Saturday, October 5, 2024

Court Job Opportunity: ಜಿಲ್ಲಾ ನ್ಯಾಯಾಲಯದಲ್ಲಿ SSLC/PUC/ITI/Diploma ವಿದ್ಯಾರ್ಥಿಗಳಿಗೆ ನೇರ ನೇಮಕಾತಿ. ಮಾಸಿಕ ವೇತನ -27650-52650/- ರೂ .

ಆತ್ಮೀಯ ಓದುಗರೇ, ಹಾಗೂ ವಿದ್ಯಾರ್ಥಿ ಮಿತ್ರರೇ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿಯಲ್ಲಿ ಶೀಘ್ರಲಿಪಿಗಾರ-ಗ್ರೇಡ್-III,ಬೆರಳಚ್ಚುಗಾರ,ಬೆರಳಚ್ಚು-ನಕಲುಗಾರ ಹಾಗೂ ಸೇವಕ ಹುದ್ದೆಗಳ ನೇರ ನೇಮಕಾತಿಗಳ ಕುರಿತು ಈ ಲೇಖನದಲ್ಲಿ ಮಾಹಿತಿಯನ್ನು ಒದಗಿಸಲಾಗಿದೆ.
ಆಗಿದ್ದರೇ ಯಾವ ಹುದ್ದೆಗಳಿಗೆ ಅರ್ಹತೆಗಳೇನು? ಹುದ್ದೆಗಳ ಸಂಖ್ಯೆ, ಹುದ್ದೆಗಳ ಶೈಕ್ಷಣಿಕ ಅರ್ಹತೆಯೇನು? ಆಯ್ಕೆಯ ವಿಧಾನ ಯಾವುದು? ವೇತನ ಶ್ರೇಣಿ ? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ವಿವರಿಸಲಾಗಿದೆ.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿ ತುಮಕೂರು,ಶೀಘ್ರಲಿಪಿಗಾರ-ಗ್ರೇಡ್-III,ಹುದ್ದೆ(Stenographer Grade-III)
ಈ ಹುದ್ದೆಗಳ ಸಂಖ್ಯೆ :10 (ಹೊಸ ಹುದ್ದೆಗಳು 6+ ಬ್ಯಾಕ ಲಾಗ್ ಹುದ್ದೆಗಳು 4 )
ವೇತನ ಶ್ರೇಣಿ: 27650-52650/- ರೂ ವರೆಗೂ ನೀಡಲಾಗುವುದು.

ಶೈಕ್ಷಣಿಕ ವಿದ್ಯಾರ್ಹತೆ:
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿಯಲ್ಲಿ ಶೀಘ್ರಲಿಪಿಗಾರ-ಗ್ರೇಡ್-III,ಹುದ್ದೆ(Stenographer Grade-III)
ಶೈಕ್ಷಣಿಕ ವಿದ್ಯಾರ್ಹತೆ: ದ್ವೀತಿಯ ಪಿಯುಸಿ ಪರೀಕ್ಷೇಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಮೂರು ವರ್ಷಗಳ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಹಾಗೂ ಆಂಗ್ಲ ಭಾಷಿಯ ಹಿರಿಯ ಶ್ರೇಣಿ ಬೆರಳಚ್ಚು ಮತ್ತು ಹಿರಿಯ ಶೀಘ್ರಲಿಪಿಯಲ್ಲಿ ಉತ್ತಿರ್ಣರಾಗಿರಬೇಕು.

ಇದನ್ನೂ ಓದಿ: ನಿಮ್ಮ ಅಕ್ಕಪಕ್ಕ ಯಾರ ಜಮೀನು ಯಾರ ಹೆಸರಿನಲ್ಲಿದೆ ಚೆಕ್ ಮಾಡಿ!! ನಿಮ್ಮ ಗ್ರಾಮದ ಸಂಪೂರ್ಣ ನಕ್ಷೆ ನಿಮ್ಮ ಮೊಬೈಲ್ ನೋಡಿ!!

ಹುದ್ದೆಗಳ ಆಯ್ಕೆ ವಿಧಾನ:
ಕರ್ನಾಟಕ ಅಧೀನ ನ್ಯಾಯಾಲಯಗಳು (ಲಿಪಿಕ ಮತ್ತು ಇತರ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2021ರ ನಿಯಮಗಳನ್ವಯ ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಲಾಗುವುದು.

ಆಯ್ಕೆಗೆ ಕೌಶಲ ಪರೀಕ್ಷೆ ಮತ್ತು ಸಂದರ್ಶನವನ್ನು ಈ ಕೆಳಕಂಡಂತೆ ನಡೆಸಲಾಗುವುದು.

ನೇಮಕಾತಿ ಪ್ರಾಧಿಕಾರದಿಂದ ನೇಮಿಸಲಾದ ಪರೀಕ್ಷಕರು 1 ನಿಮಿಷಕ್ಕೆ 120 ಪದಗಳ ದರದಲ್ಲಿ ತಲಾ 5 ನಿಮಿಷಗಳ ಕನ್ನಡ ಮತ್ತು ಇಂಗ್ಲೀಷ್ ಉಕ್ತಲೇಖನವನ್ನು ನೀಡುವರು. ಅದನ್ನು ಅಭ್ಯರ್ಥಿಗಳು 45 ನಿಮಿಷಗಳಲ್ಲಿ ವಿಶೇಷ ತಂತ್ರಾಂಶದ ಗಣಕಯಂತ್ರದಲ್ಲಿ ಬೆರಳಚ್ಚು ಮಾಡತಕ್ಕದ್ದು, ಬೆರಳಚ್ಚು ಯಂತ್ರದ ಕೀಲಿಮಣೆಯನ್ನು ಹೋಲುವ ತಂತ್ರಾಂಶವನ್ನು ಗಣಕಯಂತ್ರಗಳಿಗೆ ಅಳವಡಿಸಲಾಗುವುದು.

ಕನ್ನಡ ಮತ್ತು ಆಂಗ್ಲ ಭಾಷಾ ಕೌಶಲ ಪರೀಕ್ಷೆಗಳಿಗೆ ತಲಾ ಗರಿಷ್ಠ 100 ಅಂಕಗಳನ್ನು ನಿಗದಿಪಡಿಸಲಾಗಿದ್ದು, ಉತ್ತೀರ್ಣರಾಗಲು ತಲಾ ಕನಿಷ್ಠ 50 ಅಂಕಗಳನ್ನು ಪಡೆಯಬೇಕಾಗಿರುತ್ತದೆ.

ನಿಗದಿಪಡಿಸಲಾದ ವಿದ್ಯಾರ್ಹತೆಯ ಪರೀಕ್ಷೆಗಳಲ್ಲಿನ ಮತ್ತು ಕೌಶಲ ಪರೀಕ್ಷೆಗಳ ಒಟ್ಟು ಅಂಕಗಳ ಶೇಕಡಾವಾರು ಮೊತ್ತದ ಆಧಾರದ ಮೇಲೆ ಮೀಸಲಾತಿಗನುಗುಣವಾಗಿ 1 ಹುದ್ದೆಗೆ 5 ಅಭ್ಯರ್ಥಿಗಳಂತೆ (1:5ರ ಅನುಪಾತದಲ್ಲಿ) ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.

ಸಂದರ್ಶನವು 5 ಅಂಕಗಳನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: Crop insurence Questions and Answers: ಬೆಳೆ ವಿಮೆ ಕುರಿತು ರೈತರಿಗೆ ಅನುಮಾನಗಳಿಗೆ ತೆರೆ ನೀಡಿದ ಇಲಾಖೆ: 2016- ರಿಂದ 2021 ರವರೆಗೆ ಪಾವತಿಯಾದ ಬೆಳೆವಿಮೆ ಮೊತ್ತವೆಷ್ಟು?

ಬೆರಳಚ್ಚುಗಾರ ಹುದ್ದೆ( Typist) :
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿಯಲ್ಲಿ ಬೆರಳಚ್ಚುಗಾರ ಹುದ್ದೆ( Typist) ಹುದ್ದೆಗಳು:05 (ಹೊಸ ಹುದ್ದೆಗಳು 4 + ಬ್ಯಾಕ್ ಲಾಗ್ ಹುದ್ದೆಗಳು 1)
ವೇತನ ಶ್ರೇಣಿ: 21400/-42000/- ರೂ.

ಶೈಕ್ಷಣಿಕ ವಿದ್ಯಾರ್ಹತೆ:
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ 3 ವರ್ಷಗಳ ಡಿಪ್ಲೋಮಾ ಇನ್‌ ಕಮರ್ಷಿಯಲ್ ಪ್ರಾಕ್ಟಿಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಹಾಗೂ ಆಂಗ್ಲ ಹಿರಿಯ ಶ್ರೇಣಿ ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಬೆರಳಚ್ಚು-ನಕಲುಗಾರ ಹುದ್ದೆ- Typist -copyist)
ಹುದ್ದೆಗಳ ಸಂಖ್ಯೆ: 05 (ಹೊಸ ಹುದ್ದೆಗಳ 3+ಬ್ಯಾಕ್ ಲಾಗ ಹುದ್ದೆಗಳು 2)
ವೇತನ ಶ್ರೇಣಿ: 21400/-42000/- ರೂ .

ಶೈಕ್ಷಣಿಕ ವಿದ್ಯಾರ್ಹತೆ:

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ. ವಿದ್ಯಾರ್ಹತೆ ಹೊಂದಿರಬೇಕು.
ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಹಾಗೂ ಆಂಗ್ಲ ಕಿರಿಯ ಶ್ರೇಣಿ ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಬೆರಳಚ್ಚುಗಾರ ಮತ್ತು ಬೆರಳಚ್ಚು-ನಕಲುಗಾರ ಹುದ್ದೆಗಳ ಆಯ್ಕೆ ವಿಧಾನ :

ಹುದ್ದೆಗಳು)(ನೇಮಕಾತಿ) (ತಿದ್ದುಪಡಿ) ನಿಯಮಗಳು, 2021ರ ನಿಯಮಗಳನ್ವಯ ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಲಾಗುವುದು.

ಆಯ್ಕೆಗೆ ಕೌಶಲ ಪರೀಕ್ಷೆ ಮತ್ತು ಸಂದರ್ಶನವನ್ನು ಈ ಕೆಳಕಂಡಂತೆ ನಡೆಸಲಾಗುವುದು.

ನೇಮಕಾತಿ ಪ್ರಾಧಿಕಾರದಿಂದ ನೇಮಿಸಲಾದ ಪರೀಕ್ಷಕರು 15 ನಿಮಿಷಗಳ ಕನ್ನಡ ಮತ್ತು 15 ನಿಮಿಷಗಳ ಇಂಗ್ಲೀಷ್ ಉಕ್ತಲೇಖನವನ್ನು ನೀಡುವರು ಅದನ್ನು ಅಭ್ಯರ್ಥಿಗಳು ವಿಶೇಷ ತಂತ್ರಾಂಶದ ಗಣಕಯಂತ್ರದಲ್ಲಿ ಬೆರಳಚ್ಚು ಮಾಡತಕ್ಕದ್ದು, ಬೆರಳಚ್ಚುಯಂತ್ರದ ಕೀಲಿಮಣೆಯನ್ನು ಅಳವಡಿಸಲಾಗುವುದು. ತಂತ್ರಾಂಶವನ್ನು ಗಣಕಯಂತ್ರಗಳಿಗೆ ಹೋಲುವ

ಕನ್ನಡ ಮತ್ತು ಆಂಗ್ಲ ಭಾಷಾ ಕೌಶಲ ಪರೀಕ್ಷೆಗಳಿಗೆ ತಲಾ ಗರಿಷ್ಠ 100 ಅಂಕಗಳನ್ನು 50 ಪಡೆಯಬೇಕಾಗಿರುತ್ತದೆ.

ನಿಗದಿಪಡಿಸಲಾದ ವಿದ್ಯಾರ್ಹತೆಯ ಪರೀಕ್ಷೆಗಳಲ್ಲಿನ ಮತ್ತು ಕೌಶಲ ಪರೀಕ್ಷೆಗಳ ಒಟ್ಟು ಅಂಕಗಳ ಶೇಕಡಾವಾರು ಮೊತ್ತದ ಆಧಾರದ ಮೇಲೆ ಮೀಸಲಾತಿಗನುಗುಣವಾಗಿ 1 ಹುದ್ದೆಗೆ 5 ಅಭ್ಯರ್ಥಿಗಳಂತೆ (1:5ರ ಅನುಪಾತದಲ್ಲಿ) ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.

ಸಂದರ್ಶನವು 5 ಅಂಕಗಳನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: ಬರ ಪರಿಹಾರ ಜಮಾ ಆಗಲು NPCI Active ಕಡ್ಡಾಯ ಚೆಕ್ ಮಾಡಿ ಈ ಲಿಂಕ್ ಮೇಲೆ ಓತ್ತಿ ಪರಿಕ್ಷೀಸಿಕೊಳ್ಳಿ.

ಸೇವಕ ಹುದ್ದೆ:( Peon): ಹುದ್ದೆಗಳ ಸಂಖ್ಯೆ 40
ಸೇವಕ ಹುದ್ದೆಗಳ ವೇತನ ಶ್ರೇಣಿ : 17000/- 28950/- ರೂ.


ವಿದ್ಯಾರ್ಹತೆ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ SSLC ಪರೀಕ್ಷೆಯಲ್ಲಿ ಉತ್ತಿರ್ಣತೆ ಅಥವಾ ತತ್ಸಮಾನ ಪರೀಕ್ಷಯಲ್ಲಿ ತೇರ್ಗಡೆ ಹೋಂದಿರಬೇಕಾಗಿರುತ್ತದೆ.
ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು.

ಮೇಲೆ ತಿಳಿಸಲಾದ ಹುದ್ದೆಗಳ ವಯೋಮಿತಿ ಮತ್ತು ಅರ್ಜಿ ಶುಲ್ಕ ಇತರೆ ಸೂಚನೆಗಳು ಅರ್ಜಿ ಸಲ್ಲಿಸುವ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗುವ ಲಿಂಕ್ ಓತ್ತಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.

ಇತ್ತೀಚಿನ ಸುದ್ದಿಗಳು

Related Articles