Friday, November 22, 2024

First installment drought payment message: ಮೊದಲ ಕಂತಿನ ಬೆಳೆಹಾನಿ ಪರಿಹಾರ ಸಂದೇಶ ಬಂದರೂ ಹಣ ಜಮಾ ಆಗಿರದಿದ್ದರೇ ತಕ್ಷಣ ಈ ಕೆಲಸ ಮಾಡಿ!!!

ರಾಜ್ಯದ 37.7 ಲಕ್ಷ ರೈತರಿಗೆ ₹545.03 ಕೋಟಿ ಪಾವತಿ ಆಗಿದೆ. ಅಂದಾಜು 30 ಲಕ್ಷ ರೈತರಿಗೆ ಪರಿಹಾರ ಸಿಗಲಿದೆ. ಫೂಟ್ಸ್ ಡಾಟಾಬೇಸ್‌ನಲ್ಲಿ 7.7 ಲಕ್ಷ ರೈತರ ಮಾಹಿತಿಯೇ ಇರಲಿಲ್ಲ. ನೋಂದಣಿಯಲ್ಲಿ ಬಿಟ್ಟು ಹೋಗಿರುವ ಅರ್ಹ ರೈತರ ಮಾಹಿತಿಯನ್ನು ಮತ್ತೆ ದಾಖಲಿಸಲು ಸೂಚಿಸಲಾಗಿದೆ. ಎಲ್ಲ ಅರ್ಹ ರೈತರ ಆಧಾ‌ರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಈ ಪರಿಹಾರ ಹಣ ನೇರವಾಗಿ ಜಮೆ ಮಾಡಲಾಗುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿರುತ್ತದೆ..

ಈ ಲೇಖನದಲ್ಲಿ ಮುಖ್ಯವಾಗಿ ರೈತರು ನೋಂದಣಿ ಮಾಡಿಸಿರುವ ಪಟ್ಟಿ ಮತ್ತು ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ಚೆಕ್ ಮಾಡುವ ವಿಧಾನ ಹಾಗೂ ಪರಿಹಾರದ ಹಣ ಜಮಾ ಆಗದೇ ಇರುವ ರೈತರು ಏನು ಮಾಡಬೇಕು? ಪರಿಹಾರ ಹಣ ಬರದೇ ಇರುವ ರೈತರ ಪಟ್ಟಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಈ ಮಾಹಿತಿಯನ್ನು ಆದಷ್ಟೂ ರೈತರಿಗೆ ಹಂಚಿಕೊಳ್ಳಿ.

Check the name in drought relief list: ಬೆಳೆಹಾನಿ ಪರಿಹಾರ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fruitspmk.karnataka.gov.in/MISReport/FarmerDeclarationReport.aspx

ನಂತರ ನಿಮ್ಮ ಜಿಲ್ಲೆ ತಾಲೂಕು, ಹೊಬಳಿ, ಗ್ರಾಮ select ಮಾಡಿ ವಿಕ್ಷಿಸು ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ನಿಮ್ಮ ಗ್ರಾಮದ ನೋಂದಣಿ ಆಗಿರುವ ಎಲ್ಲಾ ರೈತರ ಮಾಹಿತಿ ದೊರೆಯುವುದು.

ಇದನ್ನೂ ಓದಿ: Agriculture Department machinery: ಯಾವ ಉಪಕರಣಕ್ಕೆ ಯಾವ ದಾಖಲೆಗಳು ಬೇಕು:

Drought relief Check link: ಬೆಳೆಹಾನಿ ಪರಿಹಾರ ಜಮಾ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service87/

ನಂತರ ನಿಮ್ಮ ಜಿಲ್ಲೆ, ತಾಲೂಕು, ಹೊಬಳಿ, ಗ್ರಾಮ, ವರ್ಷ, ಹಂಗಾಮು ಹಾಗೂ ಬೆಳೆಹಾನಿ ಕಾರಣ select ಮಾಡಿ, Get report ಮೇಲೆ ಕ್ಲಿಕ್ ಮಾಡಿ
ಇದೇ ರೀತಿ ಎಲ್ಲಾ ಗ್ರಾಮ ಪಂಚಾಯತಿ,ರೈತ ಸಂಪರ್ಕ ಕೇಂದ್ರಗಳಲ್ಲಿ FID ಮಾಡಿಸದ ಪಟ್ಟಿಯನ್ನು ಲಗತ್ತಿಸಲಾಗಿದ್ದು,ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ FID ಮಾಡಿಸಿಕೊಳ್ಳಿ

ಬರ ಪರಿಹಾರದ ಹಣ ಪಡೆಯಬೇಕಾದರೆ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಲೇಬೇಕು. ಒಂದು ವೇಳೆ ಎಫ್‌ಐಡಿ ಮಾಡಿಸದಿದ್ದರೆ ಹಣ ಬರುವುದಿಲ್ಲ. ಎಫ್‌ಐಡಿ ಮಾಡದೆ ಇರುವ ಕೂಡಲೇ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಎಫ್‌ಐಡಿ ಮಾಡಿಸಬೇಕು.

ಒಂದು ವೇಳೆ ಈ ಮೇಲೆ ಕಾಣಿಸಿರುವ ಎಲ್ಲಾ ಪ್ರಕ್ರಿಯೆಯಲ್ಲಿ ನಿಮ್ಮ ಹೆಸರು ಇದ್ದರೂ ಹಣ ಖಾತೆಗೆ ಬರದ್ದಿದರೆ ತಕ್ಷಣ ಈ ಕೆಲಸ ಮಾಡಿ:

ಹೌದು ಬರ ಪರಿಹಾರದ ಹಣ ಸರ್ಕಾರದಿಂದ ಬಿಡುಗಡೆ ಆದರೂ ಕೆಲವು ರೈತರಿಗೆ ತಾಂತ್ರಿಕ ದೋಷದಿಂದ ಮತ್ತು ರೈತರ ಮೊಬೈಲ್ SMS ಸಂದೇಶ ಬಂದಿದೇ ಆದರೇ ಖಾತೆಗೆ ಹಣ ಜಮಾ ಆಗಿರುವುದಿಲ್ಲ ಇದಕ್ಕೆ ಕಾರಣ ಈ ಕೆಳಗೆ ವಿವರಿಸಲಾಗಿದೆ.

ಹಣ ವರ್ಗಾವಣೆ ಪೇಲ್ ಆಗಲು ಕಾರಣಗಳು ಈ ಕೆಳಗಿನಂತಿವೆ:

1.ಆಧಾರ್‍ ನಲ್ಲಿ ಹೆಸರು ಮಿಸ್ ಮ್ಯಾಚ್ ಇರುವುದು.
ಆಧಾರ್‍ ಬ್ಯಾಂಕ್ ಖಾತೆಗೆ Seeding ಆಗದೆ ಇರುವುದು.( Aadhar not Seeded with Bank)
2.Aadhar Not Mapped to Account
3.NPCI Seeding Issue
4.Aadhar name is Mismatch in Fruits Update Name
5.Account Closed


ಮೇಲೇ ಕಾಣಿಸಿರುವ ಈ ಕಾರಣಗಳಿಂದ ನಿಮಗೆ ಹಣ ವರ್ಗಾವಣೆ ಆಗಿರುವುದಿಲ್ಲ. ಈ ರೈತರ ಮಾಹಿತಿಯನ್ನು ನಿಮ್ಮ ಗ್ರಾಮ ಪಂಚಾಯಿತಿಗೆ ನೀಡಿರುತ್ತದೆ. ಮತ್ತು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯನ್ನು ಸಂಪರ್ಕಿಸಿ ರೈತರ ಮಾಹಿತಿಯನ್ನು ಪಡೆದು ರೈತರು ಹದಿನೈದು ದಿನದೊಳಗೆ ಸರಿಪಡಿಸಿಕೊಳ್ಳಲು ಕಾಲಾವಕಾಶವನ್ನು ನೀಡಿರುತ್ತದೆ.

ಇದನ್ನೂ ಓದಿ: First installment drought payment Failure list:ಬರ ಪರಿಹಾರ ಹಣ ಬರದೇ ಇರುವವರ ಪಟ್ಟಿ ಮತ್ತು ಕಾರಣ :

ವಿಶೇಷ ಸೂಚನೆ : ಬರ ಪರಿಹಾರದ ಹಣ ವರ್ಗಾವಣೆ ಆಗದೆ ಇರುವ ರೈತರ ಪಟ್ಟಿ ನಿಮ್ಮ ನಿಮ್ಮ ತಾಲೂಕಿನ ಕೃಷಿ ಮತ್ತು ಕಂದಾಯ ಇಲಾಖೆಯಲ್ಲಿ ದೊರೆಯುವುದು ನಿಮ್ಮ ಹೆಸರು ಇದ್ದರೆ 15 ದಿನದೊಳಗೆ ಸಂಭಂಧ ಪಟ್ಟ ಬ್ಯಾಂಕ್ ಗೆ ತೆರಳಿ ಸರಿ ಪಡಿಸಿಕೊಳ್ಳಿ.

ಪರಿಹಾರ ಹಣ ಜಮಾ ಆಗದೇ ಇರುವ ರೈತರ ಪಟ್ಟಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ:

ಈವರೆಗೆ ಎಫ್‌ಐಡಿ ಮಾಡಿಸದೇ ಇರುವ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ ಅಥವಾ ಹೊಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ತಮ್ಮ ಆಧಾರ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ತಮ್ಮ ಮೂಬೈಲ್ ಸಂಖ್ಯೆಯೊಂದಿಗೆ ಹೋಗಿ ತುರ್ತಾಗಿ ಎಫ್‌ಐಡಿ ಮಾಡಿಸಬೇಕು. ಇದಕ್ಕೆ ತಪ್ಪಿದಲ್ಲಿ ಸರ್ಕಾರದಿಂದ ನೀಡಲ್ಪಡುವ ಪರಿಹಾರದ ಮೊತ್ತದಿಂದ ರೈತರು ವಂಚಿತರಾಗಬೇಕಾಗುತ್ತದೆ.

ಬರ ಪರಿಹಾರದಲ್ಲಿ ಬೆಳೆ ಸಮೀಕ್ಷೆ ದತ್ತಾಂಶ ಹಾಗೂ ಫ್ರಟ್ಸ್ ತಂತ್ರಾಂಶದಲ್ಲಿರುವ ಅಂಕಿ ಅಂಶಗಳ ಆಧಾರದಲ್ಲಿ ಬೆಳೆ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾವತಿಯಾಗುವುದರಿಂದ, ರೈತರು ತಮ್ಮ ಜಮೀನಿನ ನಿಖರವಾದ ವಿಸ್ತೀರ್ಣವನ್ನು ಫ್ರುಟ್ಸ್ ತಂತ್ರಾಂಶದಲ್ಲಿ ಆಧಾ‌ರ್- ಪಹಣಿ ಜೋಡಣೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಈ ಹಿಂದೆ ಗ್ರಾಮ ಲೆಕ್ಕಾಧಿಕಾರಿಗಳು ಬೆಳೆ ನಷ್ಟ ವಿವರವನ್ನು ನಮೂದಿಸಿ, ಅದಕ್ಕನುಗುಣವಾಗಿ ಪರಿಹಾರ ಮೊತ್ತ ನೀಡುವ ವ್ಯವಸ್ಥೆ ಇತ್ತು. ಸರ್ಕಾರವು 2023 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರವನ್ನು ಬೆಳೆ ಸಮೀಕ್ಷೆ ಮತ್ತು ಫ್ರುಟ್ಸ್ ನಲ್ಲಿ ನೊಂದಣಿಯಾಗಿರುವ ಬೆಳೆ ಮತ್ತು ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಿರುವುದರಿಂದ, ರೈತರು ತಮ್ಮ ಜಮೀನಿನ ಯಾವುದೇ ಸರ್ವೆ ನಂಬರ್ ಬಿಟ್ಟುಹೋಗದಂತೆ, ಎಲ್ಲಾ ಸರ್ವೆ ನಂಬರಳನ್ನು ನೊಂದಣಿ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ.

ಇದುವರೆಗೂ ಫ್ರುಟ್ಸ್ ನಲ್ಲಿ ನೊಂದಣಿ ಆಗದೇ ಇರುವ ರೈತರು ಆಧಾರ್ ಕಾರ್ಡ್, ಪಹಣಿ, ಜಾತಿ ಪ್ರಮಾಣಪತ್ರ ಮತ್ತು ಬ್ಯಾಂಕ್ ಪಾಸ್ ಪುಸ್ತಕ ವಿವರಗಳನ್ನು Fruits ನಲ್ಲಿ ದಾಖಲಿಸಿಕೊಂಡು ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಹಾಗೂ ವಿವಿಧ ಇಲಾಖೆಗಳ ಸೌಲಭ್ಯ ಪಡೆದುಕೊಳ್ಳುವಂತೆ ಕೋರಲಾಗಿದೆ.

ಇತ್ತೀಚಿನ ಸುದ್ದಿಗಳು

Related Articles