Friday, September 20, 2024

Yashaswini card last date- ಯಶಸ್ವಿನಿ ಕಾರ್ಡ ಪಡೆಯಲು ಅರ್ಜಿ ಸಲ್ಲಿಸುವ ಇನ್ನು 3 ವಾರ ಮಾತ್ರ ಅವಕಾಶ!

2023-24ನೇ ಸಾಲಿಗೆ ಸಹಕಾರಿ ಸಂಘದ ಸದಸ್ಯರುಗಳಿಗೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ(Yashaswini yojana) ಹೊಸ ಸದಸ್ಯರನ್ನು ನೋಂದಾಯಿಸುವ ಮತ್ತು ನವೀಕರಣಕ್ಕೆ ಕೊನೆಯ ದಿನಾಂಕವನ್ನು ಈ ಮೊದಲು 01-01-2024 ರಿಂದ ದಿನಾಂಕ: 28-02-2024 ರವರೆಗೆ ಅವಕಾಶ ಕೊಡಲಾಗಿತ್ತು.

ಅದರೆ ಈಗ ಯಶಸ್ವಿನಿ ಯೋಜನೆಯು(Yashaswini health insurance yojana) ಒಂದು ಜನಪ್ರಿಯ ಯೋಜನೆಯಾಗಿದ್ದು ಈ ಯೋಜನೆಯು ಹೆಚ್ಚಿನ ಸಂಖ್ಯೆಯ ಸಹಕಾರಿ ಸಂಘದ ಸದಸ್ಯರುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಯೋಜನೆಯಡಿ ಇನ್ನೂ ಹೆಚ್ಚಿನ ಸದಸ್ಯರಿಗೆ ಅರ್ಜಿ ಸಲ್ಲಿಸಲು ಅನುವಾಗುವಂತೆ ನೋಂದಣಿ ಅವಧಿಯನ್ನು ದಿನಾಂಕ: 31-03-2024 ರವರೆಗೆ ವಿಸ್ತರಿಸಿ ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಕೊನೆಯೆ ದಿನಾಂಕವನ್ನು ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: First installment drought payment Failure list:ಬರ ಪರಿಹಾರ ಹಣ ಬರದೇ ಇರುವ ರೈತರ ಪಟ್ಟಿ ಮತ್ತು ಕಾರಣ :

ಅದುದರಿಂದ ಯಶಸ್ವಿನಿ ಯೋಜನೆಯಡಿ(Yashaswini yojana) ಸೌಲಭ್ಯಗಳನ್ನು ಪಡೆಯಲು ಸಹಕಾರಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸದಸ್ಯತ್ವ ನೋಂದಣಿ ಅವಧಿಯನ್ನು ಈ ಹಿಂದೆ ಇದ್ದ ಕೊನೆಯ ದಿನಾಂಕ:29-02-2024 ರ ಬದಲಿಗೆ ದಿನಾಂಕ: 31-03-2024 ರವರೆಗೆ ವಿಸ್ತರಿಸಲು ಸಹಕಾರ ಇಲಾಖೆಯಿಂದ ತೀರ್ಮಾನಿಸಿ ನೂತನ ಆದೇಶ ಹೊರಡಿಸಲಾಗಿದೆ.

Yashaswini card last date- ಯಶಸ್ವಿನಿ ಯೋಜನೆಯಡಿ ಹೊಸ ಸದಸ್ಯರ ನೋಂದಣಿ ಮತ್ತು ಹಾಲಿ ಸದಸ್ಯರ ನವೀಕರಣಕ್ಕೆ ಅರ್ಜಿ ಸಲ್ಲಿಸಲು 31 ಮಾರ್ಚ 2024 ಕೊನೆಯ ದಿನಾಂಕವಾಗಿರುತ್ತದೆ.

ಇದನ್ನೂ ಓದಿ: Panchamitra Whatsapp Number: ಗ್ರಾಮ ಪಂಚಾಯಿತಿ ಸೇವೆ ಮತ್ತು ಸಮಸ್ಯೆಗಳಿಗೆ ಈ ವಾಟ್ಸಪ್ ನಂಬರ್‍ ಕಳುಹಿಸಿ :

yashaswini fee- ಅರ್ಜಿ ಶುಲ್ಕ:

1) ಸಾಮನ್ಯ ವರ್ಗ: 1) ನಗರವಾಸಿ-1000 ರೂ
(ಕುಟುಂಬದ 4 ಸದಸ್ಯರಿಗೆ 1000 ರೂ. ಹೆಚ್ಚುವರಿ ಸದಸ್ಯರಿಗೆ ರೂ 200 ಪಾವತಿ ಮಾಡಬೇಕು)

2) ಗ್ರಾಮಾಂತರ-500 ರೂ , ಪರಿಶಿಷ್ಟ ಜಾತಿ/ಪಂಗಡದ ಸದಸ್ಯರಿಗೆ ಶುಲ್ಕ ಇರುವುದಿಲ್ಲ.
(4 ಸದಸ್ಯರಿಗೆ 500 ರೂ. ಹೆಚ್ಚುವರಿ ಸದಸ್ಯರಿಗೆ 100 ರೂ)

How to apply for yashaswini yojana- ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಆಸಕ್ತ ಅರ್ಹ ಅರ್ಜಿದಾರರು ನಿಮ್ಮ ಅಗತ್ಯ ದಾಖಲಾತಿ ಸಮೇತ ನಿಮ್ಮ ಹತ್ತಿರದ ವ್ಯವಸಾಯ ಸೇವಾ ಸಹಕಾರಿ ಸಂಘ(ಸೊಸೈಟಿ) ಶಾಖೆ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: PM Kisan ಹಣ ಜಮಾ ಆಗಲು NPCI Active ಕಡ್ಡಾಯ ಚೆಕ್ ಮಾಡಿ ಈ ಲಿಂಕ್ ಮೇಲೆ ಓತ್ತಿ ಪರಿಕ್ಷೀಸಿಕೊಳ್ಳಿ.

Required documents for yashaswini scheme- ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

1) ರೇಷನ್ ಕಾರ್ಡ ಪ್ರತಿ

2) ಪ್ರತಿ ಸದಸ್ಯರ ಆಧಾರ್ ಕಾರ್ಡ್

3) ಪ್ರತಿಯೊಬ್ಬರ ಎರಡು ಫೋಟೋ

4) ಪರಿಶಿಷ್ಟ ಜಾತಿ/ಪಂಗಡದ ಸದಸ್ಯರು ಕುಟುಂಬದ ಪ್ರತಿಯೊಬ್ಬರ ಆರ್ ಡಿ ನಂಬರ್ ಇರುವ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು.

Yashaswini scheme benefits- ಈ ಯೋಜನೆಯಡಿ ಯಾವೆಲ್ಲ ಪ್ರಯೋಜನ ಪಡೆಯಬಹುದು?

ಈ ಯೋಜನೆಯಡಿ ಅರ್ಜಿ ಸಲ್ಲಿಸಿ ನೋಂದಾವಣೆ ಮಾಡಿಕೊಳ್ಳುವ ಕುಟುಂಬಕ್ಕೆ ಆರೋಗ್ಯ ಸಂಬಂಧಿತ ಸೇವೆಗಳಿಗೆ ನಗದು ರಹಿತ ಅರ್ಥಿಕವಾಗಿ ಸರಕಾರದಿಂದ ನೆರವು ನೀಡಲಾಗುತ್ತದೆ.

1) ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕಿಯ ಚಿಕಿತ್ಸಾ ವೆಚ್ಚದ ಗರಿಷ್ಠ ರೂ. 5.00 ಲಕ್ಷದವರೆಗೆ ನಗದು ರಚಿತ ಅರ್ಥಿಕ ನೆರವು ನೀಡಲಾಗುತ್ತದೆ. ರಾಜ್ಯದ ಯಾವುದೇ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ.

2) ಯಶಸ್ವಿನಿ ಯೋಜನೆಯಡಿಯಲ್ಲಿ ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಿವಿ, ಮೂಗು, ಗಂಟಲು ವ್ಯಾದಿಗಳು, ಕರುಳಿನ ಖಾಯಿಲೆಗಳು, ನರಗಳಿಗೆ ಸಂಬಂಧಿಸಿದ ಖಾಯಿಲೆಗಳು ಹಾಗೂ ಈ ಯೋಜನೆಯಡಿ ಇತರೆ ಅನುಸೂಚಿತ ಸಾಮಾನ್ಯ ರೋಗಿಗಳಿಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಪಡೆಯಬಹುದು.

3) ಪ್ರಾರಂಭೀಕವಾಗಿ ಆಯುಷ್ಮಾನ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಅಳವಡಿಸಿಕೊಂಡಿರುವ 1650 ಖಾಯಿಲೆಗಳಿಗೆ ಚಿಕಿತ್ಸೆಗಳನ್ನು ಯಶಸ್ವಿನಿ ಯೋಜನೆಯಲ್ಲಿ ಅವಕಾಶವಿರುತ್ತದೆ.

4) ಯಶಸ್ವಿನಿ ಸದಸ್ಯರು ಜನರಲ್ ವಾರ್ಡಿನಲ್ಲಿ ಸೌಲಭ್ಯ ಪಡೆಯುವಲ್ಲಿ ಅರ್ಹತೆ ಹೊಂದಿರುತ್ತಾರೆ. ಯಶಸ್ವಿನಿ ಯೋಜನೆಯಡಿ ನೆಟ್ ವರ್ಕ್ ಆಸ್ಪತ್ರೆಯಲ್ಲಿ ಒದಗಿಸಿರುವ ಚಿಕಿತ್ಸಾ ಸೌಲಭ್ಯದಲ್ಲಿ ಔಷಧಿ ವೆಚ್ಚ, ಆಸ್ಪತ್ರೆ ವೆಚ್ಚ, ಶಸ್ತ್ರ ಚಿಕಿತ್ಸೆಯ ವೆಚ್ಚ, ಆಪರೇಷನ್ ಥಿಯೇಟರ್ ಬಾಡಿಗೆ, ಅರವಳಿಕೆ ತಾರ ಫೀ, ಕನ್ಸಲ್ಟಂಟ್ ಫೀ, ಬೆಡ್ ಚಾರ್ಜ್. ನರ್ಸ್ ಫೀ ಇತ್ಯಾದಿ ವೆಚ್ಚ ಒಳಗೊಂಡಿರುತ್ತದೆ.

5) ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಯಶಸ್ವಿನಿ ಸದಸ್ಯರಿಗೆ ಹೊರ ರೋಗಿ ಚಿಕಿತ್ಸೆಗೆ (OPD) ಗರಿಷ್ಠ ರೂ. 200/- ಗಳ (ಮೂರು ತಿಂಗಳ ಅವಧಿಗೆ) ಮಿತಿ ನಿಗಧಿಪಡಿಸಿದ್ದು, ನೆಟ್ ವರ್ಕ್ ಆಸ್ಪತ್ರೆಗಳು ಇದಕ್ಕಿಂತ ಹೆಚ್ಚಿನ ಶುಲ್ಕವನ್ನು ಸದಸ್ಯರಿಗೆ ವಿಧಿಸತಕ್ಕದ್ದಲ್ಲ. ಈ ಪೈಕಿ ರೂ. 100/-ಗಳನ್ನು ಯಶಸ್ವಿನಿ ಟ್ರಸ್ಟ್ ನ ವತಿಯಿಂದ ಪಾವತಿಸಲಾಗುತ್ತದೆ.

ಇತ್ತೀಚಿನ ಸುದ್ದಿಗಳು

Related Articles