತ್ತಿರದ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳಿಗೆ ಭೇಟಿ ಮಾಡಿದರೆ, ಗ್ರಾಮ ಲೆಕ್ಕಾಧಿಕಾರಿಗಳು, ಕೃಷಿ ಅಧಿಕಾರಿಗಳು, ತೋಟಗಾರಿಕೆ ಅಧಿಕಾರಿಗಳು ನಿಮ್ಮ RTC ಗೆ ಆಧಾರ್ ಜೋಡಣೆ ಮಾಡಿಕೊಡುತ್ತಾರೆ.

ಇದನ್ನೂ ಓದಿ: Bara Parihara-ಯಾರಿಗೆಲ್ಲ ಸಿಗಲಿದೆ 2ನೇ ಕಂತಿನ ಬರ ಪರಿಹಾರದ ಹಣ!

RTC ಗೆ ಆಧಾರ್ ಜೋಡಣೆಗೆ ಬೇಕಾಗುವ ದಾಖಲೆಗಳು

1)RTC ಅಥವಾ ಎಲ್ಲಾ ಸರ್ವೇ ನಂಬರ್ ಖಾತೆ ಪ್ರತಿ
2)ಆಧಾರ್‌ ಕಾರ್ಡ ಜೆರಾಕ್ಸ ಪ್ರತಿ
3)ಬ್ಯಾಂಕ ಪಾಸ ಬುಕ್‌ ಜೆರಾಕ್ಸ ಪ್ರತಿ
4)ಪಾಸ್ ಪೋರ್ಟ ಸೈಜ್‌ 1 ಪೋಟೋ

ಅನೇಕ ರೈತರಲ್ಲಿ ಈ ಪ್ರಶ್ನೆ ಸಹಜವಾಗಿ ಬಂದಿರುತ್ತದೆ. ನಾವು ಏಕೆ ನಮ್ಮ RTC/ಪಹಣಿ/ಉತಾರ್ ಗೆ ಆಧಾರ್ ಜೋಡಣೆ ಏಕೆ ಮಾಡಿಸಬೇಕು ಎಂದು ಅದರ ಮಾಹಿತಿ ಇದರ ಕೆಳಗಿನ ಲೇಖನದಲ್ಲಿದೆ.

1)ಜಮೀನಿನ ಮಾಲೀಕರ ನೈಜನೆಯನ್ನು ನಿಖರವಾಗಿ ತಿಳಿದುಕೊಳ್ಳಲು.
2)ಕಂದಾಯ ಇಲಾಖೆಗೆ ರೈತರ ಜಮೀನಿನ ದಾಖಲೆಗಳನ್ನು digital ಮಾದರಿಯಲ್ಲಿ ಸಂಗ್ರಹಣೆ ಮಾಡಿಡಲು ಸಹಕಾರಿಯಾಗಿದೆ.
3)ಕೃಷಿಕರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಬೆಳೆ ಪರಿಹಾರ ಸೌಲಭ್ಯ ಸಿಗಲು ಸಹಾಯವಾಗುತ್ತದೆ.
4)ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳ ಸಹಾಯಧನದಡಿಯಲ್ಲಿ ಸೌಲಭ್ಯ ಸಿಗಲು ಸಹಾಯವಾಗುತ್ತದೆ.
5)ಕೃಷಿಕರಿಗೆ ಕೃಷಿ ಸಹಕಾರಿ ಸಂಘಗಳಿಂದ ಕೃಷಿ ಸಾಲ ಪಡೆಯಲು ಸಹಾಯವಾಗುತ್ತದೆ.
6)ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಸಹಾಯವಾಗುತ್ತದೆ.

ಇದನ್ನೂ ಓದಿ: DBT Payment status- ಆಧಾರ್ ಕಾರ್ಡ ನಂಬರ್ ಹಾಕಿ ಯಾವ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!

ಕೃಷಿ ಇಲಾಖೆಯ ಸೌಲಭ್ಯಗಳು

A)ಬಿತ್ತನೆ ಬೀಜಗಳನ್ನು ಪಡೆಯಲು
B)ಕೃಷಿ ಪರಿಕರಗಳನ್ನು ಪಡೆಯಲು
C)ಕೃಷಿ ಯಂತ್ರೋಪಕರಣಗಳನ್ನು ಪಡೆಯಲು
D)ಕಿಸಾನ್‌ ಸಮ್ಮಾನ್‌ ಯೋಜನೆಯ ಹಣ ಪಡೆಯಲು
E)ತುಂತುರು ನೀರಾವರಿ ಹಾಗೂ ಹನಿ ನೀರಾವರಿ ಘಟಕದ ಪೈಪಗಳನ್ನು ಪಡೆಯಲು

ತೋಟಗಾರಿಕೆ ಇಲಾಖೆಯ ಸೌಲಭ್ಯಗಳು

A)ತೋಟಗಾರಿಕೆ ಸಸಿಗಳನ್ನು ಪಡೆಯಲು
B)ತೋಟಗಾರಿಕೆ ಪರಿಕರಗಳನ್ನು ಪಡೆಯಲು
C)ತೋಟಗಾರಿಕೆ ಯಂತ್ರೋಪಕರಣಗಳನ್ನು ಪಡೆಯಲು
D)ಹನಿ ನೀರಾವರಿ ಸಹಾಯಧನ ಪಡೆಯಲು

ಇತ್ತೀಚಿನ ಸುದ್ದಿಗಳು

Related Articles