Thursday, September 19, 2024

Drought relief Grant district wise: ಯಾವ ಜಿಲ್ಲೆಗೆ ಎಷ್ಟು ಬರ ಪರಿಹಾರ ಹಣ? ಯಾರಿಗೆ ಜಮಾ ?

ರಾಜ್ಯ ಸರ್ಕಾರ ಮುಂಗಾರು ಹಂಗಾಮಿನ ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಈ ಪರಿಹಾರ ಹಣ ಜಮಾ ಯಾರಿಗೆ ಆಗಿದೆ ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಮಾಹಿತಿಯನ್ನು ನೀಡಿರುತ್ತದೆ. ಈ ಮಾಹಿತಿಯನ್ನು ಓದಿ ಇನ್ನೂ ಹೆಚ್ಚಿನ ರೈತರಿಗೆ ಶೇರ್‍ ಮಾಡುವ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಿ.

ಸರ್ಕಾರ ಇದೇ ಕಳೆದ ತಿಂಗಳ ದಿನಾಂಕ: 25 ಜನವರಿ 2024 ರವರೆಗೆ ಮೊದಲ ಹಂತದ ಬರ ಪರಿಹಾರ ಹಣವನ್ನು ರಾಜ್ಯದ ರೈತರಿಗೆ ಬಿಡುಗಡೆ ಮಾಡಲಾಗಿದ್ದು. ಕೃಷಿ ಇಲಾಖೆಯ ಪೂಟ್ಸ್ Fruits ತಂತ್ರಾಂಶದಲ್ಲಿ ದಾಖಲಿಸಿರುವ ಮಾಹಿತಿ ಆಧಾರದ ಮೇಲೆ ರೈತರ ಖಾತೆಗೆ ಪ್ರಥಮ ಕಂತಿನ ರೂ 2,000 ಜಮಾ ಆಗಿದೆ.

ಇದನ್ನೂ ಓದಿ: ಭೂಮಿ ಸೇವೇಗಳು, ಮೋಜಿನಿ ಸೇವೆಗಳು, ಇತರೆ ಸೇವೆಗಳ ದರಪಟ್ಟಿ?

ರಾಜ್ಯ ಸರ್ಕಾರ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿಧಿಯಿಂದ (SDRF Karntaka) ಅನುದಾನ ಬಿಡುಗಡೆ ಮಾಡಿದ್ದು, ಒಟ್ಟು 324 ಕೋಟಿಯ ಅನುದಾನವನ್ನು ಜಿಲ್ಲಾಧಾರಿತವಾಗಿ ಬಿಡುಗಡೆ ಮಾಡಿದೆ.


ಬೆಂಗಳೂರು ನಗರ- 7.50 ಕೋಟಿ.
ಬೆಂಗಳೂರು ಗ್ರಾಮಾಂತರ- 6. ಕೋಟಿ.
ಕೋಲಾರ- 9. ಕೋಟಿ.
ಚಿಕ್ಕ ಬುಳ್ಲಾಪುರ- 9 ಕೋಟಿ.
ತುಮಕೂರು-15 ಕೋಟಿ.
ಚಿತ್ರದುರ್ಗ- 9 ಕೋಟಿ.
ದಾವಣಗೆರಿ-9 ಕೋಟಿ.
ಚಾಮರಾಜನಗರ-7.50 ಕೋಟಿ.
ಮೈಸೂರು-13.50 ಕೋಟಿ.
ಮಂಡ್ಯ-10.50 ಕೋಟಿ.
ಕೊಪ್ಪಳ-10.50 ಕೋಟಿ.


ರಾಯಚೂರು-9. ಕೋಟಿ.
ಕಲಬುರ್ಗಿ-16.50 ಕೋಟಿ.
ಬೀದರ್‍- 4.50 ಕೋಟಿ.
ಬೆಳಗಾವಿ-22.50 ಕೋಟಿ.
ಬಾಗಲಕೋಟೆ-13.50 ಕೋಟಿ.
ವಿಜಯಪುರ-18. ಕೋಟಿ.
ಹಾವೇರಿ-12. ಕೋಟಿ.
ಧಾರವಾಡ-12 ಕೋಟಿ.
ಶಿವಮೊಗ್ಗ-10.50 ಕೋಟಿ.
ಹಾಸನ-12. ಕೋಟಿ.
ಚಿಕ್ಕಮಗಳೂರು-12. ಕೋಟಿ.
ಕೊಡಗು-7.50 ಕೋಟಿ.


ಉತ್ತರ ಕನ್ನಡ-16.50 ಕೋಟಿ.
ಯಾದಗಿರಿ-9 ಕೋಟಿ.
ರಾಮನಗರ-7.50 ಕೋಟಿ.
ದಕ್ಷಿಣ ಕನ್ನಡ-3 ಕೋಟಿ.
ವಿಜಯನಗರ-9 ಕೋಟಿ.
ರಾಮನಗರ-7.50 ಕೋಟಿ.
ಬಳ್ಳಾರಿ-7.50 ಕೋಟಿ.
ಗದಗ-10.50 ಕೋಟಿ.


ಮೇಲಿನ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ರಾಜ್ಯ ಸರ್ಕಾರ SDRF ನಿಧಿಯಿಂದ 324 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.


ಈ ಪರಿಹಾರ ಹಣದ ಜಮಾ ವಿವರವನ್ನು ಈ ವಿಧಾನದ ಮೂಲಕ ನೋಡಬಹುದು.
ಎರಡು ವಿಧಾನವನ್ನು ಅನುಸರಿಸಿ ರೈತರು ತಮ್ಮ ಜಮೀನು ಮತ್ತು ಬ್ಯಾಂಕ್ ವಿವರ ಕೃಷಿ ಇಲಾಖೆಯ ಪ್ರೊಟ್ಸ್ ವೆಬೈಟ್ ನಲ್ಲಿ ದಾಖಲಾಗಿ FID ನಂಬರ್ ಸೃಜನೆ ಅಗಿರುತ್ತದೆ ಎಂದು ಚೆಕ್ ಮಾಡಿಕೊಳ್ಳಬವುದಾಗಿದೆ.

ಬರ ಪರಿಹಾರ ಮತ್ತು ಸರಕಾರದ ಇತರೆ ಇಲಾಖೆಗಳ ಸಹಾಯಧನ ಪಡೆಯಲು ಕಡ್ಡಾಯವಾಗಿ ಸರಕಾರದ ವಿವಿಧ ಇಲಾಖೆ ಮೂಲಕ ತಿಳಿಸಿರುವ ಮಾಹಿತಿಯ ಪ್ರಕಾರ ಈ ವರ್ಷ ಬರ ಪರಿಹಾರ ಪಡೆಯಲು FID ನಂಬರ್ ಕಡ್ಡಾಯ ಮಾಡಲಾಗಿದ್ದು ಈ ನಂಬರ್‌ ಹೊಂದಿರುವವರಿಗೆ ಮಾತ್ರ ಪರಿಹಾರದ ಹಣ ಜಮಾ ಅಗಲಿದೆ ಎಂದು ತಿಳಿಸಲಾಗಿದೆ.

ಇದರ ಪ್ರಕಾರ ರೈತರ ತಮ್ಮ ಅಧಾರ್ ನಂ. ಅನ್ನು ಹಾಕಿ FID ನಂಬರ್‌ ಅಗಿರುವುದನ್ನು ಖಚಿತಪಡಿಸಿಕೊಳ್ಳಬವುದು ಈ ಕೆಳಗೆ ನೀಡಿ ಅನ್ನು ಬಳಕೆ ಮಾಡಿಕೊಂಡು ನಿಮ್ಮ
ಅಧಾ‌ರ್ ನಂಬ‌ರ್ ಅನ್ನು ಹಾಕಿ FID ನಂಬರ್ ರಚನೆ ಅಗಿದಿಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಬವುದು.

ಇದನ್ನೂ ಓದಿ: Loan interest waive Order: ರಾಜ್ಯದ ರೈತರ ಕೃಷಿ ಸಾಲದ ಬಡ್ಡಿ ಮನ್ನಾ ಮಾಡಿದ ಅಧಿಕೃತ ಆದೇಶ :

ಹಂತ : 1 : ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ FID number check 12 ಅಂಕಿಯ ಆಧಾ‌ರ್ ನಂಬರ್ ಅನ್ನು ನಮೂದಿಸಿ “Search” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಹಂತ -2: “Search” ಮಾಡಿದ ನಂತರ ನಿಮಗೆ ಇಲ್ಲಿ 16 ಅಂಕಿಯ “FID1404**” ಗೋಚರಿಸುತ್ತದೆ ಈ ಸಂಖ್ಯೆ ಬಂದರೆ ನಿಮ್ಮ FID ನಂಬರ್ ರಚನೆ ಆಗಿದೆ ಎಂದು ಒಂದೊಮ್ಮೆ “Data not found” ಅಂತ ಗೋಚರಿಸಿದರೆ FID ನಂಬರ್ ರಚನೆ ಅಗಿಲ್ಲ ಎಂದು ಅರ್ಥ, ಅಗ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಒದಗಿಸಿ FID ಸಂಖ್ಯೆಯನ್ನು ರಚನೆ ಮಾಡಿಕೊಳ್ಳಬೇಕು.

Parihara list-2024- 25 ಅರ್ಹ ರೈತರ ಪಟ್ಟಿ ಪಡೆಯಲ್ಲಿ ಹೆಸರನ್ನು ಚೆಕ್ ಮಾಡುವ ಮೂಲಕ ತಿಳಿಯಬಹುದು:

ಈ ಪಟ್ಟಿಯು ಪಿ ಎಂ ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ರೈತರ ಪಟ್ಟಿಯಾಗಿದ್ದು ಬಹುತೇಕ ಈ ಪಟ್ಟಿಯಲ್ಲಿರುವವರಿಗೆ FID ನಂಬರ್ ಇದ್ದು ಈ ಪಟ್ಟಿ ಅನುಗುಣವಾಗಿಯೇ ಬರ ಪರಿಹಾರದ ಹಣ DBT ಮೂಲಕ ರೈತರ ಖಾತೆಗೆ ಜಮಾ ಆಗುವುದು ಖಚಿತವಾಗಿದೆ.

ಹಂತ -1: Parihara list ಮೇಲೆ ಕ್ಲಿಕ್ ಮಾಡಿ ಕೃಷಿ ಇಲಾಖೆಯೆ ಅಧಿಕೃತ ಪಿ ಎಂ ಕಿಸಾನ್ ಪ್ರೊಟ್ಸ್ ತಂತ್ರಾಂಶವನ್ನು ಭೇಟಿ ಮಾಡಬೇಕು.
ಹಂತ -2: ಇದಾದ ಬಳಿಕ ಇಲ್ಲಿ ನಿಮ್ಮ ಜಿಲ್ಲೆ ಮತ್ತು ತಾಲ್ಲೂಕು, ಹೋಬಳಿ, ಗ್ರಾಮದ ಹೆಸರನ್ನು ಆಯ್ಕೆ ಮಾಡಿಕೊಂಡು “ವಿಕ್ಷೀಸು” ಬಟನ್ ಮೇಲೆ ಕ್ಲಿಕ್ ಮಾಡಿದರೆ ಹಳ್ಳಿವಾರು ಅರ್ಹ ಫಲಾನುಭವಿ ಪಟ್ಟಿ ತೋರಿಸುತ್ತದೆ ಒಮ್ಮೆ ಈ ಪಟ್ಟಿಯಲ್ಲಿ ನಿಮ್ಮ ಹೆಸರ ಇದಿಯೇ ಎಂದು ಚೆಕ್ ಮಾಡಿಕೊಳ್ಳಿ ಇದ್ದಲಿ ನಿಮಗೆ ರಾಜ್ಯ ಸರಕಾರದಿಂದ ನೀಡುವ ಪರಿಹಾರದ ಹಣ ಯಾವುದೇ ತಾಂತ್ರಿಕ ತೊಂದರೆಗಳಿಲ್ಲದೆ ನಿಮ್ಮ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ ಜಮಾ ಅಗುತ್ತದೆ.

ವಿಶೇಷ ಮಾಹಿತಿ: ಹಣ ಜಮಾ ಆಗದೇ ಇರುವ ರೈತರು ಮೊದಲು ನಿಮ್ಮ ಬ್ಯಾಂಕ್ ತೆರಳಿ NPCI inactive ಅಂತ ಇರುವ ಎಲ್ಲಾ ರೈತರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಗೆ ತೆರಳಿ NPCI Mapping ಚಾಲ್ತಿ ಮಾಡಿಕೊಳ್ಳಿ. ಜೊತೆಗೆ ನಿಮ್ಮ ಬ್ಯಾಂಕ್ ಗೆ ಆಧಾರ್‍ Seeding ಮಾಡಿಸಿಕೊಳ್ಳಿ.

ರಾಜ್ಯದಲ್ಲಿ ಒಟ್ಟಾರೆ 35 ಲಕ್ಷ ರೈತರಿಗೆ 519 ಕೋಟಿ ರೂ.ಹಣ ಬಿಡುಗಡೆ ಮಾಡಿದೆ. ಇದೂವರೆಗೆ 24 ಲಕ್ಷ ಜನರಿಗೆ 324ಕೋಟಿ ರೂ. ಪಾವತಿಯಾಗಿರುತ್ತದೆ. ಉಳಿದ ರೈತರಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬಿಡುಗಡೆ ಮಾಡುವುದಾಗಿ ತಿಳಿಸಿರುತ್ತಾರೆ.

ಈ ಎರಡು ರೀತಿಯಲ್ಲಿ ಬರ ಪರಿಹಾರದ ಹಣ ಜಮಾ ವಿವರ ತಿಳಿಯಬಹುದಾಗಿರುತ್ತದೆ.
ಇದನ್ನೂ ಓದಿ: Agriculture Mechanization Scheme: ಯಂತ್ರ ಚಾಲಿತ ಎಣ್ಣೆಗಾಣಕ್ಕೆ, ಮತ್ತು ತಾಡಪತ್ರೆಗೆ, ಹಾಗೂ ಟ್ರಾಕ್ಟರ್‍ ಗೆ ಶೇ.90ರ ಸಹಾಯಧನ:

ಇತ್ತೀಚಿನ ಸುದ್ದಿಗಳು

Related Articles