Friday, September 20, 2024

KEA: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪರೀಕ್ಷಾರ್ಥಿ ಅಭ್ಯರ್ಥಿಗಳಿಗೆ ವಿಶೇಷ ಮಾಹಿತಿಯ ಪ್ರಕಟಣೆ:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ Karnataka Examination Authority ಯಿಂದ ಕೆಎಸ್‌ಇಡಿಸಿ/ಕೆಎಫ್‌ಸಿಎಸ್‌ಸಿ/ಕೆಬಿಸಿಡಬ್ಯಬಿ/ಎಂಎಸ್‌ಐಎಲ್ 2023 ಸಂಬಂಧಿಸಿದಂತೆ ನಡೆದ ಪರೀಕ್ಷೆಗಳ ಪರಿಷ್ಕೃತ ಅಂಕಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಒಂದೇ ಹುದ್ದೆಗೆ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ತಮ್ಮ ಉಳಿದ ಪ್ರವೇಶ ಪತ್ರಗಳನ್ನು ಪರೀಕ್ಷೆ ಬರೆದ ಕೇಂದ್ರದಲ್ಲಿ ಸಲ್ಲಿಸಬೇಕೆಂದು ಸೂಚಿಸಲಾಗಿತ್ತು. ಆದರೂ ಅನೇಕ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ಪರೀಕ್ಷಾ ಕೇಂದ್ರದಲ್ಲಿ ಸಲ್ಲಿಸಿರುವುದಿಲ್ಲ.

ದಿನಾಂಕ. 07.03.2024ರಂದು ತಾತ್ಕಾಲಿಕ ಅಂಕಪಟ್ಟಿಯನ್ನು ಬಿಡುಗಡೆ ಮಾಡಿ, ಯಾವುದಾರು ಅಭ್ಯರ್ಥಿಯ ವಿಷಯವಾರು ಫಲಿತಾಂಶ ಕಾಣದಿದ್ದಲ್ಲಿ ನೀಡಲಾಗಿದ್ದ ಲಿಂಕ್ ಮೂಲಕ ಸಂಪೂರ್ಣ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕೆಂದು ತಿಳಿಸಲಾಗಿತ್ತು. ಆದರೂ ಬಹಳಷ್ಟು ಅಭ್ಯರ್ಥಿಗಳು ಯಾವುದೇ ಮಾಹಿತಿಯನ್ನು ಸಲ್ಲಿಸಿರುವುದಿಲ್ಲ.

ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಈ ಜಾಲತಾಣದ

KSEDC/KFCSC/KBCWWB/MSIL-2023 Provisional Score with Objection .ಲಿಂಕ್‌ನಲ್ಲಿ ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸಬಹುದು.


Login Method: ಲಾಗಿನ್ ವಿಧಾನ :
ಹಂತ: 1: ಮೊದಲು ಪರೀಕ್ಷಾರ್ಥಿ ಅಭ್ಯರ್ಥಿಗಳು ಲಿಂಕ್‌ನಲ್ಲಿ ಅರ್ಜಿ ಸಂಖ್ಯೆ.
ಅರ್ಜಿ ದಾರರ ಹೆಸರು,
ಜನ್ಮ ದಿನಾಂಕ ನಮೂದಿಸಿದಬೇಕಗುತ್ತದೆ.
ನಂತರ ಈಗಾಗಲೇ ನೊಂದಣಿ ಮಾಡಿರುವ ಮತ್ತು ಅಂಕಗಳು ಪ್ರಕಟವಾಗಿರುವ ಅಭ್ಯರ್ಥಿಗಳು Login for Registered Applicant ಬಟನ್ ಕ್ಲಿಕ್ ಮಾಡಿಕೊಂಡು ಲಾಗಿನ್ ಆಗಬೇಕಾಗುತ್ತದೆ.

ಇದನ್ನೂ ಓದಿ: Know your Polling Booth: ನಿಮ್ಮ ಮತದಾನದ ಬೂತ್ ಯಾವುದು? ಕ್ಷೇತ್ರ ಬದಲಾಣೆ ಏನು ಮಾಡಬೇಕು?ಹೊಸದಾಗಿ ಹೆಸರು ಸೇರ್ಪಡೆ ಹೇಗೆ? ಸಂಪೂರ್ಣ ಮಾಹಿತಿ ಈ ಲಿಂಕ್ ನಲ್ಲಿ

1.Login for Registered Applicant ಬಟನ್ ಕ್ಲಿಕ್ ಮಾಡಿದ ನಂತರ ಅಭ್ಯರ್ಥಿಯು ತಮ್ಮ ಪರಿಷ್ಕೃತ ಅಂಕಗಳನ್ನು ನೋಡಬಹುದು. ಯಾವುದೇ ವಿಷಯದ ಸ್ಕೋರ್ ತಪ್ಪಾಗಿದ್ದರೆ / ನವೀಕರಿಸುವ ಅಗತ್ಯವಿದೆ ಈ ಕೆಳಗಿನ ಕ್ರಮಗಳನ್ನು ವಹಿಸಿ ಆಕ್ಷೇಪಣೆಗಳನ್ನು ಸಲ್ಲಿಸುವುದು:

2.ಆಕ್ಷೇಪಣೆ ಇರುವ ವಿಷಯವನ್ನು ಆಯ್ಕೆ ಮಾಡಿದ ಕೂಡಲೇ ರಿಜಿಸ್ಟರ್ ಸಂಖ್ಯೆ, ಪ್ರಶ್ನೆ ಪತ್ರಿಕೆ ವರ್ಷನ್ ಕೋಡ್ ಮತ್ತು ಅಂಕಗಳನ್ನು ನೋಡಬಹುದು. ಅಭ್ಯರ್ಥಿಯ ಪ್ರಕಾರ ತಮಗೆ ಲಭಿಸಬೇಕಾಗಿರುವ ಅಂಕಗಳನ್ನು ನಮೂದು ಮಾಡಿ, ಪ್ರವೇಶ ಪತ್ರ ಮತ್ತು ಓಎಂಆರ್ ಪ್ರತಿಯನ್ನು ಒಂದೇ ಪಿಡಿಎಫ್‌ನಲ್ಲಿ ಸ್ಕಾನ್ ಮಾಡಿ ಅಪ್‌ಲೋಡ್ ಮಾಡಬೇಕಾಗುತ್ತದೆ.

*.Candidates not yet received results / ಅಭ್ಯರ್ಥಿಗಳು: ಅಂಕಗಳು ಪ್ರಕಟವಾಗದಿರುವ ಅಭ್ಯರ್ಥಿಗಳು Candidates not yet received results / ಇನ್ನು ಫಲಿತಾಂಶ ಪ್ರಕಟವಾಗದ ಅಭ್ಯರ್ಥಿಗಳು ಅನ್ನು ಕ್ಲಿಕ್ ಮಾಡಿ ಆಕ್ಷೇಪಣೆಗಳನ್ನು ಈ ಕೆಳಗಿನ ಕ್ರಮಗಳನ್ನು ವಹಿಸಿ ಸಲ್ಲಿಸಬಹುದು.

*.ಫಲಿತಾಂಶ ಪ್ರಕಟವಾಗದೇ ಇರುವ ಇಲಾಖೆ, ಹುದ್ದೆ, ವಿಷಯ ಆಯ್ಕೆ ಮಾಡಿ ನಂತರ ತಮ್ಮ ಅರ್ಜಿ ಸಂಖ್ಯೆ, ಹೆಸರು, ರಿಜಿಸ್ಟರ್ ಸಂಖ್ಯೆಯನ್ನು, ಪ್ರಶ್ನೆ ಪತ್ರಿಕೆ ವರ್ಷನ್ ಕೋಡ್ ಅನ್ನು ನಮೂದಿಸಬೇಕು.

*.ತದನಂತರ ಆಕ್ಷೇಪಣೆಗೆ ಇರುವ ಕಾರಣವನ್ನು ನಮೂದಿಸಿ. ಪ್ರವೇಶ ಪತ್ರ ಮತ್ತು ಓಎಂಆರ್ ಪ್ರತಿಯನ್ನು ಒಂದೇ ಪಿಡಿಎಫ್‌ನಲ್ಲಿ ಸ್ಕಾನ್ ಮಾಡಿ ಅಪ್‌ ಲೋಡ್ ಮಾಡುವುದು.

ಇದನ್ನೂ ಓದಿ: PM Kisan ಹಣ ಜಮಾ ಆಗಲು NPCI Active ಕಡ್ಡಾಯ ಚೆಕ್ ಮಾಡಿ ಈ ಲಿಂಕ್ ಮೇಲೆ ಓತ್ತಿ ಪರಿಕ್ಷೀಸಿಕೊಳ್ಳಿ.

ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ:
ಈ ಲಿಂಕ್‌ನಲ್ಲಿ KSEDC/KFCSC/KBCWWB/MSIL-2023 Provisional Score with Objection .ಆಕ್ಷೇಪಣೆಗಳನ್ನು ದಿನಾಂಕ. 22.03.2024 ರಿಂದ 29.03.2024ರ (ಸಂಜೆ 5.30 ವರೆಗೂ) ಸಲ್ಲಿಸಬಹುದು. ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ Karnataka Examination Authority ಪ್ರಕಟಣೆಯಲ್ಲಿ ತಿಳಿಸಿದೆ.

ವಿಶೇಷ ಸೂಚನೆ:
ಆಕ್ಷೇಪಣೆಗಳನ್ನು ಈ ಮೇಲೆ ತಿಳಿಸಿರುವ ಲಿಂಕ್‌ನಲ್ಲಿ ಮಾತ್ರ ಕಡ್ಡಾಯವಾಗಿ ಆಕ್ಷೇಪಣೆಗಳನ್ನು ಸಲ್ಲಿಸಿವುದು. ಇನ್ನಿತರೆ ವಿಧದ ಇ-ಮೇಲ್/ ಅಂಚೆ ಅಥವಾ ಖುದ್ದಾಗಿ ಆಕ್ಷೇಪಣೆಗಳನ್ನು ಸಲ್ಲಿಸಿದ್ದಲ್ಲಿ, ಅವುಗಳನ್ನು ಪರಿಗಣಿಸಲಾಗುವುದಿಲ್ಲ.

ಇದನ್ನೂ ಓದಿ: Free Sewing Machine Scheme: ಉಚಿತ ಹೊಲಿಗೆ ಯಂತ್ರ ವಿತರಣೆ:

ಆಧಿಕೃತ ಪ್ರಕಟಣೆ ಆದೇಶಕ್ಕಾಗಿ: Click here
ಆಕ್ಷೇಪಣೆಗಾಗಿ : Click here

ಇತ್ತೀಚಿನ ಸುದ್ದಿಗಳು

Related Articles