Thursday, November 21, 2024

PMKSY-OI Scheme: PVC Pipe ಮತ್ತು Diesel pump set – ಶೇ. 50 ರ ಸಹಾಯಧನದಲ್ಲಿ ವಿತರಣೆ:

ರೈತ ಭಾಂದವರೇ ಕೃಷಿ ಇಲಾಖೆಯಲ್ಲಿ 2023-24ನೇ ಸಾಲಿನಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಇತರೇ ಉಪಚಾರಗಳು (PMKSY-OI) ಯೋಜನೆಯಡಿ ವಿನೂತನ ಯೋಜನೆಯನ್ನು ಜಾರಿಗೊಳಿಸಲಾಗಿದ್ದು.

ಈ ಯೋಜನೆಯಡಿ ರೈತರಿಗೆ ವಿವಿಧ ಘಟಕಗಳಡಿ ಸಹಾಯಧನವನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ಯಾವ ಯಾವ ಘಟಕಗಳಿಗೆ ಸಹಾಯಧನ ಪಡೆಯಬಹುದು.ಮತ್ತು ಬೇಕಾದ ದಾಖಲೆಗಳೇನು? ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿರುತ್ತದೆ.

ಕೃಷಿ ಇಲಾಖೆಯ ಮತ್ತು ಜಲಾನಯನ ಅಭಿವೃದ್ದಿ ಇಲಾಖೆ 2023-24 ನೇ ಯೋಜನೆಯಡಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತರಿಗೆ ಈ ಕೆಳಗೆ ನೀಡಿರುವ ಘಟಕಗಳಿಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Anugraha scheme-2023 ಯೋಜನೆಯಡಿ ಜಾನುವಾರುಗಳಿಗೆ ಸಹಾಯಧನ .(ಪರಿಹಾರ)

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಇತರೇ ಉಪಚಾರಗಳು ( PMKSY-OI) ಯೋಜನೆಯಡಿ ಕೃಷಿ ಇಲಾಖೆವತಿಯಿಂದ ನೀರು ಹಾಯಿಸುವ ಪಿವಿಸಿ (PVC Pipe) (ಬಿಳಿ ಪೈಪ್) ಲಭ್ಯವಿದ್ದು, ಶೇಕಡ 50% ರ ಸಹಾಯಧನವನ್ನು ರೈತರ ಖಾತೆಗೆ ನೇರವಾಗಿ ( DBT) ಮೂಲಕ ಸಂದಾಯ ಮಾಡಲಾಗುವುದು.

ಪ್ರಕಟಣೆ*
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಲ್ಲಿರುತ್ತದೆ. ಆಸಕ್ತ ರೈತರು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಹಾಗೂ ಕೃಷಿ ಇಲಾಖೆಯಲ್ಲಿ ಸಂಪರ್ಕಿಸಿ ಸದ್ಯ ಹಾಸನ ಜಿಲ್ಲೆಯಲ್ಲಿ ರೈತ ಸಂಪರ್ಕ ಕೇಂದ್ರ, ದುದ್ದ ಹೋಬಳಿಯಲ್ಲಿ ಈ ಯೋಜನೆ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಇತರೆ ಉಪಚಾರ PMKSY-OI 2023-24ನೇ ಸಾಲಿನಲ್ಲಿ ಎಲ್ಲಾ ವರ್ಗಕ್ಕೂ ಶೇಕಡಾ 50 ರ ಸಹಾಯದನಲ್ಲಿ ಪಿ.ವಿ.ಸಿ ಪೈಪುಗಳು ಲಭ್ಯವಿದ್ದು
ಪೈಪಿನ ವಿವರ ಈ ರೀತಿ ಇದೆ:

SIZE Inch Pipe no. Rtgs
1 32MM ,1 85. 9912
2 63MM , 2 . 50 9912
3 75MM , 2 ,1/2 38. 9932
4 40MM, 1,1/4 90. 9894
5 50MM, 1,1/2 58 9813

PVC Pipe (ಬಿಳಿ ಪೈಪ್) ಸಹಾಯಧನದಲ್ಲಿ ಪಡೆಯಲು ದಾಖಲೆಗಳು:
ಫಲಾನುಭವಿಗಳ ಆಧಾರ ಕಾರ್ಡ
ರೆಕಾರ್ಡ RTC
20 ರೂ ಬಾಂಡ್
ನೀರಾವರಿ ಪ್ರಮಾಣ ಪತ್ರ
ಹಿಡುವಳಿ ಪತ್ರ
ಪೋಟೋ
ರೂ 20/- ರ ಸ್ಟ್ಯಾಂಪ್ ಕಾಗದ
.ರೈತರ ವಂತಿಕೆ ಪಾವತಿಯಾ ಗಿರುವ ಪಾಸಬುಕ್ ಝೆರಾಕ್ಸ್

ಇದನ್ನೂ ಓದಿ: Crop insurance application Rejected : ಬೆಳೆ ವಿಮೆ ಪರಿಹಾರ ಸಂಬಂಧಿಸಿದ ಕಂಪನಿಯಿಂದ ತಿರಸ್ಕ್ರತಗೊಂಡ ರೈತರ ಪಟ್ಟಿ!!

Diesel pumpset subsidy scheme- ಘಟಕವಾರು ಸಹಾಯಧನ ವಿವರ ಹೀಗಿದೆ:

ಹೊಸದಾಗಿ ಕೊಳವೆ ಬಾವಿಯನ್ನು ಕೊರೆಸುವವರಿಗೆ ರೂ.25000/- ಪ್ರೋತ್ಸಾಹ ಧನ ನೀಡಲಾಗುವುದು.

ಹೊಸದಾಗಿ ಡೀಸೆಲ್ ಮತ್ತು ವಿದ್ಯುತ್‌ ಚಾಲಿತ ನೀರೆತ್ತುವ ಯಂತ್ರ ಖರಿದೀಸಿದರೆ ರೂ.15000/- ಪ್ರೋತ್ಸಾಹ ಧನ ನೀಡಲಾಗುವುದು.

ಹೊಸದಾಗಿ ಸೌರ/ಗಾಳಿ ಚಾಲಿತ ನೀರೆತ್ತುವ ಯಂತ್ರ ಖರಿದೀಸಿದರೆ ರೂ.50000/- ಪ್ರೋತ್ಸಾಹ ಧನ, ನೀಡಲಾಗುವುದು.

ಪೈಪ್ ಅಳವಡಿಕೆ ಪ್ರತೀ ಹೆಕ್ಟೇರ್ ಗೆ ರೂ.10000/-ಪ್ರೋತ್ಸಾಹ ಧನ ನೀಡಲಾಗುವುದು.

ನಿಷ್ಕ್ರಿಯಗೊಂಡ ಕೊಳವೆ ಬಾವಿಗಳ ಪುನಶ್ವೇತನಕ್ಕೆ ರೂ.5000/- ಪ್ರೋತ್ಸಾಹ ಧನ ನೀಡಲಾಗುವುದು.

ಇದನ್ನೂ ಓದಿ: Drought relief Grant district wise: ಯಾವ ಜಿಲ್ಲೆಗೆ ಎಷ್ಟು ಬರ ಪರಿಹಾರ ಹಣ? ಯಾರಿಗೆ ಜಮಾ ?

How can apply- ಯಾರೆಲ್ಲ ಈ ಯೋಜನೆಯಡಿ ಸಹಾಯಧನ ಪಡೆಯಬವುದು?

ಈ ಯೋಜನೆಯಡಿ ಫಲಾನುಭವಿಯಾಗಲು ಕನಿಷ್ಟ 1 ಎಕರೆ ಹಾಗೂ ಗರಿಷ್ಟ 1 ಹೆಕ್ಟೇರ್ ವಿಸ್ತೀರ್ಣ ಹೊಂದಿರಬೇಕು.

ಜಂಟಿ ಪಹಣಿ ಹೊಂದಿದ್ದಲ್ಲಿ ಇತರರಿಂದ ರೂ.20 ಬಾಂಡ್ ಪೇಪರ್‌ನಲ್ಲಿ ಒಪ್ಪಿಗೆ ಪತ್ರ ಪಡೆಯುದು.

ಪಂಚಾಯತ್ ಅಧ್ಯಕ್ಷರಿಂದ ಶೀಫಾರಸ್ಸು ಪತ್ರನೀಡಬೇಕಾಗಿರುತ್ತದೆ.


ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಇಲಾಖೆಯನ್ನು ಸಂಪರ್ಕಿಸಿ

ಇತ್ತೀಚಿನ ಸುದ್ದಿಗಳು

Related Articles