ಆತ್ಮೀಯರೇ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಡೋಂಗ್ರಿ ಪಂಚಾಯಿತಿಗೆ ಒಳಪಡುವ ಗ್ರಾಮವಾದ ಕೋನಾಳದ ರೈತರಾದ ರಾಮಚಂದ್ರ ಗಿರೀಶ ಭಟ್ಟ ಕೋನಾಳರವರು ಕೃಷಿಯಲ್ಲಿ ಹೊಸ ಬೆಳೆಗಳನ್ನು ಬೆಳೆಯುತ್ತ ಕೃಷಿಯಲ್ಲಿ ತಮ್ಮದೇ ಆದ ಒಟ್ಟು ಕೃಷಿ ಕ್ಷೇತ್ರ :3ಎಕರೆ 30ಗುಂಟೆಯಲ್ಲಿ ಹಲವಾರು ಬೆಳೆಗಳನ್ನು ಬೆಳೆದು ಕೃಷಿಯಿಂದ ಖುಷಿಯಾಗಿ ತಮ್ಮ ಕುಂಟುಂದವರೇ ಸೇರಿ ಕೃಷಿ ಮಾಡುತ್ತಿರುತ್ತಾರೆ.
ಹೌದು, ಈ ರೈತರು ತಮ್ಮ ಕೃಷಿ ಜಮೀನಿನಲ್ಲಿ ತೋಟದಲ್ಲಿ ನೀರಾವರಿ ಸ್ವತಃ ತಾವೇ ಮಾಡಿ,ಇಂದಿನ ಕೆಲಸಗಾರರ ಸಮಸ್ಯೆಯನ್ನು ಕಡಿಮೆಮಾಡಿಕೊಳ್ಳಲು ಬರಣದಲ್ಲಿ ಮೋಟೋಕಾರ್ಟ ಗಾಡಿ ಓಡಾಡಡುವಂತೆ ಮಾಡಿರುತ್ತಾರೆ. ಈಗಾಗಲೇ ಪಚೋಲಿ, ವೆನಿಲ್ಲ, ಕೊಕ್ಕೋ, ಇವುಗಳನ್ನು ದೊಡ್ಡಪ್ರಮಾಣದಲ್ಲಿ ಬೆಳೆದು ಆದಾಯಕ್ಕಿಂತ ಹೆಚ್ಚು ಒಂದಿಷ್ಟು ಅನುಭವಗಳನ್ನು ಪಡೆದುಕೊಂಡಿದ್ದಾರೆ.
ತೋಟ,ಗಂಗಾವಳಿ ಪ್ರವಾಹಕ್ಕೆ ತುತ್ತಾಗಿ ನೆಟ್ಟ ಕಾಳುಮೆಣಸು ನಾಶವಾಗುತ್ತಿರುವ ಕಾರಣ, ಸ್ಥಳ ಬದಲಾಯಿಸಿ ಬೆಟ್ಟದಲ್ಲಿ ಕಾಳುಮೆಣಸು ಬೆಳೆದು ಯಶಸ್ಸನ್ನು ಪಡೆದಿರುತ್ತಾರೆ. ಅಷ್ಟೇ ಅಲ್ಲದೆ, ಸೊಪ್ಪಿನ ಬೆಟ್ಟದಲ್ಲಿ ನೀರಾವರಿ ಮಾಡಿ, ಅನೇಕ ಹಣ್ಣಿನ ಗಿಡಗಳನ್ನು ನೆಟ್ಟಿರುತ್ತಾರೆ.
ಕ್ಯಾನ್ಸರ್ ಔಷಧಿ ಬೆಳೆಯಲು ಮುಂದಾದ ಯಶಸ್ವಿ ರೈತ:
ಮುಂದಿನ ದಿನಗಳಲ್ಲಿ ಕ್ಯಾನ್ಸರಿಗೆ Cancer ಔಷದಿಯಾಗಿ ಬಳಕೆಯಾಗುತ್ತಿರುವ ಲಕ್ಷ್ಮಣ ಫಲದ ಗಿಡವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಯೋಜನೆ ಇದ್ದು,ಈಗಾಗಲೇ ಗಿಡವನ್ನು ಬೆಳೆಸುತ್ತಿದ್ದಾರೆ.ಹೆಚ್ಚು ಪ್ರಚಾರದಲ್ಲಿರುವ, ಪ್ರಯೋಜನ ನೀಡುತ್ತಿರುವ ನೋನಿ ಗಿಡವನ್ನು ಬೆಳೆಸಿರುತ್ತಾರೆ.
ಜೊತೆಯಲ್ಲಿ ನೋನಿ ಒಳಗೊಂಡು ಹತ್ತಕ್ಕೂ ಹೆಚ್ಚು ಗಿಡಮೂಲಿಕೆಗಳನ್ನು ಬಳಸಿ ನೋವು ನಿವಾರಣಾ ತೈಲವನ್ನು ತಯಾರಿಸಿ ಜನರಿಗೆ ತಲುಪಿಸುತ್ತಿದ್ದಾರೆ. ಕೃಷಿಗೆ ಪೂರಕವಾದ ಹೈನುಗಾರಿಕೆ ನಡೆಸುತ್ತಿದ್ದಾರೆ. ಜೇನು ಸಾಕಾಣಿಕೆಯನ್ನು ಜೊತೆಯಲ್ಲೇ ಮಾಡುತ್ತಿದ್ದಾರೆ.
ಹೊಸ ಹೊಸ ಜಾತಿಯ ಅನೇಕ ಹಣ್ಣಿನ ಗಿಡಗಳಾದ, ಅರಾಸ್, ಚೆರಿ, ಪೇರಲೆ, ಸಿಹಿ ಕರಗಲ, ರೆಡ್&ವೈಟ್ ವಾಟರ್ ಆಪಲ್, ಚಿಕ್ಕು, ರುದ್ರಾಕ್ಷಿ, ಲವಂಗ, ದಾಲಚಿನ್ನಿ, ಬೋರೆ ಸೀತಾಫಲ, ರಾಮಫಲ, ಹೀಗೆ ಅನೇಕ ಜಾತಿಯ ಗಿಡ ಬೆಳೆಸಿದ್ದಾರೆ. ಬಾಳೆ, ಅಡಿಕೆ, ತೆಂಗು, ಅಜೋಲಾ, ಸರ್ಕಾರಿ ಹುಲ್ಲು, ವೆನಿಲ್ಲ ಇವುಗಳನ್ನು ಬೆಳೆಸಿರುತ್ತಾರೆ. ಇವರ ಉದ್ಯೋಗಕ್ಕೆ ಪ್ರತಿ ಹಂತದಲ್ಲಿ ಜೊತೆಯಾಗಿ ಇವರ ಹೆಂಡತಿ ಸಹಕರಿಸುವದರೊಂದಿಗೆ, ತನ್ನ ಆಸಕ್ತಿಯಂತೆ ಮಗಳಿಗೂ ಕೃಷಿಯಲ್ಲಿ ಆಸಕ್ತಿ ಇದ್ದು, ಅವಳನ್ನು ಕೂಡ Horticulture Bsc ಓದಿಸುತ್ತಿದ್ದಾರೆ.
ಸದಾ ಕೃಷಿಯನ್ನು ಪ್ರೀತಿಸುವ ಇವರು ಬಹುಮುಖ ಪ್ರತಿಭೆ ಯುಳ್ಳವರಾಗಿದ್ದಾರೆ. ಜಲದ ಮೂಲವನ್ನು ನೋಡಿಕೊಡುವದು, ಮಷಿನರಿ ಸಣ್ಣ ಪುಟ್ಟ ರಿಪೇರಿ,plumbing work ಇವರ ಇತರೆ ಆಸಕ್ತಿಗಳಾಗಿವೆ. ಪ್ರಾಮಾಣಿಕರು, ಸದಾ ಶ್ರಮಿಕರು ಆದ ಇವರು ಮಾಡುವ ಪ್ರತಿ ಕೆಲಸದಲ್ಲೂ ಶಿಸ್ತನ್ನು, ವ್ಯವಸ್ಥಿತವಾದ ಕೆಲಸವನ್ನು ಕಾಣಬಹುದು.”ಇರುವಲ್ಲೇ ಸಂತೋಷವನ್ನು ಕಾಣಬೇಕು” ಅನ್ನುವದು ಇವರ ಮನೋಸ್ಥಿತಿ.
ಇದನ್ನೂ ಓದಿ: Drought relief Grant district wise: ಯಾವ ಜಿಲ್ಲೆಗೆ ಎಷ್ಟು ಬರ ಪರಿಹಾರ ಹಣ? ಯಾರಿಗೆ ಜಮಾ ?
Yield: ಇಳುವರಿ:
ಎಕರೆಗೆ 15-20 ಕ್ವಿಂಟಲ್ ಅಡಿಕೆ
ತೆಂಗು :ವರ್ಷಕ್ಕೆ 5000ಕಾಯಿ
ಹಸುವಿನ ಹಾಲು :15-20 ಲೀ.
ಶ್ರೀ ಗಿರೀಶ್ ಭಟ್ಟ, ಹಾಗೂ ಶೋಭಾ ಇವರ ಮಗನಾದ ಇವರ ಪತ್ನಿ ಶಾರದಾ, ಹಾಗೂ ನಿಸರ್ಗ, ಪ್ರಥ್ವಿ, ಇವರಿಬ್ಬರು ಹೆಣ್ಣುಮಕ್ಕಳು. ಮೂಲತಃ ಕೃಷಿ ಕುಟುಂಬದಲ್ಲಿ ಜನಿಸಿದ ಇವರಿಗೆ ಕೃಷಿಯಲ್ಲಿ ಬಹಳ ಆಸಕ್ತಿ. ಹೊಸ ಹೊಸ ಯೋಜನೆಯ ಮೂಲಕ ಕೃಷಿಯಲ್ಲಿ ಸುಧಾರಣೆ ಮಾಡಬೇಕೆಂಬುವುದು ಸದಾ ಇವರ ಯೋಚನೆ. ಮೂಲ ಉದ್ಯೋಗ ಕೃಷಿ. ಅನ್ಯತಾ ತಿರುಗಾಟವನ್ನು ಬಯಸದೆ ಸದಾ ಕೃಷಿ ಕೆಲಸದಲ್ಲಿ ತೊಡಗಿಕೊಳ್ಳುವದು ಇವರ ಹವ್ಯಾಸ.”ಕಾಯಕವೇ ಕೈಲಾಸ “ಅನ್ನೋ ಬಸವಣ್ಣನವರ ನುಡಿ ಇವರಿಗೆ ಅನ್ವಯಿಸುತ್ತದೆ.
ಮುಂದಿನ ದಿನಗಳಲ್ಲಿ ಕ್ಯಾನ್ಸರಿಗೆ ಔಷದಿಯಾಗಿ ಬಳಕೆಯಾಗುತ್ತಿರುವ ಲಕ್ಷ್ಮಣ ಫಲದ ಗಿಡವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಯೋಜನೆ ಇವರದು ಇದ್ದು ಆದಷ್ಟೂ ಬೇಗ ಆ ಒಂದು ಔಷಧಿ ಸಸ್ಯ ಬೆಳೆಯದು ಹೆಚ್ಚಿನ ಅಭಿವೃದ್ದಿ ಹೊದಲಿ ಎನುವುದೇ ನಮ್ಮ ಆಶಯ.
ಇದನ್ನೂ ಓದಿ: PM- Kisan 16th installment: ಪಿ ಎಂ ಕಿಸಾನ್ 16 ನೇ ಕಂತಿನ ಹಣಕ್ಕೆ ಈ ಪ್ರಕ್ರಿಯೆ ಕಡ್ಡಾಯ!!!