Friday, November 22, 2024

Agriculture Mechanization Scheme: ಯಂತ್ರ ಚಾಲಿತ ಎಣ್ಣೆಗಾಣಕ್ಕೆ, ಮತ್ತು ತಾಡಪತ್ರೆಗೆ, ಹಾಗೂ ಟ್ರಾಕ್ಟರ್‍ ಗೆ ಶೇ.90ರ ಸಹಾಯಧನ:

ಕೃಷಿ ಇಲಾಖೆಯಲ್ಲಿ ಸಣ್ಣ ಯಂತ್ರ ಚಾಲಿತ ಎಣ್ಣೆಗಾಣ, ಮತ್ತು 45 ಪಿ.ಟಿ.ಒ ಹೆಚ್. ಪಿ ಯವರೆಗೆ ಟ್ರಾಕ್ಟರ್‍ ಗೆ ಸಹಾಯಧನ:

ಆತ್ಮೀಯ ರೈತ ಬಾಂದವರೇ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯ ಪ್ರಮುಖ ಉದ್ದೇಶವು ಗ್ರಾಮೀಣ ಪುದೇಶಗಳಲ್ಲಿ ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನು ಉತ್ತಮ ಸಂಸ್ಕರಣೆಗೆ ಒಳವಡಿಸಿ ಗುಣಮಟ್ಟದ ಉತ್ಪನ್ನಗಳನ್ನು ರೈತರಿಗೆ ಹಾಗೂ ಬಳಕೆದಾರರಿಗೆ ಒದಗಿಸುವುದಾಗಿದೆ.


ಉತ್ತಮ ಗುಣಮಟ್ಟದ ಹಾಗೂ ಸಂಸ್ಕರಿಸಿದ ಉತ್ಪನ್ನಗಳು ರೈತರಿಗೆ ಹೆಚ್ಚಿನ ಬೆಲೆಯನ್ನೂ ಸಹ ಒದಗಿಸಿಕೊಡುವುದರಿಂದ ಅವರ ಆರ್ಥಿಕ ಸಂಕಷ್ಟಗಳು ಕಡಿಮೆಯಾಗುತ್ತದೆ. ಸದರಿ ಯೋಜನೆಯಡಿ ಕೃಷಿ ಸಂಸ್ಕರಣಾ ಘಟಕಗಳು, ಸಣ್ಣ ಯಂತ್ರ ಚಾಲಿತ ಎಣ್ಣೆಗಾಣ ಘಟಕಗಳು ಹಾಗೂ ಟಾರ್ಪಲೀನ್ ವಿತರಣೆಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ಇದನ್ನೂ ಓದಿ: DBT system information : ಸರ್ಕಾರದಿಂದ ಇಲ್ಲಿವರೆಗೂ ನಿಮಗೆ ಬಂದಿರುವ ಹಣ ಎಷ್ಡು? ನೀವೇ ಪರೀಕ್ಷಿಸಿಕೊಳ್ಳಿ!!

ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಳೆ, ಗಾಳಿ ಹಾಗೂ ಇತರೆ ಹವಾಮಾನ ವೈಪರೀತ್ಯಗಳಿಂದ ಸಂರಕ್ಷಿಸಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲು, 5 ಪದರಗಳನ್ನು ಒಳಗೊಂಡ 250 GSM,ಕಪ್ಪು ಬಣ್ಣದ HDPE tarpaulins confirming IS 7903/2017 (Type-11)8X6 mtr. ಅಳತೆಯ ಟಾರ್ಪಲೀನ್ ಗಳನ್ನು ವಿತರಿಸಲಾಗುತ್ತಿದೆ.

ವಿಶೇಷ ಸೂಚನೆ: ಈ ಒಂದು ಯೋಜನೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಜಾರಿಯಲ್ಲಿರುತ್ತದೆ. ಮುಖ್ಯವಾಗಿ ಅನುದಾನದ ಅನುಗುಣವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಪಡೆಯಿರಿ.ಟಾರ್ಪಲೀನ್ ಬೇಕಾದಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

Required documents: ದಾಖಲೆಗಳು :
ರೈತರ ಆಧಾರ ಪ್ರತಿ
ಬ್ಯಾಂಕ್ ಪಾಸ್ ಬುಕ್ ಪ್ರತಿ
ಪಹಣಿ ಪ್ರತಿ( RTC)
ರೈತರ ಅರ್ಜಿ ಸಲ್ಲಿಕೆ ಆಧಾರದ ಮೇಲೆ ಹಿರಿತನದ ಆಧಾರದ ಮೇಲೆ ಟಾರ್ಪಲೀನ್ ವಿರತಣೆ ಮಾಡಲಾಗುತ್ತದೆ.

ಕೃಷಿ ಸಂಸ್ಕರಣಾ ಘಟಕಗಳಿಗೆ ಸಾಮಾನ್ಯ ರೈತರಿಗೆ ಶೇ.50 ರಷ್ಟು ಹಾಗೂ ಪರಿಶಿಷ್ಟ ಜಾತಿ / ಪಂಗಡದ ರೈತರಿಗೆ ಶೇ.90 ರಷ್ಟು ಮತ್ತು ಸಣ್ಣ ಯಂತ್ರ ಚಾಲಿತ ಎಣ್ಣೆಗಾಣ. ಘಟಕಗಳಿಗೆ ಸಾಮಾನ್ಯ ರೈತರಿಗೆ ಶೇ.75 ಕ್ಕೆ ಮೀರದಂತೆ ಹಾಗೂ ಪರಿಶಿಷ್ಟ ಜಾತಿ / ಪಂಗಡದ ರೈತರಿಗೆ ಶೇ.90 ರಷ್ಟು ಸಹಾಯಧನವನ್ನು ಗರಿಷ್ಟ ರೂ.1.00 ಲಕ್ಷದವರೆಗೆ ಮಿತಿಗೊಳಿಸಿ ನೀಡಬಹುದಾಗಿದೆ.


ರಾಜ್ಯದಲ್ಲಿ ಕಾರ್ಮಿಕರ ಸಮಸ್ಯೆಯನ್ನು ನೀಗಿಸಿ, ಕೃಷಿ ಚಟುವಟಿಕೆಗಳ ಶ್ರಮದಾಯಕ ದುಡಿಮೆಯನ್ನು ತಗ್ಗಿಸಿ, ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಂಡು ಕೃಷಿಯಲ್ಲಿ ಯಾಂತ್ರೀಕರಣವನ್ನು ಪ್ರೋತ್ಸಾಹಿಸಲು “ಕೃಷಿ ಯಾಂತ್ರೀಕರಣ ಯೋಜನೆಯಡಿ” ಟ್ಯಾಕ್ಟರ್ ಹೊರತು ಪಡಿಸಿ ಇತರೆ ಕೃಷಿ ಯಂತ್ರೋಪಕರಣಗಳಿಗೆ ಸಾಮಾನ್ಯ ರೈತರಿಗೆ ಶೇ.50 ರಷ್ಟು ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ.90 ರಷ್ಟು ಸಹಾಯಧನವನ್ನು ಗರಿಷ್ಠ ರೂ.1.00 ಲಕ್ಷದವರೆಗೆ ಮಿತಿಗೊಳಿಸಲಾಗಿದೆ.
ಮುಂದುವರೆದು, 45 ಪಿ.ಟಿ.ಒ ಹೆಚ್. ಪಿ ಯವರೆಗೆ ಟ್ರಾಕ್ಟರ್ ಗಳಿಗೆ ಸಾಮಾನ್ಯ ರೈತರಿಗೆ ರೂ.0.75 ಲಕ್ಷ ಹಾಗು ಪರಿಶಿಷ್ಟ ಜಾತಿ /ಪಂಗಡದ ರೈತರಿಗೆ ಶೇ.90 ಗರಿಷ್ಠ ರೂ.3.00 ಲಕ್ಷ ಸಹಾಯಧನವನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: Bara Parihara list-2024: ಪಟ್ಟಿಯಲ್ಲಿರುವವರಿಗೆ ಮಾತ್ರ ಬರ ಪರಿಹಾರ! ಆಧಾರ್‍ ನಂಬರ್‍ ಹಾಕಿ ಚೆಕ್ ಮಾಡಿ:

ಕೃಷಿ ಯಾಂತ್ರೀಕರಣ ಯೋಜನೆಯಡಿ ಉಳುಮೆಯಿಂದ ಕೊಯ್ಯುವರೆಗೆ ಉಪಯುಕ್ತವಿರುವ ವಿವಿಧ ಮಾದರಿಯ ಟ್ರ್ಯಾಕ್ಟರ್ ಗಳು, ಪವ‌ರ್ ಟಿಲ್ಲರ್‌ಗಳು, ಭೂಮಿ ಸಿದ್ಧತೆ ಉಪಕರಣಗಳು, ನಾಟಿ / ಬಿತ್ತನೆ ಉಪಕರಣಗಳು, ಅಂತರ ಬೇಸಾಯ ಉಪಕರಣಗಳು, ಡೀಸಲ್ ಪಂಪ್‌ಸೆಟ್, ಟ್ರಾಕ್ಟರ್ / ಟಿಲ್ಲರ್ / ಎಂಜಿನ್ ಚಾಲಿತ ಸಸ್ಯ ಸಂರಕ್ಷಣಾ, ಬೆಳೆ ಕಟಾವು / ಒಕ್ಕಣೆ ಯಂತ್ರಗಳು, ತ್ಯಾಜ್ಯ ವಸ್ತುಗಳ ನಿರ್ವಹಣ ಉಪಕರಣಗಳನ್ನು ಸಹಾಯಧನದಡಿ ಕೇಂದ್ರ ಪುರಸ್ಕೃತ ಕೃಷಿ ಯಾಂತ್ರೀಕರಣ ಉಪ ಅಭಿಯಾನ (SMAM) ಯೋಜನೆಯಡಿ ವಿತರಿಸಲಾಗುತ್ತಿದೆ.

ವಿಶೇಷ ಸೂಚನೆ: ನಿಮ್ಮ ನಿಮ್ಮ ಜಿಲ್ಲೆ ಮತ್ತು ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ವಿಚಾರಿಸಿ ಅನುದಾನ ಆಧಾರದ ಮೇಲೆ ಉಪಕರಣಗಳಿಗೆ ಸಹಾಯಧನ ನೀಡಲಾಗುತ್ತದೆ. ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

ಉದ್ದೇಶ: ರೈತರು ತಮಗೆ ಬೇಕಾದ ಸಮಯದಲ್ಲಿ ಅವಶ್ಯವಿರುವ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ರೂಪದಲ್ಲಿ ನಡೆದುಕೊಂಡು ಅವರ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳುವುದು ಮತ್ತು ಕೃಷಿ ಯಂತ್ರೋಪಕರಣಗಳ ಪರಿಪೂರ್ಣ ಸಾಮಥ್ಯವನ್ನು ಕೃಷಿ ಬಳಕೆಗೆ ಉಪಯೋಗಿಸುವುದು.

Agriculture Mechanization Service Centre:”ಕೃಷಿ ಯಂತ್ರಧಾರೆ” ಯೋಜನೆಯಡಿ ರೈತರಿಗೆ ಸಕಾಲದಲ್ಲಿ ಮತ್ತು ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ರಾಜ್ಯದ ಗ್ರಾಮೀಣ ಪ್ರದೇಶದ ಹೋಬಳಿಗಳಲ್ಲಿ ಚಾರಿಟಬಲ್ ಟ್ರಸ್ಟ್/ಸರ್ಕಾರೇತರ ಸಂಸ್ಥೆಗಳ, ಕೃಷಿ ಯಂತ್ರೋಪಕರಣ ತಯಾರಕ ಸಂಸ್ಥೆಗಳ ಮೂಲಕ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಹೋಬಳಿ ಮಟ್ಟದಲ್ಲಿ ಸ್ಥಾಪಿಸಲಾಗಿದೆ.


ಈ ಒಂದು ಕೇಂದ್ರದಲ್ಲಿ ಅತೀ ಕಡಿಮೇ ದರದಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣ ತೆಗೆದುಕೋಳ್ಳದೇ ಆಗದೇ ಇರುವ ರೈತರಿಗೆ ಬಾಡಿಗೆ ಮೂಲಕ ತಮ್ಮ ಗದ್ದೆಗಳ ಉಳುಮೆ ಬೇಕಾದ ಯಂತ್ರೋಪಕರಣ, ಮತ್ತು ಬಿತ್ತನೆಗೆ ಬೇಕಾದ ಯಂತ್ರೋಪಕರಣ, ಸಸ್ಯ ಸಂರಕ್ಷಣೆ ಔಷಧಿ ಸಿಂಪರಣೆ ಯಂತ್ರಗಳು,ಕಳೆ ತೆಗಿಯುವ ಯಂತ್ರಗಳು, ಹೀಗೆ ಈ ಒಂದು ಕೇಂದ್ರದಲ್ಲಿ ಬಿತ್ತನೆಯಿಂದ ಕಟ್ಟಾವಿನವರೆಗೆ ರೈತರಿಗೆ ಬೇಕಾದ ಕೃಷಿ ಉಪಕರಣಗಳನ್ನು ಬಾಡಿಗೆ ರೂಪದಲ್ಲಿ ದೊರೆಯುತ್ತವೆ.

ಇದನ್ನೂ ಓದಿ: Interest Free Loan Scheme 2023-24: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸರ್ಕಾರದಿಂದ ಬಡ್ಡಿ ರಹಿತ ಸಾಲ

ಸಾರ್ವಜನಿಕರ ಗಮನಕ್ಕೆ : ಈ ಒಂದು ಕೃಷಿ ಯಂತ್ರಧಾರೆ – ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಕ್ಕೆ ಕೃಷಿ ಇಲಾಖೆ ವತಿಯಿಂದ ಈ ಎಲ್ಲಾ ರೈತರಿಗೆ ಉಪಕರಣಗಳನ್ನು ಬಾಡಿಗೆ ನೀಡಲು ಮತ್ತು ಈ ಕೇಂದ್ರವನ್ನು ನಡೆಸಲು ಶೇಕಡಾ 50 ರ ಸಹಾಯಧನವನ್ನು ನೀಡುತ್ತದೆ.

ಇತ್ತೀಚಿನ ಸುದ್ದಿಗಳು

Related Articles