ಉಚಿತ ಟಿ ವಿ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳ ರಿಪೇರಿ(electronics repair training) ತರಬೇತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಉಜಿರೆ ಕೇಂದ್ರದಲ್ಲಿ ಒಟ್ಟು 30 ದಿನಗಳ ಉಚಿತ ಉಚಿತ ಟಿ ವಿ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳ ರಿಪೇರಿ (Free electronics repair training)ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸುವ ವಿಧಾನ, ಯಾವೆಲ್ಲ ಅಗತ್ಯ ದಾಖಲೆಗಳನ್ನು ಒದಗಿಸಬೇಕು? ಇತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
How can apply-ಯಾರೆಲ್ಲ ತರಬೇತಿಯಲ್ಲಿ ಭಾಗವಹಿಸಬಹುದು?
1) 18 ರಿಂದ 45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
2) ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿಯಿರುವವರು ಅರ್ಜಿ ಸಲ್ಲಿಸಬಹುದು.
3) ಬಿಪಿಎಲ್ ಕಾರ್ಡ ಹೊಂದಿರುವವರಿಗೆ ಮೊದಲ ಅದ್ಯತೆ ನೀಡಲಾಗುತ್ತದೆ.
4) ಗ್ರಾಮೀಣ ಭಾಗದವರಿಗೆ ಮೊದಲ ಅದ್ಯತೆ ಇರುತ್ತದೆ.
Application form- ಎಲ್ಲಿ ಅರ್ಜಿ ಸಲ್ಲಿಸಬೇಕು?
ಈ ತರಬೇತಿಯನ್ನು ಪಡೆಯಲು ಆಸಕ್ತಿಯಿರುವವರು 08256236404, 9591044014, 944834569 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ಈ 6364561982 ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸಿ ಹೆಸರು ನೋಂದಣಿ ಮಾಡಿಕೊಳ್ಳಬಹುದು.
ಇದನ್ನೂ ಓದಿ: Crop insurance 2024: ಬಾಕಿ 800 ಕೋಟಿ ಬೆಳೆವಿಮೆ ಪರಿಹಾರ ಮಾರ್ಚ ಅಂತ್ಯಕ್ಕೆ ಬಿಡುಗಡೆ:
Required Documents for training-ಯಾವೆಲ್ಲ ದಾಖಲೆಗಳನ್ನು ಒದಗಿಸಬೇಕು:
ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.
ಪೋಟೋ- 1.
ಬಿಪಿಎಲ್ ಕಾರ್ಡ್ ಪ್ರತಿ.
ಬ್ಯಾಂಕ್ ಪಾಸ್ ಬುಕ್ ಪ್ರತಿ.
Free electronics repair training Date- ತರಬೇತಿ ಅವಧಿ:
ಉಚಿತ ಟಿ ವಿ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳ ರಿಪೇರಿ ತರಬೇತಿಯು 10 ಏಪ್ರಿಲ್ 2024 ರಿಂದ ಪ್ರಾರಂಭವಾಗಿ 09 ಮೇ 2024 ರವರೆಗೆ ನಡೆಯಲಿದೆ ಒಟ್ಟು 30 ದಿನಗಳ ತರಬೇತಿ ಇದಾಗಿರುತ್ತದೆ.
ಇದನ್ನೂ ಓದಿ: MSP Price 2024: 1.00 ಲಕ್ಷ ಮೆಟ್ರಿಕ್ ಟನ್, ಬೆಂಬಲ ಬೆಲೆಯಲ್ಲಿ ಜೋಳ ಖರೀದಿ:
ತರಬೇತಿಯು ಸಂಪೂರ್ಣ ಉಚಿತ ವಸತಿ ಮತ್ತು ಊಟದಿಂದ ಕೂಡಿರುತ್ತದೆ:
ತರಬೇತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ ಉಚಿತ ವಸತಿ ಮತ್ತು ಊಟ ಸೌಲಭ್ಯವಿರುತ್ತದೆ. ಇದಲ್ಲದೇ ಸ್ವ-ಉದ್ಯೋಗ ಪ್ರಾರಂಭಿಸಲು ಬ್ಯಾಂಕಿನಿಂದ ಸಿಗುವ ಸಾಲದ ಬಗ್ಗೆ ಮಾಹಿತಿಯನ್ನು ಸಹ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Training center- ತರಬೇತಿ ನಡೆಯುವ ಸ್ಥಳ ವಿವರ:
ಧರ್ಮಸ್ಥಳ ಸಮೀಪ ಉಜಿರೆಯ ರುಡ್ ಸೆಟ್ ಸಂಸ್ಥೆಯ ಕೇಂದ್ರದಲ್ಲಿ ತರಬೇತಿ ನಡೆಯಲಿದೆ.
ಈ ತರಬೇತಿಯ ವಿಶೇಷತೆಗಳು:
ಟಿ ವಿ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳ ರಿಪೇರಿ ತರಬೇತಿ ಪಡೆಯಲು ಯಾವುದೇ ಶುಲ್ಕ ಪಾವತಿ ಮಾಡಬೇಕಿರುವುದಿಲ್ಲ ಅಲ್ಲದೇ ತರಬೇತಿಯು ವಸತಿ ಮತ್ತು ಊಟ ಸಹಿತ ಸಂಪೂರ್ಣ ಉಚಿತವಾಗಿರುತ್ತದೆ.
ತರಬೇತಿಯಲ್ಲಿ ಈ ತರಬೇತಿಯನ್ನು ಪಡೆದ ನಂತರ ಸ್ವ-ಉದ್ಯೋಗವನ್ನು ಪ್ರಾರಂಭಿಸಲು ಬ್ಯಾಂಕ್ ನಿಂದ ಸಾಲವನ್ನು ಹೇಗೆ ಪಡೆಯಬಹುದು ಎಂದು ಸಹ ಮಾಹಿತಿ ನೀಡುವುದರ ಜೊತೆಗೆ ಸಾಲ ಪಡೆಯಲು ಅಗತ್ಯವಾಗಿ ಒದಗಿಸಬೇಕಾದ ತರಬೇತಿ ಪ್ರಮಾಣ ಪತ್ರವನ್ನು ಸಹ ನೀಡಲಾಗುತ್ತದೆ.