Friday, September 20, 2024

Free Competitive Exam Coaching: ಉಚಿತ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ:ಮಾನದಂಡಗಳೇನು? ಆಯ್ಕೆ ವಿಧಾನ? ತರಬೇತಿ ಅವಧಿ? ಇತರೆ ಮಾಹಿತಿ

ಮಾನದಂಡಗಳೇನು? ಆಯ್ಕೆ ವಿಧಾನ? ತರಬೇತಿ ಅವಧಿ? ಇತರೆ ಮಾಹಿತಿ
ಆತ್ಮೀಯ ವಿದ್ಯಾರ್ಥಿ ಮಿತ್ರರೇ ನೀವು ಪದವಿ ಮುಗಿಸಿ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವ ಆಸಕ್ತ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತ ತರಬೇತಿಯನ್ನು ಪ್ರತಿ ವರ್ಷ ನಡೆಸಲಾಗುವುದು.

ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಇರುವ ಶಿಷ್ಯವೇತನ ಮತ್ತು ಪ್ರಯಾಣ ಭತ್ಯೆ, ತರಬೇತಿ ಅವಧಿ ಹಾಗೂ ಆಯ್ಕೆಯ ಮಾನದಂಡಗಳೇನು? ಅಭ್ಯರ್ಥಿಗಳ ಆಯ್ಕೆ ಹೇಗೆ? ಹಾಗೂ ಪರೀಕ್ಷೆಗೆ ತರಬೇತಿ ಅವಧಿ ಎಷ್ಟು? ಸ್ಥಾನ ಹಂಚಿಕೆ ಪ್ರಮಾಣವೆಷ್ಟು? ಇವೆಲ್ಲಾ ಮಾಹಿತಿಗಳ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ, ಈ ಮಾಹಿತಿಯನ್ನು ಪ್ರತಿಭಾವಂತ ನಿಮ್ಮ ಗ್ರಾಮದ ವಿದ್ಯಾರ್ಥಿಗಳಿಗೆ ಹಂಚಿಕೊಳ್ಳುವ ಮೂಲಕ ಸಹಕರಿಸಿ.

ಇದನ್ನೂ ಓದಿ:Free Basic Computer Training-2024: ಉಚಿತ ಪೋಟೋಶಾಪ್,ಪೇಜ್ ಮೇಕರ್‍ ಮತ್ತು ಬೇಸಿಕ್ ಕಂಪ್ಯೂಟರ್‍ ತರಬೇತಿ ಅರ್ಜಿ ಆಹ್ವಾನ:

ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕೇಂದ್ರ ಲೋಕ ಸೇವಾ ಆಯೋಗ (UPSC) / ಕರ್ನಾಟಕ ಲೋಕ ಸೇವಾ ಆಯೋಗ ( KPSC) / ಬ್ಯಾಂಕಿಂಗ್ (Banking) / ಗ್ರೂಪ್ ‘ಸಿ’ ( Group C) ಮತ್ತು ಎಸ್.ಎಸ್.ಸಿ (SSC) ಹುದ್ದೆಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 3 ತಿಂಗಳಿಂದ 7 ತಿಂಗಳವರೆಗೆ ಪೂರ್ವಭಾವಿ ತರಬೇತಿಗಾಗಿ ದೆಹಲಿ,

ಹೈದರಾಬಾದ್ ಹಾಗೂ ಕರ್ನಾಟಕದಲ್ಲಿನ ವಿವಿಧ ಜಿಲ್ಲೆಗಳಲ್ಲಿನ ತರಬೇತಿ ಸಂಸ್ಥೆಗಳಿಗೆ ನಿಯೋಜಿಸಿ ಸದರಿ ತರಬೇತಿಗೆ ತಗಲುವ ಸಂಪೂರ್ಣ ವೆಚ್ಚವನ್ನು ಇಲಾಖಾವತಿಯಿಂದಲೇ ಭರಿಸುವುದರ ಜೊತೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಶಿಷ್ಯವೇತನವನ್ನು (Monthly Stipend) ನೀಡಲಾಗುತ್ತಿದೆ.

Stipend and Travel: ವಿದ್ಯಾರ್ಥಿಗಳ ಶಿಷ್ಯವೇತನ ಮತ್ತು ಪ್ರಯಾಣ :

Selection Criteria: ಅಭ್ಯರ್ಥಿಯ ಆಯ್ಕೆಯ ಮಾನದಂಡಗಳು:

ಇದನ್ನೂ ಓದಿ:Recruitment of Library Supervisor: ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಗೆ ಅರ್ಜಿ:

1.ಮೊದಲು ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಪದವಿಯಲ್ಲಿ ಉತ್ತೀರ್ಣಗೊಂಡಿರಬೇಕು.

2.ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು

3.ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ಅನುಸೂಚಿತ ಜಾತಿ ಮತ್ತು ಅನುಸೂಚಿತ ವರ್ಗಗಳ ಜಾತಿ ಪಟ್ಟಿಯಲ್ಲಿ ಸೇರಿರಬೇಕು

4.ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಕುಟುಂಬದ ವಾರ್ಷಿಕ ಆದಾಯ ರೂ. 5 ಲಕ್ಷ ಮೀರಿರಬಾರದು

5.ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಅಭ್ಯರ್ಥಿಯ ವಯಸ್ಸು ಕನಿಷ್ಠ 18 ರಿಂದ 40 ವರ್ಷದೊಳಗಿರಬೇಕು.

6.ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಒಬ್ಬ ಅಭ್ಯರ್ಥಿ ಒಂದು ಬಾರಿ UPSC / KAS ಪರೀಕ್ಷೆಗಳಿಗೆ ಪೂರ್ವಭಾವಿ ತರಬೇತಿ ಪಡೆದಿದ್ದಲ್ಲಿ ನಂತರ ಯಾವುದೇ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಅರ್ಹರಿರುವುದಿಲ್ಲ.

7.ಒಬ್ಬ ಅಭ್ಯರ್ಥಿ ಒಂದು ಬಾರಿ 3 ತಿಂಗಳುಗಳ Banking / RRB / SSC / Group-C ಪರೀಕ್ಷೆಗಳಿಗೆ ಪೂರ್ವಭಾವಿ ತರಬೇತಿ ಪಡೆದಿದ್ದಲ್ಲಿ ಒಂದು ಬಾರಿ UPSC / KAS ಪರೀಕ್ಷೆಗಳಿಗೆ ಪೂರ್ವಭಾವಿ ತರಬೇತಿ ಪಡೆಯಲು ಅರ್ಹರಿರುತ್ತಾರೆ.

8.ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಹಾಸ್ಟೆಲ್ ಮೀಸಲಾತಿ ಕೋರುವ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ನಿರ್ದೇಶನಾಲಯ ಅಧೀನದಲ್ಲಿರುವ ಹಾಸ್ಟೆಲ್‌ಗಳಲ್ಲಿ ಕನಿಷ್ಠ 3 ವರ್ಷ ನಿಲಯಾರ್ಥಿಗಳಾಗಿರಬೇಕು.

9.ವಸತಿ ಶಾಲೆ ಮೀಸಲಾತಿ ಕೋರುವ ವಿದ್ಯಾರ್ಥಿಗಳು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಮತ್ತು ಇಲಾಖೆ ಅಧೀನದಲ್ಲಿರುವ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ” ಕನಿಷ್ಠ 5 ವರ್ಷಗಳ ವಿದ್ಯಾಭ್ಯಾಸ ಮಾಡಿರತಕ್ಕದ್ದು.

Training Period: ತರಬೇತಿ ಅವಧಿ:

Seat Sharing level: ಸ್ಥಾನ ಹಂಚಿಕೆ ಪ್ರಮಾಣ:

ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ಜಾಲತಾಣ: Click here

ಇತ್ತೀಚಿನ ಸುದ್ದಿಗಳು

Related Articles