Tuesday, December 3, 2024

First installment drought payment Failure list:ಬರ ಪರಿಹಾರ ಹಣ ಬರದೇ ಇರುವ ರೈತರ ಪಟ್ಟಿ ಮತ್ತು ಕಾರಣ :

ರಾಜ್ಯ ಸರ್ಕಾರದಿಂದ 2023 24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಬರಗಾಲ ಉಂಟಾದ ಹಿನ್ನೆಲೆಯಲ್ಲಿ ಘೋಷಿಸಲಾದ ಪರಿಹಾರ ಧನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಹೌದು ಗರಿಷ್ಠ 2000/- ರೂ. ವರೆಗೆ ತಾತ್ಕಾಲಿಕ ಬೆಳೆ ಪರಿಹಾರವನ್ನ ಆರ್ಹ ರೈತರಿಗೆ ನೀಡಲು ರಾಜ್ಯ ಸರ್ಕಾರ ಕಳೆದ ಕೆಳೆದ ಜನವರಿ ತಿಂಗಳ ಮಾಹೆಯಲ್ಲಿ 105 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿರುತ್ತದೆ. .ಆದರೆ ಈ ಒಂದು ಲೇಖನದಲ್ಲಿ ರೈತರಿಗೆ ಹಣ ಜಮಾ ಆಗದೇ ಇರುವ ರೈತರ ಪಟ್ಟಿ ಮತ್ತು ರೈತರ ಖಾತೆಗೆ ಹಣ ಜಮಾ ಆಗಿರುವ ಸ್ಟೇಟಸ್ ಚೆಕ್ ಮಾಡುವ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ವಿವರಿಸಲಾಗಿದೆ.

ಹೌದು ಬರ ಪರಿಹಾರದ ಹಣ ಸರ್ಕಾರದಿಂದ ಬಿಡುಗಡೆ ಆದರೂ ಕೆಲವು ರೈತರಿಗೆ ತಾಂತ್ರಿಕ ದೋಷದಿಂದ ಮತ್ತು ರೈತರ ಮೊಬೈಲ್ SMS ಸಂದೇಶ ಬಂದಿದೇ ಆದರೇ ಖಾತೆಗೆ ಹಣ ಜಮಾ ಆಗಿರುವುದಿಲ್ಲ ಇದಕ್ಕೆ ಕಾರಣ ಈ ಲೇಖನದಲ್ಲಿ ವಿವರಿಸಲಾಗಿದೆ.

Reason for Payment Failure : ಹಣ ವರ್ಗಾವಣೆ ಪೇಲ್ ಆಗಲು ಕಾರಣಗಳು ಈ ಕೆಳಗಿನಂತಿವೆ:

1.ಆಧಾರ್‍ ನಲ್ಲಿ ಹೆಸರು ಮಿಸ್ ಮ್ಯಾಚ್ ಇರುವುದು.
2.ಆಧಾರ್‍ ಬ್ಯಾಂಕ್ ಖಾತೆಗೆ Seeding ಆಗದೆ ಇರುವುದು.( 3.Aadhar not Seeded with Bank)
4.Aadhar Not Mapped to Account
5.NPCI Seeding Issue
6.Aadhar name is Mismatch in Fruits Update Name
7.Account Closed


ಮೇಲೇ ಕಾಣಿಸಿರುವ ಈ ಕಾರಣಗಳಿಂದ ನಿಮಗೆ ಹಣ ವರ್ಗಾವಣೆ ಆಗಿರುವುದಿಲ್ಲ. ಈ ರೈತರ ಮಾಹಿತಿಯನ್ನು ನಿಮ್ಮ ಗ್ರಾಮ ಪಂಚಾಯಿತಿಗೆ ನೀಡಿರುತ್ತದೆ. ಮತ್ತು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯನ್ನು ಸಂಪರ್ಕಿಸಿ ರೈತರ ಮಾಹಿತಿಯನ್ನು ಪಡೆದು ರೈತರು ಹದಿನೈದು ದಿನದೊಳಗೆ ಸರಿಪಡಿಸಿಕೊಳ್ಳಲು ಕಾಲಾವಕಾಶವನ್ನು ನೀಡಿರುತ್ತದೆ.

ವಿಶೇಷ ಸೂಚನೆ : ಬರ ಪರಿಹಾರದ ಹಣ ವರ್ಗಾವಣೆ ಆಗದೆ ಇರುವ ರೈತರ ಪಟ್ಟಿ ನಿಮ್ಮ ನಿಮ್ಮ ತಾಲೂಕಿನ ಕೃಷಿ ಮತ್ತು ಕಂದಾಯ ಇಲಾಖೆಯಲ್ಲಿ ದೊರೆಯುವುದು ನಿಮ್ಮ ಹೆಸರು ಇದ್ದರೆ 15 ದಿನದೊಳಗೆ ಸರಿ ಪಡಿಸಿಕೊಳ್ಳಿ.

ಹಣ ಜಮಾ ಆಗದೇ ಇರುವ ರೈತರ ಪಟ್ಟಿ ಈ ಕೆಳಗೆ ನೀಡಿರುತ್ತೇವೆ.
ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಇದನ್ನೂ ಓದಿ: Panchamitra Whatsapp Number: ಗ್ರಾಮ ಪಂಚಾಯಿತಿ ಸೇವೆ ಮತ್ತು ಸಮಸ್ಯೆಗಳಿಗೆ ಈ ವಾಟ್ಸಪ್ ನಂಬರ್‍ ಕಳುಹಿಸಿ :

Payment Check Procedure: ಬರ ಪರಿಹಾರದ ಹಣ ಚೆಕ್ ಮಾಡುವ ವಿಧಾನ:

ಮೊದಲ ಕಂತಿನ 2000/- ಹಣ ಬಿಡುಗಡೆ ಕೆಳಗೆ ಕೊಟ್ಟಿರುವ ಬೆಳೆ ಪರಿಹಾರದ ಸ್ಟೇಟಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊದಲು ಆಧಾರ್‍ ನಂಬರ್‍ ಹಾಕಿ, select calamity type ನಲ್ಲಿ drought ಆಯ್ಕೆ ಮಾಡಿ ವರ್ಷ ಸೀಸನ್ 2023-24 ಸೆಲೆಕ್ಟ್ ಮಾಡಿಕೊಳ್ಳಿ. ಆಧಾರ್‍ ನಮೂದಿಸಿ ನಂತರ captcha letter type ಗೇಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಪರಿಹಾರ ಜಮಾ ವಿವರ ಗೋಚರಿಸುತ್ತದೆ.

https://parihara.karnataka.gov.in/

How much compensation for which crop ? ಯಾವ ಬೆಳೆಗೆ ಎಷ್ಟು ಪರಿಹಾರ?

ಮಳೆಯಾಶ್ರಿತ ಬೆಳೆ (ಪ್ರತಿ ಹೆಕ್ಟೇ‌ರ್) 8,500 ರೂ., ನೀರಾವರಿ ಬೆಳೆ 17,000 ರೂ., ಹಾಗೂ ಬಹು ವಾರ್ಷಿಕ ಬೆಳೆ 22,500 ರೂ. ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರ ಎನ್‌ಡಿಆರ್‌ವ್ ಅಡಿ ಈವರೆಗೂ ಅನುದಾನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಸದ್ಯಕ್ಕೆ ಬೆಳೆ ಹಾನಿ ಪರಿಹಾರದ ಮೊದಲ ಕಂತಾಗಿ ಪ್ರತಿ ರೈತರಿಗೆ ಗರಿಷ್ಠ 2 ಸಾವಿರ ರೂ. ವರೆಗೆ ಪಾವತಿ ಮಾಡಲು ರಾಜ್ಯ ಸರ್ಕಾರ 105 ಕೋಟಿ ರೂ.ಗಳನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರದ ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಮಾರ್ಗಸೂಚಿ ಪ್ರಕಾರ ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 8,500 ರು., ನೀರಾವರಿ ಬೆಳೆಗೆ 17,000 ರು., ಬಹುವಾರ್ಷಿಕ ಬೆಳೆಗೆ 22,500 ರು. ನಿಗದಿ ಮಾಡಲಾಗಿದೆ. ಆ ಪ್ರಕಾರ ಕೇಂದ್ರದಿಂದ ಬೆಳೆ ಹಾನಿ ಪರಿಹಾರ ಅನುದಾನ ಬಂದ ಬಳಿಕ ಹೆಚ್ಚುವರಿ ಮೊತ್ತಕ್ಕೆ ಅರ್ಹರಿರುವ ರೈತರಿಗೆ ಹೆಚ್ಚುವರಿ ಬೆಳೆಹಾನಿ ಪರಿಹಾರ ಬಿಡುಗಡೆಗೊಳಿಸಲಾಗುವುದು ಎ೦ದು ಕೂಡ ಸರ್ಕಾರ ಭರವಸೆ ನೀಡಿದೆ.

ಇದನ್ನೂ ಓದಿ: PM Kisan ಹಣ ಜಮಾ ಆಗಲು NPCI Active ಕಡ್ಡಾಯ ಚೆಕ್ ಮಾಡಿ ಈ ಲಿಂಕ್ ಮೇಲೆ ಓತ್ತಿ ಪರಿಕ್ಷೀಸಿಕೊಳ್ಳಿ.

ಇತ್ತೀಚಿನ ಸುದ್ದಿಗಳು

Related Articles