ಆತ್ಮೀಯ ರೈತ ಬಾಂದವರೇ ಕೃಷಿಕರಿಗೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಮುಖ್ಯವಾಗಿ ಹವಮಾನ ಮುನ್ಸೂಚನೆ (Weather Forecast) ಬಹಳ ಮುಖ್ಯ ಪಾತ್ರವಹಿಸುತ್ತದೆ. ಯಾವಾಗ ಮಳೆ ಬರುತ್ತದೆ, ಮುಂದೆ ಮಳೆ ಪ್ರಮಾಣ ಯಾವ ರೀತಿ ಇದೆ. ಯಾವ ಜಿಲ್ಲೆಯಲ್ಲಿ ಏಷ್ಟು ಪ್ರಮಾಣ ಇದೆ, ಈ ಎಲ್ಲಾ ಮಾಹಿತಿ ಗೊತ್ತಿದ್ದರೆ, ಕೃಷಿ ಚಟುವಟಿಕೆಯನ್ನು ಕೈಗೊಳ್ಳಲು ಅನುಕೂಲವಗುತ್ತದೆ.
ಹಾಗಾಗಿ ಹವಮಾನ ಮುನ್ಸೂಚನೆ ಮಾಹಿತಿ ನೀಡಿರುತ್ತೆವೆ. ಈ ಲೇಖನದಲ್ಲಿ ಕಳೆದ ವರ್ಷ ಮುಂಗಾರಿನಲ್ಲಿ ಹವಮಾನ ವೈಪರೀತ್ಯದಿಂದ ಮತ್ತು ಎಲ್ ನಿನೋ ‘ ಪ್ರಭಾವದಿಂದಾಗಿ ಮುಂಗಾರು ಮಳೆ ದುರ್ಬಲಗೊಂಡಿತ್ತು ಈ ವರ್ಷದ ಮುಂಗಾರು ಯಾವ ರೀತಿ ಇದೆ. ಹವಮಾನದ ಮುನ್ಸೂಚನೆ ವರದಿ ಯಾವ ರೀತಿ ಇದೆ ಎಂಬುದರ ಸಂಪೂರ್ಣ ಮಾಹಿತಿ ನೀಡಿರುತ್ತೆವೆ.
ಇದನ್ನೂ ಓದಿ: MSP Price 2024: 1.00 ಲಕ್ಷ ಮೆಟ್ರಿಕ್ ಟನ್, ಬೆಂಬಲ ಬೆಲೆಯಲ್ಲಿ ಜೋಳ ಖರೀದಿ:
ನವದೆಹಲಿ: ಭಾರತದಲ್ಲಿ ಮುಂಬರುವ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ್ (Director General Indian Meteorlogical Department) ಮೊಹಾಪಾತ್ರ ತಿಳಿಸಿದ್ದಾರೆ. ಮೇ ನಂತರ ಪೆಸಿಫಿಕ್ ಪ್ರದೇಶದಲ್ಲಿ ಎಲ್ ನಿನೋ ಮತ್ತು ಲಾ-ನಿನಾ ಪರಿಸ್ಥಿತಿಗಳ ಪ್ರಭಾವ ತಗ್ಗಲಿದ್ದು, ಈ ವರ್ಷ ಮಾನ್ಸೂನ್ ವೇಳೆ ಭಾರತವು ಹೇರಳವಾದ ಮಳೆ ಪಡೆಯುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಮಾರ್ಚ್-ಮೇ ತಿಂಗಳಿನಲ್ಲಿ ಭಾರತದಲ್ಲಿ ಹಲವು ಭಾಗಗಳು ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನ ಅನುಭವಿಸುವ ಸಾಧ್ಯತೆ ಇದೆ.ಎಲ್ ನಿನೋ ಮಧ್ಯ ಪೆಸಿಫಿಕ್ ಮಹಾಸಾಗರದಲ್ಲಿ ನೀರಿನ ಆವರ್ತಕ ತಾಪಮಾನವಾಗಿದೆ. ಈ ವಿದ್ಯಮಾನವು ಭಾರತೀಯ ಪರ್ಯಾಯ ದ್ವೀಪದಲ್ಲಿ ಪ್ರಚಲಿತದಲ್ಲಿರುವ ಹವಾಮಾನದ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ಈಶಾನ್ಯ ಪರ್ಯಾಯ ದ್ವೀಪದ ಭಾರತದಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಕರ್ನಾಟಕ, ಮಹಾರಾಷ್ಟ್ರ, ಒಡಿಶಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ಅಲೆಗಳು ಕಂಡುಬರುತ್ತವೆ.
ಆದರೂ ಚಾಲ್ತಿಯಲ್ಲಿರುವ ಎಲ್ ನಿನೊ ಪರಿಸ್ಥಿತಿಗಳು ಬೇಸಿಗೆಯ ನಂತರ ತಟಸ್ಥವಾಗುತ್ತವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಪ್ರಕ್ರಿಯಿಂದ ದೇಶದಾದ್ಯಂತ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ. ಮಾರ್ಚ್‌ನಲ್ಲಿ ದೇಶವು (ದೀರ್ಘಾವಧಿಯ ಸರಾಸರಿ 29.9 ಮಿ.ಮೀ. 117 ಕ್ಕಿಂತ ಹೆಚ್ಚು) ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ದಾಖಲಿಸುವ ಸಾಧ್ಯತೆ ಇದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯನ್ ಬ್ಯೂರೋ ಆಫ್ ಮೆಟೀರಿಯೋಲಾಜಿಕಲ್ (BoM) ಪ್ರಕಟಿಸಿರುವ, ಏಳು ಜಾಗತಿಕ ಹವಾಮಾನ ಮಾದರಿಗಳಲ್ಲಿ ನಾಲ್ಕು ಮಾದರಿಗಳು ಎಲ್ ನಿನೋ ಸದರನ್ ಆಸಿಲೇಷನ್ (ENSO) ಸ್ಥಿತಿಗೆ ಮರಳಿ ಏಪ್ರಿಲ್ ಅಂತ್ಯದ ವೇಳೆಗೆ ತಟಸ್ಥ ಸ್ಥಿತಿಯನ್ನು ತಲುಪಲಿವೆ ಎಂದು ಮುನ್ಸೂಚನೆ ನೀಡಿದ್ದರೆ, ಮೇ ಅಂತ್ಯದ ವೇಳೆಗೆ ತಟಸ್ಥಗೊಳ್ಳಲಿವೆ, ಎಂದು ಎಲ್ಲಾ ‘ ಮಾದರಿಗಳು ಮುನ್ಸೂಚನೆ ನೀಡಿವೆ. ಈ ಮುನ್ಸೂಚನೆಗಳಂತೆ 2023 ರಿಂದ ದಾಖಲೆಯ ಜಾಗತಿಕ ತಾಪಮಾನ ಮತ್ತು ಸಾಗರ ತಾಪಮಾನ ಏರಿಕೆಯನ್ನು ಉಂಟುಮಾಡಿದ ಎಲ್ ನಿನೋ ವಿದ್ಯಮಾನಗಳು ಅಂತ್ಯಗೊಳ್ಳಲಿವೆ.
ಅಮೇರಿಕಾದ ನ್ಯಾಷನಲ್ ಓಸಿಯಾನಿಕ್ ಅಂಡ್ ಅಮ್ಮಾಸ್ಪಿಯರಿಕ್ ಅಡ್ಮಿನಿಸ್ಟ್ರೇಷನ್ (NOAA) ನ ಹವಾಮಾನ ಮುನ್ಸೂಚನಾ ಕೇಂದ್ರ (CPC) ವು ಈ ದೃಷ್ಟಿಕೋನವನ್ನು ಬೆಂಬಲಿಸಿದ್ದು, 2024 ರ ಏಪ್ರಿಲ್ ನಿಂದ ಜೂನ್ ವೇಳೆಗೆ ಎಲ್ ನಿನೋ ENSO- ತಟಸ್ಥ ಸ್ಥಿತಿಗೆ ಬರುವ ಸಾಧ್ಯತೆಗಳು ಶೇಕಡಾ 79 ರಷ್ಟಿವೆ, ಎಂದು ಅಂದಾಜಿಸಿದೆ. ಜೂನ್ – ಅಗಸ್ಟ್ ವೇಳೆಗೆ ಲಾ ನಿನಾ ಉಂಟಾಗುವ ಸಾಧ್ಯತೆಗಳು ಶೇಕಡಾ 55 ರಷ್ಟಿದೆ, ಎಂಬುದನ್ನು ಹವಾಮಾನ ಮುನ್ಸೂಚನಾ ಕೇಂದ್ರ (CPC) ವು ಸೂಚಿಸಿದೆ.